Asianet Suvarna News Asianet Suvarna News

Daily Horoscope:ಈ ರಾಶಿಗೆ ಇಂದು ಕನಸು ನನಸಾಗುವ ಸಮಯ

21  ನವೆಂಬರ್ 2022, ಸೋಮವಾರ ಕನ್ಯಾ ರಾಶಿಗೆ ಅನಿರೀಕ್ಷಿತ ಯಶಸ್ಸು, ಮಿಥುನ ರಾಶಿಗೆ ಸಹೋದರರ ಜೊತೆ ವೈಮನಸ್ಸು

Daily Horoscope of November 21st 2022 in Kannada
Author
First Published Nov 21, 2022, 5:10 AM IST

ಮೇಷ(Aries):ನೀವು ಜೀವನ ಮಟ್ಟ ಉತ್ತಮಪಡಿಸಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತೀರಿ ಹಾಗೂ ಅದರಲ್ಲಿ ಯಶಸ್ಸಿಯಾಗುತ್ತೀರಿ ಕೂಡ. ಸಮಾನ ಮನಸ್ಕ ಜನರೊಂದಿಗೆ ಸಮಯ ಕಳೆಯೋದ್ರಿಂದ ನಿಮ್ಮಲ್ಲಿ ಸಕಾರಾತ್ಮಕ ಮನೋಭಾವ ಮೂಡುತ್ತದೆ. ವಿದ್ಯಾರ್ಥಿಗಳಿಗೆ ಅವರ ಸ್ವ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು. ಕುಟುಂಬದ ಯಾವುದೇ ಸದಸ್ಯರ ನಡವಳಿಕೆಯಿಂದ ಉದ್ವೇಗ ಉಂಟಾಗುವ ಸಾಧ್ಯತೆ. ಕೆಲಸದೊತ್ತಡ ಹೆಚ್ಚಿರಲಿದೆ. ಆದರೂ ಬಹುತೇಕ ಕಾರ್ಯಗಳನ್ನು ಮುಗಿಸುತ್ತೀರಿ ಕೂಡ.

ವೃಷಭ(Taurus):ಇಂದು ನೀವು ಕೆಲವು ಧಾರ್ಮಿಕ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರಲಿದ್ದೀರಿ. ಇದ್ರಿಂದ ನಿಮ್ಮ ದೇಹ ಹಾಗೂ ಮನಸ್ಸು ಎರಡೂ ಸಂತಸದಿಂದ ಕೂಡಿರುತ್ತದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ಯೋಜನೆಯಿದ್ರೂ ಅದರಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಶತ್ರುಗಳ ಚಲನವಲನಗಳನ್ನು ಗಮನಿಸಿ. ಇಲ್ಲವಾದ್ರೆ ತೊಂದರೆ ಎದುರಾಗುವ ಸಾಧ್ಯತೆಯಿದೆ. ಆರ್ಥಿಕ ಹೂಡಿಕೆಗೆ ಸಂಬಂಧಿಸಿ ಯಾವುದೇ ನಿರ್ಣಯ ಕೈಗೊಳ್ಳುವಾಗ ಹುಷಾರಾಗಿರಿ. ಕುಟುಂಬದಲ್ಲಿ ಸಂತಸ ಹಾಗೂ ನೆಮ್ಮದಿ ನೆಲೆಸುವಲ್ಲಿ ಸಂಗಾತಿ ಮಹತ್ವದ ಪಾತ್ರ ವಹಿಸುತ್ತಾರೆ. 

ಮಿಥುನ(Gemini):ನಿಮ್ಮ ಮನಸ್ಸಿನಲ್ಲಿಂದು ಹೊಸ ಯೋಜನೆ ಮೂಡುತ್ತದೆ. ನಿಮ್ಮ ಕಾರ್ಯಶೈಲಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಈ ತನಕ ನೀವು ಏನು ಯೋಚಿಸಿದ್ದೀರೋ ಅದು ಕಾರ್ಯರೂಪಕ್ಕೆ ಬರಲಿದೆ. ಸಹೋದರರ ಜೊತೆ ವೈಮನಸ್ಸು ಮೂಡುವ ಸಾಧ್ಯತೆ. ಆದರೆ, ಈ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ಮಕ್ಕಳ ಮೇಲೆ  ಒಂದು ಕಣ್ಣಿಟ್ಟಿರಿ. 

ಕಟಕ(Cancer):ಯಶಸ್ಸಿನ ಕುರಿತ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ. ನಿಮ್ಮ ಕೆಲಸವನ್ನು ಆಸಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಮಾಡಿ. ಕುಟುಂಬ ಸದಸ್ಯರ ವೈವಾಹಿಕ ಜೀವನದಲ್ಲಿನ ಸಮಸ್ಯೆ ಚಿಂತೆಗೆ ಕಾರಣವಾಗಲಿದೆ. ವಾಹನದ ಕಾರಣದಿಂದ ಖರ್ಚು ಹೆಚ್ಚುವ ಸಾಧ್ಯತೆ. ಕೆಲಸಕ್ಕೆ ಸಂಬಂಧಿಸಿ ಕೈಗೊಂಡ ಪ್ರಮುಖ ನಿರ್ಣಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ.

Astro Tips: ನಿಮ್ಮ ಅದೃಷ್ಟ ಬದಲಿಸಬಲ್ಲದು ಒಂದೇ ಒಂದು ಕಮಲ

ಸಿಂಹ(Leo):ನಿಮ್ಮ ಪ್ರಗತಿಗಾಗಿ ಕಳೆದ ಕೆಲವು ವರ್ಷಗಳಿಂದ ಕೈಗೊಂಡ ನಿರ್ಧಾರಗಳಿಂದ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ಇನ್ನೊಬ್ಬರ ನೋವು ಹಾಗೂ ಸಂಕಟದಲ್ಲಿ ಭಾಗಿಯಾಗುತ್ತೀರಿ. ಇದರಿಂದ ನಿಮ್ಮ ಮನಸ್ಸಿಗೆ ಕೂಡ ನೆಮ್ಮದಿ ಲಭಿಸುತ್ತದೆ. ಸಮಾಜ ಹಾಗೂ ಕುಟುಂದಲ್ಲಿ ನಿಮ್ಮ ಬಗ್ಗೆ ಸದಾಭಿಪ್ರಾಯ ಮೂಡುತ್ತದೆ. ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳ ಬಗ್ಗೆ ಎಚ್ಚರ ವಹಿಸಿ. ಸ್ವಲ್ಪ ಅಜಾಗರೂಕತೆ ನಿಮ್ಮನ್ನು ಸಂಕಷ್ಟದಲ್ಲಿ ಸಿಲುಕಿಸಬಲ್ಲದು. 

ಕನ್ಯಾ(Virgo):ಇಂದು ಮಧ್ಯಾಹ್ನದ ವೇಳೆಗೆ ಅನಿರೀಕ್ಷಿತ ಯಶಸ್ಸು ಸಿಗಲಿದೆ. ಆಪ್ತ ಬಂಧುಗಳು ಮನೆಗೆ ಬರಲಿದ್ದಾರೆ ಹಾಗೂ ವಿಶೇಷ ಸಂಗತಿಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಿದ್ದೀರಿ. ನಿಮ್ಮ ಯಾವುದೇ ಪ್ರಮುಖ ಸಮಸ್ಯೆಗೂ ಪರಿಹಾರ ಸಿಗಲಿದೆ. ಆದಾಯ ಜೊತೆಗೆ ಖರ್ಚೂ ಇರಲಿದೆ. ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ. ಯಾರಿಗೂ ನಿಮ್ಮ ಯೋಜನೆಗಳ ಬಗ್ಗೆ ಗುಟ್ಟು ಬಿಟ್ಟು ಕೊಡಬೇಡಿ. ಪತಿ-ಪತ್ನಿ ನಡುವೆ ಮಧುರ ಬಾಂಧವ್ಯ ಇರಲಿದೆ. ಆರೋಗ್ಯ ಉತ್ತಮವಾಗಿರಲಿದೆ. 

ತುಲಾ(Libra):ಕುಟುಂಬದ ಯಾವುದೇ ವಿಚಾರದ ಕುರಿತಾದ ಚರ್ಚೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅಗತ್ಯ. ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ನೀವು ನೀಡುವ ಕೊಡುಗೆಯಿಂದ ನಿಮಗೆ ಹೊಸ ಗುರುತು ಸಿಗಲಿದೆ. ನಿಮ್ಮ ಮನಸ್ಸಿನಲ್ಲಿ ಕೆಲವು ನಕಾರಾತ್ಮಕ ಆಲೋಚನೆಗಳು ಮೂಡುವ ಸಾಧ್ಯತೆ. ಮನೆಯಲ್ಲಿನ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ಅಗತ್ಯ. ಈ ಸಮಯದಲ್ಲಿ ಉದ್ಯಮ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ. 

ವೃಶ್ಚಿಕ(Scorpio):ಕುಟುಂಬದ ಜೊತೆಗೆ ಶಾಪಿಂಗ್ ಮಾಡಿ ಉತ್ತಮ ಸಮಯ ಕಳೆಯುತ್ತೀರಿ. ಮನೆ ಹಾಗೂ ಉದ್ಯಮದ ನಡುವೆ ಉತ್ತಮ ಸಮತೋಲನ ನಿರ್ವಹಣೆ ಮಾಡಿ. ಕೆಲಸ ಹೆಚ್ಚಿದ್ದರೂ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ. ಹಣ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಅಧ್ಯಯನಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಸಮಸ್ಯೆ. ಯಾವುದೇ ಹೊಸ ಕೆಲಸ ಪ್ರಾರಂಭಿಸಬೇಡಿ.

