ಕಾಂಗ್ರೆಸ್‌ನ 45 ಅಭ್ಯರ್ಥಿಗಳ ಘೋಷಣೆ : BJPಗೆ ಸೆಡ್ಡು ಹೊಡೆಯಲು ಪ್ಲಾನ್
ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಅನುಭವಿ ಸದಸ್ಯರ ಜೊತೆಗೆ ಗೆಲ್ಲುವ ಸಾಮರ್ಥ್ಯವಿರುವ ಹೊಸ ಮುಖ, ಯುವಕರಿಗೆ ಆದ್ಯತೆ ನೀಡುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದೆ.
ದಾವಣಗೆರೆ [ನ.01]: ಮಹಾ ನಗರ ಪಾಲಿಕೆ ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಅನುಭವಿ ಸದಸ್ಯರ ಜೊತೆಗೆ ಗೆಲ್ಲುವ ಸಾಮರ್ಥ್ಯವಿರುವ ಹೊಸ ಮುಖ, ಯುವಕರಿಗೆ ಆದ್ಯತೆ ನೀಡುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದೆ.
ನಗರದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಲಹೆ ಮೇರೆಗೆ ಕೆಲ ಅನುಭವಿಗಳಿಗೆ ಅವಕಾಶ ನೀಡುವ ಜೊತೆಗೆ ಹೊಸ ಮುಖಗಳು, ಯುವ ಉತ್ಸಾಹಿಗಳನ್ನೂ ಕಾಂಗ್ರೆಸ್ಸಿನ ಅಚ್ಚರಿಯ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಮೂಲಕ ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಗುರುವಾರ ನಸುಕಿನವರೆಗೂ ಎಲ್ಲಾ 45 ವಾರ್ಡ್‌ಗೂ ಜಾತಿ, ಅನುಭವ, ಹಿನ್ನೆಲೆ, ಸೇವಾ ಮನೋಭಾವ ಎಲ್ಲವನ್ನೂ ಅಳೆದು ತೂಗಿ ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷದ ಎಲ್ಲಾ 45 ಅಭ್ಯರ್ಥಿಗಳ ಪಟ್ಟಿ ಹೀಗಿದೆ.
1ನೇ ವಾರ್ಡ್‌ಗೆ ಜಿ.ಡಿ.ಪ್ರಕಾಶ್, 2ಕ್ಕೆ ರಹತ್ ಜಾನ್, 3ಕ್ಕೆ ಎ.ಬಿ.ರಹೀಂ ಸಾಬ್, 4ಕ್ಕೆ ಮೊಹಮ್ಮದ್ ಕಬೀರ್ ಅಲಿ, 5ಕ್ಕೆ ಸಿ.ಸುಧಾ ಇಟ್ಟಿಗುಡಿ ಮಂಜುನಾಥ, 6ಕ್ಕೆ ಎಸ್.ಮಲ್ಲಿಕಾರ್ಜುನ, 7ಕ್ಕೆ ಬಿ.ಎಚ್.ವಿನಾಯಕ ಪೈಲ್ವಾನ್, 8ಕ್ಕೆ ಗೌರಮ್ಮ ಚಂದ್ರಪ್ಪ, 9ಕ್ಕೆ ಕೆ.ಜಾಕೀರ್ ಅಲಿ, 10ಕ್ಕೆ ಡಿ.ಮಾಲತೇಶ ಪೈಲ್ವಾನ್.
11ನೇ ವಾರ್ಡ್‌ಗೆ ಮಹಮ್ಮದ್ ಸೈಯದ್ ಚಾರ್ಲಿ, 12ಕ್ಕೆ ಹುರ್‌ಭಾನು, 13ಕ್ಕೆ ಶಬಾನ್, 14ಕ್ಕೆ ಚಮನ್ ಸಾಬ್, 15ಕ್ಕೆ ಡಿ.ಎಸ್.ಆಶಾ, 16ಕ್ಕೆ ಎ.ನಾಗರಾಜ, 17ಕ್ಕೆ ದಿನೇಶ ಕೆ.ಶೆಟ್ಟಿ, 18ಕ್ಕೆ ಪಿ.ಎನ್.ಚಂದ್ರಶೇಖರ, 19ಕ್ಕೆ ಸಾವನ್ ಎ.ಜೈನ್, 20ಕ್ಕೆ ಯಶೋಧ ಉಮೇಶ.
21ಕ್ಕೆ ಶಿವಲೀಲ ಕೊಟ್ರಯ್ಯ, 22ಕ್ಕೆ ಡಿ.ಶಿವಕುಮಾರ, 23ಕ್ಕೆ ಎಂ.ಎನ್.ಶಾರದಾ, 24ನೇ ವಾರ್ಡ್‌ಗೆ ನಲ್ಲೂರು ರಾಘವೇಂದ್ರ, 25ಕ್ಕೆ ಕೆ.ಜಿ.ಶಿವಕುಮಾರ, 26ಕ್ಕೆ ಅಬ್ದುಲ್ ಲತೀಫ್, 27ಕ್ಕೆ ಕೆ.ಜಿ.ಸುನೀತಾ, 28ಕ್ಕೆ ಜೆ.ಎನ್.ಶ್ರೀನಿವಾಸ, 29ಕ್ಕೆ ರೇಣುಕಮ್ಮ ಪುಟ್ಟಪ್ಪ, 30ಕ್ಕೆ ಲಕ್ಷ್ಮೀ ಬಾಯಿ.
31ಕ್ಕೆ ಪಾಮೇನಹಳ್ಳಿ ನಾಗರಾಜ, 32ಕ್ಕೆ ಅನ್ನಪೂರ್ಣ ಬಸವರಾಜ, 33ಕ್ಕೆ ಕೆ.ಶಿವಶಂಕರ, 34ಕ್ಕೆ ವೆಂಕಟೇಶ ನಾಯ್ಕ, 35ಕ್ಕೆ ಕೆ.ಎಸ್.ಸವಿತಾ, 36ಕ್ಕೆ ನಾಗರತ್ನಮ್ಮ ಕೃಷ್ಣಪ್ಪ, 37ಕ್ಕೆ ಎಸ್.ಶ್ವೇತಾ, 38ಕ್ಕೆ ಮಂಜುನಾಥ ಗಡಿಗುಡಾಳ್, 39ಕ್ಕೆ ಶಾಂತಮ್ಮ ದಿಳ್ಯಪ್ಪ, 40ಕ್ಕೆ ನಾಗರತ್ನಮ್ಮ ವಿಜಯಕುಮಾರ.
41ಕ್ಕೆ ಲೀನಾ ಬಸವರಾಜ, 42ಕ್ಕೆ ವಿಜಯ ಲಿಂಗರಾಜ, 43ಕ್ಕೆ ಕಲ್ಲಳ್ಳಿ ನಾಗರಾಜ, 44ಕ್ಕೆ ಭಾಗ್ಯಮ್ಮ ಮಂಜಪ್ಪ ಹಾಗೂ 45ನೇ ವಾರ್ಡ್‌ಗೆ ಎಲ್.ಎಚ್.ಸಾಗರ್‌ರನ್ನು ಕಾಂಗ್ರೆಸ್
ಅಭ್ಯರ್ಥಿಗಳಾಗಿ ಗುರುವಾರ ನಸುಕಿನ ವೇಳೆ ಎಸ್ಸೆಸ್ ಮಲ್ಲಿಕಾರ್ಜುನ ಆಯ್ಕೆ ಮಾಡಿ, ಘೋಷಣೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ
ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: