Asianet Suvarna News Asianet Suvarna News

ವಾಹನ ಸವಾರರೇ ಎಚ್ಚರ, 1.5 ವರ್ಷದಿಂದ ಕೋಟಿ ಕೋಟಿ ಬಾಚಿದ ನಕಲಿ ಟೋಲ್ ಪ್ಲಾಜಾ!

ಹೆದ್ದಾರಿಯಲ್ಲಿ ಪ್ರಯಾಣ ಮಾಡಬೇಕಾದರೆ ಟೋಲ್ ಕಟ್ಟಿ ಮುಂದೆ ಸಾಗಬೇಕು. ಆದರೆ ಕೆಲ ಹೆದ್ದಾರಿಯಲ್ಲಿ ನಕಲಿ ಟೋಲ್ ಪ್ಲಾಜಾ ತಲೆ ಎತ್ತಿ ಕೋಟಿ ಕೋಪಾಯಿ ದುಡ್ಡು ಹೊಡೆದಿರುವುದು 1.5 ವರ್ಷದ ಬಳಿಕ ಪತ್ತೆಯಾಗಿದೆ.

Fake Toll Plaza lured lakhs of money from last 1 5 years cheated Government in Gujarat ckm
Author
First Published Dec 8, 2023, 7:19 PM IST

ಗಾಂಧಿನಗರ(ಡಿ.08) ಭಾರತದಲ್ಲಿ ಅತ್ಯುತ್ತಮ ರಸ್ತೆಗಳು ನಿರ್ಮಾಣವಾಗುತ್ತಿದೆ. ಹೆದ್ದಾರಿಗಳ ಸ್ವರೂಪ ಬದಲಾಗಿದೆ. ಇದಕ್ಕೆ ತಕ್ಕಂತೆ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾದ ಮೂಲಕ ಸವಾರರಿಂದ ಸುಂಕ ವಸೂಲು ಮಾಡಲಾಗುತ್ತದೆ. ಯಾವುದೇ ಹೆದ್ದಾರಿಯಲ್ಲಿ ಸಾಗಿದರೆ ಟೋಲ್ ಕಟ್ಟಲೇಬೇಕು. ಆದರೆ ಕಳೆದೊಂದು ವರ್ಷದಿಂದ ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ಸರ್ಕಾರಕ್ಕೆ, ಜನರಿಗೆ ವಂಚಿಸಿದ ಘಟನೆ ನಡೆದಿದೆ. ಇದು ಸಿನಿಮಾ ಕತೆಯಲ್ಲ, ಗುಜರಾತನ್‌ನ ಬಮನಬೋರ್-ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಕಲಿ ಟೋಲ್ ಪ್ಲಾಜಾದ ಅಸಲಿ ಕತೆ.

ಮೊರ್ಬಿಯ ಜಿಲ್ಲೆಯ ಬಮನಬೋರ್ -ಕಚ್ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿಯ ಖಾಸಗಿ ಜಾಗದಲ್ಲಿ ಈ ನಕಲಿ ಟ್ರೋಲ್ ಪ್ಲಾಜಾ ಕಳೆದ ಒಂದೂವರೆ ವರ್ಷದ ಹಿಂದೆ ತಲೆ ಎತ್ತಿತ್ತು. ಹೆದ್ದಾರಿ ಬೈಪಾಸ್ ಬಳಿ ಇರುವ ಖಾಸಗಿ ಸ್ಥಳದಲ್ಲಿ ಟ್ರೋಲ್ ಪ್ಲಾಜಾ ನಿರ್ಮಾಣ ಮಾಡಿ, ಹೆದ್ದಾರಿ ಮೂಲಕ ಸಾಗುವ ವಾಹನಗಳನ್ನು ಡೈವರ್ಟ್ ಮಾಡಲಾಗಿತ್ತು. ಈ ಟೋಲ್ ಪ್ಲಾಜಾದಲ್ಲಿ ಇತರ ಟೋಲ್‌ಗಳಿಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆ ಹಣ ಪಡೆಯಲಾಗುತ್ತಿತ್ತು.

ಸತತ 5 ವರ್ಷದ ಪ್ರಯತ್ನ, ಕೈಗಳಿಲ್ಲದ ಯುವತಿಗೆ ಸಿಕ್ಕಿತು 4 ವ್ಹೀಲರ್ ಡ್ರೈವಿಂಗ್ ಲೈಸೆನ್ಸ್!

ಟೋಲ್ ಬೆಲೆ ಅರ್ಧಕ್ಕಿಂತ ಕಡಿಮೆ ಇದ್ದ ಕಾರಣ ಬಹುತೇಕ ಟ್ರಕ್ ಚಾಲಕರು, ವಾಹನ ಸವಾರರು ಇದೇ ಟೋಲ್ ಮೂಲಕ ಸಾಗಿ ಬೈಪಾಸ್ ರೋಡ್ ಮೂಲಕ ತೆರಳುತ್ತಿದ್ದರು. ಇದರಲ್ಲಿ ಹಲವು ಟೋಲ್ ಪ್ಲಾಜಾ ಅಧಿಕಾರಿಗಳು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಸರ್ಕಾರದ ಟೋಲ್ ಗೇಟ್ ಬಳಿ ಬಂದ ಕೆಲ ಟ್ರಕ್ ವಾಹನಗಳನ್ನು ಟೋಲ್ ಸಿಬ್ಬಂದಿಗಳು ಬೈಪಾಸ್ ಮೂಲಕ ತೆರಳುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಅರ್ಧಕ್ಕಿಂತ ಕಡಿಮೆ ಸುಂಕ ವಿಧಿಸಲಾಗುತ್ತದೆ ಎಂದು ಸಿಬ್ಬಂದಿಗಳು ಸೂಚಿಸುತ್ತಿದ್ದರು ಅನ್ನೋ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದೆ.

ಬ್ರಾ ಬಳಸಿ ಲಾಕ್ ಆಗಿದ್ದ ಕಾರಿನ ಡೋರ್ ಒಪನ್ ಮಾಡಿದ ಮಹಿಳೆ, ವಿಡಿಯೋ ವೈರಲ್!

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಇದು ನಕಲಿ ಟ್ರೋಲ್ ಪ್ಲಾಜಾ ಅನ್ನೋದು ಬಯಲಾಗಿದೆ. ಮೊರ್ಬಿಯ ಜಿಲ್ಲೆಯ ಬಮನಬೋರ್ -ಕಚ್ ಬಳಿ ಇರುವ ಟ್ರೋಲ್ ಪ್ಲಾಜಾ ನಿರ್ವಹಣೆ ಹೊತ್ತುಕೊಂಡಿರುವ ವೈಟ್‌ಹೌಸ್ ಸೆರಾಮಿಕ ಸಂಸ್ಥೆ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಪತ್ತೆಯಾಗಿದೆ. ಸಂಸ್ಥೆ ಮಾಲೀಕರು, ಮ್ಯಾನೇಜರ್ ಸೇರಿದಂತೆ ಕೆಲವರ ಮೇಲೆ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios