Asianet Suvarna News Asianet Suvarna News

Daily Horoscope: ಅವಮಾನ, ನೋವಿನಿಂದ ಕಂಗೆಡುವ ಮಕರ, ಮೇಷಕ್ಕೆ ದಿನ ಹಿತಕರ

5 ಮಾರ್ಚ್ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನಕ್ಕೆ ಶುಭ ದಿನ

Daily horoscope of March 5th 2022 in Kannada SKR
Author
Bangalore, First Published Mar 5, 2022, 5:01 AM IST | Last Updated Mar 5, 2022, 7:08 AM IST

ಮೇಷ(Aries): ಬಹಳ ಹಿತವಾಗಿ ದಿನ ಕಳೆಯುವಿರಿ. ಸಾಕಷ್ಟು ದಿನದ ಬಾಕಿ ಉಳಿದ ನಿದ್ದೆ ಮಾಡಿಕೊಂಡು ತಾಜಾತನ ಅನುಭವಿಸುವಿರಿ. ಮನರಂಜನೆಗೆ ಸಮಯ ಮೀಸಲಿಡುವಿರಿ. ಸ್ನೇಹಿತರನ್ನು ಭೇಟಿಯಾಗಲಿರುವಿರಿ. ವಿವಾಹಿತರು ಸಂತಸದ ಸಮಯ ಕಳೆಯುವರು. ನವಗ್ರಹಕ್ಕೆ ನಮಸ್ಕರಿಸಿ.

ವೃಷಭ(Taurus): ಬಟ್ಟೆ, ಆಭರಣ, ದಿನಸಿ ವ್ಯಾಪಾರಿಗಳಿಗೆ, ಸ್ವಉದ್ಯಮ ಹೊಂದಿರುವವರಿಗೆ ಲಾಭ ಹೆಚ್ಚುವುದು. ರೈತರಿಗೆ ಕೆಲಸ ಹಾಗೂ ಲಾಭ ಹೆಚ್ಚುವುದು. ಮಕ್ಕಳಲ್ಲಿ ಉತ್ಸಾಹ ಇರುವುದು. ವಿವಾಹಾಕಾಂಕ್ಷಿಗಳಿಗೆ ಸಂತೋಷದ ಸುದ್ದಿ ಇರಲಿದೆ. ಅಶ್ವತ್ಥ ಮರದ ಬುಡದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ. 

ಮಿಥುನ(Gemini): ಮಕ್ಕಳ ಪ್ರತಿಭೆ ಬೆಳಕಿಗೆ ಬರಲಿದೆ. ಉತ್ಸಾಹ ಹೆಚ್ಚಲಿದೆ. ನೆಂಟರಿಷ್ಟರ ಮನೆಗೆ ಭೇಟಿ ಕೊಡಲಿರುವಿರಿ. ಆಹಾರ ಸಮೃದ್ಧಿ ಇರುವುದು. ನಿಮ್ಮ ಕುತೂಹಲ ಮತ್ತೊಬ್ಬರ ಬದುಕಿಗೆ ಅಡಚಣೆ ಒಡ್ಡದಂತೆ ಜಾಗ್ರತೆ ವಹಿಸಿ. ಹೊಟ್ಟೆಯ ಬಾಧೆಗಳು ಕಾಣಿಸಿಕೊಳ್ಳಬಹುದು. ಶನಿ ಶ್ಲೋಕಗಳನ್ನು ಹೇಳಿಕೊಳ್ಳಿ.

ಕಟಕ(Cancer): ಕೋಪವನ್ನು ಹತೋಟಿಯಲ್ಲಿಟ್ಟುಕೊಂಡರೆ, ಮಾತಿನಲ್ಲಿ ತಾಳ್ಮೆ ವಹಿಸಿದರೆ, ದಿನ ಉತ್ತಮವಾಗಿರಲಿದೆ. ಬೇಡದ ಮಾತಾಡಿ ವಿರೋಧಿಗಳನ್ನು ಕಟ್ಟಿಕೊಳ್ಳಬೇಡಿ. ಕಷ್ಟಗಳು ಹೆಚ್ಚುತ್ತಿವೆ ಎನಿಸಬಹುದು. ಆದರೆ, ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇದೆ ಎಂದು ನಂಬಿ ಮುನ್ನಡೆಯಿರಿ. ಹನುಮಾನ್ ಚಾಳೀಸ್ ಪಠಣ ಮಾಡಿ. 

Capricorn Personality Traits: ಹಟ, ಛಲ, ಮಹತ್ವಾಕಾಂಕ್ಷೆ.. ಇದು ಮಕರ ರಾಶಿಯವರ ಹುಟ್ಟುಗುಣ

ಸಿಂಹ(Leo): ಧಾರ್ಮಿಕ ವಿಷಯಗಳಿಗೆ ಸಮಯ ವ್ಯಯಿಸುವಿರಿ. ಕ್ರೀಡಾ ಚಟುವಟಿಕೆಗಳಿಂದ ಉಲ್ಲಾಸ. ಸ್ನೇಹಿತರ ಏಳ್ಗೆಗಾಗಿ ಯತ್ನಿಸುವ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಇಷ್ಟದ ವ್ಯಕ್ತಿಗಳೊಂದಿಗೆ ಸಮಯ ಕಳೆಯುವಿರಿ. ಕುಟುಂಬ ಸದಸ್ಯರಿಗೆ ಸಮಯ ಒದಗಿಸಿ. ಶಿವ ಶತನಾಮಾವಳಿ ಹೇಳಿಕೊಳ್ಳಿ.

ಕನ್ಯಾ(Virgo): ಹೊಸ ಕಲಿಕೆಗೆ ಮನಸ್ಸು ಮಾಡುವಿರಿ. ಇದರಿಂದ ಮನಸ್ಸು ಆತಂಕ ಹಾಗೂ ಆನಂದವೆರಡನ್ನೂ ಅನುಭವಿಸುವುದು. ವ್ಯವಹಾರದಲ್ಲಿ ಅನೇಕ ರೀತಿಯ ಕೆಲಸಗಳ ಜವಾಬ್ದಾರಿ ನಿಮ್ಮ ಮೇಲೆ ಬೀಳಬಹುದು. ಹೊರೆ ಎಂದುಕೊಳ್ಳದೆ ನಿಮ್ಮ ಸಾಮರ್ಥ್ಯಕ್ಕೆ ಸಿಕ್ಕ ಮನ್ನಣೆ ಎಂದು ಪರಿಗಣಿಸಿ. ಕಪ್ಪು ಧಾನ್ಯ ದಾನ ಮಾಡಿ. 

ತುಲಾ(Libra): ಮನಸ್ಸು ಚಂಚಲಗೊಳ್ಳುವುದು. ಯೋಗ, ಧ್ಯಾನದ ಸಹಾಯ ಪಡೆಯಬಹುದು. ಯುವಕರಿಗೆ ಪ್ರೇಮ ವೈಫಲ್ಯಗಳ ನೋವು ಮತ್ತೆ ಮತ್ತೆ ಕಾಡಬಹುದು. ನಡೆಯುವಾಗ ಜಾಗ್ರತೆ ವಹಿಸಿ. ಸಾಕು ಪ್ರಾಣಿಗಳಿಂದ ಮನಸ್ಸಿಗೆ ಸಮಾಧಾನ. ಆಂಜನೇಯ ಸ್ಮರಣೆ ಮಾಡಿ. 

Business and black magic: ವ್ಯಾಪಾರಕ್ಕೆ ನಷ್ಟ ತರುವ ವಾಮಾಚಾರ, ರಕ್ಷಣೆ ಹೇಗೆ?

