Daily Horoscope: ಕಟಕಕ್ಕೆ ಹಿತಶತ್ರುಗಳ ಕಾಟ, ತುಲಾ ರಾಶಿಗೆ ಸಾಲ ತರುವ ಪರದಾಟ

5 ಜನವರಿ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಏನು ಮಾಡಿದರೆ ಉತ್ತಮ?
ಕನ್ಯಾ ರಾಶಿಗೆ ವಾಹನ ಸಂಬಂಧಿ ಪೇಚಾಟ, ಉಳಿದ ರಾಶಿಗಳ ಫಲವೇನಿದೆ?

Daily horoscope of January 5th 2022 in Kannada SKR

ಮೇಷ(Aries): ಆಸ್ತಿ ಪಾಸ್ತಿ ಖರೀದಿ ಕೆಲಸಗಳು ಮುಂದಿನ ಹಂತ ತಲುಪುವುವು. ಬಾಡಿಗೆ ಮನೆಯಲ್ಲಿರುವವರು ಬೇರೆ ಮನೆಗೆ ಹೋಗಬಹುದು. ಒಟ್ಟಿನಲ್ಲಿ ನಿಮಗೆ ಸಂಬಂಧಿಸಿದ ವಸ್ತುಗಳ ಸ್ಥಳಾಂತರ ನಡೆಯಲಿದೆ. ಎಷ್ಟೇ ನಂಬಿಕೆಯ ಜನರಾದರೂ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಕುಲದೇವತಾ ಸ್ಮರಣೆ ಮಾಡಿ. 

ವೃಷಭ(Taurus): ದುರ್ಜನರ ಸಹವಾಸದಿಂದ ಕೆಟ್ಟ ಕೆಲಸಕ್ಕೆ ಪ್ರೇರಣೆ ಸಿಗಬಹುದು. ವಿವೇಚನಾ ಶಕ್ತಿ ಕಳೆದುಕೊಳ್ಳಬೇಡಿ. ಅಪರಾಧೀ ಪ್ರವೃತ್ತಿಯ ಬಗ್ಗೆ ಎಚ್ಚರವಿರಲಿ. ಮತ್ತೊಬ್ಬರಿಗೆ ನೋವು ನೀಡಿ ನೋವು ಅನುಭವಿಸಬಹುದು. ಪ್ರೇಮ ವ್ಯವಹಾರಗಳಲ್ಲಿ ದುಃಖ, ಮನೆ ದೇವರನ್ನು ಸ್ಮರಿಸಿ. 

ಮಿಥುನ(Gemini): ಸಂಗಾತಿಯ ಎಡವಟ್ಟಿನಿಂದಾಗುವ ತಪ್ಪಿಗೆ ನೀವು ತಲೆ ಕೊಡಬೇಕಾಗಬಹುದು. ಜಗಳ ತಪ್ಪಿಸಿ ಮೌನ ವಹಿಸಿ. ತಾಳ್ಮೆಯಿಂದ ಎಲ್ಲ ಸರಿಯಾಗುವುದು. ಸಹೋದರರ ಸಹಕಾರದಿಂದ ಮನೆಯಲ್ಲಿ ಶುಭಕಾರ್ಯಕ್ಕೆ ನಾಂದಿ. ಗಣಪತಿಗೆ ಬೆಲ್ಲ ಕಡಲೆ ನೈವೇದ್ಯ ಮಾಡಿ. 

ಬರೀ negative thoughts ಬರುತ್ತಾ? ತಪ್ಪಿಸಿಕೊಳ್ಳೋದ್ ಹೀಗೆ..

ಕಟಕ(Cancer): ನಿಮ್ಮ ಬೆನ್ನಿಗೆ ಚೂರಿ ಹಾಕುವ ಕಾರ್ಯ ಆತ್ಮೀಯರಿಂದಲೇ ಆಗಬಹುದು. ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ. ಧನ ನಷ್ಟ ಹಾಗೂ ವ್ಯಯ ಹೆಚ್ಚು. ಹಣದ ಉಳಿತಾಯದ ಕಡೆ ಮನಸ್ಸು ಹರಿಸಿ. ಕೃಷ್ಣನನ್ನು ಆರಾಧಿಸಿ. 

ಸಿಂಹ(Leo): ಹೊಸ ಹೂಡಿಕೆಯಲ್ಲಿ ತೊಡಗಬೇಡಿ. ಮನೆಗೆ ಸಂಬಂಧಿಸಿದ ನವೀಕರಣ ಕಾರ್ಯಗಳನ್ನು ನಡೆಸುವಿರಿ. ಸ್ವಂತ ಉದ್ಯಮ ಬೆಳೆಸುವತ್ತ ಮನೋಧರ್ಮ ಹೆಚ್ಚಬಹುದು. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಮನೆಯಲ್ಲಿ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಲಿದೆ. ಗಣಪತಿ ಪ್ರಾರ್ಥನೆ ಮಾಡಿ. 

ಕನ್ಯಾ(Virgo): ವಾಹನ ದುರಸ್ತಿಗೆ ಬಂದು ಕಿರಿಕಿರಿ ಉಂಟಾಗಬಹುದು. ಅದಲ್ಲದೆಯೂ ವಾಹನ ಸಂಬಂಧಿ ಇತರೆ ಸಮಸ್ಯೆಗಳು ಎದುರಾಗಬಹುದು. ಉದ್ಯೋಗರಂಗದಲ್ಲಿ ಹಿರಿಯರಿಂದ ಬೈಸಿಕೊಳ್ಳಬಹುದು. ಇಲ್ಲವೇ ಸಹೋದ್ಯೋಗಿಗಳ ಗಾಸಿಪ್‌ಗೆ ಆಹಾರವಾಗುವಿರಿ. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ.

Zodiacs and Relationship: ರಾಶಿ ಪ್ರಕಾರ, ವಿವಾಹ ಜೀವನ ಸಿಹಿಯಾಗಿರಲು ನೀವೇನು ಮಾಡ್ಬೇಕು..?

ತುಲಾ(Libra): ಪಡೆದ ಸಾಲಗಳು ಕಂಗೆಡಿಸಬಹುದು. ಆರೋಗ್ಯದಲ್ಲಿ ಕೊಂಚ ಏರುಪೇರು. ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. ವ್ಯಾಪಾರದಲ್ಲಿ ನಷ್ಟ. ಹಿಂದೆ ಆಡಿದ ತಪ್ಪು ಮಾತುಗಳು ಈಗ ತಿರುಗುಬಾಣವಾಗಿ ಕಾಡಬಹುದು. ನವಗ್ರಹ ಆರಾಧನೆ ಮಾಡಿಸಿ. 

ವೃಶ್ಚಿಕ(Scorpio): ಕೆಲಸದ ಮೇಲಿನ ನಿಮ್ಮ ಶ್ರದ್ಧೆ ಹೆಚ್ಚಲಿದೆ. ಸ್ನೇಹಿತರ ಸಹಕಾರದಿಂದ ಕನಸುಗಳು ಈಡೇರುವುವು. ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಸಿಗಲಿದೆ. ಆಹಾರದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಿ. ದುರಾಸೆಯಿಂದ ಕಳಚಿಕೊಂಡರೆ ಸಕಾರಾತ್ಮಕ ಫಲಿತಾಂಶ ಕಾಣುವಿರಿ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ಮನೆ ಹಿರಿಯರಿಂದ ಕಿರಿಕಿರಿ ಹೆಚ್ಚಿ ಬೇಸತ್ತು ಹೋಗುವಿರಿ. ಪತಿಯ ಸಹಕಾರ ನೆಮ್ಮದಿ ತರಲಿದೆ. ಮಕ್ಕಳ ಮಾನಸಿಕ ಆರೋಗ್ಯದ ವಿಷಯಕ್ಕಾಗಿ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಧನ್ವಂತರಿ ಪ್ರಾರ್ಥನೆ ಮಾಡಿ. 

ಮಕರ(Capricorn): ಉದ್ಯೋಗಿಗಳಿಗೆ ಬಲ, ಕೆಲಸಗಳು ಸುಲಲಿತವಾಗಿ ಸಾಗುತ್ತವೆ. ಕೋರ್ಟು ಕಚೇರಿ ಕೆಲಸಗಳು ಸುಗಮವಾಗಿ ಸಾಗುತ್ತವೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಬಹುದು. ತಂದೆತಾಯಿಗೆ ಎದುರು ಮಾತನಾಡಿ ಅವರ ಮನಸ್ಸಿಗೆ ನೋವುಂಟು ಮಾಡಬೇಡಿ. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ.

Career Prediction 2022: ಹೊಸ ವರ್ಷದಲ್ಲಿ ಯಾವ ರಾಶಿಗೆ ಉದ್ಯೋಗದಲ್ಲಿ ಏಳ್ಗೆ?

ಕುಂಭ(Aquarius): ದೂರ ಪ್ರವಾಸ ಯೋಗವಿದೆ. ಬಹಳ ದಿನದಿಂದ ತಲೆಯಲ್ಲಿ ಕೊರೆಯುತ್ತಿರುವ ವಿಚಾರಕ್ಕೆ ಆತಂಕ ಬೇಡ, ಎಲ್ಲವೂ ಒಳಿತೇ ಆಗಿ ಸಮಾಧಾನ ಇರಲಿದೆ. ಸಂತಾನ ಆಪೇಕ್ಷಿಸುತ್ತಿರುವ ದಂಪತಿಗೆ ಫಲ ಸಿದ್ಧಿ, ತಂದೆ- ಮಕ್ಕಳಲ್ಲಿ ಸಾಮರಸ್ಯವಿರಲಿದೆ. ಹರಕೆಗಳನ್ನು ತೀರಿಸುವತ್ತ ಗಮನ ಹರಿಸಿ. 

ಮೀನ(Pisces): ಮಕ್ಕಳು, ಮೊಮ್ಮಕ್ಕಳ ವಿಚಾರದಲ್ಲಿ ಚಿಂತೆಗಳು ಹೆಚ್ಚಲಿವೆ. ನಿಮ್ಮ ತ್ಯಾಗದಿಂದ ಆಪ್ತರ ಬದುಕು ಸರಿ ಹೋಗಬಹುದು. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಿ. ಹೊಸ ಹೂಡಿಕೆಯಿಂದ ಫಲವಿದೆ. ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ಮಾತು ನಯವಾಗಿರಲಿ. ಗಣೇಶನಿಗೆ ದರ್ಬೆ ಅರ್ಪಿಸಿ. 

Latest Videos
Follow Us:
Download App:
  • android
  • ios