Financial Horoscope Today: ನಿಮ್ಮ ಇಂದಿನ ಆರ್ಥಿಕ ಭವಿಷ್ಯ ಹೇಗಿದೆ ಗೊತ್ತಾ?
ಹಣದ ವಿಷಯದಲ್ಲಿ ನಿಮ್ಮ ಈ ದಿನ ಹೇಗಿರಲಿದೆ ಗೊತ್ತಾ?
ಕೊರೋನಾ ಕಾರಣದಿಂದಾಗಿ ಬಹಳಷ್ಟು ಜನ ಜೀವ ಕಳೆದುಕೊಂಡರೆ, ಮತ್ತೆ ಕೆಲವರು ಉದ್ಯೋಗ ಕಳೆದುಕೊಂಡರು. ಸಾಕಷ್ಟು ಜನ ತಮ್ಮ ಉಳಿತಾಯದ ಹಣ ಖರ್ಚು ಮಾಡಬೇಕಾಯಿತು. ವ್ಯಾಪಾರಿಗಳು, ಉದ್ಯೋಗಿಗಳು ಸಾಕಷ್ಟು ನಷ್ಟ ಅನುಭವಿಸಿದರು. ಒಟ್ನಲ್ಲಿ ಕೊರೋನಾ ಎಲ್ಲರ ಬದುಕಲ್ಲೂ ತನ್ನದೇ ಆದ ಪ್ರಭಾವ ಬೀರಿದೆ. ಅದಕ್ಕೇ ಇಲ್ಲಿ ನಿಮ್ಮ ಇಂದಿನ ಆರ್ಥಿಕ ಭವಿಷ್ಯ ಕೊಡಲಾಗಿದೆ. ಅದನ್ನು ನೋಡಿಕೊಂಡು ದಿನದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಮೇಷ(Aries)
ಇವತ್ತು ನೀವೇನಾದರೂ ಯಾರ ಬಳಿಯಾದರೂ ಜಗಳವಾಡಿದರೆ, ನಿಮ್ಮ ಮೇಲಿನ ಮಾನಸಿಕ ಒತ್ತಡ ತಡೆಯಲಾಗದಷ್ಟು ಹೆಚ್ಚಲಿದೆ. ಅದರಿಂದ ನೀವು ಬಿದ್ದರೂ ಆಶ್ಚರ್ಯವಿಲ್ಲ. ಈ ದಿನ ವೈವಾಹಿಕ ಬದುಕನ್ನು ಉಳಿಸಿಕೊಳ್ಳಲು ಯಾವುದೇ ರೀತಿಯ ಖರ್ಚುಗಳು ಮಾಡಬೇಕಾಗಬಹುದು.
ವೃಷಭ(Taurus)
ಇಂದು ನಿಮಗೆ ತಿರುಗಾಟದ ದಿನ. ಈ ತಿರುಗಾಟ ಉದ್ಯಮದ ಉದ್ದೇಶಕ್ಕಾಗಿಯಾಗಿದ್ದರೆ ಅದರಿಂದ ನಿಮ್ಮ ಶ್ರೀಮಂತಿಕೆ ಖಂಡಿತಾ ಹೆಚ್ಚಲಿದೆ. ಈ ರಾಶಿಯ ಹಲವರು ಇಂದು ಶ್ರೀಮಂತರಾಗುವರು. ಬದುಕಲು ಬೇಕಾದ ಮೂಲಭೂತ ಅಗತ್ಯಗಳ ಸಂಬಂಧಿ ಉದ್ಯೋಗ ನಿರ್ವಹಿಸುತ್ತಿರುವವರಿಗೆ ಹಣ ಲಾಭವಿದೆ. ರಾಜಕಾರಣಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ತುದಿಗಾಗಲ್ಲಿ ನಿಂತು ಕೆಲಸ ಮಾಡಬೇಕು.
Sadesath: 2022ರಲ್ಲಿ ಶನಿರಾಶಿಯ ಪ್ರಭಾವ ಯಾರ ಮೇಲೆ? ಯಾರಿಗೆ ಕಷ್ಟ, ಯಾರಿಗೆ ಶುಭ ಫಲ?
