ಅಹಮ್ಮದಾಬಾದ್(ಡಿ.16): ಹಲವರು ತಾವು ಖರೀದಿಸಿದ  ಹೊಸ ವಾಹನಕ್ಕೆ ರಿಜಿಸ್ಟ್ರೇಶನ್ ನಂಬರ್ ತಾವೇ ಆಯ್ಕೆ ಮಾಡುತ್ತಾರೆ. ಇದಕ್ಕೆ ಹೆಚ್ಚುವರಿ ಹಣ ನೀಡಬೇಕು. ಇಷ್ಟವಾದ ರಿಜಿಸ್ಟ್ರೇಶನ್ ನಂಬರ್‌ಗಾಗಿ RTOಗೆ ಹೆಚ್ಚುವರಿ ಹಣ ಅಥವಾ RTO ನಡೆಸುವ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡು ಖರೀದಿಸಬೇಕು.  ಹೀಗೆ ಕಾರು ಖರೀದಿಸಿದನೋರ್ವ 32 ಲಕ್ಷ ರೂಪಾಯಿ ವರೆಗೆ ಬಿಡ್ಡಿಂಗ್ ಕೂಗಿ ಗೆದ್ದಿದ್ದಾನೆ. ಆದರೆ RTOಗೆ ಪಾವತಿಸಲು ಹಣ ಮಾತ್ರ ಇರಲಿಲ್ಲ.

ಇಂದಿನಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ, ಇಲ್ಲದಿದ್ದರೆ ತೆರಬೇಕು ದುಬಾರಿ ದಂಡ!...

ಅಹಮ್ಮದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ಕಾರು ಖರೀದಿಸಿ ತನಗಿಷ್ಟವಾದ ರಿಜಿಸ್ಟ್ರೇಶನ್ ನಂಬರ್‌ಗೆ RTO ಮೊರೆ ಹೋಗಿದ್ದ. ಹೀಗಾಗಿ ನೆಚ್ಚಿನ ನಂಬರ್‌ಗೆ ಬಿಡ್ಡಿಂಗ್ ನಡೆಸಲಾಗಿತ್ತು. ಬಿಡ್ಡಿಂಗ್‌ನಲ್ಲಿ 32 ಲಕ್ಷ ರೂಪಾಯಿಗೆ ನೆಚ್ಚಿನ ನಂಬರ್ ಖರೀದಿಸಿದ್ದ. ಆದರೆ ದುಬಾರಿ ಮೊತ್ತಕ್ಕೆ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ ವ್ಯಕ್ತಿಗೆ ಹಣ ಪಾವತಿಸಲು ಸಾಧ್ಯವಾಗಲೇ ಇಲ್ಲ. ಕಾರಣ ಆತನ ಬಳಿ ಹಣ ಇರಲಿಲ್ಲ.

ನಂಬರ್ ಪ್ಲೇಟ್ ರಿಜಿಸ್ಟ್ರೇಶನ್‌ನಲ್ಲಿ ಬದಲಾವಣೆ; ಹೊಸ ನಿಯಮ ಪ್ರಕಟಿಸಿದ MoRTH!

2 ತಿಂಗಳು ಕಾದ ಅಹಮ್ಮದಾಬಾದ್ ಪೊಲೀಸರು ಕೊನೆಗೂ ಬಿಡ್ಡಿಂಗ್ ರದ್ದು ಮಾಡಿದ್ದಾರೆ. ಈ ಕುರಿತು  RTO ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೊರೋನಾ ವಕ್ಕರಿಸುವ ಮೊದಲು ರಿಜಿಸ್ಟ್ರೇಶನ್ ನಂಬರ್ ಮೂಲಕ ಕೋಟಿ ಕೋಟಿ ಆದಾಯ ಹರಿದು ಬರುತ್ತಿತ್ತು. ಆದರೆ ಕೊರೋನಾ ಬಳಿಕ ನಿರೀಕ್ಷಿತ ಆದಾಯ ಸಿಗುತ್ತಿಲ್ಲ ಎಂದು  RTO ಅಧಿಕಾರಿಗಳು ಹೇಳಿದ್ದಾರೆ.

ಕಳೆದ 3 ತಿಂಗಳಲ್ಲಿ ಅಹಮ್ಮದಾಬಾದ್‌ನಲ್ಲಿ ತಮಗಿಷ್ಟವಾದ ನಂಬರ್ ರಿಜಿಸ್ಟ್ರೇಶನ್ ಖರೀದಿಯಿಂದ 2.36 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಇತ್ತೀಚೆಗೆ ಬಿಡ್ಡಿಂಗ್ ಮೊತ್ತವೂ ಕಡಿಮೆಯಾಗುತ್ತಿದೆ. ಇಷ್ಟೇ ಅಲ್ಲ ದುಬಾರಿ ಮೊತ್ತಕ್ಕೆ ಬಿಡ್ ಆದ ಕೆಲ ಬಿಡ್‌ಗಳು ಹಣದ ಕೊರೆತೆಯಿಂದ ರದ್ದಾಗುತ್ತಿದೆ ಎಂದು ಅಹಮ್ಮದಾಬಾದ್ ಪೊಲೀಸರು ಹೇಳಿದ್ದಾರೆ.