Daily Horoscope: ಕನ್ಯಾ ರಾಶಿಗೆ ಕಚೇರಿಯಲ್ಲಿ ಬದಲಾವಣೆ, ವೃಶ್ಚಿಕಕ್ಕೆ ಸಂಬಂಧದಲ್ಲಿ ದ್ರೋಹ

17 ಅಕ್ಟೋಬರ್ 2022, ಈ ರಾಶಿಯವರು ಮಕ್ಕಳ ಸಮಸ್ಯೆ ನೀಗಿಸುವತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುವ ಜೊತೆಗೆ, ಮನೆಯ ವಾತಾವರಣವೂ ಹದಗೆಡುತ್ತದೆ ಎಂಬ ಅರಿವಿರಲಿ..

Daily Horoscope of October 17th 2022 in Kannada SKR

ಮೇಷ(Aries): ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ರಕ್ತದೊತ್ತಡ, ತಲೆನೋವು ಇತ್ಯಾದಿ ಬಾಧೆ ಕಾಡಬಹುದು. ಕಚೇರಿಯಲ್ಲಿ ಯಾರ ಮೇಲೂ ಯಜಮಾನಿಕೆ ಮಾಡಬೇಡಿ. ಯಾರ ಸ್ವಾಭಿಮಾನವನ್ನೂ ಕೆಣಕುವ ಪ್ರಯತ್ನ ಬೇಡ. ಸ್ನೇಹದಿಂದ ಮಾತಾಡಿಯೂ ಕೆಲಸ ಮಾಡಿಸಿಕೊಳ್ಳಬಹುದು.

ವೃಷಭ(Taurus): ಸರ್ಕಾರಿ ಕೆಲಸಗಳು ವಿಳಂಬವಾಗಿ ಕಿರಿಕಿರಿಯಾಗುತ್ತದೆ. ಸಂಸಾರ ಜೀವನ ನೀರಸವಾಗಿದ್ದರೆ ಅದನ್ನು ವಿಶೇಷವಾಗಿಸಲು ನೀವೇ ಪ್ರಯತ್ನ ಹಾಕಿ. ಒಂದು ಪ್ರವಾಸ ಆಯೋಜಿಸಿ. ರೊಮ್ಯಾಂಟಿಕ್ ಮಾತುಗಳನ್ನಾಡಿ. ಹಲ್ಲಿನ ಸಮಸ್ಯೆಗಳು ಕಾಡಬಹುದು. 

ಮಿಥುನ(Gemini): ಮಕ್ಕಳು ಯಾವುದೋ ಸಮಸ್ಯೆಯಲ್ಲಿ ಸಿಲುಕಿರಬಹುದು. ಆ ಬಗ್ಗೆ ವಿಚಾರಿಸಿ, ಅವರಿಗೆ ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಿ. ಅವರಿಗೆ ಜೊತೆಯಲ್ಲಿ ನೀವಿರುವ ಧೈರ್ಯ ತುಂಬಿ. ಮಾತಿನಲ್ಲಿ ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದ್ದು ಕಡಿಮೆ ಮಾತನಾಡಿ. 

ಕಟಕ(Cancer): ಮಕ್ಕಳಿಗೆ ಉತ್ತಮ ಪ್ರತಿಭಾನ್ವೇಷಣೆ ಅವಕಾಶಗಳು ಸಿಗುವುವು. ಅವರನ್ನು ಹುರಿದುಂಬಿಸಿ. ಸ್ನೇಹಿತರು ನಿಮ್ಮ ಗುಟ್ಟನ್ನು ರಟ್ಟು ಮಾಡಿ ನಂಬಿಕೆ ಕಳೆದುಕೊಳ್ಳುವರು. ನಿಮ್ಮ ಬದುಕಿನಲ್ಲಿ ಯಾರು ಕಷ್ಟದಲ್ಲೂ ನಿಲ್ಲುವವರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಂಬಂಧದ ಕುರಿತ ನಿಮ್ಮ ವ್ಯಾಖ್ಯಾನವೇ ಬದಲಾಗುತ್ತದೆ.

