Asianet Suvarna News Asianet Suvarna News

ಭಾರತದಲ್ಲಿ ಪೆಟ್ರೋಲ್ ಡೀಸೆಲ್ ವಾಹನ ಇನ್ನು ಇಷ್ಟು ವರ್ಷ ಮಾತ್ರ, ಡೆಡ್‌ಲೈನ್ ಘೋಷಿಸಿದ ಗಡ್ಕರಿ!

ಭಾರತದಲ್ಲಿ ಪೆಟ್ರೋಲ್ -ಡೀಸೆಲ್ ವಾಹನಗಳಿಗೆ ಹೆಚ್ಚು ವರ್ಷವಿಲ್ಲ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೀಗ ಪೆಟ್ರೋಲ್ ಡೀಸೆಲ್ ವಾಹನ ಇನ್ನು ಇಷ್ಟೇ ವರ್ಷ ಭಾರತದಲ್ಲಿ ರಸ್ತೆಯಲ್ಲಿ ಓಡಲಿದೆ. ಬಳಿಕ ಸಂಪೂರ್ಣವಾಗಿ ಇವಿ ಬಳಕೆ ಜಾರಿಯಾಗಲಿದೆ ಎಂದಿದ್ದಾರೆ. ಹಾಗಾದರೆ ಇನ್ನೆಷ್ಟು ವರ್ಷ ಇಂಧನ ವಾಹನ ರಸ್ತೆಗಳಿಸಲು ಸಾಧ್ಯ?
 

Nitin Gadkari Announces Deadline to eliminate Petrol Diesel Vehicle in India ckm
Author
First Published May 30, 2024, 6:57 PM IST

ನವದೆಹಲಿ(ಮೇ.30) ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗಿದೆ. ಪರಿಣಾಮ ಮಾಲಿನ್ಯವೂ ಹೆಚ್ಚಾಗುತ್ತಿದೆ. ಪರಿಸರ ಅಸಮತೋಲನದಿಂದ ಸಂಕಷ್ಟಗಳ ಸರಮಾಲೆ ಎದುರಾಗುತ್ತಿದೆ. ಹೀಗಾಗಿ ಭಾರತ ಸೇರಿದಂತೆ ಹಲವು ದೇಶಗಳ ಎಲೆಕ್ಟ್ರಿಕ್ ವಾಹನದತ್ತ ಮೊರೆ ಹೋಗಿದೆ. ಇವಿ ಮೂಲಕ ಮಾಲಿನ್ಯಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇದೀಗ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು 10 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳು ಸಂಪೂರ್ಣವಾಗಿ ರಸ್ತೆಯಿಂದ ಮರೆಯಾಗಲಿದೆ ಎಂದಿದ್ದಾರೆ.

ಮುಂದಿನ 10 ವರ್ಷದಲ್ಲಿ ಭಾರತದ ರಸ್ತೆಯಲ್ಲಿ ಎಲೆಕ್ಟ್ರಿಕ್ ವಾಹನ, ಎಥೆನಾಲ್, ಬಯೋ ಫ್ಯೂಯಲ್ ಸೇರಿದಂತೆ ಪರಿಸರಕ್ಕೆ ಪೂರಕವಾದ ವಾಹನಗಳು ಮಾತ್ರ ಓಡಾಡಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ  ಆಯೋಜಿಸಿದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಸಾರ್ವಜನಿಕ ಸಾರಿಗೆಯಲ್ಲಿ ಈಗಾಗಲೇ ಇವಿ ವಾಹನಗಳ ಬಳಕೆಯಾಗುತ್ತಿದೆ. ಶೀಘ್ರದಲ್ಲೇ ಸಂಪೂರ್ಣ ಎಲೆಕ್ಟಿಕ್ ಹಾಗೂ ಪರಿಸರ ಪೂರಕ ವಾಹನಗಳ ಬಳಕೆಯಾಗಲಿದೆ ಎಂದಿದ್ದಾರೆ.

