Asianet Suvarna News Asianet Suvarna News

10 ವರ್ಷದ ನಂತರ ತುಂಬಿ-ತುಳುಕುತ್ತಿದೆ ಪ್ರಸಿದ್ಧ ಸೂಳೆಕೆರೆ

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 10 ವರ್ಷಗಳ ಬಳಿಕ ತುಂಬಿದ್ದು ಕೋಡಿ ಬಿದ್ದಿದೆ. 

Soolekere overflowes After 10 Years Due To Heavy Rain
Author
Bengaluru, First Published Oct 26, 2019, 12:17 PM IST

ಚನ್ನಗಿರಿ [ಅ.26]:  ತಾಲೂಕಿನ ಇತಿಹಾಸ ಪ್ರಸಿದ್ಧ ಹಾಗೂ ದೇಶದಲ್ಲಿಯೇ 2ನೇ ಅತಿದೊಡ್ಡ ಕೆರೆಯಾದ ಸೂಳೆಕೆರೆ ಕಳೆದ 10 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದ್ದು, ಬುಧವಾರ ರಾತ್ರಿ ಕೋಡಿ ಬಿದ್ದಿದೆ. 

ಕೆರೆಯು 27ಅಡಿ ಅಳವಿದ್ದು, 27 ಅಡಿ ನೀರು ಬಂದಿದ್ದು ಕೆರೆಯ ಕೋಡಿಯ ಮೂಲಕ ನೀರು ಹರಿದು ಹೋಗುತ್ತಿದೆ.

ಕೆರೆಯು 1.8 ಟಿಎಂಸಿ ನೀರು ಸಂಗ್ರಹದ ಸಾಮಥ್ಯವಿದ್ದು ಭದ್ರಾ ನಾಲೆಯ ಮಳೆಯಿಂದ ಹರಿದು ಬರುತ್ತಿರುವ ಸಿಪೇಜ್‌ ನೀರು ಹಿರೇಹಳ್ಳದ ನೀರು, ಚನ್ನಗಿರಿ ಹಳ್ಳದ ನೀರು ಕೆರೆಗೆ ಹರಿದು ಹೋಗುತ್ತಿದ್ದು ಗಂಟೆ-ಗಂಟೆಗೆ ಕೋಡಿಯಲ್ಲಿ ಹರಿಯುವ ನೀರು ಹೆಚ್ಚಾಗುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೂಳೆಕೆರೆಯಿಂದ ಕೋಡಿಯಲ್ಲಿ ಹರಿಯುವ ನೀರು ಯಾವುದೇ ಜಮೀನುಗಳಿಗೆ ನುಗ್ಗದೆ ಹರಿಹರದ ತುಂಗಾಭದ್ರಾ ನದಿಗೆ ಸೇರಲಿದೆ ಎಂದು ತ್ಯಾವಣಿಗೆ ನೀರಾವರಿ ಇಲಾಖೆಯ ಅಭಿಯಂತರ ಗುಡ್ಡಪ್ಪ ತಿಳಿಸಿದ್ದಾರೆ.

Follow Us:
Download App:
  • android
  • ios