Weekly Love Horoscope: ಬ್ರೇಕಪ್‌ನಿಂದ ಈ ರಾಶಿ ಕಂಗಾಲು..

ಸಿಂಹ(Leo): ವ್ಯಾಪಾರದಲ್ಲಿ ಅಲ್ಪ ಲಾಭವಿರಲಿದೆ. ಸ್ವ ಉದ್ಯಮಗಳಲ್ಲಿ ಆದಾಯ ಹೆಚ್ಚಲಿದೆ. ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅವರ ಕೆಲಸಕ್ಕೆ ಮೆಚ್ಚುಗೆ ನೀಡಿ. ಉತ್ತಮ ಆಹಾರ ಸವಿಯುವ ಅವಕಾಶ ಒದಗಬಹುದು. ಪ್ರಯಾಣದಿಂದ ಆಯಾಸ ಹೆಚ್ಚಲಿದೆಯಾದರೂ ಹೋದ ಕೆಲಸ ಸಿದ್ಧಿ.

ಕನ್ಯಾ(Virgo): ಕಚೇರಿ ಕೆಲಸಗಳಲ್ಲಿ ಮಹತ್ತರ ಬದಲಾವಣೆ ಅಸಮಾಧಾನ ತರಬಹುದು. ನೀವೂ ಕಿರಿಕಿರಿಗೊಂಡು ಇತರರ ಮನಸ್ಸನ್ನೂ ಹಾಳು ಮಾಡುವ ಕೆಲಸ ಮಾಡಬೇಡಿ. ತಣ್ಣಗಿರಲು ಪ್ರಯತ್ನಿಸಿ. ನಿಮಗಾಗದವರೆಲ್ಲ ಕೆಟ್ಟವರೆಂಬ ಮನೋಭಾವ ಬೇಡ. ಹವ್ಯಾಸಗಳಿಗಾಗಿ ಕೊಂಚ ಸಮಯ ಕೊಡಿ. 

ತುಲಾ(Libra): ಕಚೇರಿ ಕಾರ್ಯಾಲಯಗಳ ಕೆಲಸಗಳಿಂದ ತಾಳ್ಮೆಗೆಡುವಂತಾಗಬಹುದು. ದಿನದ ಬಹುತೇಕ ಸಮಯವನ್ನು ಬೇಡದ ಕೆಲಸ ತಿನ್ನಬಹುದು. ನಿರುದ್ಯೋಗಿಗಳಿಗೆ ಸಂದರ್ಶನಕ್ಕೆ ಕರೆ ಬರಬಹುದು. ಚೆನ್ನಾಗಿ ತಯಾರಿ ನಡೆಸಿಕೊಳ್ಳಿ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಬಗ್ಗೆ ಯೋಚಿಸಬೇಕು. 

ವೃಶ್ಚಿಕ(Scorpio): ಸಂಬಂಧದಲ್ಲಿ ದ್ರೋಹ ಕಾಡಬಹುದು. ಕ್ರೀಡಾ ಚಟುವಟಿಕೆಗಳು ಸಂತಸ ತರಲಿವೆ. ಭಾವುಕತೆ ಮತ್ತು ಸೋಮಾರಿತನವು ನಿಮ್ಮನ್ನು ಆಳಲು ಬಿಡಬೇಡಿ. ಅವುಗಳಿಂದಾಗಿ ಸಣ್ಣಪುಟ್ಟ ಸಾಧನೆಗಳು ಕೈ ತಪ್ಪಬಹುದು.  ಸ್ವಾರ್ಥವು ಸ್ನೇಹಿತರೊಂದಿಗಿನ ಸಂಬಂಧ ಹಾಳು ಮಾಡಲು ಕಾರಣವಾಗಬಹುದು. 

