Daily Horoscope: ವೃಶ್ಚಿಕ ರಾಶಿಗಿಂದು ಆರೋಗ್ಯದಲ್ಲಿ ಏರುಪೇರು, ಎಚ್ಚರ ಅಗತ್ಯ
27 ನವೆಂಬರ್ 2021, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಶ್ಚಿಕ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು
ಮೇಷ(Aries): ಕೌಟುಂಬಿಕವಾಗಿ ಕಿರಿಕಿರಿಗಳು ತಪ್ಪಲಾರವು. ಮಕ್ಕಳಿಂದ ಕೊಂಚ ಸಮಾಧಾನ. ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ. ವೈದ್ಯಕೀಯ ಖರ್ಚು ಹಾಗೂ ದುಂದುವೆಚ್ಚ ಒದಗ್ಿ ಮನೋನೆಮ್ಮದಿ ಕೆಡಲಿದೆ. ಶುಭಾಶುಭ ಮಿಶ್ರಫಲ. ನಿಮ್ಮ ನಿರ್ಧಾರಗಳು ಗಟ್ಟಿಯಾಗುವ ಹೊತ್ತಿಗೆ ಕಾರ್ಯವೇ ಮುಗಿದಿರುತ್ತದೆ. ಪಿತೃದೇವತೆಗಳ ಆರಾಧನೆ ಮಾಡಿ.
ವೃಷಭ(Taurus): ವಿದೇಶ ಪ್ರಯಾಣದಲ್ಲಿ ಸ್ವಲ್ಪ ತೊಡಕು, ದಾಂಪತ್ಯ-ಪ್ರೇಮ ವಿಚಾರಗಳಲ್ಲಿ ಅಸಮಾಧಾನ. ಸಂಗಾತಿಯೊಂದಿಗೆ ಹೊರಗೆ ಹೋಗಿ ಸಮಯ ಕಳೆಯುವುದರಿಂದ ಮನಸ್ಸು ಕೊಂಚ ನಿರಾಳವಾಗುವುದು. ಕೃಷಿ-ಹಾಲು-ಹೈನುಗಾರರಿಗೆ ಲಾಭ, ನೂತನ ಗೃಹದ ವ್ಯಾವಹಾರಿಕ ರೂಪದ ಯೋಜನೆಗಳಲ್ಲಿ ಓಡಾಟ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.
ಮಿಥುನ(Gemini): ಶತ್ರುಗಳ ಭಯ, ಪೆಟ್ಟುಬೀಳುವ ಸಾಧ್ಯತೆ ಇದೆ. ಆದಷ್ಟು ಜಾಗ್ರತೆಯಿಂದ ಕಾರ್ಯ ನಿರ್ವಹಿಸಿ. ದೈವಾನುಕೂಲ ಇದೆ. ಅವಿವಾಹಿತರಿಗೆ ಮಂಗಲಕಾರ್ಯಕ್ಕೆ ಕಂಕಣಬಲವಿದೆ. ಗೃಹೋಪಕರಣಗಳ ಖರೀದಿಯಿಂದ ಮಂಗಲದ್ರವ್ಯಗಳು ಮನೆಗೆ ಬಂದಾವು. ಸುಬ್ರಹ್ಮಣ್ಯ ಶ್ಲೋಕ ಪಠಣ ಮಾಡಿ.
ಕಟಕ(Cancer): ನೆಂಟರ ಆಗಮನ, ಅನ್ನ ಸಮೃದ್ಧಿ, ಗೃಹ ಸೌಖ್ಯದಿಂದ ಮನಸ್ಸು ಪ್ರಫುಲ್ಲ. ಗೃಹದಲ್ಲಿ ಮಂಗಲಕಾರ್ಯಕ್ಕೆ ಅವಕಾಶಗಳು ಒದಗಿ ಬಂದು ಚಟುವಟಿಕೆ ಹೆಚ್ಚಲಿದೆ. ರಾಜಕಾರಣಿಗಳಿಗೆ ಹಿನ್ನೆಡೆ. ಸೂರ್ಯ ಪ್ರಾರ್ಥನೆ ಮಾಡಿ
Colors and Emotions: ಯಾವ ಸಂದರ್ಭದಲ್ಲಿ ಯಾವ ಬಣ್ಣ ಬಳಸಬಾರದು? ವಾಸ್ತು ಏನು ಹೇಳುತ್ತೆ?
ಸಿಂಹ(Leo): ವಿವಿಧ ಮೂಲಗಳಿಂದ ಧನಾಗಮ ಹೆಚ್ಚಿದ್ದರೂ ಅನವಶ್ಯಕವಾಗಿ ಖರ್ಚು ವೆಚ್ಚಗಳು ಹೆಚ್ಚಲಿವೆ. ಇದರಿಂದ ಅಸಮಾಧಾನ ಉಂಟಾಗಬಹುದು. ದೂರ ಪ್ರಯಾಣ ಕೈಗೊಳ್ಳುವ ಮುನ್ನ ಕುಲದೇವತಾ ಪ್ರಾರ್ಥನೆ ಮಾಡಿ. ನದಿ-ಸೇತುವೆಗಳ ಬಳಿ ಎಚ್ಚರ ಇರಲಿ.