ಧನುಸ್ಸು(Sagittarius):ನಿಮ್ಮ ವ್ಯಕ್ತಿತ್ವ ಹಾಗೂ ಆಕರ್ಷಕ ಮಾತಿನ ಪ್ರಭಾವದಿಂದ ಸಾಮಾಜಿಕ ಹಾಗೂ ಕುಟುಂಬ ವಲಯದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ನಿಮ್ಮ ಸಂಪರ್ಕ ವಲಯ ಕೂಡ ಹೆಚ್ಚಲಿದೆ. ನಿಮ್ಮ ಕೆಲಸ ಕಾರ್ಯಗಳ ಜೊತೆಗೆ ಕುಟುಂಬ ಸದಸ್ಯರ ಜೊತೆಗೆ ಸಮಯ ಹಂಚಿಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿ. ಕೆಲವೊಮ್ಮೆ ಅದೃಷ್ಟ ನಿಮಗೆ ಸಾಥ್ ನೀಡುವುದಿಲ್ಲ ಎಂಬ ಭಾವನೆ ಮೂಡಬಹುದು. ಯಂತ್ರ ಹಾಗೂ ಆಹಾರಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಯಶಸ್ಸು. ಪತಿ-ಪತ್ನಿ ನಡುವೆ ವೈಮನಸ್ಸು.

Vaastu Tips: ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ಅಪ್ಪಿ ತಪ್ಪಿಯೂ ನೋಡಬೇಡಿ

ಮಕರ(Capricorn): ಇಂದಿನ ದಿನ ಉತ್ತಮವಾಗಿರಲಿದೆ. ಶಾಂತಿ ಹಾಗೂ ಆಲೋಚನೆಯಿಂದ ಕಾರ್ಯನಿರ್ವಹಿಸಿ. ಮಕ್ಕಳ ಭವಿಷ್ಯದ ಕುರಿತ ಕೆಲವು ಯೋಜನೆಗಳು ಕೂಡ ಫಲ ನೀಡಲಿವೆ. ಹೃಯದ ಬದಲು ಮಿದುಳಿನ ಮಾತು ಆಲಿಸಿ. ಭಾವನಾತ್ಮಕವಾಗಿ ತಪ್ಪು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ. ಅನ್ಯರು ಇದರ ಲಾಭ ಪಡೆಯುವ ಸಾಧ್ಯತೆ. ಯಾವುದೇ ಸಮಸ್ಯೆಗೆ ಸಂಬಂಧಿಸಿ ಕುಟುಂಬ ಸದಸ್ಯರ ಜೊತೆಗೆ ಸಮಾಲೋಚನೆ ನಡೆಸಿ. 

ಕುಂಭ(Aquarius):ಪ್ರಾಯೋಗಿಕ ಅನುಭವದಿಂದ ಯಾವುದೇ ಕಷ್ಟದ ಕೆಲಸವಾದರೂ ಅದನ್ನು ಪೂರ್ಣಗೊಳಿಸುತ್ತೀರಿ. ಯಾವುದೇ ಯೋಜನೆ ಪ್ರಾರಂಭಿಸುವ ಮುನ್ನ ಅದರ ಬಗ್ಗೆ ಯೋಚಿಸಿ. ಮೊಬೈಲ್ ಅಥವಾ ಇ-ಮೇಲ್ ಮೂಲಕ ಪ್ರಮುಖ ವಿಷಯದ ಕುರಿತ ಸುತ್ತೋಲೆ ಸಿಗುವ ಸಾಧ್ಯತೆ. ಅನುಭವಿ ಜನರೊಂದಿಗೆ ಸಮಯ ಕಳೆಯಿರಿ. ಉದ್ಯಮ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಲು ಅನುಭವಿ ಜನರ ಸಹಯೋಗ ಪಡೆಯಿರಿ.

ಮೀನ(Pisces):ಮನೆ ನಿರ್ವಹಣೆಗೆ ಸಂಬಂಧಿಸಿದ ಕೆಲಸ-ಕಾರ್ಯಗಳಲ್ಲಿ ನಿಮಗೆ ವಿಶೇಷ ಬೆಂಬಲ ಸಿಗಲಿದೆ. ಮನೆ ಹಾಗೂ ಸಮಾಜದಲ್ಲಿ ನಿಮ್ಮ ವಿಶೇಷ ಯಶಸ್ಸಿನ ಸಂಭ್ರಮಾಚರಣೆ ನಡೆಸಲಿದ್ದೀರಿ. ಮಕ್ಕಳ ಚಟುವಟಿಕೆಗಳಲ್ಲಿ ಆಸಕ್ತಿ ತಾಳುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮ ಯಶಸ್ಸನ್ನು ನೋಡಿ ಕೆಲವು ಜನರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ. 

Follow Us:
Download App:
  • android
  • ios