Asianet Suvarna News Asianet Suvarna News

Daily Horoscope: ಕುಂಭಕ್ಕೆ ಕೆಲಸ ಕಂಟಕ, ತುಲಾ ರಾಶಿಗೆ ಅಪಘಾತ ಭೀತಿ

13 ಮಾರ್ಚ್ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಿಂಹಕ್ಕಿದೆ ವಾಹನ ಯೋಗ, ನಿಮ್ಮ ರಾಶಿ ಫಲ ಏನಿದೆ?

Daily horoscope of March 13th 2022 in Kannada SKR
Author
Bangalore, First Published Mar 13, 2022, 5:04 AM IST | Last Updated Mar 13, 2022, 8:11 AM IST

ಮೇಷ(Aries): ಕುಟುಂಬದೊಡನೆ ದೂರ ಪ್ರಯಾಣ ಕೈಗೊಳ್ಳಲಿರುವಿರಿ. ಸಂತಸದ ದಿನವಾಗಿದೆ. ಖರ್ಚು ಹೆಚ್ಚಿರುತ್ತದೆ. ಆರೋಗ್ಯದ ಕಾಳಜಿ ಅಗತ್ಯ. ಹೆಚ್ಚು ಹೆಚ್ಚು ನೀರು ಕುಡಿಯಿರಿ. ನಿಮ್ಮ ಹೊಣೆಗಾರಿಕೆ ಹೆಚ್ಚುವುದು. ಯಾರೊಂದಿಗೂ ವಾಗ್ವಾದಕ್ಕಿಳಿಯಬೇಡಿ. ಇರುವೆಗಳಿಗೆ ಸಿಹಿ ತಿನ್ನಿಸಿ. 

ವೃಷಭ(Taurus): ನೀವು ಕೂಡಿಟ್ಟ ಹಣವೆಲ್ಲ ಕರಗುತ್ತಿರುವುದರ ಬಗ್ಗೆ ಆತಂಕ ಹೆಚ್ಚಬಹುದು. ಆದರೆ, ಖರ್ಚುಗಳು ಅನಿವಾರ್ಯವಾಗಿವೆ. ಇದಕ್ಕಾಗಿ ನೀವು ಹೊಸ ಹೊಸ ಆದಾಯದ ಮೂಲಗಳನ್ನು ಹುಡುಕಿಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಆದಿತ್ಯ ಹೃದಯ ಪಠಣ ಮಾಡಿ. 

ಮಿಥುನ(Gemini): ಬಹಳ ಕಾಲದಿಂದ ಉದ್ಯೋಗವಿಲ್ಲದೆ ಚಿಂತಿಸುತ್ತಿರುವವರು ಕಣ್ಣೆದುರು ಇರುವ ಅವಕಾಶದ ಬಗ್ಗೆ ಗೊಂದಲ ಅನುಭವಿಸುವ ಬದಲು ಅದನ್ನು ಒಪ್ಪಿಕೊಳ್ಳುವುದರಿಂದ ಒಳಿತಾಗುವುದು. ಅವಿವಾಹಿತರು ಕೂಡಾ ಅತಿಯಾಗಿ ಆಯ್ಕೆಯಲ್ಲಿ ತೊಡಗುವುದಕ್ಕಿಂತ ಬರುತ್ತಿರುವ ಸಂಬಂಧಗಳಲ್ಲಿ ಒಂದನ್ನು ಆರಿಸಿಕೊಳ್ಳುವುದರಿಂದ ಒಳಿತೇ ಆಗುವುದು. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಕಟಕ(Cancer): ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕುದುರಿ ಮನೆಯಲ್ಲಿ ಸಂತಸ ಹೆಚ್ಚುವುದು. ತಪ್ಪಿ ಹೋದ ಅವಕಾಶಗಳು ಮತ್ತೆ ಬರಲಿವೆ. ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವವರಿಗೆ ಮನ್ನಣೆ ಸಿಗುವುದು. ಗುರುವಿನ ಸ್ಮರಣೆ ಮಾಡಿ. 

ಸಿಂಹ(Leo): ಮಧ್ಯಸ್ಥಿಕೆ ಕೆಲಸಗಳಲ್ಲಿ ಯಶ ಸಾಧಿಸುವಿರಿ. ಅವಿವಾಹಿತರಿಗೆ ನಿರಾಸೆ. ವಾಹನ ಯೋಗವಿದೆ. ಲೇವಾದೇವಿ ವ್ಯವಹಾರದಲ್ಲಿ ಲಾಭವಿರಲಿದೆ. ಮಕ್ಕಳ ಮಾನಸಿಕ ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಕೋಪದ ಮೇಲೆ ನಿಯಂತ್ರಣ ಅಗತ್ಯ. ಯಾರೊಂದಿಗೂ ವಿನಾ ಕಾರಣ ವಾದ ಮಾಡಬೇಡಿ. 

ವೈವಾಹಿಕ ಜೀವನದಲ್ಲಿ ಸಂತೋಷ ತುಂಬಲು Chanakya Neeti ಅನುಸರಿಸಿ

ಕನ್ಯಾ(Virgo): ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ಇರಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿದ್ದಿಸಲಿದೆ. ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡು ಕಂಗೆಡಿಸಬಹುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಸಮಾಧಾನ ಹೆಚ್ಚಲಿದೆ. ಗುರುಹಿರಿಯರ ಆಶೀರ್ವಾದ ಪಡೆಯಿರಿ. 

ತುಲಾ(Libra): ಪ್ರೇಮ ವ್ಯವಹಾರಗಳಲ್ಲಿ ಜಗಳ ಹೆಚ್ಚಿ ತಲೆನೋವಾಗುವುದು. ಖರ್ಚುಗಳು ಹೊರೆ ಎನಿಸುವುವು. ಅಪಘಾತ ಸಾಧ್ಯತೆ ಇದ್ದು, ವಾಹನಗಳಲ್ಲಿ ತೆರಳುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಪ್ರತಿಭೆಗಳಿಗೆ ವೇದಿಕೆ ದೊರೆಯಲಿದೆ. ದೇಹಾಯಾಸ ಕಾಡಬಹುದು. ವಿಷ್ಣು ಸಹಸ್ರನಾಮ ಪಠಿಸಿ. 

ವೃಶ್ಚಿಕ(Scorpio): ನೀವು ಕೆಲ ವ್ಯವಹಾರ ಅಥವಾ ಒಪ್ಪಂದ ಮಾಡುತ್ತಿದ್ದರೆ, ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಸ್ನೇಹಿತರ ಭೇಟಿ, ಅವರೊಂದಿಗೆ ಸುಸಮಯ ಕಳೆದರೂ ಮನಸ್ಸಿನ ಕ್ಲೇಶ ನೀಗುವುದಿಲ್ಲ. ಅನಗತ್ಯ ವಿಚಾರಗಳಿಂದ ದೂರವಿರುವುದು ಎಷ್ಟು ಮುಖ್ಯವೋ, ಅಗತ್ಯ ವಿಚಾರಗಳಿಗೆ ಹೆಚ್ಚಿನ ಸಮಯ ಕೊಡುವುದೂ ಅಷ್ಟೇ ಮುಖ್ಯ. ಮನೆ ದೇವರಿಗೆ ಪ್ರಾರ್ಥಿಸಿ. 

HoLi 2022: ನವವಿವಾಹಿತೆ ಕಾಮದಹನ ನೋಡ್ಲೇಬಾರ್ದು, ಅತ್ತೆ ಸೊಸೆ ಜೊತೆಯಾಗಿ ನೋಡಿದ್ರಂತೂ ಕಷ್ಟ ಕಷ್ಟ

ಧನುಸ್ಸು(Sagittarius): ಬಹಳ ಸಂತಸದಲ್ಲಿ ಕುಟುಂಬದೊಡನೆ ದಿನ ಕಳೆಯುವಿರಿ. ಖರ್ಚು ಹೆಚ್ಚಲಿವೆ. ಉಳಿತಾಯ ಯೋಜನೆಗಳ ಬಗ್ಗೆ ಯೋಜಿಸುವುದು ಅಗತ್ಯ. ಹೊಸ ಮನೆ ಗೃಹಪ್ರವೇಶ, ಹುಟ್ಟು ಹಬ್ಬ ಸೇರಿದಂತೆ ಯಾವುದೇ ಸಮಾರಂಭಗಳು ಮನೆಯಲ್ಲಿ ಜರುಗುವುವು. ಬಡವರಿಗೆ ಅನ್ನದಾನ ಮಾಡಿ. 

ಮಕರ(Capricorn): ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಯದೆ ದಿನಾಂತ್ಯದಲ್ಲಿ ಆತಂಕ ಪಡುತ್ತಾರೆ. ಪರೀಕ್ಷೆಗಳು ಸನ್ನಿಹಿತವಾಗುತ್ತಿವೆ ಎಂಬುದು ಗಮನದಲ್ಲಿರಲಿ. ಕಾಯುತ್ತಿದ್ದ ಶುಭ ಸುದ್ದಿ ಸಿಗದೆ ಕಸಿವಿಸಿಯಾಗುವುದು. ಕೊಟ್ಟ ಸಾಲ ಹಿಂದಿರುಗದೆ ಕಂಗಾಲಾಗುವಿರಿ. ಆದಿತ್ಯ ಹೃದಯ ಪಠಣ ಮಾಡಿ. 

ಕುಂಭ(Aquarius): ಉದ್ಯೋಗದ ವಿಚಾರದಲ್ಲಿ ಮಹತ್ತರ ತೀರ್ಮಾನ ತೆಗೆದುಕೊಳ್ಳಲು ಸಮಯ ಬಂದಿದೆ. ಮನಸ್ಸಿಲ್ಲದ ಮನಸ್ಸಿನಿಂದ ಒಂದು ನಿಲುವು ತಾಳಲೇಬೇಕಿದೆ. ಕೆಲಸ ಹೋಗಬಹುದು. ಸ್ವ ಉದ್ದಿಮೆ, ವ್ಯಾಪಾರದಲ್ಲಿ ಕೂಡಾ ಹಲವಾರು ಬದಲಾವಣೆಗಳನ್ನು ಎದುರು ನೋಡಲಿದ್ದೀರಿ. ಸೂರ್ಯ ದೇವರಲ್ಲಿ ಪ್ರಾರ್ಥಿಸಿ.

ಮೀನ(Pisces): ಮನೆಯವರಿಂದ ಒತ್ತಡಗಳು ಹೆಚ್ಚಲಿವೆ. ಮತ್ತಷ್ಟು ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಳ್ಳಬೇಕಿದೆ. ಹಿಂದೆ ತೆಗೆದುಕೊಂಡ ತಪ್ಪು ನಿರ್ಧಾರಗಳ ಬಗ್ಗೆ ಕೊರಗುವಿರಿ. ಆದರೆ, ಅದರಿಂದ ಪ್ರಯೋಜನವಿಲ್ಲ ಎಂಬುದು ನೆನಪಿರಲಿ. ಸೂರ್ಯನಿಗೆ ಅರ್ಘ್ಯ ನೀಡಿ.

Latest Videos
Follow Us:
Download App:
  • android
  • ios