ಧನುಸ್ಸು(Sagittarius): ಆಲಸ್ಯ ನಿಯಂತ್ರಿಸಿಕೊಂಡರೆ ದಿನವು ಉತ್ತಮವಾಗಿರುತ್ತದೆ. ಪ್ರೀತಿಸಿ ಮದುವೆಯಾಗಲು ಬಯಸುವವರು ಸ್ವಲ್ಪ ಕಾಯಬೇಕು. ಕಾನೂನು ಅಥವಾ ಸರ್ಕಾರಕ್ಕೆ ವಿರುದ್ಧವಾದ ಯಾವುದೇ ಚಟುವಟಿಕೆಯು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಮಕರ(Capricorn): ನಿಮ್ಮ ಸಾಧನೆಗೆ ಕುಟುಂಬದವರ ಮೆಚ್ಚುಗೆ ಕೇಳಿಬರಲಿದೆ. ಯಾವುದೇ ಸನ್ನಿವೇಶಕ್ಕೂ ತಕ್ಷಣ ಪ್ರತಿಕ್ರಿಯಿಸಬೇಡಿ. ಭೌತಿಕ ಸಂತೋಷದ ಸಂಪನ್ಮೂಲಗಳನ್ನು ಸಾಧಿಸುವ ಪ್ರಯತ್ನಗಳು ಯಶಸ್ವಿಯಾಗಬಹುದು. ಭೂಮಿ, ಕಟ್ಟಡ, ವಾಹನ ಇತ್ಯಾದಿಗಳೊಂದಿಗೆ ವ್ಯವಹರಿಸಿ. 

27 ವರ್ಷಗಳ ನಂತರ ದೀಪಾವಳಿಯಂದು ಸೂರ್ಯಗ್ರಹಣ… ಪರಿಣಾಮವೇನು?

ಕುಂಭ(Aquarius): ವೈಯಕ್ತಿಕ ಬದುಕಿನಲ್ಲಿ ಹಾಗೂ ವೃತ್ತಿ ರಂಗದಲ್ಲಿ ಅನಿರೀಕ್ಷಿತ ತಿರುವುಗಳು ಮಾನಸಿಕ ಗೊಂದಲಕ್ಕೆ ಕಾರಣವಾದಾವು. ಸುಸ್ತಿಗೆ ದೈಹಿಕವಾಗಿ ಪೋಷಕಾಂಶಗಳ ಕೊರತೆ ಕಾರಣವಿರಬಹುದು. ಐರನ್, ವಿಟಮಿನ್ ಕೊರತೆಯನ್ನು ನೀಗಿಸಿಕೊಳ್ಳುವತ್ತ ಗಮನ ಹರಿಸಿ. ಒತ್ತಡ ನಿವಾರಿಸಲು ಸಣ್ಣ ಪ್ರಣಯ ಪ್ರವಾಸಕ್ಕೆ ಹೋಗಬಹುದು.

ಮೀನ(Pisces): ಮನೆಯಲ್ಲಿ ಸಂತೋಷದ ಕೊರತೆ ಎಂಬ ಕೊರಗಿದ್ದರೆ ಸಾಕು ಪ್ರಾಣಿ ತರುವ ಬಗ್ಗೆ ಆಲೋಚಿಸಿ. ಕೌಟುಂಬಿಕವಾಗಿ ಅನಗತ್ಯ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಹೂಡಿಕೆ ಮಾಡಲು ಬಯಸಿದರೆ, ಈ ಸಮಯದಲ್ಲಿ ನೀವು ಅದನ್ನು ಮಾಡಬಹುದು. ಸುಖಾಸುಮ್ಮನೆ ಶಾಪಿಂಗ್ ಮಾಡಬೇಡಿ. ಉಲಿತಾಯದತ್ತ ಗಮನ ಹರಿಸಿ.

Latest Videos
Follow Us:
Download App:
  • android
  • ios