Asianet Suvarna News Asianet Suvarna News

Daily Horoscope: ಮಿಥುನಕ್ಕೆ ಆಶಾದಾಯಕ ದಿನ, ಧನಸ್ಸಿಗೆ ಧನ ಲಾಭ

24 ಏಪ್ರಿಲ್ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕುಂಭ ರಾಶಿಗೆ ಉತ್ತಮ ದಿನ

Dina Bhavishya of April 24th 2022 in Kannada SKR
Author
Bangalore, First Published Apr 24, 2022, 5:00 AM IST | Last Updated Apr 24, 2022, 7:14 AM IST

ಮೇಷ(Aries): ವಿನಾ ಕಾರಣ ಮದುವೆಗೆ ಅಂಜುವುದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮ ಅಳುಕೇನು ಎಂಬುದನ್ನು ಪ್ರೇಮಿಯೊಡನೆ ಹೇಳಿಕೊಳ್ಳಿ. ವಿವಾದಿತ ವಿಷಯಗಳನ್ನು ನ್ಯಾಯಾಲಯದ ಹೊರಗೆ ಪರಿಹರಿಸಲು ಪ್ರಯತ್ನಿಸಿ. ಆದಿತ್ಯ ಹೃದಯ ಪಠಣ ಮಾಡಿ.

ವೃಷಭ(Taurus): ಈ ದಿನ ವೈವಾಹಿಕ ಬದುಕನ್ನು ಉಳಿಸಿಕೊಳ್ಳಲು ಯಾವುದೇ ರೀತಿಯ ಖರ್ಚುಗಳು ಮಾಡಬೇಕಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ವಿಷ್ಣು ಸಹಸ್ರನಾಮ ಪಠಿಸಿ. 

ಮಿಥುನ(Gemini): ಬಹಳ ಆಶಾದಾಯಕ ಹಾಗೂ ಎನರ್ಜಿ ತುಂಬಿರುವ ದಿನವಾದರೂ ನಿಯಮಗಳು ನಿಮ್ಮನ್ನು ಕಟ್ಟಿ ಹಾಕಬಲ್ಲವು. ವಾಹನಗಳು ಇದ್ದಕ್ಕಿದ್ದಂತೆ ದುರಸ್ತಿಗೆ ಬಂದು ಕಿರಿಕಿರಿ ಉಂಟು ಮಾಡುವುದು. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಗಾಯತ್ರೀ ಮಂತ್ರ ಜಪಿಸಿ. 

ಕಟಕ(Cancer): ಮನೆಯ ಸದಸ್ಯರು ಅನುಭವಿಸುವ ನೋವಿನಿಂದ ನಿಮ್ಮ ನೆಮ್ಮದಿ ಹಾಳಾಗಬಹುದು. ಚಿಂತೆಯಲ್ಲಿ ಬೀಳುವಿರಿ. ನಿಮ್ಮ ಕೆಲಸಗಳಿಗೆ ಪ್ರಶಂಸೆ ದೊರೆಯಲಿದೆ. ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ದಾನ ಮಾಡಿ. ಗಾಯತ್ರೀ ಮಂತ್ರ ಹೇಳಿಕೊಳ್ಳಿ.

ಸಿಂಹ(Leo): ಇಂದು ನಿಮಗೆ ತಿರುಗಾಟದ ದಿನ. ಈ ತಿರುಗಾಟ ಉದ್ಯಮದ ಉದ್ದೇಶಕ್ಕಾಗಿಯಾಗಿದ್ದರೆ ಅದರಿಂದ ಒಳಿತಾಗಲಿದೆ. ನಿಮ್ಮ ಮಾತಿನಿಂದ ಮತ್ತೊಬ್ಬರನ್ನು ನೋವುಗೊಳಿಸಬೇಡಿ. ಮತ್ತೊಬ್ಬರ ಮಾತಿನಿಂದ ಸ್ಪೂರ್ತಿ ಪಡೆಯಿರಿ. ಪ್ರೀತಿಯ ವಿಷಯದಲ್ಲಿ ನೆಮ್ಮದಿ ಸಾಧಿಸುವಿರಿ. ವಿಷ್ಣು ಸಹಸ್ರನಾಮ ಪಠಿಸಿ. 

Vastu for prosperity: ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಎಂದೂ ಖಾಲಿಯಾಗೋಲ್ಲ!

ಕನ್ಯಾ(Virgo): ತಾಳ್ಮೆಗಾಗಿ ಜನ ನಿಮ್ಮನ್ನು ಮೆಚ್ಚುತ್ತಾರೆ. ಯಾವುದಾದರೂ ಹಣ ಸಂಬಂಧಿ ಯೋಜನೆಗಳಿಗೆ ಇಂದು ಕಮಿಟ್ ಆಗಬಹುದು. ಸಂಗಾತಿಯ ನೋವು, ಸಮಸ್ಯೆಗಳಿಗೆ ಭಾವನಾತ್ಮಕವಾಗಿ ಬೆಂಬಲ ಕೊಟ್ಟರೆ ನಿಮ್ಮ ಲವ್ ಲೈಫ್ ಒಳ್ಳೆಯ ದಾರಿಗೆ ಬರಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ತುಲಾ(Libra): ರಾಜಕಾರಣಿಯಾಗಿದ್ದರೆ, ನಿಮಗಿರುವ ಸಂಪರ್ಕಗಳ ಬಳಕೆಯಿಂದ ಅಭಿವೃದ್ಧಿ ಸಾಧಿಸಲಿದ್ದೀರಿ. ತಪ್ಪು ಜನರೊಂದಿಗೆ ಗುರುತಿಸಿಕೊಳ್ಳಬೇಡಿ. ನಿಮ್ಮ ಶತ್ರುಗಳು ನಿಮ್ಮ ಯಶಸ್ಸನ್ನು ಹಾಳುಗೆಡವಲು ಪ್ರಯತ್ನಿಸಬಹುದು. ಆದಿತ್ಯ ಹೃದಯ ಪಠಣ ಮಾಡಿ.

