Asianet Suvarna News Asianet Suvarna News

Daily Horoscope:ಈ ರಾಶಿಯವರಿಗೆ ಇಂದು ಆಪ್ತರಿಂದಲೇ ಮೋಸ

11 ಮೇ 2023, ಗುರುವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ?

Daily Horoscope of may 11th 2023 in kannada anu
Author
First Published May 11, 2023, 5:00 AM IST | Last Updated May 11, 2023, 5:00 AM IST

ಮೇಷ (Aries): ಕಳೆದ ಕೆಲವು ದಿನಗಳಿಂದ ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಇಂದು ಇಡೀ ದಿನವನ್ನು ಉತ್ಸಾಹ ಹಾಗೂ ಚೈತನ್ಯದಿಂದ ಕಳೆಯುತ್ತೀರಿ. ಹೀಗಾಗಿ ಹೊಸ ವ್ಯಕ್ತಿಯಾಗಿ ರೂಪುಗೊಂಡಿರುವ ಅನುಭವ ನಿಮಗಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಕಾರಣ ತೊಂದರೆ ಅನುಭವಿಸಿದ್ದೀರಿ. ಈ ದಿನ ಪ್ರೀತಿ ಹಾಗೂ ಶಾಂತಿಯಿಂದ ಕೂಡಿರುತ್ತದೆ. ಎಲ್ಲವೂ ಸಮರ್ಪಕವಾಗಿ ಇರಲಿದೆ. ವೃತ್ತಿ ಜೀವನದಂತೆ ನಿಮ್ಮ ವೈಯಕ್ತಿಕ ಬದುಕು ಕೂಡ ಉನ್ನತ ಮಟ್ಟದಲ್ಲಿರುತ್ತದೆ.

ವೃಷಭ(Taurus): ನಿಮ್ಮ ವೃತ್ತಿ ಹಾಗೂ ಪ್ರೀತಿ ಜೀವನ ಇಂದು ಸರಿಯಾದ ಮಾರ್ಗದಲ್ಲಿರುತ್ತದೆ. ನಿಮ್ಮ ಮೇಲಧಿಕಾರಿ ಹಾಗೂ ಸಂಗಾತಿಯನ್ನು ಮೆಚ್ಚಿಸಲು ಇಂದು ನೀವು ಕಠಿಣ ಪರಿಶ್ರಮಪಡುತ್ತೀರಿ.ಅಷ್ಟೇ ಅಲ್ಲ,ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಖುಷಿಪಡಿಸುತ್ತೀರಿ. ನಿಮ್ಮ ಆತ್ಮವಿಶ್ವಾಸ ಇಂದು ಎಲ್ಲ ಕೆಲಸಗಳಲ್ಲೂ ಗೆಲುವು ತರುತ್ತದೆ.ನೀವು ಏನೇ ಕೆಲಸ ಮಾಡಿದ್ದರೂ ಅದಕ್ಕೊಂದು ಸಮರ್ಪಕ ಕಾರಣವಿದೆ ಎಂಬುದು ತಿಳಿಯುತ್ತದೆ.ಇಂದು ನೀವು ಎಲ್ಲರ ಗಮನ ಸೆಳೆಯುತ್ತೀರಿ. 

ಮಿಥುನ(Gemini):ಇಂದು ನಿಮಗೆ ಉತ್ತಮ ಆರ್ಥಿಕ ಭದ್ರತೆ ಸಿಗಲಿದೆ. ಇದು ನಿಮ್ಮನ್ನು ದಿನವಿಡೀ ಸಂತೃಪ್ತಿ ಹಾಗೂ ಖುಷಿಯಿಂದ ಇಡಬಲ್ಲದು. ಹೂಡಿಕೆ ಮಾಡುವ ಮುನ್ನ ಸಾಕಷ್ಟು ವಿಶ್ಲೇಷಣೆ ನಡೆಸೋದು ಅಗತ್ಯ. ಏಕೆಂದರೆ ಇಂದು ನಿಮಗೆ ಸಿಗುವ ಹಣವನ್ನು ನೀವು ಹೇಗೆ ಬಳಸುತ್ತೀರಿ ಎಂಬುದು ನಿಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಮಾಡಬಲ್ಲದು. ಹಳೆಯ ಪರಿಚಯಸ್ಥರನ್ನು ಇಂದು ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ.

