Daily Horoscope: ಮಿಥುನ ರಾಶಿಗೆ ಸಂಬಂಧಗಳ ನಡುವಿನ ಬಿರುಕು ಶಮನ, ಮೀನಕ್ಕೆ ಬುದ್ಧಿಬಲ

2 ಜನವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಕ್ಕಳ ತಪ್ಪುಗಳಿಗೆ ತಲೆ ಕೊಡಬೇಕಾದ ಸ್ಥಿತಿ ಕಟಕ ರಾಶಿಯವರದ್ದು..

Daily horoscope of January 2nd 2022 in Kannada SKR

ಮೇಷ(Aries): ನಿಮ್ಮ ಹುರುಪನ್ನು ನೀರಸಗೊಳಿಸುವಂಥ ಘಟನೆಗಳು ನಡೆಯಬಹುದು. ಭೇಟಿಯಾಗುತ್ತೇನೆಂದವರು ಕೈ ಕೊಡಬಹುದು. ಹತ್ತಿರದವರ ಗುಟ್ಟೊಂದು ತಿಳಿದು ಬಂದು ನಿಮ್ಮನ್ನು ವಿಚಲಿತಗೊಳಿಸಬಹುದು. ಯಾವುದಕ್ಕೂ ಕೂಡಲೇ ಪ್ರತಿಕ್ರಿಯೆ ನೀಡಬೇಡಿ. ಆದಿತ್ಯ ಹೃದಯ ಪಠಣ ಮಾಡಿ. 

ವೃಷಭ(Taurus): ಸಣ್ಣಪುಟ್ಟ ತಿರುಗಾಟದಿಂದ ಸಂತಸ. ಮನರಂಜನೆ ವಿಷಯಗಳಿಗಾಗಿ ಹೆಚ್ಚಿನ ಧನ ವ್ಯಯ ಮಾಡಬಹುದು. ಅದಾಗ್ಯೂ ಹೆಚ್ಚುವ ಆರೋಗ್ಯ ಸಮಸ್ಯೆಗಳು ಕಿರಿಕಿರಿ ಮಾಡಬಹುದು. ವ್ಯಾಪಾರಸ್ಥರಿಗೆ ಉತ್ತಮ ಲಾಭವಿದೆ. ಸೂರ್ಯನಿಗೆ ಅರ್ಘ್ಯ ನೀಡಿ. 

ಮಿಥುನ(Gemini): ಬಿರುಕು ಬಿಟ್ಟಿದ್ದ ಸಂಬಂಧವೊಂದು ಅನಿರೀಕ್ಷಿತವಾಗಿ ಮತ್ತೆ ಸರಿಯಾಗುವ ಸಾಧ್ಯತೆಗಳಿವೆ. ವಾಗ್ಬಲ ಚೆನ್ನಾಗಿದ್ದು, ಹೆಚ್ಚು ಜನಮನ್ನಣೆ ಗಳಿಸುವಿರಿ. ಆರೋಗ್ಯ ಬಲ ಚೆನ್ನಾಗಿರಲಿದೆ. ನಿರುದ್ಯೋಗಿಗಳಿಗೆ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಕುಲ ದೇವರಿಗೆ ನಮಸ್ಕರಿಸಿ.

ಕಟಕ(Cancer): ಮಕ್ಕಳ ತಪ್ಪುಗಳಿಗೆ ನೀವೇ ಕಾರಣವಾಗಿ ಮನ ನೋಯುವ, ಬೈಸಿಕೊಳ್ಳುವ ಪ್ರಮೇಯ ಬರಬಹುದು. ಮಕ್ಕಳ ಕಡೆ ತಾಳ್ಮೆಯಿಂದ ವರ್ತಿಸಿ. ಪ್ರೇಮಿಗಳಿಗೆ ದುಃಖದಾಯಕ ವಿಷಯ ಕೇಳ ಸಿಗಬಹುದು. ಆಸ್ತಿ ವಿಚಾರಗಳು ಮುಂದೆ ಹೋಗದೆ ಮನಸ್ಸು ಹಾಳಾಗಲಿದೆ. ಬಡವರಿಗೆ ಅನ್ನ ದಾನ ಮಾಡಿ. 

ಸಿಂಹ(Leo): ಅವಿವಾಹಿತರು ಸೂಕ್ತ ಸಂಬಂಧವನ್ನು ಭೇಟಿಯಾಗಲಿರುವರು. ವ್ಯಾಪಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಹೊಸ ಯೋಚನೆಗಳು ಫಲ ಕೊಡಲಿವೆ. ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ವಿದೇಶದಲ್ಲಿ ಅವಕಾಶಗಳು ಸಿಗಬಹುದು. ಹಸುವಿಗೆ ಹಸಿರು ಸೊಪ್ಪುಗಳನ್ನು ನೀಡಿ. 

ಕನ್ಯಾ(Virgo): ಆರೋಗ್ಯದ ಸಮಸ್ಯೆಗಳು ಕಂಗಾಲಾಗಿಸುವುವು. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ವೈದ್ಯರನ್ನು ಎಡ ತಾಕಬೇಕಾದ ಪ್ರಮೇಯಗಳು ಎದುರಾಗಬಹುದು. ಮನೆ ಸದಸ್ಯರ ಕಷ್ಟಕಾರ್ಪಣ್ಯಗಳು ಹೈರಾಣಾಗಿಸಲಿವೆ. ಯೋಗ, ಪ್ರಾಣಾಯಾಮ ರೂಢಿ ಮಾಡಿಕೊಳ್ಳಿ. ಮನೆ ದೇವರಲ್ಲಿ ಪ್ರಾರ್ಥಿಸಿ. 

Astrology And Relationship: ಸಂಗಾತಿ ಜೊತೆ ಸರಸ ಹೆಚ್ಚಲು ಸರಳ ಟಿಪ್ಸ್

ತುಲಾ(Libra): ಆಸ್ತಿ ಖರೀದಿ ವಿಚಾರ ಹಿಂದೆ ಕಾಲಿಡಬಹುದು. ಮಕ್ಕಳು ಹಾಗೂ ಮನೆಯವರ ಆರೋಗ್ಯಕ್ಕಾಗಿ ಬಹಳಷ್ಟು ಖರ್ಚುವೆಚ್ಚಗಳು ಹೆಚ್ಚಲಿವೆ. ದೂರ ಪ್ರಯಾಣದಲ್ಲಿ ಅಡ್ಡಿ ಆತಂಕಗಳು ಎದುರಾಗಲಿವೆ. ದಂಪತಿಗೆ ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ ಸಿಗಬಹುದು. ಬಡವರಿಗೆ ವಸ್ತ್ರ ದಾನ ಮಾಡಿ. 

ವೃಶ್ಚಿಕ(Scorpio): ಒಳಗೊಳಗೇ ಕೊರಗಿದರೆ ಪ್ರಯೋಜನವಿಲ್ಲ. ನಿಮ್ಮ ಮನಸ್ಸು ಯಾರಿಗೂ ಅರ್ಥವಾಗುವುದಿಲ್ಲ. ಬಾಯಿ ಬಿಟ್ಟು ಸಮಸ್ಯೆಗಳನ್ನು ಹೇಳಿಕೊಂಡಾಗಷ್ಟೇ ಪರಿಹಾರಗಳು ಗೋಚರವಾಗುವುವು. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಲಲಿತಾ ಸಹಸ್ರನಾಮ ಪಠಣ ಮಾಡಿ.

2022 Numerology Predictions: ನಿಮ್ಮ ಸಂಖ್ಯೆ ಆಧಾರದ ಮೇಲೆ ಭವಿಷ್ಯ ಹೇಗಿರಲಿದೆ?

ಧನುಸ್ಸು(Sagittarius): ಎಡೆಬಿಡದ ದುಡಿಮೆ ಆಯಾಸವೆನಿಸಲಿದೆ. ಆದರೂ ಉತ್ತಮ ಉದ್ದೇಶಕ್ಕಾಗಿ ತಯಾರಾಗುವ ಹುರುಪು ಹೆಚ್ಚಲಿದೆ. ಜ್ಞಾನಾರ್ಜನೆ ಇರಲಿದೆ. ಮಕ್ಕಳ ಸಂಬಂಧಿ ಸಮಸ್ಯೆಗಳು ತಾತ್ಕಾಲಿಕ ಶಮನ ಕಂಡು ಸಮಾಧಾನವಾಗುವುದು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಮಕರ(Capricorn): ವಿದ್ಯಾರ್ಥಿಗಳ ಶಿಕ್ಷಣ ವಿಷಯ ತಲೆ ಕೆಡಿಸಲಿದೆ. ಮನೆಯ ಸೌಕರ್ಯಗಳಿಗಾಗಿ ಖರ್ಚು ವೆಚ್ಚಗಳು ಏರಬಹುದು. ಹೊಸ ವರ್ಷಕ್ಕಾಗಿ ಮಾಡಿಕೊಂಡ ರೆಸಲ್ಯೂಶನ್‌ಗಳನ್ನು ಕೈ ಬಿಡಬೇಡಿ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡದಿದ್ದರೆ ಉತ್ತಮ. ಗಣಪತಿಗೆ ದರ್ಬೆ ಅರ್ಪಿಸಿ. 

ಕುಂಭ(Aquarius): ಸಾಕು ಪ್ರಾಣಿಗಳ ವಿಚಾರದಲ್ಲಿ ನೋವಿನ ಸುದ್ದಿ ಕೇಳಲಿದ್ದೀರಿ. ನವ ವಿವಾಹಿತರು ಸಂತೋಷವಾಗಿ ದಿನ ಕಳೆಯಲಿದ್ದೀರಿ. ಸಂಗಾತಿಯ ಕಡೆಯಿಂದ ಧನ ಲಾಭ ಇರಬಹುದು. ಹೊಸ ವ್ಯಕ್ತಿಗಳ ಪರಿಚಯದಿಂದ ಸಹಾಯಗಳು ಒದಗಲಿವೆ. ಆದಿತ್ಯ ಹೃದಯ ಪಠಣ ಮಾಡಿ. 

ಮೀನ(Pisces): ನಿಮ್ಮ ಒಳ್ಳೆಯ ಮಾತುಗಳಿಂದ ಇತರರ ನಡುವಿನ ಬಿಕ್ಕಟ್ಟು ಶಮನ ಕಾಣಲಿದೆ. ಮತ್ತೊಬ್ಬರ ಮನಸ್ಸಿನ ನೋವನ್ನು ಅರಿತು ಪರಿಹಾರ ನೀಡಲಿರುವಿರಿ. ವ್ಯಾಪಾರಿಗಳಿಗೆ ದೊಡ್ಡ ಲಾಭಗಳು ಸಿಕ್ಕಿ ಸಂತೋಷ ಹೆಚ್ಚಲಿದೆ. ಬುದ್ಧಿ ಬಲ ಚೆನ್ನಾಗಿದ್ದು ಸದ್ಬಳಕೆಯಿಂದ ಸುಖ ಹೆಚ್ಚುವುದು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

Latest Videos
Follow Us:
Download App:
  • android
  • ios