ಧರ್ಮಸ್ಥಳದಲ್ಲಿ ದೂರುದಾರ ಆರೋಪಿಸಿದ ಶವಗಳ ಉತ್ಖನನ ಮಾಡುವ ಕಾರ್ಯಾಚರಣೆಯಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಪ್ರತಿ ದಿನ ಎಸ್ಐಟಿ ತಂಡದ ಜೊತೆ ಆಗಮಿಸಿ ಉತ್ಖನನ ಕಾರ್ಯ ನಡೆಸುತ್ತಿದ್ದ ಎಸ್ಐಟಿ ತಂಡದ ಇನ್ಸ್‌ಪೆಕ್ಟರ್ ಮಂಜುನಾಥ್ ಇಂದು ಕಾಣಿಸಿಕೊಂಡಿಲ್ಲ.
ಧರ್ಮಸ್ಥಳ (ಆ.02) ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು (ಆ.02) ದೂರುದಾರ ಗುರುತಿಸಿದ 9ನೇ ಸ್ಥಳದ ಉತ್ಖನನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ 9 ಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆ ನಡೆಸಲಾಗಿತ್ತು. ಈ ಪೈಕಿ 6ನೇ ಸ್ಥಳದಲ್ಲಿ ಕಳೇಬರ ಪತ್ತೆಯಾಗಿದೆ. ಇಂದಿನ ಉತ್ಖನನ ಕಾರ್ಯಾಚರಣೆಯಲ್ಲಿ ಎಸ್ಐಟಿ ತಂಡದ ಜೊತೆ ಇನ್ಸ್‌ಪೆಕ್ಟರ್ ಮುಂಜುನಾಥ್ ಕಾಣಿಸಿಕೊಂಡಿಲ್ಲ. ಎಸ್ಐಟಿ ತಂಡ ಉದ್ದೇಶಪೂರ್ವಕವಾಗಿ ಮಂಜುನಾಥ್ ಅವರನ್ನು ತನಿಖೆಯಿಂದ ದೂರವಿಟ್ಟಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದಕ್ಕೆ ಮುಖ್ಯಕಾರಣ ಇನ್ಸ್‌ರಪೆಕ್ಟರ್ ಮಂಜುನಾಥ್ ವಿರುದ್ಧ ಕೇಳಿ ಬಂದ ದೂರು. ಮುಸುಕುದಾರಿ ದೂರುದಾರ ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾನೆ.
ಇನ್ಸ್‌ಪೆಕ್ಟರ್ ಮುಂಜುನಾಥ್ ಎಸ್ಐಟಿ ತನಿಖೆಯಿಂದ ದೂರ
ಎಸ್ಐಟಿ ರಚನೆ ಬಳಿಕ ಸ್ವಯಂಪ್ರೇರಿತರಾಗಿ ಕೆಲ ಅಧಿಕಾರಿಗಳು ತನಿಖೆಯಿಂದ ಹಿಂದೆ ಸರಿದಿದ್ದ ಘಟನೆಗಳು ನಡೆದಿತ್ತು. ಇದೀಗ ಎಸ್ಐಟಿ ತಂಡದಿಂದ ಮುಂಜುನಾಥ್ ದೂರ ಉಳಿದಿದ್ದಾರೆ. ಐದನೇ ದಿನದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಮುಂಜುನಾಥ್ ಕಾಣಿಸಿಕೊಂಡಿಲ್ಲ. ಮುಂಜುನಾಥ್ ಮೇಲೆ ದೂರು ಕೇಳಿಬಂದಿರುವ ಹಿನ್ನಲೆಯಲ್ಲಿ ಎಸ್ಐಟಿ ತಂಡವವೇ ಮಂಜುನಾಥ್‌ರನ್ನು ದೂರವಿಟ್ಟಿದೆ ಎಂದು ಹೇಳಲಾಗುತ್ತಿದೆ.
ಎಸ್ಐಟಿ ತನಿಖೆ ಧರ್ಮಸ್ಥಳದಲ್ಲಿ ತನಿಖೆ ಆರಂಭಿಸಿದ ದಿನದಿಂದ ಇನ್ಸ್‌ಪೆಕ್ಟರ್ ಮುಂಜುನಾಥ್ ಮುಂಚೂಣಿಯಲ್ಲಿದ್ದರು. ದೂರುದಾರನ ವಿಚಾರಣೆ, ದೂರುದಾರನ ಜೊತೆ ಸ್ಥಳ ಮಹಜರು ಹಾಗೂ ಗುರತಿಸಿದ ಸ್ಥಳದಲ್ಲಿ ಉತ್ಖನನ ವೇಳೆ ಇನ್ಸ್‌ಪೆಕ್ಟರ್ ಮುಂಜುನಾಥ್ ಮುಂಚೂಣಿಯಲ್ಲಿದ್ದು ತನಿಖೆ ನಡೆಸುತ್ತಿದ್ದರು. ಆದರೆ ದೂರುದಾರನ ಮೇಲೆ ಒತ್ತಡ ಹಾಕಿರುವು ಆರೋಪ ಕೇಳಿಬಂದಿದೆ. ಮುಸುಕುದಾರಿ ದೂರುದಾನ ವಕೀಲರು ಈ ಕುರಿತು ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ಮುಂಜುನಾಥ್ ಮುಸುಕುದಾರಿ ದೂರುದಾರನ ಬಂಧಿಸಿ ಜೈಲಿಗೆ ಹಾಕುವಂತೆ ಬೆದರಿಸಿದ್ದಾರೆ. ಒತ್ತದಿಂದ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಕುರಿತು ದೂರು ನೀಡಿದ್ದೇನೆ ಎಂದು ಮುಸುಕುದಾರಿ ದೂರುದಾರನಿಂದ ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಸಿದ್ದಾರೆ ಎಂದು ವಕೀಲರು ದೂರಿದ್ದಾರೆ. ಹೀಗಾಗಿ ಇನ್ಸ್‌ಪೆಕ್ಟರ್ ಮುಂಜುನಾಥ್ ಅವರನ್ನು ಎಸ್ಐಟಿ ತಂಡದಿಂದ ಕೈಬಿಡಬೇಕು, ನಿಸ್ಪಕ್ಷಪಾತ ತನಿಖೆಯಾಗಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯ ಗೃಹ ಇಲಾಖೆಗೆ ದೂರು ನೀಡಿದ್ದಾರೆ.
ದೂರುದಾನ ಜೊತೆ ತನಿಖಾಧಿಕಾರಿ ತೇಂದ್ರ ಕುಮಾರ್ ದಯಾಮ
ಇನ್ಸ್‌ಪೆಕ್ಟರ್ ಮುಂಜುನಾಥ್ ಅವರ ವಿರುದ್ದ ದೂರು ಕೇಳಿಬಂದಿರುವ ಹಿನ್ನಲೆಯಲ್ಲಿ ಎಸ್ಐಟಿ ತಂಡ ಇಂದು ಮುಂಜುನಾಥ್ ದೂರವಿಟ್ಟು ತನಿಖೆ ಮುಂದುವರಿಸಿದೆ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಕಾಡಿನಲ್ಲಿ ಹೂತಿಟ್ಟ ಶವಗಳ ಉತ್ಖನನ ಕಾರ್ಯ ಮುಂದುವರಿದಿದೆ. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರ ಎಸಿ ಸ್ಟೆಲ್ಲಾ ವರ್ಗಿಸ್ ಒಳಗೊಂಡ ಅಧಿಕಾರಿಗಳ ತಂಡ ಸ್ಥಳದಲ್ಲಿ ಹಾಜರಿದೆ.
ಧರ್ಮಸ್ಥಳ ಪಂಚಾಯಿತಿ ದಾಖಲೆ ಪಡೆದು ತನಿಖೆ
ದೂರುದಾರ ತೋರಿಸಿದ 6ನೇ ಪಾಯಿಂಟ್‌ನಲ್ಲಿ ಕಳೇಬರ ಪತ್ತೆಯಾಗಿತ್ತು. ಹೀಗಾಗಿ ನಿನ್ನೆ (ಆ.01) ಇನ್ಸ್‌ಪೆಕ್ಟರ್ ಮುಂಜುನಾಥ್ ಧರ್ಮಸ್ಥಳ ಪಂಚಾಯಿತಿಗೆ ತೆರೆಳಿ ಹಲವು ದಾಖಲೆ ಪರಿಶೀಲಿಸಿದ್ದಾರೆ. 1995ರಿಂದ 2014ರ ವರೆಗಿನ ಯುಡಿಆರ್ ದಾಖಲೆಗಳನ್ನು ಇನ್ಸ್‌ಪೆಕ್ಟರ್ ಮುಂಜುನಾಥ್ ಪಡೆದಿದ್ದಾರೆ. ಸಿಕ್ಕಿರುವ ಕಳೇಬರದ ಕುರಿತು ದಾಖಲೆ ಪಂಚಾಯಿತಿ ದಾಖಲೆಯಲ್ಲಿ ಇದೆಯಾ ಅನ್ನೋದು ಪರಿಶೀಲಿಸಲು ಮುಂದಾಗಿದ್ದಾರೆ. ಆದರೆ ಇಂದು ಮಂಜುನಾಥ್ ದೂರಿನ ಹಿನ್ನಲೆಯಲ್ಲಿ ಈ ತನಿಖೆಯಿಂದ ದೂರವಿದ್ದಾರೆ.
ಐದನೇ ದಿನ ಕಾರ್ಯಾಚರಣೆ
ಉತ್ಖನನ ಕಾರ್ಯಾಚರಣೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದು 9ನೇ ಪಾಯಿಂಟ್ ಉತ್ಖನನ ಕಾರ್ಯ ಆರಂಭಗೊಂಡಿದೆ. ಇದರ ಪಕ್ಕದಲ್ಲೇ 10, 11 ಹಾಗೂ 12ನೇ ಪಾಯಿಂಟ್ ಇದೆ. ಹೀಗಾಗಿ ಈ ಮೂರು ಪಾಯಿಂಟ್ ಇಂದು ಉತ್ಖನನ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಮಳೆ ಕಾರಣ ಉತ್ಖನನ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ಟರ್ಪಲ್ ಹಾಕಿ ಉತ್ಖನನ ನಡೆಸಲಾಗುತ್ತಿದೆ.