ಕಟಕ(Cancer): ಇಂದಿನ ದಿನ ನಿಮಗೆ ಅತ್ಯಂತ ಖುಷಿಯಿಂದ ಕೂಡಿರಲಿದೆ.ನಿಮ್ಮ ವರ್ತನೆಯಿಂದ ನಿಮ್ಮ ಸಂಗಾತಿ ಇಂದು ತುಂಬಾ ಖುಷಿಪಡುತ್ತಾರೆ. ಒಟ್ಟಾರೆ ಇಂದು ನಿಮ್ಮ ಪ್ರೇಮ ಜೀವನ ಖುಷಿಯಿಂದ ಕೂಡಿರುತ್ತದೆ.ಇದು ನಿಮಗೆ ನೆಮ್ಮದಿಯನ್ನು ನೀಡುತ್ತದೆ ಕೂಡ. ಸಂಗಾತಿಯನ್ನು ಖುಷಿಯಾಗಿಡಲು ನೀವು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಪಡುತ್ತೀರಿ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. 

Hindu Wedding : ಮದುವೆಯಲ್ಲಿ ಕೆಂಪು ಬಣ್ಣವನ್ನೇಕೆ ಧರಿಸ್ಬೇಕು?

ಸಿಂಹ(Leo): ನಿಮ್ಮ ಕೆಲಸಗಳಿಗೆ ಇಂದು ಸಕಾರಾತ್ಮಕ ಶಕ್ತಿಗಳು ನೆರವು ನೀಡಲಿವೆ. ಇನ್ನು ನಿಮ್ಮ ವೃತ್ತಿಜೀವನ ನಿಮ್ಮ ಬದುಕಿನ ಅತ್ಯಂತ ಸಕಾರಾತ್ಮಕ ಭಾಗವಾಗಿದ್ದು, ಉತ್ತಮ ಫಲಿತಾಂಶ ನೀಡಲಿದೆ. ಸಂಗಾತಿ ಹಾಗೂ ಪ್ರೀತಿಪಾತ್ರರ ಜೊತೆಗೆ ಇಂದು ಉತ್ತಮ ಸಮಯ ಕಳೆಯುತ್ತೀರಿ. ಮನಸ್ಸಿಗೆ ಖುಷಿ ಹಾಗೂ ಸಕಾರಾತ್ಮಕ ಶಕ್ತಿ ತುಂಬುವ ಕೆಲಸಗಳಲ್ಲಿ ಇಂದು ತೊಡಗಿಕೊಳ್ಳುತ್ತೀರಿ.

ಕನ್ಯಾ(Virgo): ರಿಲ್ಯಾಕ್ಸ್ ಮಾಡಲು ಇದು ಸೂಕ್ತವಾದ ದಿನ. ನೀವು ಇನ್ನೂ ಒಂಟಿಯಾಗಿದ್ದರೆ ಪ್ರೀತಿ ಮೂಡುವ ಸಾಧ್ಯತೆಯಿದೆ. ಇನ್ನು ವಿವಾಹಿತರು ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಅನುಭವಿಸುತ್ತಾರೆ. ಎಲ್ಲ ಕೆಲಸಗಳಲ್ಲೂ ಸಂಗಾತಿಯ ನೆರವು ಸಿಗುವ ಕಾರಣ ನಿಮ್ಮಿಬ್ಬರ ಸಂಬಂಧ ಉತ್ತಮವಾಗಿರುತ್ತದೆ. ಹೊಸ ಯೋಜನೆಗಳಿಗೆ ಇಂದು ಚಾಲನೆ ನೀಡುತ್ತೀರಿ. ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ.

ತುಲಾ(Libra): ಯಾವುದೇ ಕೆಲಸವನ್ನು ಮುಂದುವರಿಸುವ ಮುನ್ನ ಆ ಬಗ್ಗೆ ಸರಿಯಾಗಿ ಯೋಚಿಸಿ.ಹಾಗೆಯೇ ನೀವು ಪ್ರೀತಿ, ಕಾಳಜಿ ಹಾಗೂ ಗಮನವನ್ನು ಸರಿಯಾದ ವ್ಯಕ್ತಿಗೆ ನೀಡುತ್ತಿದ್ದೀರಿ ಎಂಬುದನ್ನು ಖಚಿಪಡಿಸಿಕೊಳ್ಳಿ. ಈ ದಿನವನ್ನು ನಿಮಗೆ ವಿಶೇಷವಾಗಿಸಲು ನಿಮ್ಮ ಸಂಗಾತಿ ಸಾಕಷ್ಟು ಸಮಯ, ಶಕ್ತಿ ಹಾಗೂ ಪ್ರಯತ್ನಗಳನ್ನು ಮಾಡಿರುತ್ತಾರೆ. ಆದರೆ,ಅವರ ಕೆಲವು ವರ್ತನೆಗಳು ಇಂದು ನಿಮ್ಮನ್ನು ನಿರಾಸೆಗೊಳಿಸಲಿವೆ ಕೂಡ.

