Asianet Suvarna News Asianet Suvarna News

ಒಂದೇ ಸ್ಕೂಟಿಯಲ್ಲಿ 7 ಮಕ್ಕಳ ಜೊತೆ ಸವಾರಿ, ವೈರಲ್ ವಿಡಿಯೋ ಬೆನ್ನಲ್ಲೇ ಅರೆಸ್ಟ್!

ಸ್ಕೂಟಿಯಲ್ಲಿ ಡಬಲ್, ತ್ರಿಬಲ್ ರೈಡ್ ನೋಡಿರುತ್ತೀರಿ, ಆದರೆ ಇಲ್ಲೊಬ್ಬ 7 ಮಕ್ಕಳ ಕೂರಿಸಿಕೊಂಡಿದ್ದಾರೆ. ನಗರದ ಪ್ರಮುಖ ರಸ್ತೆಯಲ್ಲೇ ಸಾಗಿದ್ದಾನೆ. ಈತ ಹೆಲ್ಮೆಟ್ ಕೂಡ ಹಾಕಿಲ್ಲ. 

Man rides scooter with 7 children as a pillion passengers in Mumbai road video goes viral ckm
Author
First Published Jun 27, 2023, 4:06 PM IST

ಮುಂಬೈ(ಜೂ.27): ಒಂದು ಸ್ಕೂಟರ್, 7 ಮಕ್ಕಳು, ಒಬ್ಬ ತಂದೆ. ಒಟ್ಟ 8 ಮಂದಿ ನಗರದ ಪಮುಖ ರಸ್ತೆ ಮೂಲಕ ಮನೆಗೆ ಪ್ರಯಾಣಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ನಾವು ಡಬಲ್ ರೈಡ್, ತ್ರಿಬಲ್ ರೈಡ್ ನೋಡಿರಬಹುದು. ಆದರೆ ಇದು 8 ಮಂದಿಯ ರೈಡ್. ಮುಂಬೈ ನಗರದಲ್ಲಿ ಈ ಘಟನೆ ನಡೆದಿದೆ. ಮುನಾವರ್ ಶಾ ತನ್ನ ನಾಲ್ವರು ಮಕ್ಕಳು ಹಾಗೂ ಇತರ ಮೂವರು ಮಕ್ಕಳು ಒಟ್ಟುು 7 ಮಕ್ಕಳನ್ನು ಶಾಲೆಯಿಂದ ಕರೆತರುವುದು, ಬಿಡುವುದು ಇದೇ ಸ್ಕೂಟರ್‌ನಲ್ಲಿ. ಆದರೆ ಈ ವಿಡಿಯೋ ವೈರಲ್ ಆದ ಕಾರಣ ಮುಂಬೈ ಪೊಲೀಸರು ಮುನಾವರ್ ಶಾನನ್ನು ಬಂಧಿಸಿದ್ದಾರೆ. ದುಬಾರಿ ದಂಡವನ್ನೂ ಹಾಕಿದ್ದಾರೆ.

ಮುನಾವಶ್ ಶಾಗೆ ನಾಲ್ವರು ಮಕ್ಕಳು. ಪಕ್ಕದ ಮನೆಯ ಮೂವರು ಮಕ್ಕಳನ್ನು ಮನಾವಶ್ ಶಾ ಶಾಲೆಗೆ ಕರೆದುಕೊಂಡು ಹೋಗಿ ಕರೆತರುತ್ತಾನೆ. ನಗರ ಪ್ರಮುಖ ರಸ್ತೆ ಮೂಲಕ ಸಾಗುವ ಮುನಾವರ್ ಶಾ, 7 ಮಕ್ಕಳನ್ನು ಕೂರಿಸಿಕೊಂಡು ಸ್ಕೂಟರ್ ರೈಡ್ ಮಾಡುತ್ತಾನೆ. ಇಷ್ಟೇ ಅಲ್ಲ ಮುನಾವರ್ ಶಾ ಹೆಲ್ಮೆಟ್ ಹಾಕಿ ರೈಡ್ ಮಾಡಿದ ಉದಾಹರಣೆಯೇ ಇಲ್ಲ. 

ಟ್ರಾಫಿಕ್‌ನಲ್ಲಿ ಸೆರೆ ಆಯ್ತು ಅಮ್ಮನ ಅಮೋಘ ಪ್ರೀತಿ: ವೈರಲ್ ವೀಡಿಯೋ

ಹೀಗೆ ಮಕ್ಕಳ ಜೊತೆ ರೈಡ್ ಮಾಡುತ್ತಿದ್ದ ವೇಳೆ ಇತರ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಮುನಾವರ್ ಶಾ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ. ಇದರ ಬೆನಲ್ಲೇ ಮುಂಬೈ ಪೊಲೀಸರು ವಿಡಿಯೋ ಆಧರಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಸಿಸಿಟಿ ದೃಶ್ಯ ಆಧರಿಸಿ ಮುನಾವರ್ ಪತ್ತೆ ಹಚ್ಚಿದ್ದಾರೆ.ಮುನಾವರ್ ಬಂಧಿಸಿದ ಪೊಲೀಸರು, ದುಬಾರಿ ದಂಡವನ್ನೂ ಹಾಕಿದ್ದಾರೆ.

