'Outstanding Renewable Energy User' ಪ್ರಶಸ್ತಿ ಗೆದ್ದ ಟಿವಿಎಸ್‌ ಮೋಟರ್!

-'Outstanding Renewable Energy User' ಪ್ರಶಸ್ತಿ ಗೆದ್ದ ಟಿವಿಎಸ್‌ ಮೋಟರ್
-ಇಂಡಿಯನ್‌ ಫೇಡರೇಶನ್‌ ಆಫ್‌ ಗ್ರೀನ್‌ ಎನರ್ಜಿ ಆಯೋಜಿಸಿದ್ದ ಕಾರ್ಯಕ್ರಮ
-India Green energy Awards ಮೂಲಕ ಹಸಿರು ಶಕ್ತಿಯ ಬಳಕೆಗೆ ಪ್ರೊತ್ಸಾಹ

TVS Motor Company wins outstanding renewable energy user award at IGEA2020

ತಮಿಳುನಾಡು (ಅ. 21):  ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಿಸುವ ಜಗತ್ತಿನ ಪ್ರತಿಷ್ಟಿತ ಟಿವಿಸ್‌ ಮೋಟರ್‌ (TVS Motor) ಔಟ್‌ ಸ್ಟ್ಯಾಂಡಿಂಗ್‌ ರಿನಿವೆಬಲ್‌ ಎನರ್ಜಿ ಯುಸರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ (Outstanding Renewable Energy User). ಇಂಡಿಯನ್‌ ಫೇಡರೇಶನ್‌ ಆಫ್‌ ಗ್ರೀನ್‌ ಎನರ್ಜಿ (Indian Federation of Green Energy) ಆಯೋಜಿಸಿದ್ದ  3ನೇ ಆವೃತ್ತಿಯ ಇಂಡಿಯಾ ಗ್ರೀನ್ ಎನರ್ಜಿ ಅವಾರ್ಡ್‌ 2020 (India Green Energy Award 2020) ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಲಭಿಸಿದೆ. ದೀರ್ಘಾವದಿಯ ಕಾಲ ಇಂಧನ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಲು, ನವೀಕರಿಸಬಹುದಾದ ಶಕ್ತಿಯಲ್ಲಿ ಪರ್ಯಾಯ ಶಕ್ತಿ ಮೂಲಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸಂಸ್ಥೆಯ ನಿರಂತರ ಪ್ರಯತ್ನವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. 

2 ಲಕ್ಷ ರೂಪಾಯಿ; ಭಾರತದಲ್ಲಿ Audi Q5 ಕಾರಿನ ಬುಕಿಂಗ್ ಆರಂಭ!

ಭವಿಷ್ಯದ ಒಳಿತಿಗಾಗಿ ಹಸಿರು ಶಕ್ತಿಯ ಪ್ರಭಾವ ಮತ್ತು ಪ್ರಾಮುಖ್ಯತೆಯನ್ನು ಗುರುತಿಸಿ ಪ್ರೋತ್ಸಾಹಿಸಲು India Green energy Awards  ಆಯೋಜಿಸಲಾಗುತ್ತದೆ. ಈ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳಲ್ಲಿನ 46  ಸ್ಪರ್ಧಿಗಳನ್ನು ತೀರ್ಪುಗಾರರು ಪರೀಕ್ಷಿಸಿದ್ದು ಈ ಕಂಪನಿಗಳ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡಿವೆ ಎಂಬುವುದನ್ನು ಗುರುತಿಸಿದ್ದಾರೆ. ತೀರ್ಪುಗಾರರ ತಂಡವು Renewable Energy ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ತಜ್ಞರು ಸೇರಿದಂತೆ ಸರ್ಕಾರ ಹಾಗೂ ಇತರ ಸಂಸ್ಥೆಗಳಿಂದ ನೇಮಕಗೊಂಡ ವ್ಯಕ್ತಿಗಳಿಂದ ಕೂಡಿತ್ತು. ಈ ಪ್ರಶಸ್ತಿಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹಸ್ತಾಂತರಿಸಿದ್ದು, ರಸಗೊಬ್ಬರ ಮತ್ತು ರಾಸಾಯನಿಕ ರಾಜ್ಯ ಸಚಿವ ಭಗವಂತ ಖೂಬಾ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

ಕಾರ್ಖಾನೆಗಳಲ್ಲಿ ಯಂತ್ರಗಳ ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನವನ್ನು (Technology) ಆಳವಡಿಸಿಕೊಳ್ಳುವ ಮೂಲಕ ಶಕ್ತಿಯ ಸದ್ಬಳಕೆಯನ್ನು ಮಾಡಬಹುದು. ಕಳೆದ ಕೆಲವು ವರ್ಷಗಳಲ್ಲಿ ಟಿವಿಎಸ್‌ ಕಂಪನಿ ನಿರಂತರ ಪ್ರಯತ್ನದಿಂದ, ತನ್ನ ಕಾರ್ಖಾನೆಗಳಲ್ಲಿ ವಿದ್ಯುತ್‌ ಶಕ್ತಿಯ ಬಳಕೆ 15% ರಷ್ಟು ಮತ್ತು ಇಂಧನ ಬಳಕೆ 20% ರಷ್ಟು ಇಳಿಕೆ ಕಂಡಿದೆ ಎಂದು ತಿಳಿಸಿದೆ. ವಾತಾವರಣದಲ್ಲಿ ಇಂಗಾಲದ (Carbon) ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ 2013 ರಲ್ಲಿ ಇಂಗಾಲವನ್ನು ನೇರವಾಗಿ ಹೊರಸೂಸುವ ಪ್ರಕ್ರಿಯೆಯನ್ನು ಕಡಿಮೆಗೊಳಿಸುವ ಯೋಜನೆ  ಆರಂಭವಾಗಿತ್ತು. ಇದಾದ ನಂತರ ನವೀಕರಿಸಬಹುದಾದ ಶಕ್ತಿಯ (Renewable Energy) ಬಳಕೆಯಿಂದ ಈ ಯೋಜನೆಗೆ ಇನ್ನಷ್ಟು ಬಲ ತುಂಬಲಾಯಿತು. ಸೌರ ಶಕ್ತಿ (Solar energy) ಮತ್ತು ಪವನಶಕ್ತಿಯ (Wind Energy) ಬಳಕೆ ಮೂಲಕ 2020-21 ರಲ್ಲಿ  ಇಂಗಾಲದ ಡೈ ಆಕ್ಸೈಡ್‌ (CO2) ಹೊರಸೂಸುವಿಕೆ ಸುಮಾರು 58,812 ಟನ್‌ನಷ್ಟು ಕಡಿಮಯಾಗಿದೆ ಎಂದು ಟಿವಿಎಸ್‌ ತಿಳಿಸಿದೆ.

ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

ಜತೆಗೆ ಸಂಸ್ಥೆಯು 5.9 MW ಛಾವಣಿಯ ಸೌರ ವಿದ್ಯುತ್‌ಜನಕ [PV]ವನ್ನು ಅಳವಡಿಸಿದೆ  ಅಲ್ಲದೇ ಪವನ ಶಕ್ತಿಯಲ್ಲಿ 35 MWನ  Group Captive Mode ತಂತ್ರಜ್ಞಾನವನ್ನು ಬಳಸಿಕೊಂಡಿದೆ. 2020-21 ರಲ್ಲಿ ಕಂಪನಿಯ ಒಟ್ಟಾರೆ ವಿದ್ಯುತ್‌ ಶಕ್ತಿ ಬಳಕೆಯ 84%  ರಷ್ಟು ವಿದ್ಯುತ್ ನವೀಕರಿಸಬಹುದಾದ ಶಕ್ತಿಯ ಬಳಕೆಯಿಂದಲೇ ಆಗಿದೆ. ಟಿವಿಎಸ್‌ ಮೋಟಾರ್‌ ತಮ್ಮ ಕಾರ್ಖಾನೆಗಳಲ್ಲಿ ಹಸಿರು ಯೋಜನೆಗಳನ್ನು ಕೈಗೊಂಡಿದ್ದು ನೀರಿನ ಮರುಬಳಕೆ, ಮಳೆ ನೀರ ಕೊಯ್ಲು, ತನ್ನ ಕಾರ್ಖಾನೆಯ ಸುತ್ತಮುತ್ತ  ಜೀವವೈವಿಧ್ಯ ಸಂರಕ್ಷಣೆ ಸೇರಿದಂತೆ  ಹಲವಾರು ಕ್ರಮ ಕೈಗೊಂಡಿದ ಎಂದು ಸಂಸ್ಥೆ ತಿಳಿಸಿದೆ.

Latest Videos
Follow Us:
Download App:
  • android
  • ios