Asianet Suvarna News Asianet Suvarna News

ಬೆಂಗಳೂರಿನ ರಾಜೇಂದ್ರಗೆ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ಕಿರೀಟ!

120 ಬೈಕರ್‌ಗಳು ಸ್ಪರ್ಧಿಸಿದ  ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ ರೇಸ್‌ನಲ್ಲಿ ಬೆಂಗಳೂರಿನ ರಾಜೇಂದ್ರ ಆರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

Bengaluru Biker Rajendra R lift national rally sprint championship race title ckm
Author
First Published Jul 2, 2023, 8:05 PM IST

ಬೆಂಗಳೂರು(ಜು.02): ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರೆನಿಸಿರುವ ಬೆಂಗಳೂರಿನ ರಾಜೇಂದ್ರ ಆರ್ ಇಂದು ನಡೆದ ಎಫ್‌ಎಂಎಸ್‌ಸಿಐ ರೇ ಭಾರತೀಯ ರಾಷ್ಟ್ರಿಯ ರ‌್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್(ಐಎನ್‌ಆರ್‌ಎಸ್‌ಸಿ) ದಕ್ಷಿಣ ವಲಯ ಸುತ್ತಿನಲ್ಲಿ ಪ್ರಶಸ್ತ ಗೆದ್ದುಕೊಂಡಿದ್ದಾರೆ. 550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ ಅತ್ಯುತ್ತಮ ಸಮಯದೊಂದಿಗೆ ಮೊದಲ ಸ್ಥಾನ ಪಡೆದರು. ನಗರದ ಹೊರವಲಯದಲ್ಲಿರುವ ಸರ್ಜಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ 10 ಕಿಲೋ ಮೀಟರ್ ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಅಚ್ಚರಿ ಮೂಡಿಸಿದರು.

ರ‌್ಯಾಲಿಯಿಂಗ್‌ನ ಟಿ20 ಮಾದರಿ ಎಂದೇ ಕರೆಸಿಕೊಳ್ಳುವ ಸ್ಪ್ರಿಂಟ್ ರೇಸ್‌ನಲ್ಲಿ ಭಾರತದ ಅಗ್ರ ಬೈಕರ್‌ಗಳು ಕಣಕ್ಕಿಳಿದು, ರೇಸ್ ಅನ್ನು ಯಶಸ್ವಿಗೊಳಿಸಿದರು. ಸುಹೇಲ್ ಅಹ್ಮದ್ ಮೂರು ಬಾರಿ ಪೋಡಿಯಂ ಮೇಲೆ ಕಾಣಿಸಿಕೊಂಡರು. ಮೊದಲು 550 ಸಿಸಿ ವರೆಗಿನ ವಿಭಾಗದ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಸುಹೇಲ್, ಆ ಬಳಿಕ ಬುಲೆಟ್ ವಿಭಾಘದಲ್ಲಿ 2ನೇ ಹಾಗೂ 261 ಸಿಸಿ ಯಿಂದ 400ಸಿಸಿ ವರೆಗಿನ ರೇಸ್‌ನಲ್ಲಿ 3ನೇ ಸ್ಥಾನ ಪಡೆದರು.

ದೇಹಕ್ಕೆ ಬೆಂಕಿ ಹಚ್ಚಿ 100 ಮೀಟರ್ ಓಟ, 2 ವಿಶ್ವದಾಖಲೆ ನಿರ್ಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ!

‘ಬಹಳ ಉತ್ಸಾಹದಿಂದ ಕೂಡಿದ್ದ ದಿನವಿದು. ಸುಮಾರು 120 ಬೈಕರ್‌ಗಳು ಸ್ಪರ್ಧಿಸಿದ್ದರು’ ಎಂದಿರುವ ರೇಸ್ ಆಯೋಜಕ ಹಾಗೂ ಪ್ರಚಾರಕ ಮೋಟರ್‌ಸ್ಪೋರ್ಟ್ ಐಎನ್‌ಸಿಯ ಜೈದಾಸ್ ಮೆನನ್, ‘ರ‌್ಯಾಲಿ ಸ್ಪ್ರಿಂಟ್ ಪ್ರೇಕ್ಷಕರಿಗೆ ಬಹಳ ಮನರಂಜನೆ ನೀಡಿತು. ಅಭಿಮಾನಿಗಳಿಗೆ ಬಹಳ ಹತ್ತಿರದಿಂದ ಭಾರತದ ಅಗ್ರ ರೈಡರ್‌ಗಳನ್ನು ನೋಡುವ ಅವಕಾಶ ಸಿಕ್ಕಿತು’ ಎಂದಿದ್ದಾರೆ.

550 ಸಿಸಿ ಓಪನ್ ವಿಭಾಗ ಸೇರಿ ಎರಡು ವಿಭಾಗಗಳಲ್ಲಿ ಸಿನಾನ್ ಫ್ರಾನ್ಸಿಸ್ ಸಹ ಅಮೂಲ್ಯ ಅಂಕಗಳನ್ನು ಕಲೆಹಾಕಿದರು.

ಮಹಿಳೆಯರ 260 ಸಿಸಿ ವರೆಗಿನ ವಿಭಾಗದಲ್ಲಿ ಯುವ ಹಾಗೂ ಉತ್ಸಾಹಿ ಸ್ಪರ್ಧಿಗಳನ್ನು ಹಿಂದಿಕ್ಕಿ ರೀಹಾನಾ ಪ್ರಶಸ್ತಿ ಎತ್ತಿಹಿಡಿದರು. ಅವರು 8 ನಿಮಿಷ 49.29 ಸೆಕೆಂಡ್‌ಗಳಲ್ಲಿ ರೇಸ್ ಪೂರ್ತಿಗೊಳಿಸಿದರು.

ಕೋಟೆನಾಡಿನ ರೇಸ್‌ ಟ್ರ್ಯಾಕ್‌ ದೇಶದಲ್ಲಿಯೇ ಸೂಪರ್: ರೋಮಾಂಚಕರ ದಕ್ಷಿಣ ರೇಸ್‌ಗೆ ವಿದೇಶಿಗರೂ ಆಗಮನ

ಫಲಿತಾಂಶಗಳು
ಮುಕ್ತ ವಿಭಾಗ 550 ಸಿಸಿ ವರೆಗೂ: 1. ರಾಜೇಂದ್ರ ಆರ್  (07:33.59) 2.ಸ್ಯಾಮುಯಲ್ ಜೇಕಬ್ 3.ಸಿನಾನ್ ಫ್ರಾನ್ಸಿಸ್
ಗುಂಪು ‘ಎ’ 550 ಸಿಸಿ ವರೆಗೂ: 1. ಸುಹೇಲ್ ಅಹ್ಮದ್(07:51.57), 2.ಸಿನಾನ್ ಫ್ರಾನ್ಸಿಸ್, 3.ಕೌಸ್ತುಭ ಎಂ.
ಗುಂಪು ‘ಬಿ’ 261 ಸಿಸಿ ಯಿಂದ 400 ಸಿಸಿ : 1. ನರೇಶ್ ವಿ.ಎಸ್(08:09.32), 2.ಅಖಂಡ ಪ್ರತಾಪ್ ಸಿಂಗ್, 3.ಸುಹೇಲ್ ಅಹ್ಮದ್
ಗುಂಪು ‘ಸಿ’ 166 ಸಿಸಿ ಯಿಂದ 260 ಸಿಸಿ: 1. ಸಚಿನ್ ಡಿ (07:51.61 ), 2. ಯೋಗೇಶ್ ಪಿ., 3.ನಿತ್ಯನ್ ಎಲ್.
ಗುಂಪು ‘ಡಿ’ 131 ಸಿಸಿ ಯಿಂದ 165 ಸಿಸಿ: 1.ವರುಣ್ ಕುಮಾರ್(08:12.09), 2. ಅಬ್ರಾರ್ ಪಾಷಾ, 3.ಭರತ್ ಎಲ್.
ಬುಲೆಟ್ ಕ್ಲಾಸ್: 1.ನರೇಶ್ ವಿ.ಎಸ್.(08:03.35), 2.ಸುಹೇಲ್ ಅಹ್ಮದ್, 3.ಅಸಾದ್ ಖಾನ್
ಸ್ಕೂಟರ್ ಕ್ಲಾಸ್: 1. ಸುಬ್ರಮಣ್ಯ(08:39.07), 2. ಪಿಂಕೇಶ್ ಥಾಕ್ಕರ್, 3.ಕಾರ್ತಿಕ್ ನಾಯ್ಡು
ಮಹಿಳೆಯರ ವಿಭಾಗ 260 ಸಿಸಿ ವರೆಗೂ: 1. ರೀಹಾನಾ(08:49.29), 2.ಸ್ನೇಹಾ ಸಿ.ಸಿ, 3.ಶತಾಬ್ದಿ ಸಮಂತಾ
ವಲಯ ಸ್ಟಾರ್: 1.ಯೋಗೇಶ್ ಪಿ.(07:53.90), 2.ಸಂಜಯ್ ಸೋಮಶೇಖರ್, 3.ವಿನಯ್ ಪ್ರಸಾದ್
 

Follow Us:
Download App:
  • android
  • ios