Asianet Suvarna News Asianet Suvarna News

ನಿಮ್ಮ ಗಾಡಿ ನಂಬರ್ ಪ್ಲೇಟ್ ಮೇಲೆ ಹೆಸರು ಬರೆದ್ರೆ ಹುಷಾರ್..!

* ನಿಮ್ಮ ಗಾಡಿ ನಂಬರ್ ಪ್ಲೇಟ್ ಮೇಲೆ ಹೆಸರು ಬರೆದ್ರೆ ಹುಷಾರ್..!
* ಸಾರಿಗೆ ಇಲಾಖೆಯಿಂದ ಇನ್ಮುಂದೆ ಬೀಳುತ್ತೆ ದುಬಾರಿ ಫೈನ್..!
* ಪುಕ್ಸಟೆ ಶೋಕಿ ಮಾಡೋರಿಗೆ ಬ್ರೇಕ್ ಹಾಕಲು ಮುಂದಾಗಿದೆ ಸಾರಿಗೆ ಇಲಾಖೆ

Name Photos Banned In Vehicle Number Plates In Karnataka rbj
Author
Bengaluru, First Published May 26, 2022, 5:09 PM IST

ಬೆಂಗಳೂರು, (ಮೇ26); ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸ್ರು ಹಾಕೋದು, ಸ್ಟಾರ್ ನಟರ ಫೋಟೋ ಅಂಟಿಸಿಕೊಳ್ಳೋ ಗೀಳು ಹಲವರಿಗಿದೆ. ಆದ್ರೆ ಇಂತಹ ಪುಕ್ಸಟ್ಟೆ ಶೋಕಿ ಮಾಡೋರಿಗೆ ಸಾರಿಗೆ ಇಲಾಖೆ ಶಾಕ್ ನೀಡ್ತಿದೆ. ವಾಹನಗಳ ಐಡೆಂಫಿಕೇಶನ್ಗಾಗಿ ನಂಬರ್ ಪ್ಲೇಟ್ ನೀಡಲಾಗುತ್ತೆ. ಆದ್ರೆ ಕೆಲವ್ರು ಶೋಕಿಗಾಗಿ ಇದರ ಮೇಲೆ ಹೆಸ್ರು ಬರೆಯೋದು, ಡಿಸೈನ್ ಬಿಡಿಸಿಕೊಳೋದು ಮಾಡ್ತಿದ್ದಾರೆ. 

ಇಂತಹ ಶೋಕಿಗಳಿಗೆ ಬ್ರೇಕ್ ಹಾಕೋಕೆ ಸಾರಿಗೆ ಇಲಾಖೆ ಮುಂದಾಗಿದೆ. ನಂಬರ್ ಪ್ಲೇಟ್ ನಂಬರ್ ಬಿಟ್ಟು ಮತ್ತೇನೆ ಕ್ರಿಯೇಟಿವಿಟಿ ತೋರ್ಸೋಕೆ ಹೋದ್ರೋ ನಿಮಗೆ ದಂಡ ಫಿಕ್ಸ್ ಅಂತಾನೇ ಲೆಕ್ಕ. ಹೌದು ನಂಬರ್ ಪ್ಲೇಟ್ ಮೇಲಿರುವ ಹೆಸರು ಚಿಹ್ನೆ ತೆರವುಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದಾರೆ. ಆದ್ರೆ ಬಹುತೇಕ ಮಂದಿ ನಂಬರ್ ಪ್ಲೇಟ್ ಮೇಲೆ ಇರುವ ಹೆಸರು ಚಿಹ್ನೆ ಲಾಂಛನ ತೆರವು ಮಾಡಿಲ್ಲ. ಹೀಗಾಗಿ ನಗರದಲ್ಲೆಡೆ ಸಾರಿಗೆ ಇಲಾಖೆ ಅಧಿಕಾರಿಗಳು ಫೀಲ್ಡ್ಗೆ ಇಳಿದು ದಂಡ ಹಾಕಲು ರೆಡಿಯಾಗಿದ್ದಾರೆ. ಇಷ್ಟಾಗಿಯೂ  ನಿಮ್ಮ ಗಾಡಿ‌ ಮೇಲೆ ಹಾಕಿರುವ ಹೆದರುಗಳನ್ನು ತೆಗೆದಿಲ್ಲಂದ್ರೆ 500 ರೂ ದಂಡ ನಿಮ್ಗೆ ಕಟ್ಟಿಟ್ಟಬುತ್ತಿ.

Defective Number Plates ಬೆಂಗಳೂರಲ್ಲಿ HSRP ನಂಬರ್ ಪ್ಲೇಟ್ ಇಲ್ಲ ಎಂದು ದಂಡ, ನಿಯಮ ಹೇಳುವುದೇನು?

ನೋಂದಣಿ ಫಲಕದ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ,ರಾಜ್ಯ ಮಾನವ ಹಕ್ಕುಗಳ ಆಯೋಗ ಇತ್ಯಾದಿ ಲಾಂಛನಗಳನ್ನ ಹಾಕೋದು ಸಂಚಾರಿ ನಿಯಮದ ಉಲ್ಲಂಘನೆಯಾಗಲಿದೆ. ಆದ್ರೂ ಜನ ಬೇಕಾಬಿಟ್ಟಿ ಶೋಕಿಗೆ ನಂಬರ್ ಪ್ಲೇಟ್ ನ್ನ ಬಳಸಿಕೊಳ್ಳುತ್ತಿದ್ದಾರೆ‌. ಇದರಿಂದ ಸರ್ಕಾರದ ಸೂಚನೆ ಯಂತೆ ಸಾರಿಗೆ ಇಲಾಖೆ ಕಾರ್ಯಾಚರಣೆ ಮಾಡಲು ಮುಂದಾಗಿದೆ.

ಆದೇಶ ಪಾಲನೆಯ ಗಡುವಿನ ಬಳಿಕ ನಾಮಫಲಕ ತೆರವುಗೊಳಿಸದಿದ್ರೆ ಅಂತಹ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಯಾವುದೇ ಖಾಸಗಿ ವಾಹನಗಳ ಮಾಲೀಕರುಗಳು ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕು ಹೇಳಲಾಗಿದೆ.

ಅದೆಷ್ಟೋ ವಾಹನ ಸವಾರರು ಪ್ರತಿಷ್ಟೆಗೆ ಅಂತ ಅಧ್ಯಕ್ಷ,ಉಪಾಧ್ಯಕ್ಷ, ಕಾರ್ಯದರ್ಶಿ ಅಂತ ಹಾಕಿಕೊಂಡು ಬಿಲ್ಡಪ್ ಕೊಡುತ್ತಿದ್ರು.ಇದೀಗ ಅಂಥವರಿಗೆ ಬಿಸಿ ಮುಟ್ಟಿಸೋದಕ್ಕೆ ಇಲಾಖೆ ಮುಂದಾಗಿದೆ.ಇನ್ನಾದ್ರು,ಬಿಟ್ಟಿ ಶೋಕಿ ಮಾಡುವರಿಗೆ ಕಡಿವಾಣ ಬೀಳುತ್ತಾ ಅನ್ನೋದನ್ನ  ಕಾದುನೋಡಬೇಕಿದೆ.

Follow Us:
Download App:
  • android
  • ios