Daily Horoscope:ಧನಸ್ಸು ರಾಶಿಗೆ ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ
6 ಮಾರ್ಚ್ 2023, ಸೋಮವಾರ ವೃಷಭ ರಾಶಿಗೆ ಅತ್ಯಮೂಲ್ಯ ವಸ್ತು ಕಳವಾಗುವ ಭಯ, ಸಿಂಹ ರಾಶಿಗೆ ಬಂಧುಗಳ ಆಗಮನದಿಂದ ಸಂತಸ
ಮೇಷ(Aries):ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕೆಲವು ಸಮಯ ಕಳೆಯುತ್ತೀರಿ. ಸಮಾಜ ಸುಧಾರಕರೊಬ್ಬರ ಭೇಟಿಯಿಂದ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲಿದೆ. ಕುಟುಂಬದ ಹಿರಿಯ ಸದಸ್ಯರ ಆರೋಗ್ಯ ಸಮಸ್ಯೆ ಚಿಂತೆಗೆ ಕಾರಣವಾಗಲಿದೆ. ಉದ್ಯಮಕ್ಕೆ ಸಂಬಂಧಿಸಿ ಗಂಭೀರ ನಿರ್ಧಾರವನ್ನು ಕೈಗೊಳ್ಳುತ್ತೀರಿ. ನಕಾರಾತ್ಮಕ ಚಟುವಟಿಕೆ ಕಾರಣದಿಂದ ಜನರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದುವ ಸಾಧ್ಯತೆಯಿದೆ.
ವೃಷಭ(Taurus):ಕುಟುಂಬದ ಸಂತಸ ಹಾಗೂ ನೆಮ್ಮದಿ ನಿಮ್ಮ ಮೊದಲ ಆದ್ಯತೆ ಆಗಿರಲಿದೆ. ವೃತ್ತಿ ಹಾಗೂ ಕುಟುಂಬದಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಫಲರಾಗುತ್ತೀರಿ. ಮಕ್ಕಳ ಓದು ಹಾಗೂ ಪ್ರವೇಶಾತಿಗೆ ಸಂಬಂಧಿಸಿದ ಕೆಲಸಗಳಲ್ಲಿ ಇಂದು ನೀವು ಬ್ಯುಸಿ ಆಗಿರುತ್ತೀರಿ. ವಾಹನ ಅಥವಾ ಮನೆ ನಿರ್ವಹಣೆಗೆ ಸಂಬಂಧಿಸಿದ ವೆಚ್ಚಗಳು ಹೆಚ್ಚಲಿದ್ದು, ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಲಿವೆ. ನಿಮ್ಮ ಬಳಿಯಿರುವ ಅತ್ಯಮೂಲ್ಯ ವಸ್ತುಗಳು ಕಳೆದುಹೋಗುವ ಅಥವಾ ಕಳ್ಳತನವಾಗುವ ಸಾಧ್ಯತೆಯಿದ್ದು, ಎಚ್ಚರ ವಹಿಸಿ. ಉದ್ಯಮದಲ್ಲಿ ಯಶಸ್ಸು ಸಿಗಲಿದೆ.
ಮಿಥುನ(Gemini):ನಿಮ್ಮ ಮೃದು ಮಾತು ಹಾಗೂ ಸ್ವತಂತ್ರವಾದ ನೋಟ ಎಲ್ಲ ಜನರನ್ನು ಪ್ರಭಾವಿಸಲಿದೆ. ವಯೋಸಂಬಂಧಿ ಭಿನ್ನತೆಗಳು ಹಾಗೂ ತಪ್ಪು ಭಾವನೆಗಳನ್ನು ಸರಿಪಡಿಸಿಕೊಳ್ಳಿ. ಮಕ್ಕಳಿಗೆ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬಕ್ಕೆ ಸಂಬಂಧಿಸಿ ಕೆಲವೊಮ್ಮೆ ಮನಸ್ಸಿನಲ್ಲಿ ಅಸುರಕ್ಷಿತ ಭಾವನೆ ಮೂಡಬಹುದು. ಇದು ಕೇವಲ ನಿಮ್ಮ ಕಲ್ಪನೆಯಷ್ಟೇ ಆಗಿದೆ. ಆದಾಯದ ಜೊತೆಗೆ ಖರ್ಚೂ ಹೆಚ್ಚಲಿದೆ. ಈ ಸಮಯವನ್ನು ತಾಳ್ಮೆಯಿಂದ ಕಳೆಯಿರಿ. ಕೆಲಸಕ್ಕೆ ಸಂಬಂಧಿಸಿ ನಿಮ್ಮ ಕಾರ್ಯಕ್ಷಮತೆ ಹಾಗೂ ಸಾಮರ್ಥ್ಯ ಕುಗ್ಗಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಲಿದೆ.
ಕಾಗೆ ಸಾವಿನ ಸುದ್ದಿಯನ್ನು ತರುತ್ತದೆ, ಎಚ್ಚರದಿಂದ ಗಮನಿಸಿ!
ಕಟಕ(Cancer):ಕುಟುಂಬದಲ್ಲಿ ಶಾಂತಿ ಹಾಗೂ ಖುಷಿ ನೆಲೆಸಲಿದೆ. ಮನೆ ನಿರ್ವಹಣೆ ಹಾಗೂ ಅಲಂಕಾರಕ್ಕೆ ಸಂಬಂಧಿಸಿ ಕುಟುಂಬ ಸದಸ್ಯರೊಂದಿಗೆ ಶಾಪಿಂಗ್ ನಡೆಸುತ್ತೀರಿ. ವೃತ್ತಿಪರ ಅಧ್ಯಯನ ನಡೆಸಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಅಪರಿಚಿತರ ಜೊತೆಗೆ ಹೆಚ್ಚಿನ ಸಂಪರ್ಕವಿಟ್ಟುಕೊಳ್ಳಬೇಡಿ. ನಿಮ್ಮ ಕುಟುಂಬದ ವಿಚಾರದಲ್ಲಿ ಹೊರಗಿನವರು ಮೂಗು ತೋರಿಸದಂತೆ ಎಚ್ಚರ ವಹಿಸಿ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ. ಕುಟುಂಬದಲ್ಲಿ ಸುಖ ಹಾಗೂ ಶಾಂತಿ ನೆಲೆಸಲಿದೆ.
ಸಿಂಹ(Leo):ಹಲವು ದಿನಗಳ ಬಳಿಕ ಮನೆಗೆ ಆಪ್ತ ಬಂಧುಗಳ ಆಗಮನದಿಂದ ಹಬ್ಬದ ವಾತಾವರಣ ಸೃಷ್ಟಿ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಸೇರುವುದರಿಂದ ಮನಸ್ಸಿಗೆ ಖುಷಿ. ಪ್ರಮುಖವಾದ ವಿಚಾರವೊಂದರ ಬಗ್ಗೆ ಚರ್ಚೆ ನಡೆಯುತ್ತದೆ. ಸಂಭಾಷಣೆ ಸಮಯದಲ್ಲಿ ನೀವು ತಪ್ಪಿ ಆಡಿದ ಮಾತಿನಿಂದ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯಿದೆ. ಹೀಗಾಗಿ ಮಾತನಾಡುವಾಗ ಎಚ್ಚರ ವಹಿಸಿ.
ಕನ್ಯಾ(Virgo):ಬುದ್ಧಿವಂತಿಕೆ ಹಾಗೂ ಚಾತುರ್ಯದಿಂದ ನಿಮ್ಮ ಸಂಪರ್ಕಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಇನ್ನೊಬ್ಬರ ಮಧ್ಯಪ್ರವೇಶದಿಂದ ಸಹೋದರರು ಹಾಗೂ ಸಂಬಂಧಿಗಳ ನಡುವಿನ ವೈಮನಸ್ಸು ದೂರವಾಗಲಿದೆ. ಹೊಸ ಜನರೊಂದಿಗೆ ಬೆರೆಯುವಾಗ ಎಚ್ಚರ ವಹಿಸಿ. ನಕಾರಾತ್ಮಕ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯಿಂದ ನಿಮಗೆ ಹಾನಿಯಾಗುವ ಸಾಧ್ಯತೆ. ಇಂದು ತಾಳ್ಮೆ ಹೊಂದುವುದು ಅಗತ್ಯ. ಉದ್ಯಮದಲ್ಲಿ ಇಂದು ಯಶಸ್ಸು ಖಚಿತ.
ತುಲಾ(Libra):ಮಕ್ಕಳಿಗೆ ಸಂಬಂಧಿಸಿದ ಪ್ರಮುಖ ಕೆಲಸವನ್ನು ಮಾಡಿ ಮುಗಿಸೋದ್ರಿಂದ ಮನಸ್ಸಿಗೆ ನೆಮ್ಮದಿ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕೋದು ಅಗತ್ಯ. ಹಣದ ವಿಚಾರದಲ್ಲಿ ಯಾರನ್ನು ಕೂಡ ನಂಬಬೇಡಿ. ಮನೆಯ ಹಿರಿಯರ ಸಲಹೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ನಿಮ್ಮ ಮೃದು ಮಾತು ಹಾಗೂ ಸಭ್ಯ ನಡವಳಿಕೆ ಉದ್ಯಮ ಸಂಬಂಧ ಸುಧಾರಿಸಲಿದೆ. ಪತಿ ಹಾಗೂ ಪತ್ನಿ ನಡುವಿನ ದೀರ್ಘಸಮಯದ ವೈಮನಸ್ಸು ದೂರವಾಗಲಿದೆ. ನಿಮ್ಮ ಡಯಟ್ ಹಾಗೂ ಔಷಧಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ.
ರಾಮನವಮಿಗೂ, ಚೈತ್ರ ನವರಾತ್ರಿಗೂ ಸಂಬಂಧ ಏನು?
ವೃಶ್ಚಿಕ(Scorpio):ಕುಟುಂಬದ ವಾತಾವರಣ ಶಿಸ್ತು ಹಾಗೂ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ. ಕಟುಂಬ ಸದಸ್ಯರ ಮದುವೆಗೆ ಸಂಬಂಧಿಸಿ ಉತ್ತಮ ಸಂಬಂಧ ಬರಲಿದೆ. ಯೋಜಿತ ಹಾಗೂ ಸಮರ್ಪಕ ವಿಧಾನದಿಂದ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ಕೆಲಸಗಳಲ್ಲಿ ಇಂದು ಯಶಸ್ಸು ಸಿಗಲಿದೆ. ಮನೋರಂಜನೆಯಲ್ಲೇ ಸಮಯ ಕಳೆಯುವ ಮೂಲಕ ವಿದ್ಯಾರ್ಥಿಗಳು ಹಾಗೂ ಯುವಕರು ತಮ್ಮ ವೃತ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ರಾಜೀ ಮಾಡಿಕೊಳ್ಳಬಾರದು. ಕೆಲವು ಸಂಬಂಧಿಕರ ದಿಢೀರ್ ಭೇಟಿಯಿಂದ ಮನೆಯಲ್ಲಿ ಗಡಿಬಿಡಿಯ ವಾತಾವರಣ ನಿರ್ಮಾಣ.
ಧನುಸ್ಸು(Sagittarius):ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ಇಂದು ಸ್ನೇಹಿತರು ಹಾಗೂ ಬಂಧುಗಳ ನೆರವಿನಿಂದ ಬಗೆಹರಿಯಲಿದೆ. ಇದರಿಂದ ನಿಮ್ಮ ಒತ್ತಡ ತಗ್ಗಲಿದೆ. ವಿದೇಶದಲ್ಲಿ ಓದುತ್ತಿರೋರಿಗೆ ಯಶಸ್ಸು ಸಿಗಲಿದೆ. ಜಮೀನು ಖರೀದಿಗೆ ಯೋಜನೆ ರೂಪಿಸುತ್ತೀರಿ. ಆಪ್ತ ಸ್ನೇಹಿತರ ಜೊತೆಗೆ ವೈಮನಸ್ಸು ಮೂಡಲಿದೆ. ಉದ್ಯಮಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾದ ಅಗತ್ಯವಿದೆ.
ಮಕರ(Capricorn):ಯಾವುದೇ ವ್ಯತಿರಿಕ್ತ ಸಂದರ್ಭದಲ್ಲೂ ನಿಮ್ಮ ಕುಟುಂಬ ನಿಮ್ಮ ಜೊತೆಗೆ ಇರಲಿದೆ. ಹೀಗಾಗಿ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಿ. ಕುಟುಂಬದ ಹಿರಿಯ ಸದಸ್ಯರೊಂದಿಗೆ ಸಮಯ ಕಳೆಯೋದ್ರಿಂದ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಈ ಸಮಯದಲ್ಲಿ ಯಾರನ್ನು ಕೂಡ ಅತೀಯಾಗಿ ನಂಬಲು ಹೋಗಬೇಡಿ. ಇದ್ರಿಂದ ಹಾನಿಯುಂಟಾಗಲಿದೆ. ಉದ್ಯಮಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಇನ್ನೊಮ್ಮೆ ಯೋಚಿಸಿ.
ಕುಂಭ(Aquarius):ಇಂದು ಕುಟುಂಬ ಸದಸ್ಯರು ನಿಮ್ಮಿಂದ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆ ನಿರೀಕ್ಷೆಗಳನ್ನು ನೀವು ಪೂರ್ಣಗೊಳಿಸುತ್ತೀರಿ ಕೂಡ. ಹೂಡಿಕೆಗೆ ಇಂದು ಶುಭದಿನ. ಸಂಬಂಧಿಕರ ಜೊತೆಗಿನ ಹಣಕಾಸು ವ್ಯವಹಾರ ಸಂಬಮಧ ಕೆಡಿಸುವ ಸಾಧ್ಯತೆಯಿದೆ. ಸಿಟ್ಟು ಹಾಗೂ ಅಸಹನೆ ನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿವೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
ಮೀನ(Pisces):ಆತ್ಮವಿಮರ್ಶೆಯಲ್ಲಿ ಇಂದು ಹೆಚ್ಚಿನ ಸಮಯ ಕಳೆಯುತ್ತೀರಿ. ಇದು ನಿಮಗೆ ಅನೇಕ ತೊಂದರೆಗಳಿಂದ ಹೊರಬರಲು ನೆರವು ನೀಡಲಿದೆ. ಆತ್ಮೀಯ ಸ್ನೇಹಿತ ಅಸೂಯೆಯಿಂದ ನಿಮ್ಮ ವಿರುದ್ಧ ಒಳಸಂಚು ರೂಪಿಸಬಹುದು. ಉದ್ಯಮಕ್ಕೆ ಸಂಬಂಧಿಸಿ ಇಂದು ಪ್ರಮುಖ ನಿರ್ಧಾರ ಕೈಗೊಳ್ಳುತ್ತೀರಿ. ಹಣ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಬಾರಿ ಯೋಚಿಸಿ ಮುಂದಡಿ ಇಡಿ.