ಮಕ್ಕಳ ಸುರಕ್ಷತೆ, ಇತರ ವಾಹನ ಸವಾರರ ಸುರಕ್ಷತೆಗ, ಟ್ರಾಫಿಕ್ ನಿಯಮ ಎಲ್ಲವನ್ನೂ ಗಾಳಿಗೆ ತೂರಿ ಸ್ಕೂಟರ್ ರೈಡ್ ಮಾಡಲಾಗಿದೆ. ಹೀಗಾಗಿ ಮುಂಬೈ ಪೊಲೀಸರು ಈ ಪ್ರಕರಣವನ್ನು ಗಂಭೀರ ಎಂದು ಪರಿಗಣಿಸಿದ್ದಾರೆ. 308 IPC ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

 

ಟ್ರಾಫಿಕ್ ನಿಯಮ ಉಲ್ಲಂಘನೆ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಜೊತೆಗೆ ದುಬಾರಿ ದಂಡವನ್ನುಹಾಕಲಾಗುತ್ತದೆ. ಸಿಗ್ನಲ್ ಜಂಪ್, ಒನ್ ವೇ ರೈಡಿಂಗ್ ಸೇರಿದಂತೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ದಂಡ ದುಪ್ಪಟ್ಟವಾಗಿದೆ. ಇದಕ್ಕೂ ಮುಖ್ಯವಾಗಿ ಸುರಕ್ಷತಾ ಕಾರಣಕ್ಕಾಗಿ ಟ್ರಾಫಿಕ್ ನಿಯಮ ಪಾಲನೆ ಅತೀ ಅಗತ್ಯವಾಗಿದೆ.

Bengaluru- ಸಂಚಾರ ದಟ್ಟಣೆ ತಗ್ಗಿಸಲು ಡ್ರೋನ್‌ ಮೊರೆಹೋದ ಪೊಲೀಸರು

ಟ್ರಾಫಿಕ್‌ ಉಲ್ಲಂಘಿಸಿದ್ದಕ್ಕೆ ನೆಟ್ಟಿಗರ ನೆಪ!
‘ಟ್ರಾಫಿಕ್‌ ನಿಯಮ ಉಲ್ಲಂಘಿಸಿ ದಂಡದಿಂದ ತಪ್ಪಿಸಿಕೊಳ್ಳಲು ನೀವು ಪೊಲೀಸರಿಗೆ ಯಾವ ನೆಪ ಹೇಳಿದ್ದಿರಿ?’ ಎಂದು ದೆಹಲಿ ಪೊಲೀಸರು ಮಾಡಿದ ಟ್ವೀಟ್‌ಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಗಲ್‌ರ್‍ಫ್ರೆಂಡ್‌ ಕಾಯುತ್ತಿದ್ದಾಳೆ, ಬಿಟ್ಟುಬಿಡಿ ಇಲ್ಲ ಬ್ರೇಕಪ್‌ ಆಗುತ್ತದೆ’ ಎಂದು ಒಬ್ಬ ಟ್ವೀಟ್‌ ಮಾಡಿದ್ದರೆ, ಇನ್ನೊಬ್ಬ ‘ಇದೇ ಮೊದಲ ಸರ್‌ ಉಲ್ಲಂಘಿಸಿದ್ದು, ಮತ್ತೆಂದೂ ಮಾಡಲ್ಲ ಎಂದು ಸಬೂಬು ನೀಡಿದ್ದೇನೆ’ ಎಂದು ಬರೆದಿದ್ದಾನೆ. ‘ನಾವು ವಿದ್ಯಾರ್ಥಿಗಳು ನಮ್ಮ ಬಳಿ ಹಣವಿಲ್ಲ, ಅಮ್ಮನ ಆರೋಗ್ಯ ಸರಿಯಲ್ಲ ಔಷಧಿ ತೆಗೆದುಕೊಳ್ಳಲು ಹೋಗಿದ್ದೆ’ ಮೊದಲಾದ ಕಾರಣ ನೀಡಿ ದಂಡದಿಂದ ತಪ್ಪಿಸಿಕೊಂಡಿದ್ದೇವೆ ಎಂದು ಎಂದು ನೆಟ್ಟಿಗರು ಒಪ್ಪಿಕೊಂಡಿದ್ದಾರೆ.

Follow Us:
Download App:
  • android
  • ios