ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ದೇಶದ ಮೂಲೆ ಮೂಲೆಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಹೀಗಿ ಆಕ್ಸಿಜನ್ ಹೊತ್ತು ಸಾಗುವ ಟ್ಯಾಂಕರ್‌ಗಳು ಹೆದ್ದಾರಿಗಳ್ಲಿ ಟೋಲ್ ಕಟ್ಟಬೇಕಿಲ್ಲ. 

ನವದೆಹಲಿ(ಮೇ.09): ಕೊರೋನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಹಲವು ರಾಜ್ಯಗಳಲ್ಲಿ ಉದ್ಬವಿಸಿದ ಆಕ್ಸಿಜನ್ ಸಮಸ್ಯೆ ಇನ್ನೂ ಅಂತ್ಯಗೊಂಡಿಲ್ಲ. ವಿದೇಶಗಳಿಂದ, ದೇಶದಲ್ಲಿ ಹೊಸದಾಗಿ ಸ್ಥಾಪಿಸಿರುವ ಉತ್ಪಾದನಾ ಘಟಕದಿಂದ ಆಕ್ಸಿಜನ್‌ ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇದೀಗ ಹೀಗಾಗಿ ಆಕ್ಸಿಜನ್ ಹೊತ್ತು ಸಾಗುವ ಆಕ್ಸಿಜನ್ ಟ್ಯಾಂಕರ್‌ಗಳಿಗೆ ರಾಷ್ಟ್ರೀಯ ಹೆದ್ದಾರಿ ಟೋಲ್ ಉಚಿತ ಮಾಡಲಾಗಿದೆ.

ಸೋಂಕಿತರಿಗೆ ಆಕ್ಸಿಜನ್ ಕೊಡಿಸಲು ಫೇವರಿಟ್ ಬೈಕನ್ನೇ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್!...

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಈ ನಿರ್ಧಾರ ತೆಗೆದುಕೊಂಡಿದೆ. ಸದ್ಯ ದೇಶದಲ್ಲಿ ಆ್ಯಂಬುಲೆನ್ಸ್‌ಗಳಿಗೆ ಹೆದ್ದಾರಿ ಟೋಲ್ ಕಟ್ಟಬೇಕಿಲ್ಲ. ಇದೇ ರೀತಿ ಆಕ್ಸಿಜನ್ ಟ್ಯಾಂಕರ್‌ಗಳಿಗೂ ಹೆದ್ದಾರಿ ಟೋಲ್ ಕಟ್ಟಬೇಕಿಲ್ಲ. ಸೋಂಕಿತರ ಪ್ರಾಣ ಉಳಿಸಲು ದೇಶದ ಮೂಲೆ ಮೂಲೆಗೆ ಸಂಚರಿಸುವ ಆಕ್ಸಿಜನ್ ಟ್ಯಾಂಕರ್ ಹೆದ್ದಾರಿಗಳಲ್ಲಿ ಟೋಲ್ ಕಟ್ಟದೆ ಉಚಿತವಾಗಿ ಸಂಚರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಆಕ್ಸಿಜನ್ ಟ್ಯಾಂಕರ್ ಉಚಿತ ಟೋಲ್ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. 

Scroll to load tweet…

ಮುಂದಿನ 2 ತಿಂಗಳ ವರೆಗೆ ಅಂದರೆ ಜೂನ್ ಅಂತ್ಯದ ವರೆಗೆ ಉಚಿತ ಟೋಲ್ ನೀಡಲಾಗಿದೆ. ಜುಲೈ ವೇಳೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ನೂತನವಾಗಿ ಸ್ಥಾಪಿಸುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯನಿರ್ವಹಿಸಲಿದೆ. ಹೀಗಾಗಿ 2 ತಿಂಗಳ ಅವಧಿ ನೀಡಲಾಗಿದೆ. ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರಣ ಮೇ ತಿಂಗಳ ಅಂತ್ಯದಲ್ಲಿ ದೇಶದಲ್ಲಿನ ಆಕ್ಸಿಜನ್ ಸಮಸ್ಸೆಗೆ ಸಂಪೂರ್ಣ ಪರಿಹಾರ ಸಿಗಲಿದೆ. 

ದೇಶದಲ್ಲಿ ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ದಿನ ಸರಾಸರಿ 4 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ. ಮುಂಬೈ ಹೊರತು ಪಡಿಸಿದರೆ ಇನ್ನುಳಿದೆಲ್ಲಾ ಎಲ್ಲಾ ನಗರ ಹಾಗೂರಾಜ್ಯಗಳಲ್ಲಿ ಕೊರೋನಾ ಪ್ರಕರಣ ಏರಿಕೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