ಸದಾಶಿವ ವರದಿ ಶಿಫಾರಸ್ಸಿಗೆ ಆಗ್ರಹಿಸಿ ಡಿ.11ರಂದು ಸಮಾವೇಶ

ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಡಿ.11ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ

Meeting on December 11 to request the recommendation of AJ Sadashiva report

ದಾವಣಗೆರೆ (ನ.22) : ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಡಿ.11ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ನಾಯಕ ಅಂಬಣ್ಣ ಅರೋಲಿಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ (Internal reservation) ಕುರಿತು ಡಿ. 11ರೊಳಗೆ ಸರ್ಕಾರ ಕೇಂದ್ರಕ್ಕೆ ಶಿಫಾರಸು (Recommendation) ಮಾಡಿದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು. ಕೇಂದ್ರ ಸರ್ಕಾರವು ಸಂವಿಧಾನ ಪರೀಚೇದ 341(3)ಕ್ಕೆ ಕೂಡಲೇ ತಿದ್ದಪಡಿ ಮಾಡಬೇಕು. ತಮಿಳುನಾಡಿನ (Tamilnadu) ಮಾದರಿಯಲ್ಲಿ ಆರುಂಧತಿ ಸಮುದಾಯಕ್ಕೆ (Arundhati community)ಶೇ. 2.84 ಮೀಸಲಾತಿ ನೀಡಿದಂತೆ ಸುಪ್ರಿಂ ಕೋರ್ಟ್‌ ನ್ಯಾ. ಅರುಣ್‌ ಮಿಶ್ರ (Arun Mishra) ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ಉಪಯೋಗಿಸಿ ಪ್ರತ್ಯೇಕವಾಗಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6 ಮೀಸಲಾತಿಯನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಆಗ್ರಹಿಸಿದರು.

ನ್ಯಾ.ನಾಗಮೋಹನ್‌ ದಾಸ್‌ (Nagamohan Das) ಮತ್ತು ನ್ಯಾ, ಕಾಂತರಾಜ ವರದಿ (Report)ಯನ್ನು ಬಹಿರಂಗ ಮಾಡಿ ಯಥಾವತ್ತಾಗಿ ಜಾರಿ ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳು (Political Parties) ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗರ (Madiga) ಜನಸಂಖ್ಯೆಗೆ ತಕ್ಕ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಎಲ್ಲ ಪಕ್ಷಗಳು ಕನಿಷ್ಠ 15 ಸ್ಥಾನಗಳನ್ನು ನೀಡಬೇಕು. ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂ ಮಾಡಬೇಕು. ನ್ಯಾ.ಎ.ಜೆ.ಸದಾಶಿವ (AJ Sadashiava) ಆಯೋಗದ ಪರ ಹೋರಾಟಗಾರರ ಮೇಲೆ ಹೂಡಿದ ರೌಡಿಶೀಟರ್ ಪ್ರಕರಣಗಳನ್ನು ರದ್ದುಪಡಿಸಬೇಕು. ದಲಿತ ಸಂಘಟಕರ ಮೇಲೆ ದಾಖಲಾದ ಎಲ್ಲಾ ಕ್ರಿಮಿನಲ್‌ ಪ್ರಕರಣ (Criminal Case)ಗಳನ್ನು ರದ್ದುಪಡಿಸಬೇಕು. ಪರಿಶಿಷ್ಟ ಜಾತಿಗಳ ಎಸ್‌ಸಿಪಿ, ಟಿಎಸ್‌ಪಿ. ಅನುದಾನವನ್ನು ಮಾದಿಗ ಸಂಬಂಧಿತ ಅಲೆಮಾರಿ (Nomad) ಸಮುದಾಯಗಳಿಗೆ ಶೇ. 6+1 ರಂತೆ ಹಂಚಿಕೆ ಮಾಡಬೇಕು. ರಾಜ್ಯದ ಪೌರ ಕಾರ್ಮಿಕರು ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಕೇಶವ ಮೂರ್ತಿ, ಕುಂದವಾಡ ಮಂಜುನಾಥ್, ಹೇಮರಾಜ್, ಟಿ.ರವಿಕುಮಾರ್, ನಾಗರಾಜ್, ಭಾನುಪ್ರಕಾಶ್, ಎಂ. ರವಿ ಇತರರು ಇದ್ದರು.
 

Latest Videos
Follow Us:
Download App:
  • android
  • ios