ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ| ಮಾರಕಾಸ್ತ್ರದಿಂದ ಹೊಡೆದ ಪರಿಣಾಮ ಒಬ್ಬನಿಗೆ ಗಾಯ| ಹಳೆ ಹುಬ್ಬಳ್ಳಿಯ ನಾರಾಯಣಸೋಪ ನಗರದಲ್ಲಿ ನಡೆದ ಘಟನೆ| ಗಾಯಾಳು ಗರ್ಫ ಸಾಬ್‌ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ| ಕಿಮ್ಸ್ ಗೆ ಭೇಟಿ ನೀಡಿದ ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಹಾಗೂ ಡಿಸಿಪಿ ಶಿವಕುಮಾರ ಗುಣಾರೆ| 

ಹುಬ್ಬಳ್ಳಿ(ಅ.18): ಮಹಾನಗರದಲ್ಲಿ ಗುರುವಾರ ರಾತ್ರಿ ಮತ್ತೆ ಮಾರಕಾಸ್ತ್ರ ಜಳಪಿಸಿದೆ. ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದ ವೇಳೆ ಮಾರಕಾಸ್ತ್ರದಿಂದ ಹೊಡೆದ ಪರಿಣಾಮ ಒಬ್ಬ ಗಾಯಗೊಂಡ ಘಟನೆ ಹಳೆ ಹುಬ್ಬಳ್ಳಿಯ ನಾರಾಯಣಸೋಪ ನಗರದಲ್ಲಿ ನಡೆದಿದೆ.

ಗರ್ಫ ಸಾಬ್‌ ಕರೀಮ್‌ ಸಾಬ್‌ ಜರತಾರಘರ (22) ಗಾಯಗೊಂಡವ. ಬಾಬಾ ಫರೀದ್‌ ಎಂಬಾತ ಈತನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಾಯಾಳು ಗರ್ಫ ಸಾಬ್‌ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ. ಕಿಮ್ಸ್ ಗೆ ಭೇಟಿ ನೀಡಿದ ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಹಾಗೂ ಡಿಸಿಪಿ ಶಿವಕುಮಾರ ಗುಣಾರೆ ಮಾಹಿತಿ ಪಡೆದರು.
ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.