ವೃಶ್ಚಿಕ(Scorpio): ಶುಭ ಸಮಾರಂಭಗಳಿಗೆ ಭೇಟಿ ನೀಡಲಿರುವಿರಿ. ಹೊಸ ವಸ್ತುಗಳ ಖರೀದಿ ಖುಷಿ ತರುವುದಿಲ್ಲ. ಮಕ್ಕಳ ರೋಗ ನಿರೋಧಕ ಶಕ್ತಿ ಹಿಗ್ಗಿಸುವತ್ತ ಗಮನ ವಹಿಸಿ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ವಿವಾಹಿತರ ನಡುವೆ ವೈಮನಸ್ಯ ಹೆಚ್ಚಬಹುದು. ಮಾತುಕತೆಯೊಂದೇ ಪರಿಹಾರ ಎಂಬುದು ಗಮನದಲ್ಲಿರಲಿ. ಶಿವ ಧ್ಯಾನ ಮಾಡಿ. 

ಧನುಸ್ಸು(Sagittarius): ಯಾರೋ ಬಂದು ಮುಂದೆ ತಳ್ಳುವರೆಂದು ಕಾಯುತ್ತಿದ್ದರೆ ಪ್ರಯೋಜನವಿಲ್ಲ. ನೀವಾಗಿಯೇ ಮುಂದೆ ಹೆಜ್ಜೆ ಇಡಬೇಕು. ಮನಸ್ಸಲ್ಲಿ ಬಲ ತಂದುಕೊಳ್ಳಬೇಕು. ಸಂಬಂಧಗಳ ನಡುವೆ ವೈಮನಸ್ಯ ಮೂಡುವ ಸಂದರ್ಭಗಳೆದುರಾಗಬಹುದು. ಕಪ್ಪು ವಸ್ತ್ರ ಧರಿಸಿ ಬಡವರಿಗೆ ಆಹಾರ ದಾನ ಮಾಡಿ.

ಮಕರ(Capricorn): ಯಾವುದೇ ನೋವು, ಅವಮಾನಗಳು ಎದುರಾಗಬಹುದು. ನನಗೇ ಏಕೆ ಎಂದುಕೊಳ್ಳುವ ಬದಲು ನನಗೇಕಾಗಿರಬಾರದು ಎಂದುಕೊಂಡು ಧೈರ್ಯದಿಂದ ಎದುರಿಸಿ. ಸ್ನೇಹಿತರು, ಬಂಧುಮಿತ್ರರ ಬದುಕಿನ ಅಭಿವೃದ್ಧಿ ನಿಮ್ಮನ್ನು ಕಂಗೆಡಿಸಬಹುದು. ಧನಾತ್ಮಕ ಯೋಚನೆ ಮಾಡುವತ್ತ ಗಮನ ತಿರುಗಿಸಿ. ಶನಿ ಸ್ಮರಣೆ ಮಾಡಿ. 

ಕುಂಭ(Aquarius): ಇನ್ನೊಬ್ಬರ ವಿಷಯದಲ್ಲಿ ತಪ್ಪು ಹುಡುಕುವ ಮೊದಲು ನೀವೇ ಎಡವುತ್ತಿರಬಹುದಾ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ. ತಪ್ಪುಗಳು ಕಂಡರೆ ಸರಿಪಡಿಸಿಕೊಳ್ಳುವತ್ತ ಗಮನ ಹರಿಸಿ. ಮಿಂಚಿ ಹೋದ ಕಾಲದ ಬಗ್ಗೆ ಚಿಂತಿಸಿ ಫಲವಿಲ್ಲ. ಭವಿಷ್ಯದೆಡೆ ದೃಷ್ಟಿ ಹಾಯಿಸಿ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ.

ಮೀನ(Pisces): ಕುಟುಂಬಸ್ಥರ ಸಹಕಾರದಿಂದ ನಿಮ್ಮ ಕನಸೊಂದು ಈಡೇರುವುದು. ಸಲ್ಲದ ಸಣ್ಣಪುಟ್ಟ ರಾಜಕೀಯದಲ್ಲಿ ಮೂಗು ತೂರಿಸಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ. ವ್ಯಕ್ತಿತ್ವ ವಿಕಸನದ ಕಡೆ ಗಮನ ವಹಿಸಿ. ಆರೋಗ್ಯ ಸ್ಥಿರವಾಗಿರುವುದು. ಶಿವ ಶತನಾಮಾವಳಿ ಹೇಳಿಕೊಳ್ಳಿ.

Latest Videos
Follow Us:
Download App:
  • android
  • ios