ರೇಂಜ್ ರೋವರ್ ಬೆಲೆ ಬರೋಬ್ಬರಿ 56 ಲಕ್ಷ ರೂ ಇಳಿಕೆ, ಕೈಗೆಟುಕವ ದರದಲ್ಲಿ ಐಷಾರಾಮಿ ಕಾರು!

ಸಾರ್ವಜನಿಕ ವಲಯ ಹಾಗೂ ಖಾಸಗಿಯಲ್ಲೂ ಎಲ್ಲಾ ವಾಹನಗಳು ಇವಿ ಹಾಗೂ ಪರಿಸರ ಪೂರಕವಾಗಲಿದೆ. 2034ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್-ಡೀಸೆಲ್ ವಾಹನಗಳು ಇರುವುದಿಲ್ಲ. ಭಾರತ ಸಂಪೂರ್ಣವಾಗಿ ಪರಿಸರ ಪೂರಕ ವಾಹನಗಳಿಂದ ಕೂಡಿರಲಿದೆ. ಡೀಸೆಲ್ ವಾಹನಗಳಿಗೆ 100 ರೂಪಾಯಿ ಖರ್ಚು ಮಾಡುತ್ತಿದ್ದರೆ, ಇವಿ ವಾಹನಗಳಿಗೆ ಕೇವಲ 4 ರೂಪಾಯಿಯಲ್ಲಿ ನಿರ್ವಹಣೆಯಾಗಲಿದೆ. ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆ ವೆಚ್ಚ ಅತ್ಯಂತ ಕಡಿಮೆ. ಹೀಗಾಗಿ ಇದರ ಬಳಕೆ ಕೂಡ ಅಗ್ಗವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

2023ರಲ್ಲಿ 15 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದೆ. 2022ಕ್ಕೆ ಹೋಲಿಸಿದೆ ಸಂಖ್ಯೆ ದುಪ್ಪಟ್ಟಾಗಿದೆ. ಇವಿ ಪಾಲಿಸಿ ಬದಲಾಯಿಸಲಾಗಿದೆ. ಮೂಲಭೂತ ಸೌಕರ್ಯ ಹೆಚ್ಚಿಸಲಾಗುತ್ತಿದೆ. ಚಾರ್ಜಿಂಗ್ ಸೌಲಭ್ಯ, ಸುರಕ್ಷತೆ ಸೇರಿದಂತೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಹೀಗಾಗಿ ಭಾರತ ಶೀಘ್ರವೇ  ಹೊಸ ಇತಿಹಾಸ ರಚಿಸಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನ ಬೆಲೆ ಕೊಂಚ ದುಬಾರಿಯಾಗಿದೆ. ಇದೀಗ ಇವಿ ಬ್ಯಾಟರಿ ಉತ್ಪಾದನೆ ಹಾಗೂ ಚಿಪ್ ಕಂಡಕ್ಚರ್ ಉತ್ಪಾದನೆಗೆ ಭಾರತ ಒತ್ತು ನೀಡಿದೆ. ಇದರಿದಂ ದುಬಾರಿ ಆಮದು ಸುಂಕ ತಪ್ಪಲಿದೆ. ಇಷ್ಟೇ ಅಲ್ಲ ಭಾರತದಲ್ಲೇ ಕಡಿಮೆ ಬೆಲೆಗೆ ಬ್ಯಾಟರಿ, ಸೆಮಿ ಕಂಡಕ್ಚರ್ ಸೇರಿದಂತೆ ಎಲ್ಲಾ ಬಿಡಿ ಭಾಗಗಳು ಉತ್ಪಾದನೆಯಾಗಲಿದೆ. ಇದರಿಂದ ಎಲೆಕ್ಟ್ರಿಕ್ ವಾಹನದ ಬೆಲೆಯೂ ಕಡಿಮೆಯಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಕೈಗೆಟುಕವ ದರದಲ್ಲಿ ಪ್ರಿಮಿಯಂ SUV ಕಾರು, ನಿಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಲಾಂಚ್!
 

Latest Videos
Follow Us:
Download App:
  • android
  • ios