ಮಿಥುನ(Gemini)
ಇಂದು ಆರೋಗ್ಯ ಸಂಪೂರ್ಣ ನಿಮಗೆ ಸಾಥ್ ಕೊಡುತ್ತದೆ. ಹೀಗಾಗಿ, ನೀವು ದುಡಿಮೆಯ ವಿಷಯಕ್ಕೆ ಹಿಂಜರಿಯಲು ಅಡ್ಡಿ ಆತಂಕಗಳಿರುವುದಿಲ್ಲ. ಏನೇ ವಸ್ತು ಕೊಂಡುಕೊಳ್ಳುವ ಮೊದಲು ಅದು ಅಗತ್ಯವೇ ಎಂದು ಎರಡೆರಡು ಬಾರಿ ಯೋಚಿಸಿ. ಮಾರುವುದಿದ್ದರೆ ನಿಮ್ಮ ಸಂಪೂರ್ಣ ಪ್ರಯತ್ನ ಹಾಕಿ. ಧನಲಾಭವಂತೂ ಇದ್ದೇ ಇದೆ. ಯಾವುದಾದರೂ ಹಣ ಸಂಬಂಧಿ ಯೋಜನೆಗಳಿಗೆ ಇಂದು ಕಮಿಟ್ ಆಗಬಹುದು.
ಕಟಕ(Cancer)
ಇಂದಿನಿಂದ ನಿಮ್ಮ ಉದ್ಯೋಗದಲ್ಲಿ ಯಶಸ್ಸಿನ ಶೆಖೆ ಆರಂಭವಾಗುತ್ತದೆ. ಹೊಸ ಉದ್ಯಮ(business) ಆರಂಭಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ನಿಮ್ಮ ಮಾತಿನಿಂದ ಮತ್ತೊಬ್ಬರನ್ನು ನೋವುಗೊಳಿಸಬೇಡಿ. ಮತ್ತೊಬ್ಬರ ಮಾತಿನಿಂದ ಸ್ಪೂರ್ತಿ ಪಡೆಯಿರಿ.
2022 Happy year ಆಗ್ಬೇಕಂದ್ರೆ ಈ ರಾಶಿಯವರು ಹೀಗ್ ಮಾಡ್ಲೇಬಾರ್ದು...
ಸಿಂಹ(Leo)
ವರ್ಕ್- ಲೈಫ್ ಬ್ಯಾಲೆನ್ಸ್ ನೀವು ಮಾಡುವ ರೀತಿಗೇ ಸಂಪತ್ತು ನಿಮ್ಮನ್ನು ಅರಸಿ ಬರಲಿದೆ. ನೀವು ಕಂಪನಿಯಲ್ಲಿ ಹೂಡಿಕೆ ಮಾಡಿದ ಹಣ ಲಾಭವಾಗಿ ಸಧ್ಯದಲ್ಲೇ ಕೈ ಸೇರಲಿದೆ. ಇಂದು ಆಸ್ತಿ ಖರೀದಿಗೆ ತೋರುವ ಒಲವಿನಿಂದ ಒಳಿತಾಗಲಿದೆ.
ಕನ್ಯಾ(Virgo)
ನಿಮ್ಮ ಪರಿಶ್ರಮ ಫಲ ಕೊಟ್ಟೇ ಕೊಡುತ್ತದೆ. ಇಂದು ನೀವು ಮಾಡುವ ಹೊಸ ಯೋಜನೆಗಳು, ಹೊಸ ಯೋಚನೆಗಳು ನಿಮ್ಮ ಒಳಿತಿಗಾಗಿಯೇ ಕೆಲಸ ಮಾಡಲಿವೆ.
ತುಲಾ(Libra)
ನಿಮ್ಮ ಸಹೋದ್ಯೋಗಿಗಳು ಮಾತು ಕೇಳಲಿದ್ದಾರೆ. ಸಾಧ್ಯವಾದಷ್ಟು ಫಲ ಪಡೆಯುವಂತೆ ಅವರಲ್ಲಿ ಕೆಲಸ ಮಾಡಿಸಿ. ನೀವು ಮಾಡುತ್ತಿರುವ ಕೆಲಸ ಸರಿಯಿದೆ. ಬದಲಾಯಿಸುವ ಯೋಚನೆ ಬೇಡ. ವ್ಯಾಪಾರಕ್ಕಾಗಿ ಯೋಚಿಸುತ್ತಿದ್ದರೆ, ಆದಷ್ಟು ಹೊಸ ರೀತಿಯ ವಾಣಿಜ್ಯ ಸರಕುಗಳ ಕಡೆ ಗಮನ ಹರಿಸಿ.
ವೃಶ್ಚಿಕ(Scorpio)
ಹಣದ ಮೂಲ ಹೆಚ್ಚಿಸಿಕೊಳ್ಳಲು ಹೊಸ ಅವಕಾಶಗಳು(opportunities) ತೆರೆದುಕೊಳ್ಳಲಿವೆ. ಕಂಪನಿಯ ಲಾಭಗಳು ಅನಿರೀಕ್ಷಿತವಾಗಿ ನಿಮ್ಮ ಪಾಲಿಗೆ ಬರುವ ಸಾಧ್ಯತೆ ಇದೆ. ನಿಮ್ಮ ಆತ್ಮಶಕ್ತಿ(willpower)ಯ ಕಾರಣದಿಂದ ಯಶಸ್ಸು ಸಿಕ್ಕೇ ಸಿಗುತ್ತದೆ.
ಧನು(Sagittarius)
ಹೊಸ ಕೆಲಸಕ್ಕಾಗಿ ಹುಡುಕುತ್ತಿದ್ದೀರಾದರೆ, ತಡವಾಗಲಿದೆ, ತಲೆ ಕೆಡಿಸಿಕೊಳ್ಳಬೇಕಿಲ್ಲ. ನಿಮ್ಮ ಸಾಮರ್ಥ್ಯ, ಜ್ಞಾನ ಹೆಚ್ಚಿಸಿಕೊಳ್ಳುವಲ್ಲಿ ತೊಡಗಿಸಿಕೊಳ್ಳಿ. ಭವಿಷ್ಯದಲ್ಲಿ ಖಂಡಿತಾ ನಿರೀಕ್ಷೆ ಮೀರಿ ಉತ್ತಮ ಕೆಲಸ ದೊರಕುವುದು. ಇಂದಿನಿಂದಲೇ ನಿಮ್ಮ ಪ್ರಯತ್ನ ಹೆಚ್ಚಿಸಿ.
ಮಕರ(Capricorn)
ನೀವು ಆಮದು, ರಫ್ತಿನ ಕಾರ್ಯದಲ್ಲಿದ್ದರೆ, ಇಂದು ಅತ್ಯುತ್ತಮ ಅವಕಾಶ ನಿಮ್ಮನ್ನು ಅರಸಿ ಬರಲಿದೆ. ರಾಜಕಾರಣಿಯಾಗಿದ್ದರೆ, ನಿಮಗಿರುವ ಸಂಪರ್ಕಗಳ ಬಳಕೆಯಿಂದ ಅಭಿವೃದ್ಧಿ ಸಾಧಿಸಲಿದ್ದೀರಿ. ತಪ್ಪು ಜನರೊಂದಿಗೆ ಗುರುತಿಸಿಕೊಳ್ಳಬೇಡಿ.
ಕುಂಭ(Aquarius)
ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಮುನ್ನುಗ್ಗುವ ಗುಣ ಇಂದು ಹೆಚ್ಚಲಿದೆ. ಇದರಿಂದ ಆರ್ಥಿಕ ಲಾಭ ಕೂಡಾ ಹೆಚ್ಚಲಿದೆ. ಅನಿರೀಕ್ಷಿತವಾಗಿ ಧನ ಲಾಭವಿದೆ.
ಮೀನ(Pisces)
ಇಂದು ಖಾಸಗಿ ಜೀವನದಲ್ಲಿ ಹಾಗೂ ಔದ್ಯೋಗಿಕ ಬದುಕಿನಲ್ಲಿ ನಿಮ್ಮ ಮಿತಿ ಹಿಗ್ಗಿಸಿಕೊಳ್ಳುವುದರಿಂದ ಎರಡೂ ಕಡೆ ಲಾಭವಿದೆ. ಮಾಧ್ಯಮದಲ್ಲಿರುವವರು ಹಾಗೂ ಮಾಹಿತಿ ತಂತ್ರಜ್ಞ(Information technology)ರಿಗೆ ಇಂದು ಉತ್ತಮ ದಿನ.