ಪೀಕ್ ಬೆಂಗಳೂರು ಮೂಮೆಂಟ್ ಹಲವು ಬಾರಿ ಭಾರಿ ಸದ್ದು ಮಾಡಿದೆ. ಇದೀಗ ಬೆಂಗಳೂರು ಆಟೋ ಚಾಲಕ ವರ್ಕ್ ಫ್ರಮ್ ಆಟೋ ಕಾನ್ಸೆಪ್ಟ್ ಎಲ್ಲರ ಚಕಿತಗೊಳಿಸಿದೆ. ಈತನ ಹೊಸ ಐಡಿಯಾಗೆ ಜನ ಮಾರು ಹೋಗಿದ್ದಾರೆ. ಒಂದೊಂದು ಕಮೆಂಟ್ ಕೂಡ ಬೆಂಕಿ.
ಬೆಂಗಳೂರು(ಮಾ.10) ಬೆಂಗಳೂರಿನ ಆಟೋ ಚಾಲಕರು ಭಿನ್ನ. ತಂತ್ರಜ್ಞಾನ ಬಳಕೆ ಇರಬಹುದು, ಸ್ಮಾರ್ಟ್ ವರ್ಕ್ ಇರಬಹುದು, ಬೆಂಗಳೂರು ಆಟೋ ಚಾಲಕರ ಮೀರಿಸಲು ಸಾಧ್ಯವಿಲ್ಲ. ಹೀಗಾಗಿ ಹಲವು ಬಾರಿ ಬೆಂಗಳೂರು ಆಟೋ ಚಾಲಕರು ದೇಶಾದ್ಯಂತ ಸುದ್ದಿಯಾಗುತ್ತಾರೆ. ಇದೀಗ ಬೆಂಗಳೂರಿನ ಆಟೋ ಚಾಲಕನೊಬ್ಬ ವರ್ಕ್ ಫ್ರಮ್ ಆಟೋ ಕಾನ್ಸೆಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಹೊಸ ಐಡಿಯಾಗೆ ಜನರು ಮಾರು ಹೋಗಿದ್ದಾರೆ. ಕೆಲ್ಸ ಹೆಂಗಾದರೂ ಇರ್ಲಿ, ಆದರೆ ನೆಮ್ಮದಿಯಾಗಿ ಇರ್ಬೇಕು ಅಷ್ಟೇ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಆಟೋ ಚಾಲಕರು ಟ್ರಾಫಿಕ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಆಟೋ ಚಾಲನೆ ಮಾಡುತ್ತಾ ದಿನವಿಡಿ ಆಟೋದಲ್ಲೇ ಕಳೆಯುತ್ತಾರೆ. ಬೆಂಗಳೂರಿನ ಟ್ರಾಫಿಕ್‌ಗೆ ಸಿಲುಕಿಕೊಂಡರೆ ಮುಗಿಯಿತು. ಕುಳಿತಲ್ಲಿಂದ ಏಳುವಂತಿಲ್ಲ, ಇರುವಂತಿಲ್ಲದ ಪರಿಸ್ಥಿತಿ.ಕುಳಿತು ಸಂಕಷ್ಟ ಅನುಭವಿಸುವುದಕ್ಕಿಂತ ಆರಾಮಾಗಿ ಕುಳಿತಿಕೊಳ್ಳಲು ಈತ ಕಚೇರಿಯಲ್ಲಿ ಬಳಸುವ ಚೇರ್‌ನ್ನು ಆಟೋ ಚಾಲಕನ ಸೀಟಿಗೆ ಹಾಕಿದ್ದಾನೆ. ಹೀಗಾಗಿ ಆಟೋ ಚಾಲಕನ ಸೀಟು ಆಫೀಸ್ ಚೇರ್ ರೀತಿ ಕುಶನ್ ಹಾಗೂ ಹೆಚ್ಚು ಆರಾಮದಾಯಕ ಪ್ರಯಾಣ ನೀಡಲಿದೆ.
