Asianet Suvarna News Asianet Suvarna News

ಯಾವುದೇ ವ್ಯಕ್ತಿಯ ಡ್ರೈವಿಂಗ್‌ ಲೈಸೆನ್ಸ್‌ ಅಮಾನತು ಮಾಡುವ ಅಧಿಕಾರ ಪೊಲೀಸರಿಗಿಲ್ಲ: ಕೋಲ್ಕತ್ತ ಹೈಕೋರ್ಟ್‌

ಪರವಾನಗಿ ನೀಡುವ ಮತ್ತು ಅಮಾನತುಗೊಳಿಸುವ ಅಧಿಕಾರ ಪರವಾನಗಿ ಪ್ರಾಧಿಕಾರಗಳಿಗೆ ಮಾತ್ರವೇ ಹೊರತು ಪೊಲೀಸ್ ಅಧಿಕಾರಿಗಳಿಗೆ ಅಲ್ಲ ಎಂದು ಕೋಲ್ಕತ್ತ ಹೈಕೋರ್ಟ್ ಹೇಳಿದೆ. 

police not authorised to suspend driving licence of any citizen says Calcutta High Court Justice Moushumi Bhattacharya san
Author
Bengaluru, First Published Jul 20, 2022, 8:41 PM IST

ಕೋಲ್ಕತ್ತಾ (ಜುಲೈ 20): ಮಹತ್ವದ ತೀರ್ಪಿನಲ್ಲಿ, 1988 ರ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯು ವ್ಯಕ್ತಿಯ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಪೊಲೀಸರು ಅವರ ಡ್ರೈವಿಂಗ್ ಲೈಸೆನ್ಸ್‌ಅನ್ನು ಕಲೆಕ್ಟ್‌ ಮಾಡಿ ಅದನ್ನು ಪರವಾನಗಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ಅದನ್ನು ಅಮಾನತು ಮಾಡುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ ಎಂದು ತೀರ್ಪು ನೀಡಿದೆ. ಅತಿವೇಗವಾಗಿ ಕಾರು ಚಾಲನೆ ಮಾಡಿ ನೋಟಿಸ್‌ ಪಡೆದುಕೊಂಡ ಎರಡು ವಾರದಲ್ಲಿಯೇ ಮತ್ತೊಮ್ಮೆ ಇಂಥದ್ದೇ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಕಾರಣಕ್ಕೆ ಮಹಿಳೆಯೊಬ್ಬಳ ಡ್ರೈವಿಂಗ್‌ ಲೈಸೆನ್ಸ್‌ಅನ್ನು ಅಮಾನತು ಮಾಡಿದ್ದರು. ಆದರೆ, ಆಕೆಗೆ ಡ್ರೈವಿಂಗ್‌ ಲೈಸೆನ್ಸ್‌ಅನ್ನು ಮರಳಿ ನೀಡುವಂತೆ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಆದೇಶ ನೀಡಿದ್ದಾರೆ.ಅರ್ಜಿದಾರರ ಪರವಾನಗಿಯನ್ನು ಅಮಾನತುಗೊಳಿಸುವ ಪೊಲೀಸ್ ಅಧಿಕಾರಿಯ ಆದೇಶವನ್ನು ನ್ಯಾಯಾಲಯವು ರದ್ದುಗೊಳಿಸಿದ್ದು, ಸಹಾಯಕ ಪೊಲೀಸ್ ಕಮಿಷನರ್, ಸಂಚಾರ ಇಲಾಖೆಗೆ ಹಾಗೆ ಮಾಡುವ ಅಧಿಕಾರವಿಲ್ಲ ಎಂದು ತೀರ್ಪು ನೀಡಿತು.'1988 ರ ಮೋಟಾರು ವಾಹನಗಳ ಕಾಯಿದೆಯ ಪ್ರಕಾರ, ಪರವಾನಗಿ ಪ್ರಾಧಿಕಾರವು ಮಾತ್ರ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರುವ ವ್ಯಕ್ತಿಯ ಪರವಾನಗಿಯನ್ನು ರದ್ದು ಮಾಡುವ ಅಧಿಕಾರ ಹೊಂದಿದೆ' ಎಂದು ತಿಳಿಸಿದೆ.

ದಾಖಲೆಗಳನ್ನು ವಶಪಡಿಸಿಕೊಳ್ಳಬಹುದು: "ಪರವಾನಗಿ ಪ್ರಾಧಿಕಾರವನ್ನು ವಿಭಾಗ 2(20) ರಲ್ಲಿ ಇದನ್ನು ವ್ಯಾಖ್ಯಾನಿಸಲಾಗಿದೆ. ಪರವಾನಗಿಗಳನ್ನು ನೀಡುವ ಹಾಗೂ ರದ್ದು ಮಾಡುವ ಅಧಿಕಾರವನ್ನು ಹೊರತುಪಡಿಸಿ ಯಾವುದೇ ಅಧಿಕಾರವನ್ನು ಈ ಸಂಸ್ಥೆ ಒಳಗೊಂಡಿಲ್ಲ. ವಿಭಾಗ 206 ಸೆಕ್ಷನ್ 19 ರ ಅಡಿಯಲ್ಲಿ ಅನರ್ಹಗೊಳಿಸುವ ಅಥವಾ ಹಿಂತೆಗೆದುಕೊಳ್ಳುವ ಪರವಾನಗಿ ಪ್ರಾಧಿಕಾರದ ಅಧಿಕಾರವನ್ನು ಸೂಚಿಸುತ್ತದೆ. ಈ ಕಾರಣದಿಂದ ಪೊಲೀಸರು ದಾಖಲೆಯನ್ನು ವಶಪಡಿಸಿಕೊಳ್ಳುವಷ್ಟರಲ್ಲಿ ಮಾತ್ರವೇ ಅಧಿಕಾರವನ್ನು ಮಿತಿ ಮಾಡುತ್ತದೆ. ಪೊಲೀಸರು ಅನರ್ಹ ಮಾಡುವಂತೆ ಪರವಾನಗಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು' ಎಂದು ಜುಲೈ 19 ರಂದು ನೀಡಿದ ಆದೇಶದಲ್ಲಿ ಹೇಳಿದೆ.

Digilocker on WhatsApp: ವಾಟ್ಸಾಪ್‌ನಲ್ಲಿ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡೋದು ಹೇಗೆ?

ಲೈಸೆನ್ಸ್‌ ರದ್ದು ಮಾಡಿದ್ದ ಎಸಿಪಿ: ರಾಜ್ಯ ಸರ್ಕಾರವು 2016ರ ನವೆಂಬರ್ 23 ರಂದು ಹೊರಡಿಸಿದ ಅಧಿಸೂಚನೆಯ ಮೇಲೆ ಪೊಲೀಸರು ಕೆಲಸ ಮಾಡಿದ್ದಾರೆ. ಇದರ ಪ್ರಕಾರ ಅಪರಾಧ ಮಾಡಿರುವ ಚಾಲಕನ ಲೈಸೆನ್ಸ್‌ಅನ್ನು ಅನರ್ಹಗೊಳಿಸಲು ಅಥವಾ ಅವರ ಪರವಾನಗಿಯನ್ನು ರದ್ದುಗೊಳಿಸಲು ಸೆಕ್ಷನ್ 19 ರ ಪ್ರಕಾರ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ (ಸಂಚಾರ) ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕಾರ ನೀಡಿದೆ.  2022ರ ಮೇ 20 ರಂದು ಕೋಲ್ಕತ್ತಾದ ಸಹಾಯಕ ಪೊಲೀಸ್ ಆಯುಕ್ತರು (ACP) ಅತಿ ವೇಗದ ಚಾಲನೆಗಾಗಿ ತನ್ನ ಪರವಾನಗಿಯನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ ಮನವಿಯನ್ನು ವಿಚಾರಣೆಯ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಗಂಟೆಗೆ 30 ಕಿ.ಮೀ ವೇಗದ ರಸ್ತೆಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಕಾರಣ ಪೊಲೀಸರು ಆಕೆಯ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.

ಈ ದೇಶಗಳಲ್ಲಿ ಡ್ರೈವ್ ಮಾಡಲು ಭಾರತೀಯ ಡ್ರೈವಿಂಗ್ ಲೈಸೆನ್ಸ್ ಸಾಕು !

ಇತರರ ಜೀವಕ್ಕೆ ಅಪಾಯ ತಂದಿದ್ದೀರಿ ಎಂದ ಕೋರ್ಟ್‌: ವ್ಯಕ್ತಿಯ ಪರವಾನಗಿಯನ್ನು ಅಮಾನತುಗೊಳಿಸುವ ಅಧಿಕಾರ ಪೊಲೀಸರಿಗೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವುದರಿಂದ, ಅರ್ಜಿದಾರರ ಪರವಾನಗಿಯನ್ನು ಅಮಾನತುಗೊಳಿಸಿದ ಕೋಲ್ಕತ್ತಾದ ಎಸಿಪಿ ಅವರು ಹೊರಡಿಸಿದ ಆದೇಶಗಳನ್ನು ರದ್ದುಗೊಳಿಸಿದೆ ಎಂದು ನ್ಯಾಯಾಲಯ ಹೇಳಿದೆ. ಮನೆಯಲ್ಲಿ 9 ತಿಂಗಳ ಹೆಣ್ಣು ಮಗುವಿದ್ದು, ಅದಕ್ಕೆ ಅನಾರೋಗ್ಯ ಎನ್ನುವ ಕಾರಣಕ್ಕಾಗಿ ತಾನು ಅತಿವೇಗದ ಚಾಲನೆ ಮಾಡಿದ್ದಾಗಿ ಆಕೆ ಹೇಳಿದ್ದಾರೆ. ಹಾಗಿದ್ದರೂ, ಕೋರ್ಟ್‌ ಈಕೆಯ ವಾದವನ್ನು ಕೇಳಲು ನಿರಾಕರಿಸಿದೆ. ನೀವು ಅತಿವೇಗವಾಗಿ ಹೋಗುವುದರಿಂದ ನಿಮ್ಮ ಜೀವದೊಂದಿಗೆ ರಸ್ತೆಯಲ್ಲಿ ಪ್ರಯಾಣಿಸುವ ಇತರರ ಜೀವಕ್ಕೂ ಅಪಾಯ ತಂದೊಡ್ಡುತ್ತೀರಿ ಎಂದು ಹೇಳಿದರು.

Follow Us:
Download App:
  • android
  • ios