ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 72 ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ಶಾಸಕ ವೇದವ್ಯಾಸ್‌ ಕಾಮತ್‌ ಅವರ ಸೂಚನೆಯ ಮೇರೆಗೆ ಸ್ಥಳೀಯ ಮುಖಂಡರು ನೆರವೇರಿಸಿದ್ದಾರೆ.

ಮಂಗಳೂರು(ಅ.19): ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 72 ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ಶಾಸಕ ವೇದವ್ಯಾಸ್‌ ಕಾಮತ್‌ ಅವರ ಸೂಚನೆಯ ಮೇರೆಗೆ ಸ್ಥಳೀಯ ಮುಖಂಡರು ನೆರವೇರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಕಾಮತ್‌, ನನ್ನ ಕ್ಷೇತ್ರದ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಒಂದೇ ದಿನದಲ್ಲಿ ಒಟ್ಟು 72 ಕಾಮಗಾರಿಗಳಿಗೆ ಸ್ಥಳೀಯ ಮುಖಂಡರ ಮೂಲಕ ಗುದ್ದಲಿಪೂಜೆ ನೆರವೇರಿಸಲಾಗಿದೆ.

BSY ಮೋದಿ, ಅಮಿತ್ ಶಾ ಅವರ ಅನ್‌ವಾಂಟೆಡ್ ಚೈಲ್ಡ್ ಎಂದ ಸಿದ್ದು...

ಲೋಕೋಪಯೋಗಿ ಇಲಾಖೆಯಿಂದ 6.29 ಕೋಟಿ ರು. ವೆಚ್ಚದಲ್ಲಿ ಒಟ್ಟು 28 ಕಾಮಗಾರಿಗಳು, ಸಾಮಾನ್ಯ ನಿಧಿ ಅನುದಾನದಡಿ 2.13 ಕೋಟಿ ರು. ವೆಚ್ಚದಲ್ಲಿ 24 ಕಾಮಗಾರಿಗಳು, 1.19 ಕೋಟಿ ರು. ವೆಚ್ಚದಲ್ಲಿ ಮಳೆಹಾನಿಗೆ ಸಂಬಂಧಪಟ್ಟಕಾಮಗಾರಿ ಹಾಗೂ 5.65 ಕೋಟಿ ರು.ಗಳ ಕೈಗಾರಿಕಾ ವಲಯದ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು 15.26 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುವ ಮೂಲಕ ದಾಖಲೆ ಬರೆದಿದ್ದೇವೆ ಎಂದಿದ್ದಾರೆ.

ಕದ್ರಿ ಗೋಪಾಲನಾಥ್‌ ಮನೆಗೆ ಸಿದ್ದು ಭೇಟಿ

ವಿಶೇಷವೆಂದರೆ ಗುದ್ದಲಿಪೂಜೆ ಶಾಸಕರಿಂದಲೇ ನೆರವೇರಬೇಕು ಎನ್ನುವ ಹಳೆ ಸಂಪ್ರದಾಯವನ್ನು ಮುರಿದು ಈ ಎಲ್ಲ ಕಾಮಗಾರಿಗಳನ್ನು ಸ್ಥಳೀಯರ ಮೂಲಕವೇ ನೆರವೇರಿಸಿದ್ದೇವೆ ಎಂದು ಶಾಸಕ ಕಾಮತ್‌ ತಿಳಿಸಿದ್ದಾರೆ.