7 ಜನವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಮಿಥುನ ರಾಶಿಗೆ ಹೂಡಿಕೆಯಿಂದ ಬೃಹತ್ ಲಾಭ, ಉಳಿದ ರಾಶಿಗಳ ಫಲ ಏನಿದೆ?

ಮೇಷ(Aries): ಕೊಟ್ಟ ಮಾತಿಗೆ ತಪ್ಪಿ ಕೆಟ್ಟ ಹೆಸರು ಪಡೆಯಬೇಕಾದೀತು. ಸಮರ್ಥನೆಗೆ ನಿಲ್ಲದೆ ಪ್ರಮಾದ ಒಪ್ಪಿಕೊಳ್ಳುವುದು ಸದ್ಗುಣ. ಉದ್ಯೋಗರಂಗದಲ್ಲಿ ನಿಮ್ಮ ಹೆಸರಿಗೆ ಮಸಿ ಬಳಿಯಲು ಕೆಲವರು ಪ್ರಯತ್ನಿಸಬಹುದು. ವಿದ್ಯಾರ್ಥಿಗಳು ಸ್ನೇಹದಲ್ಲಿ ಜಗಳವಾಡಿ ಮನಸ್ಸು ಕೆಡಿಸಿಕೊಳ್ಳಲಿದ್ದಾರೆ. ತಾಯಿ ಶಾರದಾಂಬೆ ಪ್ರಾರ್ಥನೆ ಮಾಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ(Taurus): ಕೆಲಸ, ಓದಿನಲ್ಲಿ ಏಕಾಗ್ರತೆ ನಿಲ್ಲದೆ ಕಷ್ಟವಾದೀತು. ಮನೆಯ ನವೀಕರಣ ಕಾರ್ಯಗಳು, ಸುಣ್ಣ ಬಣ್ಣ ಹೊಡೆಸುವುದು ಮುಂತಾದ ಕೆಲಸಗಳು ನಡೆಯಲಿವೆ. ಪ್ರಯಾಣ ಯೋಗವಿದೆ. ಧೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪಥ್ಯ ತಪ್ಪಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಮಿಥುನ(Gemini): ಕಚೇರಿಯಲ್ಲಿ ಮಾಡಿದ ಹೂಡಿಕೆ ಅಂದುಕೊಂಡಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ಲಾಭವಾಗಿ ಸಂತೋಷ ಹೆಚ್ಚುವುದು. ಇದರಿಂದ ಬದುಕಿನಲ್ಲಿ ಹೊಸ ಕನಸುಗಳ ಕಟ್ಟುವಿರಿ. ಮಕ್ಕಳ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಜಂಕ್ ಫುಡ್‌ನಿಂದ ದೂರವಿಡಿ. ಲಕ್ಷ್ಮೀ ದೇವಿಯ ಆರಾಧನೆ ಮಾಡಿ. 

ಕಟಕ(Cancer): ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಸ್ನೇಹಿತರ ಸಹಕಾರದಿಂದ ಸಾಲ ತೀರಿಸುವಿರಿ. ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಪಡೆಯುವ ಬಯಕೆಯಿಂದ ಕಲಿಕೆ. ರೈತರು, ಸಣ್ಣ ಪುಟ್ಟ ಮಾರಾಟಗಾರರಿಗೆ ಲಾಭ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

Aries Trait: ಮೇಷ ರಾಶಿಯ ಈ ಹೆಸರುಗಳ ಹುಡುಗರು ಸಖತ್ ಡಾಮಿನೇಟಿಂಗ್

ಸಿಂಹ(Leo): ಸರ್ಕಾರಿ ಕೆಲಸಗಳಲ್ಲಿರುವವರಿಗೆ ಸಿಹಿ ಸುದ್ದಿ. ವರ್ಗಾವಣೆ ಬಯಸುವವರಿಗೆ ಫಲ ಸಂಭಾವ್ಯತೆ. ಬಿಡುವಿಲ್ಲದ ದುಡಿಮೆಯಾದರೂ ಧನಲಾಭದಿಂದ ಸಂತೃಪ್ತಿ. ವೈದ್ಯ ವೃತ್ತಿಯಲ್ಲಿರುವವರು, ಎಂಜಿನಿಯರ್‌ಗಳಿಗೆ ಹಿರಿಯರಿಂದ ಪ್ರಶಂಸೆ. ಶಾರದಾ ದೇವಿಯ ಸ್ಮರಣೆ ಮಾಡಿ.

ಕನ್ಯಾ(Virgo): ಮತ್ತೊಬ್ಬರ ಏಳ್ಗೆ ಕಂಡು ಕರುಬುವುದನ್ನು ಬಿಡಿ. ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ. ಸ್ನೇಹಿತರ ಸಾಧನೆಗೆ ಶ್ಲಾಘನೆ ನೀಡಿ. ಉದ್ಯೋಗದಲ್ಲಿ ತಪ್ಪುಗಳಾಗುವ ಸಾಧ್ಯತೆ. ವಿನಾಕಾರಣ ಅಪವಾದ ಎದುರಿಸಬೇಕಾಗಬಹುದು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿ. 

Personality Traits and Zodiacs: ಈ 4 ರಾಶಿಯ ಪುರುಷರು ಸಂಬಂಧವನ್ನು ಕಂಟ್ರೋಲ್ ಮಾಡ ಬಯಸುತ್ತಾರೆ!

ತುಲಾ(Libra): ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಮನಸ್ಸಿಗೆ ಸಂತಸ. ಸ್ನೇಹಿತರು, ಪರಿಚಿತ ಹಿರಿಯರ ಭೇಟಿಯಿಂದ ಸಂತಸ. ಕೃಷಿಯಲ್ಲಿ ಲಾಭ, ಹಾಲು-ಹಣ್ಣು ವ್ಯಾಪಾರಿಗಳಿಗೆ ಲಾಭ, ಉದ್ಯೋಗದಲ್ಲಿ ಹಿರಿಯರಿಂದ ಶ್ಲಾಘನೆ, ಹೊಸ ವಸ್ತುಗಳ ಖರೀದಿ. ಬಡವರಿಗೆ ಹಣ ನೀಡಿ. 

ವೃಶ್ಚಿಕ(Scorpio): ಇಂದು ಬಹಳ ಸಮಾಧಾನದಿಂದ ದಿನ ಕಳೆಯುವುದು. ಬಹು ದಿನಗಳಿಂದ ಮುಂದೂಡಿಕೊಂಡು ಬಂದಿದ್ದ ಕೆಲಸಗಳು ಮುಗಿದು ನಿರಾಳವಾಗುವಿರಿ. ಹವ್ಯಾಸಕ್ಕಾಗಿ ಸಮಯ ಮಾಡಿಕೊಳ್ಳುವಿರಿ. ಸಹೋದರರ ಕಡೆಯಿಂದ ಸಹಾಯ. ಬಡವರಿಗೆ ವಸ್ತ್ರ ದಾನ ಮಾಡಿ.

ಧನುಸ್ಸು(Sagittarius): ಕೇಳಿದ್ದು, ನೋಡಿದ್ದು ಎಲ್ಲವೂ ಸುಳ್ಳಾಗಬಹುದೆಂಬ ಪರಿಜ್ಞಾನ ಇರಲಿ. ಯಾರನ್ನೂ ಪೂರ್ತಿ ನಂಬಬೇಡಿ. ಹಿಂದಿನಿಂದ ಮಾತನಾಡುವವರ ಬಗ್ಗೆ, ಹಲ್ಲು ಮಸೆಯುವವರ ಬಗ್ಗೆ ಎಚ್ಚರಿಕೆ ಅಗತ್ಯ. ಕಚೇರಿಯಲ್ಲಿ ಕೀರ್ತಿ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ. ಲಲಿತಾ ಸಹಸ್ರನಾಮ ಹೇಳಿ. 

Loan Tips: ಹೀಗೆ ಶಿವನ ಆರಾಧನೆ ಮಾಡಿದ್ರೆ ಸಾಲ ಮುಕ್ತರಾಗೋದು ಖಂಡಿತಾ..

ಮಕರ(Capricorn): ಮಾತಿನ ಬಲದಿಂದ ಎಲ್ಲರನ್ನು ಗೆಲ್ಲುವಿರಿ. ಮನರಂಜನೆಗಾಗಿ ಖರ್ಚು ಮಾಡುವಿರಿ. ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಪ್ರತಿಭೆಗೆ ತಕ್ಕ ಫಲ ಸಿಗಲಿದೆ. ಅನಿರೀಕ್ಷಿತ ಮೂಲಗಳಿಂದ ಧನ ಲಾಭವೂ ಇದೆ. ಕೋರ್ಟ್‌ಗಳಲ್ಲಿ ಮುನ್ನಡೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ಕುಂಭ(Aquarius): ಹೆತ್ತವರು ಹಾಗೂ ಸಂಗಾತಿಯ ಸಹಕಾರದಿಂದ ಕಷ್ಟದ ಕೆಲಸಗಳು ಸರಾಗವಾಗಿ ಸಾಗುವುವು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ. ಅವಿವಾಹಿತರಿಗೆ ಕ್ಲೇಶ ಉಂಟಾಗುವುದು. ಬೆನ್ನು ನೋವು, ಮಂಡಿ ನೋವಿನಂಥ ಸಮಸ್ಯೆಗಳು ನುಜ್ಜುಗುಜ್ಜಾಗಿಸುವುವು. ಪ್ರಾಣಿ ಪಕ್ಷಿಗಳ ಹಸಿವು ನೀಗಿಸಿ. 

ಮೀನ(Pisces): ಮನೆಯಲ್ಲಿ ಧಾರ್ಮಿಕ, ಕೌಟುಂಬಿಕ ಶುಭ ಕಾರ್ಯಗಳು ನಡೆಯುವುದರಿಂದ ಮನಸ್ಸು ಆಹ್ಲಾದಕರವಾಗಿರುವುದು. ಈ ಕಾರ್ಯಗಳ ವಿಷಯದಲ್ಲಿ ತಪ್ಪಾಗದಂತೆ ಎಚ್ಚರ ವಹಿಸಿ. ಮನೆಗೆ ಬಂದವರು ಮಾತಾಡಿದ್ದೆಲ್ಲ ನಿಜವಿರಬೇಕಿಲ್ಲ ಎಂಬ ಎಚ್ಚರ ಇರಲಿ. ಗೋ ಗ್ರಾಸ ನೀಡಿ.