Asianet Suvarna News Asianet Suvarna News

Daily Horoscope: ರಾಮನವಮಿಯ ಈ ದಿನ ಯಾರಿಗೆಲ್ಲ ಶುಭ ಲಾಭ?

10 ಏಪ್ರಿಲ್ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಯವರಿಗಿಂದು ಮೊದಲ ನೋಟದ ಪ್ರೀತಿಯಾಗುವ ಸಂಭವ

Daily Horoscope on the day of Ram Navami auspicious day of Hindus on April 10th skr
Author
Bangalore, First Published Apr 10, 2022, 5:00 AM IST | Last Updated Apr 10, 2022, 5:00 AM IST

ಮೇಷ(Aries): ಹಿರಿಯರೊಂದಿಗೆ ವಾದಿಸುವ ಸಂದರ್ಭಗಳು ಎದುರಾಗಲಿವೆ. ಓದಿಗಿಂತ ಅನುಭವ ದೊಡ್ಡದು ಎಂಬುದನ್ನು ಮರೆಯದಿರಿ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಸಲ್ಲದು. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ರಾಮ ಧ್ಯಾನ ಮಾಡಿ.

ವೃಷಭ(Taurus): ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಗಳು ಕಾಡಲಿವೆ. ಹಿರಿಯರ, ತಜ್ಞರ ಸಲಹೆಗಳನ್ನು ಪಡೆಯಿರಿ. ಸಹವಾಸ ದೋಷದಿಂದಾಗಿ ಹೆಸರಿಗೆ ಮಸಿ ಬಳಿಯಬಹುದು. ಉತ್ತಮರ ಸಂಗ ಮಾಡುವುದರತ್ತ ಗಮನ ಹರಿಸಿ. ಬೆನ್ನುನೋವು ಕಾಡಲಿದೆ. ರಾಮ ಭಜನೆಯಲ್ಲಿ ಪಾಲ್ಗೊಳ್ಳಿ.

ಮಿಥುನ(Gemini): ನಿಮ್ಮ ಸಹನೆ ಪರೀಕ್ಷಿಸುವಂಥ ಸನ್ನಿವೇಶಗಳು ಎದುರಾಗಬಹುದು. ರಾಮನವಮಿಯ ಈ ದಿನ ಸೀತೆಯ ಸಹನೆ ಪ್ರದರ್ಶಿಸಿ. ನೀವಿಂದು ಹಾಜರಾಗುವ ಉಪನ್ಯಾಸಗಳು ಮತ್ತು ವಿಚಾರಗೋಷ್ಠಿಗಳು ಬೆಳವಣಿಗೆಗೆ ಹೊಸ ವಿಚಾರಗಳನ್ನು ತರುತ್ತವೆ. ದುರ್ಗಾಷ್ಟೋತ್ತರ ಪಠಿಸಿ.

ಕಟಕ(Cancer): ನಿಮ್ಮ ಪ್ರೀತಿಪಾತ್ರರಿಂದ ಕರೆ ಬರಲಿದೆ. ಇದು ನಿಮಗೆ ರೋಮಾಂಚಕ ದಿನವಾಗಿರುತ್ತದೆ. ನಿಮ್ಮ ಪ್ರಯತ್ನ ಸಫಲವಾಗುತ್ತದೆ.  ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಂದ ನೆರವು, ಪ್ರೀತಿ ದಕ್ಕಲಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಆದಿತ್ಯ ಹೃದಯ ಪಠಿಸಿ.

ಸಿಂಹ(Leo): ನೀವು ಇಂದು ನಿಮ್ಮ ಸಂಗಾತಿಯ ಒಂದು ಕಠಿಣವಾದ ಮತ್ತು ಧೈರ್ಯಶಾಲಿಯಾದ ಬದಿಯನ್ನು ನೋಡಬಹುದು. ಇದು ನಿಮಗೆ ಇರಿಸು ಮುರಿಸು ಉಂಟು ಮಾಡಬಹುದು. ಸಾಮಾಜಿಕ ಚಟುವಟಿಕೆಯು ನಿಮ್ಮನ್ನು ಆರಾಮವಾಗಿ ಮತ್ತು ಆಹ್ಲಾದಕರ ಮನಸ್ಥಿತಿಯಲ್ಲಿಡುತ್ತದೆ. ಸೂರ್ಯನಿಗೆ ಅರ್ಘ್ಯ ನೀಡಿ. 

ಬುಧ ಗೋಚಾರ 2022: ಕಟಕ, ಕನ್ಯಾ ಸೇರಿ ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ!

