Asianet Suvarna News Asianet Suvarna News

Auto Expo 2023 ಸ್ವಿಚ್ ಮೊಬಿಲಿಟಿಯಿಂದ ಎಲೆಕ್ಟ್ರಿಕ್ LEV ಅನಾವರಣ!

ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಸ್ವಿಚ್ ಮೊಬಿಲಿಟಿ ಇದೀಗ ಲಘು ಎಲೆಕ್ಟ್ರಿಕ್ ವಾಣಿಜ್ಯ ವಾಹನ ಅನಾವರಣ ಮಾಡಿದೆ. ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ ವಾಹನ ಅನಾವರಣಗೊಂಡಿದೆ.
 

SWITCH Mobility Ltd unveiled light all new commercial vehicle IeV series at Auto Expo 2023 ckm
Author
First Published Jan 11, 2023, 10:04 PM IST

ನವದೆಹಲಿ(ಜ.11) ಹಿಂದುಜಾ ಸಮೂಹ ಕಂಪನಿ ಸ್ವಿಚ್ ಮೊಬಿಲಿಟಿ ಲಿಮಿಟೆಡ್ ಆಟೋ ಎಕ್ಸ್‌ಪೋ 2023 ರಲ್ಲಿ ಇಂದು ಹೊಚ್ಚ ಹೊಸ ಎಲ್‍ಇವಿ ಸರಣಿ ಅನಾವರಣಗೊಳಿಸಿದೆ.  ಎಲೆಕ್ಟ್ರಿಕ್ ವಾಹನಗಳ ಮೂಲಕ ಸ್ವಿಚ್ ಭಾರತದಲ್ಲಿ ಕೊನೆಯ ಮೈಲು ಮತ್ತು ಮಧ್ಯಂತರ ದೂರದ ಮೊಬಿಲಿಟಿ ಅಪ್ಲಿಕೇಶನ್‍ಗಳ ಹೆಚ್ಚುತ್ತಿರುವ ಅಗತ್ಯವನ್ನು ಈಡೇರಿಸಲಿದೆ. ಎಲೆಕ್ಟ್ರಿಕ್ ಸಂಪರ್ಕಿತ ವಾಹನವನ್ನು ಸಾಬೀತಾಗಿರುವ ಮತ್ತು ದೃಢವಾದ ಮಾಡ್ಯುಲರ್ ಪ್ಲಾಟ್‍ಫಾರ್ಮ್‍ನಲ್ಲಿ ನಿರ್ಮಿಸಲಾಗಿದೆ, ಇದು ಅಸಾಧಾರಣ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುತ್ತದೆ, ರಿಮೋಟ್, ನೈಜ-ಸಮಯದ ಸಮಸ್ಯೆನಿರ್ಣಯ ಮತ್ತು ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲು ಸ್ವಾಮ್ಯದ ತಂತ್ರಜ್ಞಾನ ಪರಿಹಾರಗಳೊಂದಿಗೆ 'ಸ್ವಿಚ್ ಐಯಾನ್' ಎಂಬೆಡ್ ಮಾಡಲಾಗಿದೆ. ಸ್ವಿಚ್ ಎಲ್‍ಇವಿ ಸರಣಿಯು ಜಿವಿಡಬ್ಲ್ಯುಗೆ ಹೋಲಿಸಿದರೆ ವರ್ಗದಲ್ಲೇ ಅತ್ಯುತ್ತಮ ಪೇಲೋಡ್, 150 ಕಿ.ಮೀ.ವರೆಗಿನ ದೀರ್ಘ ವ್ಯಾಪ್ತಿಯ ಕವರೇಜ್, ವೇಗವಾದ ಟರ್ನ್‍ಅರೌಂಡ್ ಸಮಯ, ವರ್ಗದಲ್ಲೇ ಉತ್ತಮ ಸರಕು ಸ್ಥಳ ಮತ್ತು ವಿಶೇಷವೆನಿಸಿದ ವಿಶ್ವಾಸಾರ್ಹತೆಯೊಂದಿಗೆ ವೆಚ್ಚಕ್ಕೆ ಹೋಲಿಸಿದರೆ ಒಟ್ಟಾರೆ ಅನುಕೂಲಕರ ಕಾರ್ಯಾಚರಣೆಯನ್ನು ನೀಡುತ್ತದೆ.

ಈ ಮಾರುಕಟ್ಟೆಯ ಪ್ರಮುಖ ಉತ್ಪನ್ನ ಸರಣಿ ಮತ್ತು ತಂತ್ರಜ್ಞಾನದ ಮೂಲಕ, ಸಾರಿಗೆಯನ್ನು ಸುಲಭ, ಸ್ವಚ್ಛ, ಆರಾಮದಾಯಕ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸ್ವಚ್ಛ ಮತ್ತು ಹಸಿರು ಚಲನಶೀಲತೆಯನ್ನು ಬೆಂಬಲಿಸುವಲ್ಲಿ ಸ್ವಿಚ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Auto Expo 2023 ಸಿಂಗಲ್ ಚಾರ್ಜ್‌ಗೆ 700 ಕಿ.ಮೀ ಮೈಲೇಜ್, ಭಾರತದಲ್ಲಿ ಬಿವೈಡಿ ಸೀಲ್ ಕಾರು ಅನಾವರಣ!

ಸ್ವಿಚ್ ಆರಂಭದ ನಂತರ, ಕಂಪನಿಯು ಗಮನಾರ್ಹವಾಗಿ ಬೆಳೆದಿದೆ ಮತ್ತು ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕಡಿಮೆ ಸಮಯದಲ್ಲಿ ನಾವು ಪಡೆದ ಪ್ರಗತಿ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯಿಂದ ನಾನು ಸಂತೋಷಪಡುತ್ತೇನೆ. ಸ್ವಿಚ್ ನಿರಂತರವಾಗಿ ಬೆಳವಣಿಗೆ ಸಾಧಿಸಿರುವಂತೆಯೇ ನಾವು ವಿನೂತನ ಮತ್ತು ಇಂಟೆಲಿಜೆಂಟ್ ಕೊಡುಗೆಗಳೊಂದಿಗೆ, ಕಂಪನಿಯ ಮಹತ್ವಾಕಾಂಕ್ಷೆಯ ಜಾಗತಿಕ ಬೆಳವಣಿಗೆಯ ಕಾರ್ಯತಂತ್ರಕ್ಕೆ ಅನುಗುಣವಾಗಿ ಹೊಸ ಪ್ರದೇಶಗಳಿಗೆ ವಿಸ್ತರಿಸುವ ಮೂಲಕ ಎಲೆಕ್ಟ್ರಿಕ್ ವಾಣಿಜ್ಯ ವಾಹನ (ಸಿವಿ) ಮಾರುಕಟ್ಟೆಯಲ್ಲಿ ರೋಮಾಂಚನ ಮೂಡಿಸುವುದನ್ನು ಮುಂದುವರಿಸಲಿದ್ದೇವೆ. ಆಟೋ ಎಕ್ಸ್‍ಪೋ 2023 ರಲ್ಲಿ ಪ್ರದರ್ಶಿಸಲಾದ ನಮ್ಮ ಉತ್ಪನ್ನಗಳ ಮೂಲಕ ಮುಂಬರುವ ವರ್ಷಗಳಲ್ಲಿ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ಬಲವಾದ ಆವೇಗವನ್ನು ಎದುರು ನೋಡಲು ವಿವಿಧ ಭಾಗಗಳ ಸಮುದಾಯಗಳಿಗೆ ಸಹಾಯ ಮಾಡಲು ಬದ್ಧವಾಗಿರುವ ಉದ್ಯಮದ ಭಾಗವಾಗಲು ನಾವು ಹೆಮ್ಮೆಪಡುತ್ತೇವೆ" ಎಂದು ಸ್ವಿಚ್ ಮೊಬಿಲಿಟಿಯ ಕಾರ್ಯಕಾರಿ ಅಧ್ಯಕ್ಷ ಧೀರಜ್ ಹಿಂದುಜಾ ಹೇಳಿದ್ದಾರೆ.

3 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಆಟೋ ಎಕ್ಸ್‌ಪೋ, ಎಲೆಕ್ಟ್ರಿಕ್ ಸೇರಿ ಹಲವು ವಾಹನ ಅನಾವರಣ!

ಕೊನೆಯ ಮೈಲಿ ಮತ್ತು ಮಧ್ಯಂತರ ಮೈಲಿ ಅಂತರದ ಸಾರಿಗೆ ಕ್ಷೇತ್ರದಲ್ಲಿ ಸುಸ್ಥಿರ ಚಲನಶೀಲತೆ ಪರಿಹಾರಗಳಿಗೆ ಹೆಚ್ಚಿನ ಬೇಡಿಕೆಯಿದೆ. ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಬ್ರಾಂಡ್ ಅನ್ನು ಸ್ಥಾಪಿಸುವಲ್ಲಿ ಸ್ವಿಚ್ ಯಶಸ್ವಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಅಪ್ರತಿಮ ಉತ್ಪನ್ನದ ಆಯ್ಕೆಯನ್ನು ನೀಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಭಾರತದಲ್ಲಿ ಕೊನೆಯ ಮೈಲಿ ಮತ್ತು ಮಧ್ಯಂತರ ಮೈಲಿ ಅಂತರದ ಸಾರಿಗೆ ಅಗತ್ಯಗಳನ್ನು ಪರಿವರ್ತಿಸಲು ಆಟೋ ಎಕ್ಸ್‍ಪೋ 2023 ರಲ್ಲಿ ನಮ್ಮ ಹೊಚ್ಚ ಹೊಸ ಸ್ವಿಚ್ ಎಲ್‍ಇವಿ ಸರಣಿಯ ಪ್ರಾರಂಭದೊಂದಿಗೆ ನಾವು ಹೊಸ ಅಧ್ಯಾಯದತ್ತ ಸಾಗುತ್ತಿರುವ ಹಂತದಲ್ಲಿ ಇದು ನಮಗೆ ಪ್ರಮುಖ ಮೈಲಿಗಲ್ಲು. ಈ ಎಲ್‍ಇವಿ ಸರಣಿಯು  ನಮ್ಮ ಗ್ರಾಹಕರಿಗೆ ಉತ್ಕøಷ್ಟ ಮೌಲ್ಯ ಪ್ರತಿಪಾದನೆಯನ್ನು ನೀಡುವ ಜತೆಗೆ 1.2 ಟಿ - 4.5 ಟಿ ಯಿಂದ ಪ್ರಾರಂಭವಾಗುವ ವಿಶಾಲವಾದ ಪೇಲೋಡ್ ಅನ್ನು ಗುರಿ ಮಾಡಿದೆ. ನಮ್ಮ ಗ್ರಾಹಕರ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಸಮರ್ಥನೀಯ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳ ಕ್ರಿಯಾಶೀಲ ಉತ್ಪನ್ನ ಶ್ರೇಣಿಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ಸ್ವಿಚ್ ಮೊಬಿಲಿಟಿ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಬಾಬು ಹೇಳಿದ್ದಾರೆ.
 

Follow Us:
Download App:
  • android
  • ios