ನೋ ಪಾರ್ಕಿಂಗ್‌ನಲ್ಲಿ ವಾಹನ ನಿಂತ ಚಿತ್ರ ಕಳಿಸಿದರೆ ಸಿಗುತ್ತೆ ಬಹುಮಾನ!

ದೇಶದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಿಕ್ಕ ಸಿಕ್ಕ ಜಾಗದಲ್ಲಿ ಗಾಡಿಯನ್ನು ಪಾರ್ಕ್ ಮಾಡುವುದನ್ನಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕೇಂದ್ರ ರಸ್ತೆ ಸಾರಿಗೆ ಸಚಿವ, ನೋ ಪಾರ್ಕಿಂಗ್‌ನಲ್ಲಿ ವಾಹನವನ್ನು ಪಾರ್ಕಿಂಗ್ ಮಾಡಿದ ಚಿತ್ರವನ್ನು ಕಳಿಸಿದರೆ, ಬಹುಮಾನ ನೀಡುವ ಕಾನೂನನ್ನು ಶೀಘ್ರವೇ ರೂಪಿಸಲಾಗುವುದು ಎಂದು ಹೇಳಿದ್ದಾರೆ.

law will be made to reward the person who sends the picture of a wrongly parked vehicle says Union Minister Nitin Gadkari san

ನವದೆಹಲಿ (ಜೂನ್ 16): ಹೆಚ್ಚುತ್ತಿರುವ ವಾಹನಗಳ (vehicle ) ಸಂಖ್ಯೆಯಿಂದ ಪಾರ್ಕಿಂಗ್ (Parking) ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪಾರ್ಕಿಂಗ್ ಇಲ್ಲದ ಸ್ಥಳದಲ್ಲಿ ವಾಹನಗಳನ್ನು ಪಾರ್ಕ್ ಮಾಡುವ ವ್ಯಕ್ತಿಗಳ ಬಗ್ಗೆ ಶೀಘ್ರವೇ ಕಾನೂನು ರೂಪಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Union Minister for Road Transport and Highways Nitin Gadkari) ಹೇಳಿದ್ದಾರೆ.

ನೋ ಪಾರ್ಕಿಂಗ್‌ನಲ್ಲಿ ನಿಂತ ವಾಹನಗಳ ಚಿತ್ರವನ್ನು ಕಳುಹಿಸುವ ವ್ಯಕ್ತಿಗೆ ಬಹುಮಾನ ನೀಡುವ ಕಾನೂನು ಶೀಘ್ರದಲ್ಲಿಯೇ ಬರಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ. ದಂಡದ ಮೊತ್ತ 1,000 ಆಗಿದ್ದರೆ, ಛಾಯಾಚಿತ್ರ ಕಳುಹಿಸುವವರು 500 ರೂಪಾಯಿಗಳನ್ನು ಪಡೆಯಬಹುದು ಎಂದು ಗಡ್ಕರಿ ಹೇಳಿದರು.

ಕೇಂದ್ರ ಸಚಿವ ಗಡ್ಕರಿ ಅವರು ತಮ್ಮ ಸ್ಪಷ್ಟ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿದ್ದಾರೆ. ನವದೆಹಲಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ರಸ್ತೆಗಳಲ್ಲಿ ತಪ್ಪಾಗಿ ವಾಹನಗಳನ್ನು ನಿಲ್ಲಿಸುವ ಅಭ್ಯಾಸವನ್ನು ನಿಲ್ಲಿಸಲು ಕಾನೂನನ್ನು ಪರಿಗಣಿಸುವುದಾಗಿ ಹೇಳಿದರು. ತಪ್ಪಾದ ಪಾರ್ಕಿಂಗ್‌ನಿಂದಾಗಿ ರಸ್ತೆಗಳು ಜಾಮ್ ಆಗುತ್ತಿದ್ದು, ಪ್ರಯಾಣಕ್ಕೆ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ.

ರಸ್ತೆಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು, ಬೈಕ್ ನಿಲ್ಲಿಸುವ ವ್ಯಕ್ತಿಗಳ ಕುರಿತಾಗಿ ಕಾನೂನು ತರಲಿದ್ದೇನೆ. ಇಂಥ ವಾಹನಗಳು ನೋ ಪಾರ್ಕಿಂಗ್‌ನಲ್ಲಿ(No Parking) ನಿಂತಿವೆ ಎಂದು ಫೋಟೋ ತೆಗೆದು ಕಳಿಸಿದಲ್ಲಿ, ಆ ವಾಹನದ ಮಾಲೀಕನಿಗೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದರಲ್ಲಿ 500 ರೂಪಾಯಿ ಫೋಟೋ ಕಳಿಸಿದವರಿಗೆ ಸಿಗಲಿದೆ. ಹೀಗಾದಲ್ಲಿ ಖಂಡಿತವಾಗಿ ವಾಹನ ನಿಲುಗಡೆಯ ವಿಚಾರದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಟ್ರಾಫಿಕ್ ಜಾಮ್‌ನ (Trafic Jam)ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.

ಪ್ರಧಾನಿ ಕರ್ನಾಟಕ ಪ್ರವಾಸ, ಇಲ್ಲಿದೆ 2 ದಿನದ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ

ನಮ್ಮಲ್ಲಿ ಜನರು ಕಾರುಗಳನ್ನು ಖರೀದಿ ಮಾಡುತ್ತಾರೆ. ಆದರೆ, ಈ ಕಾರುಗಳಿಗಾಗಿ ಪಾರ್ಕಿಂಗ್ ಸ್ಥಳವನ್ನು ನಿರ್ಮಾಣ ಮಾಡುವುದಿಲ್ಲ. ಇದರಿಂದಾಗಿ ಅವರ ವಾಹನಗಳು ರಸ್ತೆಯನ್ನು ಆಕ್ರಮಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

Crime News: ಮಗಳ ಮೇಲೆ 32 ವರ್ಷದ ತಂದೆಯಿಂದಲೇ ರೇಪ್:‌ ವಿಕೃತಕಾಮಿ ಬಂಧನ

ನಾಗ್ಪುರದ ನನ್ನ ಮನೆಯಲ್ಲಿರುವ ಅಡುಗೆ ಕೆಲಸದವರು ಎರಡು ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಹೊಂದಿದ್ದಾರೆ. ಈಗ ನಾಲ್ಕು ಜನರ ಕುಟುಂಬಕ್ಕೆ ಆರು ವಾಹನಗಳಿದೆ. ಆದರೆ, ಪಾರ್ಕಿಂಗ್‌ಗೆ ಸ್ಥಳವಿಲ್ಲ. ನನಗೆ ದೆಹಲಿ ಜನರ ಬಗ್ಗೆಯೂ ಅಚ್ಚರಿಯಾಗುತ್ತದೆ ಏಕೆಂದರೆ, ಅವರ ವಾಹನಗಳೆಲ್ಲವೂ ಪಾರ್ಕಿಂಗ್ ಮಾಡಲು ಸ್ಥಳ ಸಿಕ್ಕಿದೆ. ಯಾಕೆಂದರೆ, ಇಲ್ಲಿ ಯಾರೂ ಪಾರ್ಕಿಂಗ್ ಸ್ಥಳ ಮಾಡೋದಿಲ್ಲ. ಹೊಸ ಕಾರು ಖರೀದಿ ಮಾಡಿದರೂ, ತಮ್ಮ ವಾಹವನ್ನು ರೋಡ್‌ನಲ್ಲೇ ಪಾರ್ಕ್ ಮಾಡುತ್ತಾರೆ' ಎಂದು ಹಗುರ ಧಾಟಿಯಲ್ಲಿ ಹೇಳಿದರು.

Latest Videos
Follow Us:
Download App:
  • android
  • ios