ವೃಶ್ಚಿಕ(Scorpio): ಆರೋಗ್ಯದ ಕಡೆಗೆ ಗಮನ ನೀಡಿ.ಇನ್ನೊಬ್ಬರ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಆಪ್ತರೇ ಮೋಸ ಮಾಡುವ ಸಾಧ್ಯತೆಯಿದೆ. ಹಣದ ವಿಚಾರದಲ್ಲಿ ಎಚ್ಚರ ವಹಿಸಿ. ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಹಣ ನೀಡಬೇಡಿ.ಹಿಂದಿನ ಕಹಿ ಘಟನೆಗಳು ಮನಸ್ಸಿಗೆ ಘಾಸಿಗೊಳಿಸಿದರೂ ಆ ಬಗ್ಗೆ ಹೆಚ್ಚು ಯೋಚಿಸಲು ಹೋಗಬೇಡಿ.ಇಂದಿನ ದಿನವನ್ನು ಖುಷಿಯಿಂದ ಕಳೆಯುವತ್ತ ಗಮನ ಕೇಂದ್ರೀಕರಿಸಿ.

ಧನುಸ್ಸು(Sagittarius): ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಿದ್ದೀರಿ. ಇನ್ನೊಬ್ಬರಿಗೆ ನೆರವು ನೀಡುವ ಮುನ್ನ ಅವರು ಅದಕ್ಕೆ ಆರ್ಹರೇ ಎಂಬುದನ್ನು ಪರೀಕ್ಷಿಸಿ. ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ. ಇಂದು ನೀವು ಹೆಚ್ಚಿನ ಜನಪ್ರಿಯತೆ ಗಳಿಸಲಿದ್ದೀರಿ. ಸಂಗಾತಿ ಜೊತೆಗೆ ವೈಮನಸ್ಸು ಮೂಡುವ ಸಾಧ್ಯತೆಯಿದೆ. ಇದಕ್ಕೆ ಅವರ ಕೆಲವು ನಡವಳಿಕೆಗಳೇ ಕಾರಣವಾಗಿರುವ ಸಾಧ್ಯತೆಯಿದೆ.

ತಿರುಪತಿಯಲ್ಲಿ ಭಾರಿ ಭದ್ರತಾ ಲೋಪ: ದೇಗುಲದ ವಿಡಿಯೋ ವೈರಲ್‌

ಮಕರ(Capricorn): ಪ್ರೀತಿಗೆ ಸಂಬಂಧಿಸಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳುತ್ತೀರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆ ಬಗ್ಗೆ ಸರಿಯಾಗಿ ಯೋಚಿಸಿ. ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ. ನಿಮ್ಮಿಂದ ದೂರ ಸರಿದ ಸ್ನೇಹಿತ ಇಂದು ಮರಳಿ ನಿಮ್ಮ ಸನ್ನಿಹಕ್ಕೆ ಬರಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಸಂಗಾತಿಯ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ.

ಕುಂಭ(Aquarius):ನಿಮಗೋಸ್ಕರ ಇಂದು ಒಂದಿಷ್ಟು ಸಮಯ ಬಿಡುವು ಮಾಡಿಕೊಳ್ಳಿ. ಆತ್ಮೀಯರೇ ಇಂದು ನಿಮಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ. ಮನಸ್ಸಿಗೆ ನೋವುಂಟು ಮಾಡುವ ವ್ಯಕ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.ಸಾಧ್ಯವಾದರೆ ಅವರಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳಿ. ನಾಳೆಯ ಬಗ್ಗೆ ಅತಿಯಾಗಿ ಯೋಚಿಸಲು ಹೋಗಬೇಡಿ. ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಿ.

ಮೀನ(Pisces): ಇಂದಿನ ದಿನ ಖುಷಿ ಹಾಗೂ ಸಾಹಸಮಯವಾಗಿರುತ್ತದೆ. ನಿಸರ್ಗದ ಸೌಂದರ್ಯ ನೋಡಿ ಖುಷಿಪಡಿ. ನಿಮ್ಮ ಸಂಗಾತಿ ನಿಮಗೆ ಬೆಂಬಲ ನೀಡುವ ಜೊತೆಗೆ ಎಲ್ಲ ಕಾರ್ಯದಲ್ಲೂ ನೆರವು ನೀಡುತ್ತಾರೆ. ಸಮಯ ಸಿಕ್ಕಾಗಲೆಲ್ಲ ನಿಮ್ಮ ಸಂಗಾತಿಗೆ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದನ್ನು ತಿಳಿಸಲು ಪ್ರಯತ್ನಿಸಿ. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಎಚ್ಚರಿಕೆ ವಹಿಸಿ.

Latest Videos
Follow Us:
Download App:
  • android
  • ios