ವೃಶ್ಚಿಕ(Scorpio): ನೀವು ನಿಮ್ಮ ಸಂಗಾತಿಯ ತಪ್ಪುಗಳನ್ನು ಹುಡುಕುವುದು, ಅವರನ್ನು ದೂರುವುದು ಬಿಟ್ಟು, ನಿಮ್ಮ ಸಂಬಂಧವನ್ನು ಉತ್ತಮಗೊಳಿಸುವ ಬಗೆ ಬಗ್ಗೆ ಹೆಚ್ಚು ಗಮನ ಹರಿಸುವುದೊಳಿತು.  ವಿದೇಶ ಪ್ರವಾಸ ಅಥವಾ ತೀರ್ಥಕ್ಷೇತ್ರಕ್ಕೆ ಹೋಗುವುದರಿಂದ ಲಾಭ ಪಡೆಯುತ್ತೀರಿ. ಮನೆ ದೇವರ ಸ್ಮರಣೆ ಮಾಡಿ.

ಧನುಸ್ಸು(Sagittarius): ನಿಮ್ಮ ಆತ್ಮಶಕ್ತಿಯ ಕಾರಣದಿಂದ ಯಶಸ್ಸು ಸಿಕ್ಕೇ ಸಿಗುತ್ತದೆ. ಅನಿರೀಕ್ಷಿತವಾಗಿ ಧನ ಲಾಭವಿದೆ. ಮನೆ ಅಥವಾ ಕಾರು ಖರೀದಿಸಬಹುದು. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ .  ಸ್ನೇಹಿತರಿಂದ ಒಳ್ಳೆಯ ಸುದ್ದಿ ಪಡೆಯುವಿರಿ. ಗೋವಿಗೆ ಹುಲ್ಲು ತಿನ್ನಿಸಿ. 

ಮಕರ(Capricorn): ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ. ತಿರುಗಾಟ ತಪ್ಪಿಸಿ. ವಾಹನ ಚಲಾಯಿಸುವ ಅನಿವಾರ್ಯತೆ ಇದ್ದರೆ ಬಹಳ ಎಚ್ಚರಿಕೆ ವಹಿಸಿ. ಸಂಗಾತಿಯೊಂದಿಗೆ ಜಗಳಗಳಾಗಬಹುದು. ಮಕ್ಕಳ ವಿಷಯವಾಗಿ ಚಿಂತೆ ಕಡಿಮೆಯಾಗಲಿದೆ. ಇಷ್ಟ ದೇವರಲ್ಲಿ ಪ್ರಾರ್ಥಿಸಿ. 

Venus Transit 2022: ಏ.27ಕ್ಕೆ ಈ ನಾಲ್ಕು ರಾಶಿಗಳಿಗೆ ಶುರುವಾಗಲಿದೆ ಅದೃಷ್ಟ

ಕುಂಭ(Aquarius):  ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಂಭವಗಳಿವೆ. ಒಟ್ಟಾರೆಯಾಗಿ ಸಂತೋಷ ಹಾಗೂ ಶಾಂತಿ ಇರಲಿದೆ. ಮಾನಸಿಕ ಒತ್ತಡಗಳು ತಗ್ಗಲಿವೆ. ದಂಪತಿಗೆ ಮಕ್ಕಳನ್ನು ಹೊಂದುವ ಯೋಗವಿದೆ. ಸೂರ್ಯನಿಗೆ ಅರ್ಘ್ಯ ಸಲ್ಲಿಸಿ. 

ಮೀನ(Pisces): ಹೊಸ ಕೆಲಸಕ್ಕಾಗಿ ಹುಡುಕುತ್ತಿದ್ದೀರಾದರೆ, ನಿಮ್ಮ ಸಾಮರ್ಥ್ಯ, ಜ್ಞಾನ ಹೆಚ್ಚಿಸಿಕೊಳ್ಳುವಲ್ಲಿ ತೊಡಗಿಸಿಕೊಳ್ಳಿ. ಆರೋಗ್ಯ ಸ್ಥಿರವಾಗಿರಲಿದೆ. ಮನಸ್ಸನ್ನು ತೆರೆದಿಡಿ. ಹೊಸ ಯೋಚನೆಗಳನ್ನು ಒಳಗೆ ಬಿಟ್ಟುಕೊಳ್ಳಿ. ಸಂಗಾತಿಯೊಂದಿಗೆ ಪ್ರವಾಸ ಹೋಗಿ ಬನ್ನಿ. ಆದಿತ್ಯ ಹೃದಯ ಪಠಣ ಮಾಡಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios