ವಾಹನ ಸಂಬಂಧಿ ಎಲ್ಲಾ ವ್ಯವಹಾರಕ್ಕೆ ಆಧಾರ್‌ ಕಡ್ಡಾಯ!

ನೂತನ ವಾಹನ ಖರೀದಿ, ನೋಂದಣಿ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವ್ಯವಹಾರಗಳಿಗೆ ಆಧಾರ್‌ ಕಡ್ಡಾಯ|  ಇದರನ್ವಯ ಆಧಾರ್‌ ಸಂಖ್ಯೆಯೊಂದಿಗೆ ಸಂಯೋಜನೆಯಾದ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನೆ

Aadhar Card is Mandatory For all Vehicle Related activities pod

 

ತಿರುವನಂತಪುರ(ಏ.18): ನೂತನ ವಾಹನ ಖರೀದಿ, ನೋಂದಣಿ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವ್ಯವಹಾರಗಳಿಗೆ ಆಧಾರ್‌ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರನ್ವಯ ಆಧಾರ್‌ ಸಂಖ್ಯೆಯೊಂದಿಗೆ ಸಂಯೋಜನೆಯಾದ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನೆಯಾದ ಬಳಿಕವಷ್ಟೇ ವಾಹನ ಸಂಬಂಧಿಯ ವ್ಯವಹಾರಗಳು ಪೂರ್ಣಗೊಳ್ಳಲಿವೆ.

ತನ್ಮೂಲಕ ಸರ್ಕಾರಕ್ಕೆ ಒಬ್ಬ ವ್ಯಕ್ತಿಯ ಬಳಿ ಎಷ್ಟುವಾಹನಗಳಿವೆ ಎಂಬ ಮಾಹಿತಿ ಸರ್ಕಾರಕ್ಕೆ ಸುಲಭವಾಗಿ ಲಭ್ಯವಾಗಲಿದೆ. ಜೊತೆಗೆ ನಕಲಿ ನೋಂದಣಿ ಸೇರಿದಂತೆ ಇನ್ನಿತರ ಅಕ್ರಮಗಳಿಗೆ ಆಧಾರ್‌ ಆಧಾರಿತ ನೋಂದಣಿಯಿಂದ ಕಡಿವಾಣ ಬೀಳಲಿದೆ ಎಂಬುದು ಸರ್ಕಾರದವಾದ. ಈವರೆಗೆ ವಾಹನಗಳ ನೋಂದಣಿ ಸೇರಿದಂತೆ ಯಾವುದೇ ವ್ಯವಹಾರಗಳಿಗೆ ಆಧಾರ್‌ ಕಡ್ಡಾಯವಿರಲಿಲ್ಲ.

ಯಾವೆಲ್ಲಾ ವ್ಯವಹಾರಗಳಿಗೆ ಆಧಾರ್‌ ಬೇಕು:

ವಾಹನ ಚಾಲನೆ ಪರವಾನಗಿ, ವಾಹನ ನೋಂದಣಿ, ಕಲಿಕಾ ಪರವಾನಗಿ, ವಾಹನ ಚಾಲನಾ ಪರವಾನಗಿಯ ನವೀಕರಣ, ಡಬಲ್‌ ಡ್ರೈವಿಂಗ್‌ ಲೈಸೆನ್ಸ್‌, ವಾಹನ ಚಾಲನಾ ಪರವಾನಗಿಯಲ್ಲಿನ ವಿಳಾಸ ಮತ್ತು ಇನ್ನಿತರ ಬದಲಾವಣೆ, ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಗಿ, ವಾಹನಗಳ ತಾತ್ಕಾಲಿಕ ನೋಂದಣಿಗೆ ಆಧಾರ್‌ ಬೇಕೇಬೇಕು.

Latest Videos
Follow Us:
Download App:
  • android
  • ios