ಜಾಕಿ ಭೇಟಿ ಮಾಡಿದ್ದೀರಾ? ಆಟೋ ಚಾಲಕನ ಜೊತೆ ಬೆಂಗಳೂರು ಸುತ್ತುವ ಮುದ್ದಿನ ನಾಯಿ
ಆಟೋ ಚಾಲಕನ ಸೀಟು ಬದಲಾಯಲಾಗಿದೆ. ಇದಕ್ಕಂತೆ ತಕ್ಕಂತೆ ಆಟೋ ಮಾಡಿಫೈ ಮಾಡಲಾಗಿದೆ. ಈ ಆಟೋದ ಫೋಟೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಹಲವರು ಈ ಆಟೋ ಚಾಲಕನ ಐಡಿಯಾಗೆ ಬಾರಿ ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ಕೆಲ್ಸ ಹೇಗೆ ಇರಬಹುದು. ಆದರಲ್ಲಿ ಕಂಫರ್ಟ್ ಹುಡುಕುವುದು ಮುಖ್ಯ. ಹೀಗಾಗಿ ಆಟೋ ಚಾಲಕನಿಗಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ.ಕೂತರೆ ನೆಮ್ಮದಿಯಾಗಿ ಕೂರಬೇಕು, ಮೀಟರ್ ಎಷ್ಟಾನು ಇರ್ಲಿ ಎಂದು ಕಮೆಂಟ್ ಮಾಡಿದ್ದಾರೆ. ಪಕ್ಕಾ ಲೋಕಲ್ ಆಟೋ ಗೇಮರ್ ಎಂದು ಒಂದಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿ ಕಳೆದ ವರ್ಷ ಬೆಂಗಳೂರಿನ ಆಟೋ ಚಾಲಕ ಸೀಟು ಅಳವಡಿಸಿಕೊಂಡಿದ್ದ. ಹೀಗಾಗಿ ಬೆಂಗಳೂರಿನಲ್ಲಿ ಈ ರೀತಿ ಪ್ರಯೋಗ ಹೊಸದೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದೀಗ 10 ಗಂಟೆ ಮೇಲೆ ಹೊರಗಡೆ ಹೋಗುವಂತಿಲ್ಲ. ಅಷ್ಟರ ಮಟ್ಟಿಗೆ ಬಿಸಿಲಿನ ಬೇಗೆ ಸಂಕಷ್ಟಕ್ಕೀಡು ಮಾಡುತ್ತಿದೆ. ಇದರ ನಡುವೆ ಆಟೋ ಚಾಲಕರು ಬಿಸಿನಲ್ಲೇ ಕರ್ತವ್ಯ ನಿರ್ವಹಿಸಬೇಕು. ಜೊತೆಗೆ ಟ್ರಾಫಿಕ್ ಸಮಸ್ಯೆ ಬೇರೆ. ಹೀಗಾಗಿ ಆರಾಮಾಗಿ ಕುಳಿತುಕೊಳ್ಳಲು ಈ ಆಟೋ ಚಾಲಕ ಆಫೀಸ್ ಚೇರ್ ಅಳವಡಿಸಿದ್ದಾನೆ.
ಈತನ ಆಟೋ ಹಾಗೂ ಚೇರ್ ಕುರಿತು ರೆಡ್ಡಿಟ್‌ನಲ್ಲಿ ಪೋಟೋ ಪೋಸ್ಟ್ ಮಾಡಲಾಗಿದೆ. ಕಿತ್ ಕಿತ್ ಗುಡ್ಡೆ ಹಾಕೋನ್ ಖಾತೆ ಮೂಲಕ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಪೇಪರ್ ಬ್ಯಾಗನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ, ಶೇ.100 ರಷ್ಟು ಮರುಬಳಕೆ ಎಂದ ಜನ!
