Asianet Suvarna News

ಪಕ್ಷೇತರರು ಸ್ಪರ್ಧಿಸಿರುವಲ್ಲಿ ಕಾಂಗ್ರೆಸ್‌ಗೆ ಸೋಲಿನ ಬುತ್ತಿ!

ಚುನಾವಣೆಯಲ್ಲಿ ಫಲಿತಾಂಶದ ವಿಚಾರ ಬಂದಾಗ ಸೋಲು-ಗೆಲುವು ಸಾಮಾನ್ಯ ಎಂದು ಹೇಳುತ್ತಿದ್ದ ಕಾಂಗ್ರೆಸಿಗರು, ಪಾಲಿಕೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲನ್ನು ಕಂಡು ಧೃತಿಗೆಟ್ಟಿದ್ದಾರೆ. ಬೇಗುದಿಯನ್ನು ಸರಿಪಡಿಸಿಕೊಂಡು ಚುನಾವಣೆಗೆ ಹೋಗಿದ್ದರೂ, ಫಲಿತಾಂಶ ಕಾಂಗ್ರೆಸ್‌ ನಾಯಕರನ್ನೇ ದಂಗುಬಡಿಸಿದೆ. ಕಳೆದ ಎರಡು ಚುನಾವಣೆಗಳಲ್ಲಿ ಸೋತರೂ ಕೈಕಟ್ಟಿಕುಳಿತಿದ್ದ ಕಾಂಗ್ರೆಸ್‌ ಮುಖಂಡರು ಈ ಬಾರಿ ಮಾತ್ರ ಮೈಕೊಡವಿ ಏಳುತ್ತಿದ್ದು, ಸೋಲಿನ ಬಗ್ಗೆ ಗಂಭೀರ ಪರಾಮರ್ಶೆಗೆ ಇಳಿದಿದ್ದಾರೆ.

congress will defeat against independent candidates
Author
Bangalore, First Published Nov 17, 2019, 7:32 AM IST
  • Facebook
  • Twitter
  • Whatsapp

ಮಂಗಳೂರು(ನ.17): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ತತ್ತರಿಸಿರುವ ಕಾಂಗ್ರೆಸ್‌, ಸೋಲಿಗೆ ಕಾರಣವಾದ ಅಂಶಗಳನ್ನು ಕಂಡುಕೊಳ್ಳಲು ಹೊರಟಿದೆ. ಅಚ್ಚರಿಯ ಸಂಗತಿ ಎಂದರೆ, ಕಳೆದ ಲೋಕಸಭೆ ಹಾಗೂ ಅಸೆಂಬ್ಲಿ ಚುನಾವಣೆಯಲ್ಲಿ ಸೋತು ಸುಣ್ಣವಾದರೂ ತಲೆಕೆಡಿಸಿಕೊಳ್ಳದ ಕಾಂಗ್ರೆಸ್‌, ಈ ಬಾರಿ ತಡವಾಗಿಯಾದರೂ ಎಚ್ಚೆತ್ತುಕೊಂಡು ಸೋಲಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಮುಂದಾಗಿದೆ.

ಚುನಾವಣೆಯಲ್ಲಿ ಫಲಿತಾಂಶದ ವಿಚಾರ ಬಂದಾಗ ಸೋಲು-ಗೆಲುವು ಸಾಮಾನ್ಯ ಎಂದು ಹೇಳುತ್ತಿದ್ದ ಕಾಂಗ್ರೆಸಿಗರು, ಪಾಲಿಕೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲನ್ನು ಕಂಡು ಧೃತಿಗೆಟ್ಟಿದ್ದಾರೆ. ಅತೃಪ್ತಿ, ಬೇಗುದಿಯನ್ನು ಸರಿಪಡಿಸಿಕೊಂಡು ಚುನಾವಣೆಗೆ ಹೋಗಿದ್ದರೂ, ಫಲಿತಾಂಶ ಕಾಂಗ್ರೆಸ್‌ ನಾಯಕರನ್ನೇ ದಂಗುಬಡಿಸುವಂತೆ ಮಾಡಿದೆ. ಕಳೆದ ಎರಡು ಚುನಾವಣೆಗಳಲ್ಲಿ ಸೋತರೂ ಕೈಕಟ್ಟಿಕುಳಿತಿದ್ದ ಕಾಂಗ್ರೆಸ್‌ ಮುಖಂಡರು ಈ ಬಾರಿ ಮಾತ್ರ ಮೈಕೊಡವಿ ಏಳುತ್ತಿದ್ದು, ಸೋಲಿನ ಬಗ್ಗೆ ಗಂಭೀರ ಪರಾಮರ್ಶೆಗೆ ಇಳಿದಿದ್ದಾರೆ.

ಪಕ್ಷೇತರರು ಇದ್ದಲ್ಲಿ ಸೋಲಿನ ಬುತ್ತಿ!:

ಕಾಂಗ್ರೆಸ್‌ನ ಹೆಚ್ಚಿನ ಅಭ್ಯರ್ಥಿಗಳ ಪಾಲಿಗೆ ಪಕ್ಷೇತರರ ಸ್ಪರ್ಧೆ ಮುಳುವಾಗಿದೆ. ಎಲ್ಲ 60 ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಇದ್ದರೂ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲಲು ಕಾರಣ ಪಕ್ಷೇತರರು. ಪಕ್ಷೇತರರು ಸ್ಪರ್ಧಿಸಿದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತಿರುವುದನ್ನು ಪಕ್ಷದ ಮುಖಂಡರು ಮನಗಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಬಲ್ಲ ವಾರ್ಡ್‌ಗಳಲ್ಲಿ ಪಕ್ಷೇತರರಿಂದಾಗಿ ಸೋಲು ಕಂಡಿರುವುದು ಮುಖಂಡರನ್ನು ಅಚ್ಚರಿಯಲ್ಲಿ ಕೆಡವಿದೆ.

ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಕೋಟಿ ಕೋಟಿ ಲಾಭ

ಕಾಟಿಪಳ್ಳ, ಕೃಷ್ಣಾಪುರ, ಇಡ್ಯಾ, ಕದ್ರಿ ಪದವು, ಬೋಳೂರು ಪದವು, ಕದ್ರಿ, ಕಂಕನಾಡಿ, ಅತ್ತಾವರ, ಬೆಂಗರೆ ಸೇರಿದಂತೆ ಸುಮಾರು 12ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಕೈ ಅಭ್ಯರ್ಥಿಗಳು ಬೆರಳೆಣಿಕೆ ಮತಗಳ ಅಂತರದಲ್ಲಿ ಸೋತಿದ್ದಾರೆ. ಇಲ್ಲೆಲ್ಲ ಪಕ್ಷೇತರರು ಸ್ಪರ್ಧಿಸಿ ಒಂದಷ್ಟುಮತಗಳನ್ನು ಬಾಚಿರುವುದೇ ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಈ ಬಗ್ಗೆ ಶೋಧನೆ ನಡೆಸಿದ ಕಾಂಗ್ರೆಸ್‌ ಮುಖಂಡರಿಗೆ ಜಾತಿ ಲೆಕ್ಕಾಚಾರದಲ್ಲಿ ಮತಗಳು ಪಕ್ಷೇತರ ಅಭ್ಯರ್ಥಿಯ ಪಾಲಾಗಿರುವುದು ದೃಢಪಟ್ಟಿದೆ.

ಕಾಂಗ್ರೆಸ್‌ನಿಂದ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ಗೆ ತೊಡಕಾಗಿಲ್ಲ. ಮಾಜಿ ಮೇಯರ್‌ ಗುಲ್ಜಾರ್‌ಬಾನು ಪಕ್ಷೇತರರಾಗಿ ಸ್ಪರ್ಧಿಸಿದ ವಾರ್ಡ್‌ನಲ್ಲಿ ಎಸ್‌ಡಿಪಿಐ ಗೆದ್ದಿದೆ. ಇದನ್ನು ಹೊರತುಪಡಿಸಿದರೆ, ಮಾಜಿ ಸದಸ್ಯ ವಿಶ್ವನಾಥ್‌ ಹಾಗೂ ಯುವ ಕಾಂಗ್ರೆಸ್‌ ಮುಖಂಡ ತೌಫಿಕ್‌ ಶೇಕ್‌ ಇವರು ಬಂಡಾಯ ಸ್ಪರ್ಧಿಸಿದ ವಾರ್ಡ್‌ಗಳÜಲ್ಲಿ ಕಾಂಗ್ರೆಸ್‌ ಗೆಲುವು ಕಂಡಿದೆ.

ಕೇಸರಿಗೆ ಜೈ ಎಂದ ಅಲ್ಪಸಂಖ್ಯಾತರು!:

ಪಕ್ಷ ಸೋಲಿಗೆ ಅಂಶಗಳನ್ನು ಕಂಡುಕೊಳ್ಳುತ್ತಿರುವ ಕಾಂಗ್ರೆಸ್‌ ಮುಖಂಡರಿಗೆ ಗೊತ್ತಾದ ಇನ್ನೊಂದು ಸಂಗತಿ, ಈ ಬಾರಿ ಅಲ್ಪಸಂಖ್ಯಾತರು ಹೆಚ್ಚಾಗಿ ಬಿಜೆಪಿಯತ್ತ ವಾಲಿರುವುದು. ಮುಸ್ಲಿಂ ಹಾಗೂ ಕ್ರೈಸ್ತ ಬಾಹುಳ್ಯದ ವಾರ್ಡ್‌ಗಳನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಅಲ್ಪಸಂಖ್ಯಾತರು ಬಿಜೆಪಿ ಕೈಹಿಡಿದಿರುವುದನ್ನು ಫಲಿತಾಂಶ ಸಾಬೀತುಪಡಿಸಿದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಮಂಗಳೂರು ಪಾಲಿಕೆ ಮೇಯರ್‌ ಆಯ್ಕೆ: ಹಾಲಿ ಅಥವಾ ಹೊಸ ಮೀಸಲಾತಿ?

ಚುನಾವಣಾ ಪೂರ್ವ ಸಲಹೆ ಕಡೆಗಣನೆ ಕಾರಣ?

ಆಯಾ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಮುನ್ನ ಅದಕ್ಕೆಂದೇ ವೀಕ್ಷಕರನ್ನು ನೇಮಿಸಬೇಕು. ಮಾತ್ರವಲ್ಲ ಗುಪ್ತಚರ ಮಾಹಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್‌ ಪೂರ್ವಭಾವಿ ಸಭೆಯಲ್ಲಿ ಸಲಹೆ ನೀಡಿದ್ದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸಹಿತ ಮುಖಂಡರು ಹಾಜರಿದ್ದ ಈ ಸಭೆಯಲ್ಲಿ ಈ ಸಲಹೆಗೆ ಅಲ್ಲಿದ್ದವರು ತಲೆದೂಗಿದರೇ ವಿನಃ ಅನುಷ್ಠಾನಕ್ಕೆ ತರಲಿಲ್ಲ ಎನ್ನುತ್ತಾರೆ ಖಾದರ್‌ ಆಪ್ತರು.

ನಿಜವಾಯ್ತು ಪೂಜಾರಿ ಭವಿಷ್ಯ, ಘಟಾನುಘಟಿಗಳು ಬಂದ್ರು 'ಕೈ' ಹಿಡಿಯಲಿಲ್ಲ ಜನ..!

ಕೆಪಿಸಿಸಿ ಮುಖಂಡರಾದ ಸುದರ್ಶನ್‌ ಮತ್ತು ವೆಂಕಟೇಶ್‌ ಸಮ್ಮುಖದಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಮತ್ತು ಹಾಲಿ ಶಾಸಕರು ಸೇರಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದರೂ ಪಕ್ಷದೊಳಗೇ ಸಾಕಷ್ಟುವಿರೋಧ, ಪ್ರತಿಭಟನೆ, ಕಚ್ಚಾಟವನ್ನು ಎದುರಿಸಬೇಕಾಯಿತು. ನಂತರ ವೀಕ್ಷಕರನ್ನು ನೇಮಕ ಮಾಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಇದುವೇ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಳುವಾಯಿತು ಎಂಬ ಪ್ರಾಥಮಿಕ ಕಾರಣವನ್ನು ಮುಖಂಡರು ಹೇಳುತ್ತಾರೆ.

ಉಡುಪಿ: ಮಹಿಳೆಯರ ದೇಹ ಸ್ಪರ್ಶಿಸಿ ಪರಾರಿಯಾಗ್ತಿದ್ದ ಬೀದಿ ಕಾಮಣ್ಣ ಸೆರೆ

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಏನೆಲ್ಲ ಕಾರಣಗಳು ಎಂಬ ಬಗ್ಗೆ ಮುಖಂಡರು ಸೇರಿ ಅವಲೋಕನ ನಡೆಸುತ್ತಿದ್ದೇವೆ. ಇನ್ನು ಎರಡು ವಾರದೊಳಗೆ ಸೋಲಿನ ಪರಾಮರ್ಶೆ ನಡೆಸುತ್ತೇವೆ. ನಮ್ಮಲ್ಲಿ ಕೂಡ ಕೆಲವು ಲೋಪದೋಷಗಳು ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದು ದಕ್ಷಿಣ ಕನ್ನಡ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

-ಆತ್ಮಭೂಷಣ್‌

Follow Us:
Download App:
  • android
  • ios