ಕನ್ಯಾ(Virgo): ಮಾತು ಕಠಿಣವಾಗುತ್ತದೆ, ಸ್ವಭಾವದಲ್ಲಿ ಬದಲಾವಣೆ, ಸಹೋದರರಿಂದ ಕಿರಿಕಿರಿ, ಆದರೆ ಗ್ರಾಮದಲ್ಲಿ ಪರಸ್ಪರ ಸಹಕಾರ ಇರಲಿದೆ. ಅವಿವಾಹಿತರಿಗೆ ಕಂಕಣ ಬಲದ ಸುಯೋಗವಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ ಸುಕಾರ್ಯಕ್ಕೆ ಮುನ್ನಡಿ ಇಡಿ.
Rituals: ಸಂಭೋಗಿಸಿ, ಸ್ನಾನ ಮಾಡದೇ ಪೂಜಿಸಿದರೆ ತಟ್ಟುತ್ತೆ ಶಾಪ!
ತುಲಾ(Libra): ಉದ್ಯೋಗಿಗಳಿಗೆ ಲಾಭ, ಅನುಕೂಲದ ದಿನ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷ. ಕ್ರೀಡಾಪಟುಗಳಿಗೆ ಚಟುವಟಿಕೆಯುಕ್ತ ದಿನ. ಆಭರಣ ಲಾಭವಿದೆ. ಒಳ್ಳೆಯ ಜನಾದರಣೆಯಿಂದ ಉಲ್ಲಾಸ. ಬಂಧು ಮಿತ್ರರ ಸಹಕಾರದಿಂದ ಗೃಹ ತಾಪತ್ರಯ ಕಡಿಮೆಯಾಗುತ್ತದೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.
ವೃಶ್ಚಿಕ(Scorpio): ಆರೋಗ್ಯದಲ್ಲಿ ವ್ಯತ್ಯಾಸ, ದೇಹಬಲ ಕುಸಿಯಲಿದೆ. ಆದಷ್ಟು ಸಾತ್ವಿಕ ಆಹಾರ ಸೇವಿಸಿ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಿ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ, ವಿವಾಹಿತರಿಗೆ ಶುಭದಿನ. ಧರ್ಮಕಾರ್ಯಕ್ಕೆ ಅನುಕೂಲಕರ ವಾತಾವರಣ ತೋರಿಬರಲಿದೆ. ಆದಿತ್ಯ ಹೃದಯ ಪಠಣದಿಂದ ಒಳಿತು.
ಧನುಸ್ಸು(Sagittarius): ಅಧಿಕ ವ್ಯಯ, ಲಾಭವೂ ಇದೆ, ನಷ್ಟವೂ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹಲವಾರು ಅವಕಾಶಗಳು ಕಂಡುಬರುತ್ತದೆ. ಬೆಳ್ಳಿ ಬಂಗಾರ, ಗೃಹಾಲಂಕಾರ ವಸ್ತುಗಳಿಗಾಗಿ ಖರ್ಚು ಹೆಚ್ಚು. ವಿಷ್ಣು ಸಹಸ್ರನಾಮ ಪಠಿಸಿ.
ಮಕರ(Capricorn): ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸುವ ಮೂಲಕ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಅಚ್ಚರಿಯೆನಿಸುವುದು. ಲಾಭ, ಉತ್ಸಾಹದ ದಿನ, ಮನೆಗೆಲಸಗಳಲ್ಲಿ ಲಾಭ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಕ್ಷೀರ ದಾನ ಮಾಡಿ.
ಕುಂಭ(Aquarius): ವೃತಿಯಲ್ಲಿ ಅಸಮಧಾನ, ಕಾರ್ಯಗಳಲ್ಲಿ ವಿಘ್ನಗಳಾಗುವ ಸಾಧ್ಯತೆ, ಸಂಗಾತಿಯಿಂದ ಸ್ವಲ್ಪ ವಿರೋಧದ ಮಾತುಗಳು ಮನಸ್ಸು ಕೆಡಿಸುತ್ತವೆ. ಮಕ್ಕಳಿಂದ ಕೊಂಚ ನೆಮ್ಮದಿ. ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ. ದುರ್ಗಾ ಪ್ರಾರ್ಥನೆ ಮಾಡಿ.
ಮೀನ(Pisces): ವೃತ್ತಿಯಲ್ಲಿ ಮಿಶ್ರಫಲ, ನಿರುದ್ಯೋಗಿಗಳು ಬಂದ ಅವಕಾಶಕ್ಕೆ ನೆಪ ಹೇಳಿ ಕೈ ಬಿಡಬೇಡಿ. ಅವಕಾಶಗಳನ್ನು ಬಳಸಿಕೊಳ್ಳುವುದೇ ಜಾಣತನ. ಶತ್ರುಗಳಿಂದ ಸ್ವಲ್ಪ ಪರದಾಟ, ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ.