Asianet Suvarna News Asianet Suvarna News

Daily Horoscope:ಮೇಷ ರಾಶಿಯವರಿಗೆ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಸಕಾಲ

20  ನವೆಂಬರ್ 2022, ಭಾನುವಾರ ಮಿಥುನ ರಾಶಿಗೆ ಉದ್ಯಮದಲ್ಲಿ ಸವಾಲು, ಕನ್ಯಾ ರಾಶಿಗೆ ಮನೆಯಲ್ಲಿ ಸಂತಸದ ವಾತಾವರಣ

Daily Horoscope of November 20th 2022 in Kannada
Author
First Published Nov 20, 2022, 5:00 AM IST

ಮೇಷ(Aries):ಎಷ್ಟೋ ದಿನಗಳಿಂದ ಬಾಕಿ ಉಳಿದಿರುವ ಕೆಲಸವನ್ನು ಇಂದು ಪೂರ್ಣಗೊಳಿಸುತ್ತೀರಿ. ಆಪ್ತ ಸ್ನೇಹಿತನಿಗೆ ಆತನ ಕಾರ್ಯದಲ್ಲಿ ನೆರವಾಗುತ್ತೀರಿ. ಕುಟುಂಬದ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೀರಿ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ಬಹೆಗರಿಸಲು ನಿಮ್ಮ ಕೊಡುಗೆ ಅಗತ್ಯ. ಪತಿ-ಪತ್ನಿ ಸಂಬಂಧ ಉತ್ತಮ. ಜನರ ಪ್ರಶಂಸೆಗೆ ಪಾತ್ರವಾಗಲಿದ್ದೀರಿ.

ವೃಷಭ(Taurus):ನಿಮ್ಮ ಆತ್ಮೀಯ ಗೆಳೆಯನಿಗೆ ಹಣಕಾಸಿನ ನೆರವು ನೀಡಬೇಕಾಗಿ ಬರಬಹುದು. ಕುಟುಂಬ ಸದಸ್ಯರ ಜೊತೆಗೆ ಮನೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿಗೆ ಶಾಪಿಂಗ್ ಮಾಡುತ್ತೀರಿ. ಮನೆಯ ಹಿರಿಯರ ಗೌರವಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುವ ಸಾಧ್ಯತೆ. ಯುವಜನರು ತಪ್ಪು ಚಟುವಟಿಕೆಗಳಲ್ಲಿ ತೊಡಗದೆ, ವೃತ್ತಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಉದ್ಯಮಕ್ಕೆ ಸಂಬಂಧಿಸಿ ಯಾವುದೇ ಹೊಸ ಯೋಜನೆ ಕೈಗೊಳ್ಳುವಾಗ ಎಚ್ಚರ. ಮನೆಯ ನೆಮ್ಮದಿಗೆ ಪತಿ-ಪತ್ನಿ ಹೊಂದಿಕೊಂಡು ಬಾಳುವುದು ಅಗತ್ಯ.

ಮಿಥುನ(Gemini):ಇಂದು ನಿರ್ದಿಷ್ಟ ವಿಷಯದ ಮೇಲೆ ನೀವು ನಿಮ್ಮ ಗಮನ ಕೇಂದ್ರೀಕರಿಸುತ್ತೀರಿ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಇನ್ನೊಬ್ಬರ ವಿಚಾರಗಳಲ್ಲಿ ತಲೆ ಹಾಕಬೇಡಿ. ಇಂದು ಜಮೀನು ಖರೀದಿ ಅಥವಾ ಮಾರಾಟದ ಪ್ಲ್ಯಾನ್ ಏನಾದ್ರೂ ಇದ್ರೆ ಕೈಬಿಡೋದು ಉತ್ತಮ. ಉದ್ಯಮದಲ್ಲಿ ಕೆಲವು ಸವಾಲುಗಳು ಎದುರಾಗುವ ಸಾಧ್ಯತೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.

ಕಟಕ(Cancer):ನಿಮ್ಮ ಆಸಕ್ತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸ್ವಲ್ಪ ಸಮಯ ಮೀಸಲಿಡಿ. ಹೀಗೆ ಮಾಡೋದ್ರಿಂದ ರಿಲ್ಯಾಕ್ಸ್ ಆಗುವ ಜೊತೆಗೆ ಹೊಸ ಉತ್ಸಾಹ ಕೂಡ ದೊರೆಯಲಿದೆ. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ರೂ ಅದನ್ನು ಪರಿಹರಿಸಬಹುದು. ಹಳೆಯ ನಕಾರಾತ್ಮಕ ವಿಚಾರಗಳು ನಿಮ್ಮ ವರ್ತಮಾನವನ್ನು ಹಾಳುಗೆಡದಂತೆ ಎಚ್ಚರ ವಹಿಸಿ. ಶೀತ ಹಾಗೂ ಕಫದ ತೊಂದರೆ ಕಾಡುವ ಸಾಧ್ಯತೆ.

Zodiac Sign: ಈ ರಾಶಿಗಳ ಜನರಿಗೆ ಸಂಬಂಧ ಬಹುಬೇಗ ಬೋರೆನಿಸುತ್ತೆ

ಸಿಂಹ(Leo):ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಇನ್ನೊಬ್ಬರ ಅಭಿಪ್ರಾಯಗಳನ್ನು ಆಲಿಸಿದರೂ ಅಂತಿಮವಾಗಿ ನಿಮ್ಮ ನಿರ್ಧಾರಕ್ಕೆ ಆದ್ಯತೆ ನೀಡುವುದು ಒಳ್ಳೆಯದು. ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಕೈಗೊಳ್ಳಲು ಇದು ಸಕಾಲ. ಸಮಯಕ್ಕೆ ಅನುಗುಣವಾಗಿ ನಿಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಿ.  ಪ್ರತಿ ವಿಷಯದಲ್ಲೂ ತುಂಬಾ ಶಿಸ್ತು ಹಾಗೂ ಕಟ್ಟುನಿಟ್ಟಾಗಿರುವುದು ಇತರರಿಗೆ ಕಿರಿಕಿರಿಯುಂಟು ಮಾಡಬಹುದು. ಅಧಿಕ ಕಾರ್ಯದೊತ್ತಡದಿಂದ ತಲೆನೋವು ಬಾಧಿಸಬಹುದು.

ಕನ್ಯಾ(Virgo):ಮನೆಯಲ್ಲಿ ಬಂಧುಗಳು ಹಾಗೂ ಆಪ್ತ ಸ್ನೇಹಿತರ ಉಪಸ್ಥಿತಿಯಿಂದ ಸಂತಸದ ವಾತಾವರಣ ಸೃಷ್ಟಿ. ಮಗುವಿನ ಕುರಿತದ ಚಿಂತೆ ದೂರವಾಗಿ ನೆಮ್ಮದಿ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಿಗೆ ಸ್ವಲ್ಪ ಸಮಯ ವ್ಯಯಿಸಿ. ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ತೊಡಗಬೇಡಿ. ಉದ್ಯಮಕ್ಕೆ ಸಂಬಂಧಿಸಿ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಮನೆಯ ಅನುಭವಿ ವ್ಯಕ್ತಿಯ ಜೊತೆ ಸಮಾಲೋಚಿಸಿ. 

ತುಲಾ(Libra):ಇಂದು ನಿಮಗೆ ವಿಶೇಷವಾದ ಯಶಸ್ಸು ಸಿಗಲಿದೆ. ನಿಮ್ಮ ಪ್ರತಿಭೆ ತೋರ್ಪಡಿಸಲು ಉತ್ತಮ ಅವಕಾಶ ಸಿಗಲಿದೆ. ಕೋಪ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿದೆ. ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು. ಕುಟುಂಬ ವಲಯದಲ್ಲಿ ಸಂತಸದ ವಾತಾವರಣ. ಗಂಟು ನೋವು ಉಲ್ಬಣಿಸುವ ಸಾಧ್ಯತೆ.

ವೃಶ್ಚಿಕ(Scorpio):ಆತಂಕ ಹಾಗೂ ಒತ್ತಡ ದೂರವಾಗಲಿದೆ. ಸಹೋದರರೊಂದಿಗೆ ಸಂಬಂಧ ವೃದ್ಧಿಯಾಗಿ ಕುಟುಂಬದಲ್ಲಿ ಖುಷಿಯ ವಾತಾವರಣ. ಕುಟುಂಬ ಸದಸ್ಯರಲ್ಲಿ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಎದುರಾಗಬಹುದು. ಅದನ್ನು ಅರ್ಥಮಾಡಿಕೊಂಡು ಪರಸ್ಪರ ಗೌರವಿಸಿ. ಧಾರ್ಮಿಕ ಅಥವಾ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವುದರಿಂದ ನಿರಾಳತೆ ಹಾಗೂ ನೆಮ್ಮದಿ. ಉದ್ಯಮಕ್ಕೆ ಸಂಬಂಧಿಸಿದ ಸಣ್ಣಪುಟ್ಟ ವಿಚಾರಗಳಿಗೂ ಮಹತ್ವ ನೀಡಿ. 

ಧನುಸ್ಸು(Sagittarius): ಈ ಸಮಯ ನಿಮಗೆ ಪೂರಕವಾಗಿದೆ. ನಿಮ್ಮ ಯೋಜನೆಗಳಲ್ಲಿ ಗೆಲುವು ಸಿಗಲಿದೆ. ನಿಮ್ಮ ಮಾತು ಹಾಗೂ ಕಾರ್ಯಶೈಲಿಯಿಂದ ಜನರು ಪ್ರಭಾವಿತರಾಗುತ್ತಾರೆ. ಸಮಯದ ಮಹತ್ವ ಅರಿಯಿರಿ. ಸರಿಯಾದ ಸಮಯಕ್ಕೆ ಸರಿಯಾದ ಕೆಲಸ ಮಾಡದಿದ್ರೆ ನಿಮಗೇ ನೋವು ಉಂಟಾಗಲಿದೆ. ವ್ಯವಹಾರಗಳಲ್ಲಿ ತಾಳ್ಮೆ ಹಾಗೂ ಕರುಣೆ ಇರಲಿ. ಹಳೆಯ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಸಿಗೋದು ಕಷ್ಟ.

ಪೂಜೆಯಲ್ಲಿ ಗರುಡ ಗಂಟೆಯನ್ನು ಏಕೆ ಬಳಸಬೇಕು?

ಮಕರ(Capricorn):ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ, ಜನರೊಂದಿಗೆ ಬೆರೆಯುವ ಅವಕಾಶ. ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಇದು ಸೂಕ್ತ ಸಮಯ. ಪ್ರಯಾಣದಿಂದ ಹಾನಿ ಸಾಧ್ಯತೆ. ನೆರೆಹೊರೆಯವರೊಂದಿಗಿನ ಸಂಬಂಧ ಹಾಳಾಗದಂತೆ ಎಚ್ಚರ ವಹಿಸಿ. ಉದ್ಯಮಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಣಯಗಳನ್ನು ತಕ್ಷಣ ಕೈಗೊಳ್ಳಿ. ಕುಟುಂಬ ಸದಸ್ಯರ ನಡುವೆ ಆತ್ಮೀಯ ಸಂಬಂಧವಿರಲಿದೆ. ಆರೋಗ್ಯದ ವಿಚಾರದಲ್ಲಿ ಸಮಯ ನಿಮಗೆ ಸಾಥ್ ನೀಡುವುದಿಲ್ಲ. 

ಕುಂಭ(Aquarius):ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ಕೈಗೊಂಡ ನಿರ್ಣಯದಿಂದ ಭವಿಷ್ಯದಲ್ಲಿ ಲಾಭ. ಅಜಾಗರೂಕತೆ ಅಥವಾ ಪ್ರಾಯೋಗಿಕ ಕೌಶಲ್ಯದ ಕೊರತೆಯಿಂದ ಉದ್ಯಮ ವಿಚಾರಗಳಲ್ಲಿ ಮೋಸ ಹೋಗುವ ಸಾಧ್ಯತೆ. ನಿಮ್ಮ ಉದ್ಯಮ ಚಟುವಟಿಕೆಗಳಲ್ಲಿ ಹೊರಗಿನವರು ಮಧ್ಯಪ್ರವೇಶಿಸದಂತೆ ಎಚ್ಚರ ವಹಿಸಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ.

ಮೀನ(Pisces):ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ದಿಢೀರ್ ಆಗಿ ಕೆಲವು ವೆಚ್ಚಗಳು ಎದುರಾಗುವ ಸಾಧ್ಯತೆ. ಖರ್ಚುಗಳಿಗೆ ಸಂಬಂಧಿಸಿ ಬಜೆಟ್ ಸಿದ್ಧಪಡಿಸೋದು ಅಗತ್ಯ. ಜವಾಬ್ದಾರಿಗಳಿಂದ ಹೊರೆ ಹೆಚ್ಚಲಿದ್ದು, ಕಿರಿಕಿರಿಯುಂಟಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ. 
 

Follow Us:
Download App:
  • android
  • ios