ಕನ್ಯಾ(Virgo): ಹೊರಾಂಗಣ ಚಟುವಟಿಕೆಗಳಿಂದ ಮನೋಲ್ಲಾಸ. ನಿಮ್ಮ ಪ್ರೀತಿ ಪಾತ್ರರೊಂದಿಗಿನ ಸಂಬಂಧದಲ್ಲಿ ಮೂರನೆಯವರ ಹಸ್ತಕ್ಷೇಪದಿಂದ ಸಮಸ್ಯೆ ಹೆಚ್ಚಬಹುದು. ಅನಗತ್ಯ ಒತ್ತಡ ಎದುರಾಗುತ್ತದೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ತುಲಾ(Libra): ಸಣ್ಣ ಪ್ರಯಾಣವೊಂದರಿಂದ ನಿಮ್ಮ ದೈನಂದಿನ ಒತ್ತಡದ ಜೀವನದಿಂದ ಕೊಂಚ ವಿಶ್ರಾಂತಿ ದೊರೆಯುತ್ತದೆ. ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳಬಹುದು. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ಎದುರಾಗಲಿವೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ರಾಮ ಮಂತ್ರವ ಜಪಿಸಿ. 

ವೃಶ್ಚಿಕ(Scorpio):  ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಜೀವನದ ಅತ್ಯುತ್ತಮ ದಿನವನ್ನು ಕಳೆಯುತ್ತೀರಿ. ಸಾಲದಿಂದ ಮುಕ್ತರಾಗುವ ಸಾಧ್ಯತೆಯಿದೆ. ಮಗುವಿನ ಜೊತೆಗಿನ ಒಡನಾಟದ ಆನಂದವನ್ನು ನೀವು ಆನಂದಿಸುವಿರಿ. ರಾಮೇಶ್ವರ ಸ್ಮರಣೆ ಮಾಡಿ. 

ರಾಮನವಮಿಯ ಹೊಸ್ತಿಲಲ್ಲಿ ಈ ಶಕ್ತಿಶಾಲಿ ಮಂತ್ರಗಳು ನಿಮ್ಮ ಬಲ ಹೆಚ್ಚಿಸಲಿವೆ..

ಧನುಸ್ಸು(Sagittarius): ಯಾವುದೇ ಹೊಸ ಯೋಜನೆಗೆ ಕೈ ಹಾಕುವ ಮೊದಲು ಎರಡು ಬಾರಿ ಆಲೋಚಿಸಿ. ಇಂದು ನಿಮಗೆ ದೊರೆವ ಸಲಹೆಯೊಂದು ಜೀವನದಲ್ಲಿ ಅತ್ಯಂತ ಲಾಭಕಾರಿಯಾಗಿ ಪರಿಣಾಮ ಬೀರಬಲ್ಲದು. ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಯೋಜಿತವಲ್ಲದ ಮೂಲಗಳಿಂದ ಹಣದ ಲಾಭ ಸಿಗುತ್ತದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಮತ್ತು ಕೌಶಲಗಳನ್ನು ಕಲಿಯಲು ಸಹಾಯವಾಗುವ ಅಲ್ಪಾವಧಿ ತರಗತಿಗಳು ಲಾಭಕಾರಿಯಾಗಿ ಪರಿಣಮಿಸಲಿವೆ. ನೆಂಟರಿಷ್ಟರ ಭೇಟಿ ಮಾಡಲಿದ್ದೀರಿ. ರಾಮ ಮಂತ್ರ ಜಪಿಸಿ.

ಕುಂಭ(Aquarius): ಪ್ರಯಾಣವು ತಕ್ಷಣದ ಫಲಿತಾಂಶಗಳನ್ನು ತರದಿದ್ದರೂ ಭವಿಷ್ಯದ ಪ್ರಯೋಜನಗಳಿಗೆ ಉತ್ತಮ ಅಡಿಪಾಯ ಹಾಕುತ್ತದೆ. ಬಾಕಿಯಿರುವ ಗೃಹ ಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ ಇದಾಗಿದೆ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಮೀನ(Pisces): ಹೊಸ ಯೋಜನೆ ಮತ್ತು ವೆಚ್ಚಗಳನ್ನು ಮುಂದೂಡಿ. ಮಾತಿನ ಮೇಲೆ ನಿಯಂತ್ರಣವಿಲ್ಲದಿದ್ದಲ್ಲಿ ಸುಲಭವಾಗಿ ನಿಮ್ಮ ಖ್ಯಾತಿಗೆ ಧಕ್ಕೆ ತಂದುಕೊಳ್ಳುತ್ತೀರಿ. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆದಿತ್ಯ ಹೃದಯ ಪಠಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios