500 ಕಿ.ಮೀ ಮೈಲೇಜ್, SWITCH EiV 12 ಎಲೆಕ್ಟ್ರಿಕ್ ಬಸ್ ಪರಿಚಯಿಸಿದ ಸ್ವಿಚ್ ಇಂಡಿಯಾ!
- ಡ್ಯುಯಲ್ ಗನ್ ಫಾಸ್ಟ್ ಚಾರ್ಜಿಂಗ್‌ನಲ್ಲಿ 500 ಕಿ.ಮೀ ಮೈಲೇಜ್
- ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಯಾಣಿಕರಿಗೆ ಸುಖಕರ ಪ್ರಯಾಣ
- ಕಡಿಮೆ ನಿರ್ವಹಣಾ ವೆಚ್ಚ, ದೀರ್ಘಕಾಲ ಬಾಳಿಕೆ, ಉತ್ತಮ ದಕ್ಷತೆ
ಚೆನ್ನೈ(ಜೂ.14): ಒಂದು ಸಂಪೂರ್ಣ ಚಾರ್ಜ್‌ಗೆ 300 ಕಿ.ಮೀ ಹಾಗೂ ಡ್ಯುಯೆಲ್ ಗನ್ ಫಾಸ್ಟ್ ಚಾರ್ಜಿಂಗ್‌ನಲ್ಲಿ 500 ಕಿ.ಮೀ ಮೈಲೇಜ್ ರೇಂಜ್ ಹೋಂದಿರುವ ಹೊಚ್ಚ ಹೊಸ ಸ್ವಿಚ್ ಎಲೆಕ್ಟ್ರಿಕ್ ಬಸ್ ಅನಾವರಣಗೊಂಡಿದೆ. ಸ್ವಿಚ್ ಇಂಡಿಯಾ ಕಂಪನಿ ಹೊಸ ಬಸ್ ಅನಾವರಣ ಮಾಡಿದೆ. ಇದು ಅತ್ಯಾಧುನಿಕ SWITCH EiV 12 ಬಸ್ ಇದಾಗಿದ್ದು, ಹಲವು ಹೊಸತನಗಳನ್ನು ಹೊಂದಿದೆ.
ವಾಯು ಮಾಲಿನ್ಯ ತಗ್ಗಿಸುವ ಹೊಸ ತಲೆಮಾರಿನ ಪರಿಸರ ಸ್ನೇಹಿ ವಿದ್ಯುತ್‌ಚಾಲಿತ ಬಸ್ ಮತ್ತು ಲಘು ವಾಣಿಜ್ಯ ವಾಹನಗಳನ್ನು ತಯಾರಿಸುವ ಸ್ವಿಚ್ ಮೊಬಿಲಿಟಿ ಲಿಮಿಟೆಡ್ ಕಂಪನಿ ಈ ಬಸ್ ಬಿಡುಗಡೆ ಮಾಡಿದೆ. ಈ ಹೊಸ ತಲೆಮಾರಿನ ಇ-ಬಸ್, ಕಂಪನಿಯ 100 ವರ್ಷಗಳ ಪರಿಣತಿಯ ಫಲವಾಗಿ ರೂಪುಗೊಂಡಿದೆ. ಇದು ಭಾರತದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ಚಾಲಿತ ಬಸ್‌ಗಳ ಬೇಡಿಕೆಯನ್ನು ಸಮರ್ಥವಾಗಿ ಈಡೇರಿಸಲಿದೆ. ಈ ಬಸ್‌ಗಳು – EiV 12 ಲೊ ಫ್ಲೋರ್ ಮತ್ತು EiV 12 ಸ್ಟ್ಯಾಂಡರ್ಡ್ ಹೆಸರಿನ ಎರಡು ಮಾದರಿಗಳಲ್ಲಿ ಲಭ್ಯ ಇವೆ. ಈ ಪರಿಣತ ಬಸ್‌ಗಳು ಅತ್ಯುತ್ತಮ ವಿಶ್ವಾಸಾರ್ಹತೆ, ಶ್ರೇಣಿ ಮತ್ತು ಪ್ರಯಾಣ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಿವೆ. ಕಂಪನಿಯು ಸದ್ಯಕ್ಕೆ 600 ಕ್ಕೂ ಹೆಚ್ಚು ಬಸ್‌ಗಳ ಬೇಡಿಕೆ ಹೊಂದಿದೆ.
Iconic Car ಹೊಸ ಅವತಾರದಲ್ಲಿ ಐತಿಹಾಸಿಕ ಅಂಬಾಸಿಡರ್ ಕಾರು, ಶೀಘ್ರದಲ್ಲೇ ಗುಡ್ ನ್ಯೂಸ್!
‘ಸ್ವಿಚ್ EiV 12’– ಸಮಕಾಲೀನ ಮತ್ತು ಭವಿಷ್ಯಕ್ಕೆ ಪೂರಕವಾಗಿರುವುದರ ಜೊತೆಗೆ ತಂತ್ರಜ್ಞಾನ ಮತ್ತು ಪ್ರಯಾಣಿಕರ ಸೌಕರ್ಯಗಳಿಗೆ ಸಂಬಂಧಿಸಿದಂತೆ ಗ್ರಾಹಕ-ಕೇಂದ್ರಿತ ಕೊಡುಗೆಗಳನ್ನೂ ಒಳಗೊಂಡಿದೆ. ‘EiV 12’– ಅಸಾಧಾರಣ ಚಾಲನಾ ಕಾರ್ಯಕ್ಷಮತೆ ಮತ್ತು ದಕ್ಷತೆ ಹೊಂದಿದೆ. ಸಂವಹನ ತಂತ್ರಜ್ಞಾನ ಸೌಲಭ್ಯಗಳು, 'Switch iON' ಒಳಗೊಂಡ ರಿಮೋಟ್, ನೈಜ ಸಮಯದಲ್ಲಿ ದೋಷ ಪತ್ತೆ ಮತ್ತು ಸರ್ವಿಸ್‌ಗಳನ್ನು ನಿರ್ವಹಿಸಲಿರುವುದರ ಜೊತೆಗೆ ವಿಶ್ವದರ್ಜೆಯ ಡಿಜಿಟಲ್ ಬ್ಯಾಟರಿ ನಿರ್ವಹಣಾ ಸಾಧನಗಳನ್ನೂ ಒಳಗೊಂಡಿದೆ. ಈ ಇಐವಿ (EiV )ಪ್ಲಾಟ್‌ಫಾರ್ಮ್‌ನಡಿಯ ವಿದ್ಯುತ್‌ಚಾಲಿತ ಬಸ್‌ಗಳ ವಿನ್ಯಾಸವು ಯುರೋಪಿನ ಸ್ವಿಚ್ ಇ1 (Switch e1) ಬಸ್‌ನ ಮಾದರಿಯಲ್ಲಿ ಇದೆ.
ಭಾರತದಲ್ಲಿ ನಮ್ಮ ಹೊಸ ತಲೆಮಾರಿನ ವಿದ್ಯುತ್‌ಚಾಲಿತ ಬಸ್‌ಗಳನ್ನು ಪರಿಚಯಿಸುತ್ತಿರುವುದು ಸ್ವಿಚ್ ಮೊಬಿಲಿಟಿಗೆ ಪ್ರಮುಖ ಮೈಲುಗಲ್ಲು ಆಗಿದೆ. ಭಾರತ, ಇಂಗ್ಲೆಂಡ್, ಯುರೋಪ್ ಮತ್ತು ಇತರ ಹಲವಾರು ಜಾಗತಿಕ ಮಾರುಕಟ್ಟೆಗಳ ಗ್ರಾಹಕರಿಗೆ ವಿದ್ಯುತ್‌ಚಾಲಿತ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವುದು ಮತ್ತು ವಾಹನಗಳಿಂದ ಆಗುವ ವಾಯುಮಾಲಿನ್ಯವನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಗಣನೀಯ ಕೊಡುಗೆ ನೀಡುವುದು ನಮ್ಮ ಆಶಯವಾಗಿದೆ ಎಂದು ಸ್ವಿಚ್ ಮೊಬಿಲಿಟಿ
ಲಿಮಿಟೆಡ್‌ನ ಅಧ್ಯಕ್ಷ ಧೀರಜ್ ಹಿಂದುಜಾ ಹೇಳಿದ್ದಾರೆ.
ವಾಣಿಜ್ಯ ವಾಹನಗಳ ಮಾರುಕಟ್ಟೆಯಲ್ಲಿ ಹಿಂದುಜಾ ಗ್ರೂಪ್ ಮತ್ತು ಅಶೋಕ್ ಲೇಲ್ಯಾಂಡ್‌ನ ಸಮರ್ಥ ಪರಂಪರೆ ಮತ್ತು ಸಾಬೀತಾದ ಪರಿಣತಿಯೊಂದಿಗೆ, ವಿದ್ಯುತ್‌ಚಾಲಿತ ಬಸ್‌ಗಳ ಇಂತಹ ಇನ್ನಷ್ಟು
ಕೊಡುಗೆಗಳ ಮೂಲಕ ಮತ್ತು ಶೀಘ್ರದಲ್ಲಿಯೇ ಪರಿಚಯಿಸಲಿರುವ ವಿದ್ಯುತ್‌ಚಾಲಿತ ಲಘು ವಾಹನಗಳ ಮೂಲಕ, ಈಗ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಈ ಕ್ಷೇತ್ರದಲ್ಲಿ ನಾವು ಮುಂಚೂಣಿಯಲ್ಲಿ ಇರುವುದರ ಉದ್ದೇಶವನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದರ ಬಗ್ಗೆ ನಾವು ದೃಢ ವಿಶ್ವಾಸ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ಸ್ವಿಚ್ ಮೊಬಿಲಿಟಿ ಇಂಡಿಯಾದ ನಿರ್ದೇಶಕ ಮತ್ತು ಸಿಇಒ ಹಾಗೂ ಸ್ವಿಚ್ ಮೊಬಿಲಿಟಿ ಲಿಮಿಟೆಡ್‌ನ ಸಿಒಒ ಆಗಿರುವ ಮಹೇಶ್ ಬಾಬು ಅವರು ಮಾತನಾಡಿ, ‘ಜಾಗತಿಕವಾಗಿ 50 ದಶಲಕ್ಷ ವಿದ್ಯುತ್‌ಚಾಲಿತ ಕಿಮೀಗಳಷ್ಟು ದೂರ ಪಯಣದ ಅನುಭವ ಆಧರಿಸಿ ನಿರ್ಮಿಸಲಾಗಿರುವ ‘ಸ್ವಿಚ್ ಇಐವಿ 12’ ಬಸ್‌ಗಳನ್ನು ಭಾರತದಲ್ಲಿ ಪರಿಚಯಿಸಲು ನಮಗೆ ತುಂಬ ಖುಷಿಯಾಗುತ್ತದೆ. ಶ್ರೇಷ್ಠಮಟ್ಟದ ದಕ್ಷತೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಒದಗಿಸಲು ವಿಶಿಷ್ಟ, ಸುಧಾರಿತ, ಜಾಗತಿಕ ವಿದ್ಯುತ್‌ಚಾಲಿತ ತಂತ್ರಜ್ಞಾನವನ್ನು ನಮ್ಮ ಕಂಪನಿಯು ಅಳವಡಿಸಿಕೊಂಡಿದೆ. ಪ್ರಯಾಣಿಕರಿಗೆ ಸಂತಸದ ಅನುಭವ ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಪ್ಲಾಟ್‌ಫಾರ್ಮ್‌ನಡಿಯ ವಿದ್ಯುತ್‌ಚಾಲಿತ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ವಿಚ್ ಐಯಾನ್ ಸಂಪರ್ಕಿತ ಬಸ್‌ಗಳು ನಮ್ಮ ವಾಹನಗಳನ್ನು ಬಳಸುವವರ ವಹಿವಾಟು ಹೆಚ್ಚಿಸಲು ಬಹುಬಗೆಯಲ್ಲಿ ನೆರವಾಗಲಿವೆ ಎಂದು ನಾನು ಬಲವಾಗಿ ನಂಬುತ್ತೇನೆ. ಮುಂದಿನ ದಿನಗಳಲ್ಲಿ ಸ್ವಿಚ್ ಎಲೆಕ್ಟ್ರಿಕ್ ಇಂಟೆಲಿಜೆಂಟ್ ವೆಹಿಕಲ್ (ಇಐವಿ) ಸೌಲಭ್ಯದಡಿ ಬಹುಬಗೆಯ ವಾಹನಗಳನ್ನು ತಯಾರಿಸಲು ನಮ್ಮ ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.
ಹೊಚ್ಚ ಹೊಸ ಕಿಯಾ EV6 ಎಲೆಕ್ಟ್ರಿಕ್ ಕಾರು, 528 ಕಿ.ಮೀ ಮೈಲೇಜ್, ಬುಕಿಂಗ್ ಬೆಲೆ 3 ಲಕ್ಷ ರೂ!
ಸ್ವಿಚ್ EiV ಶ್ರೇಣಿಯ ಬಸ್‌ಗಳನ್ನು ನಗರದ ಒಳಗೆ, ನಗರಗಳ ಮಧ್ಯೆ, ಸಿಬ್ಬಂದಿ ಸಾಗಣೆ, ಶಾಲೆಗಳು ಮತ್ತು ಡಾಂಬರ್, ಜೆಲ್ಲಿ ತುಂಬಿದ ರಸ್ತೆಗಳಲ್ಲಿನ ಬಳಕೆಗೆ ಸೇರಿದಂತೆ ವಿವಿಧ ಬಗೆಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ, ಈ ವಿನ್ಯಾಸಗಳು ಪ್ರಯಾಣಿಕರಿಗೆ ಗರಿಷ್ಠ ಸಾಮರ್ಥ್ಯ ಮತ್ತು ಸೌಕರ್ಯಗಳನ್ನು ಒದಗಿಸುತ್ತವೆ. ಬಸ್‌ಗಳು ಸುಧಾರಿತ ಲಿಥಿಯಂ-ಐಯಾನ್ ಎನ್ಎಂಸಿ ಕೆಮಿಸ್ಟ್ರಿದೊಂದಿಗೆ ಹೊಸ ಪೀಳಿಗೆಯ ಹೆಚ್ಚು ದಕ್ಷತೆಯ ಮಾಡ್ಯುಲರ್ ಬ್ಯಾಟರಿಗಳನ್ನು ಒಳಗೊಂಡಿವೆ. ಭಾರತದ ಮಾರುಕಟ್ಟೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತ ರೀತಿಯಲ್ಲಿ ಹೊಂದಿಕೊಳ್ಳುವ ಬಗೆಯಲ್ಲಿ ಬಸ್‌ಗಳ ವಿನ್ಯಾಸವನ್ನು ವಿಶೇಷವಾಗಿ ರೂಪಿಸಲಾಗಿದೆ. ಮಾಡ್ಯುಲರ್ ಬ್ಯಾಟರಿಗಳು ಒಂದೇ ತೂಕದ ಪ್ರತಿ ಬ್ಯಾಟರಿ ಸೆಲ್‌ನ ಸಾಮರ್ಥ್ಯ ಹೆಚ್ಚಿಸುತ್ತವೆ. ಹೆಚ್ಚು ದೂರ ಕ್ರಮಿಸಲು ನೆರವಾಗುತ್ತವೆ. ಒಂದು ಬಾರಿಯ ಚಾರ್ಜ್‌ನಲ್ಲಿ ದಿನಕ್ಕೆ 300 ಕಿ.ಮೀ ಮತ್ತು ಡ್ಯುಯಲ್ ಗನ್ ಫಾಸ್ಟ್ ಚಾರ್ಜಿಂಗ್‌ನಲ್ಲಿ ದಿನಕ್ಕೆ 500 ಕಿಮೀಗಳವರೆಗೆ ದೂರ ಕ್ರಮಿಸಲಿವೆ. ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ಸ್‌ಮತ್ತು ಬ್ಯಾಟರಿಗಳನ್ನು ದೀರ್ಘ ಬ್ಯಾಟರಿ ಬಾಳಿಕೆಯೊಂದಿಗೆ ಉತ್ತಮ ದಕ್ಷತೆ ಖಚಿತಪಡಿಸಿಕೊಳ್ಳುವ ಬಗೆಯಲ್ಲಿ ರೂಪಿಸಲಾಗಿದೆ.
ಈ ಅತ್ಯಾಧುನಿಕ ವಿದ್ಯುತ್‌ಚಾಲಿತ ಬಸ್‌ಗಳ ನಿರ್ವಹಣೆಯನ್ನು ಹೆಚ್ಚಿನ ಶ್ರಮವಿಲ್ಲದೆ ತ್ವರಿತವಾಗಿ ನಡೆಸಲಾಗುವುದು. ಈ ಬಸ್‌ಗಳ ನಿರ್ವಹಣಾ ವೆಚ್ಚವೂ ಕಡಿಮೆ ಇರಲಿದೆ. ಭಾರತದಲ್ಲಿನ ಸ್ವಿಚ್ EV ಬಸ್‌ಗಳ ಪ್ರಸ್ತುತ ಶ್ರೇಣಿಯ ವಿಶ್ವಾಸಾರ್ಹತೆಯ ಅಳತೆಗೋಲು ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿ ಶೇ 98ಕ್ಕಿಂತ ಹೆಚ್ಚಿಗೆ ಇದೆ. ಇದು ವಿಶ್ವಾಸಾರ್ಹತೆ ಮತ್ತು ಬಾಳಿಕೆಗೆ ಸಂಬಂಧಿಸಿದಂತೆ ನಮ್ಮ ಉತ್ಪನ್ನಗಳ ಕಾರ್ಯಕ್ಷಮತೆಗೆ ದೊರೆತಿರುವ ಮನ್ನಣೆಯಾಗಿದೆ. ಬಸ್‌ಗಳು ಭಾರತದಲ್ಲಿ 80 ದಶಲಕ್ಷ ಕಿಮೀಗಳಷ್ಟು ದೂರ ಸಂಚರಿಸಿವೆ. ಈ ಮೂಲಕ 5000 ಟನ್‌ಗಳಿಗಿಂತ ಹೆಚ್ಚು ವಾಯು ಮಾಲಿನ್ಯವನ್ನು (ಕಾರ್ಬನ್‌ಡೈಯಾಕ್ಸೈಡ್–CO2) ಉಳಿಸಿವೆ. ಇದು 30,000 ಕ್ಕೂ ಹೆಚ್ಚು ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ. ಪರಿಸರ ಸ್ನೇಹಿ ಸಂಚಾರ ಸೌಲಭ್ಯದ ಮೂಲಕ ಬದುಕನ್ನು ಸಮೃದ್ಧಗೊಳಿಸಲು ಸ್ವಚ್ಛ, ಚುರುಕಿನ ಪಯಣವನ್ನು ಎಲ್ಲರಿಗೂ ಒದಗಿಸುವ ಬ್ರ್ಯಾಂಡ್‌ನ ಉದ್ದೇಶ ಸಾಕಾರಗೊಳಿಸಲು ಈ ಬಸ್‌ಗಳು ನೆರವಾಗಲಿವೆ. ಸ್ವಿಚ್ ಇಂಡಿಯಾ, ಬದ್ಧತೆಯಿಂದ ಕೆಲಸ ಮಾಡುವ 450 ಉದ್ಯೋಗಿಗಳು ಮತ್ತು ಮಾನವ ಸಂಪನ್ಮೂಲ ಒಳಗೊಂಡಿದ್ದು,
ಮುಂದಿನ 5 ವರ್ಷಗಳಲ್ಲಿ ಸ್ಥಿರವಾಗಿ ಬೆಳವಣಿಗೆ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿದೆ.