Daily Horoscope: ಕುಟುಂಬ ಕಲಹಕ್ಕೆ ತುಲಾ ತತ್ತರ, ಸಿಂಹಕ್ಕೆ ಆಸ್ತಿ ಖರೀದಿ ಸಂತಸ
22 ಜನವರಿ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನ ರಾಶಿಯ ಪ್ರತಿಭಾನ್ವಿತರಿಗೆ ಸೂಕ್ತ ವೇದಿಕೆ
ಮೇಷ(Aries): ಎಲ್ಲದಕ್ಕೂ ಕಾಲ ಬರಲಿ ಎಂದು ಕೂತರೆ ಪ್ರಯೋಜನವಿಲ್ಲ. ಪ್ರಯತ್ನಗಳು ನಡೆಯುತ್ತಲೇ ಇರಬೇಕು. ನೀವು ಕಾಯುತ್ತಿರುವ ವಿಷಯಕ್ಕಾಗಿ ಶ್ರಮ ಹಾಕಿ. ವಾಹನ ಯೋಗವಿದೆ. ಯಾರಿಗೂ ಸಾಲ ಕೊಡಬೇಡಿ. ಬೇರೆ ಯಾವ ರೀತಿಯ ನೆರವು ನಿಮ್ಮಿಂದ ನೀಡಬಹುದೋ ಗಮನ ಹರಿಸಿ. ಶಿವ ಸ್ಮರಣೆ ಮಾಡಿ.
ವೃಷಭ(Taurus): ಉದಾಸೀನದಲ್ಲಿ ದಿನ ಕಳೆಯುವಿರಿ. ಆಗಬೇಕಾದ ಕೆಲಸಗಳೆಲ್ಲ ಅಲ್ಲಿಯೇ ನಿಲ್ಲುವುವು. ಮಕ್ಕಳ ಕಲಿಕೆ ವಿಷಯದಲ್ಲಿ ಆತಂಕ ಹೆಚ್ಚಬಹುದು. ಬೃಹತ್ ಕೈಗಾರಿಕೆ, ರಿಯಲ್ ಎಸ್ಟೇಟ್ ಮುಂತಾದ ಉದ್ಯಮದಲ್ಲಿರುವವರು ನಷ್ಟದಿಂದ ಕಂಗಾಲಾಗಬಹುದು. ನವಗ್ರಹಕ್ಕೆ ಸುತ್ತು ಬನ್ನಿ.
ಮಿಥುನ(Gemini): ಕೆಲಸದಲ್ಲಿ ಶಿಸ್ತು, ಸಂಯಮದಿಂದ ಪ್ರಬುದ್ಧತೆ ಮೆರೆಯಲಿರುವಿರಿ. ಆರೋಗ್ಯ ನಿಮಗೆ ಸಾಥ್ ಕೊಡಲಿದೆ. ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯುವುದು. ಪ್ರೇಮ ವಿಚಾರದಲ್ಲಿ ಬಿರುಕು ಮೂಡಲಿದೆ. ಗೆಳೆಯರ ಭೇಟಿ ಸಾಧ್ಯತೆ. ಶಿವ ಸ್ಮರಣೆ ಮಾಡಿ.
ಕಟಕ(Cancer): ದೈವ ಪ್ರೇರಣೆ ದೊರೆತು ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ನಿಮ್ಮೆಲ್ಲ ಯೋಜನೆ, ಗುರಿಗಳನ್ನು ಸಂಗಾತಿಯ ಜೊತೆ ಹಂಚಿಕೊಂಡು ಅವರನ್ನೂ ಆ ವಿಷಯದಲ್ಲಿ ತೊಡಗಿಸುವಂತೆ ಮಾಡಿ. ಇದರಿಂದ ಗುರಿ ಸಾಧನೆ ಸುಲಭವಾಗುವುದು. ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಿ.
ಸಿಂಹ(Leo): ಮನೆಗೆ ನೆಂಟರಿಷ್ಟರ ಆಗಮನದಿಂದ ಸಂತಸದ ವಾತಾವರಣ ನಿರ್ಮಾಣವಾಗುವುದು. ನಿಮಗೆ ಬಾಕಿ ಬರಲಿರುವ ಹಣ ವಾಪಸ್ ಬರಲಿದೆ. ಆಸ್ತಿ ಖರೀದಿ ಸಂಬಂಧ ಕೆಲಸಗಳು ಮುಂದುವರಿಯಲಿವೆ. ಆರೋಗ್ಯ ಚೆನ್ನಾಗಿರಲಿದೆ. ಕುಲ ದೇವರ ಸ್ಮರಣೆ ಮಾಡಿ.
ಕನ್ಯಾ(Virgo): ನೀವು ಮಾಡಿದ ಕೆಲಸಕ್ಕೆ ವಿಮರ್ಶೆಗಳು, ಟೀಕೆಗಳು ಎದುರಾಗಬಹುದು. ಅವನ್ನು ಸಕಾರಾತ್ಮಕವಾಗಿ ಪರಿಗಣಿಸಿ. ಕೆಲಸದ ಮರು ಪರಿಶೀಲನೆ ನಡೆಸಿ. ಗೃಹೋಪಯೋಗಿ ವಸ್ತುಗಳಿಗಾಗಿ ಧನ ವ್ಯಯ. ಕುಟುಂಬದ ಮನಸ್ತಾಪಗಳು ಮನಸ್ಸಿನ ನೆಮ್ಮದಿ ಕೆಡಿಸಲಿವೆ. ಶನಿ ಸ್ಮರಣೆ ಮಾಡಿ.
ತುಲಾ(Libra): ವೃಥಾ ಕೋಪ, ಅಸಮಾಧಾನಗಳು ಹೆಚ್ಚಲಿವೆ. ಮನೆಯೊಳಗಿನ ಮೌನ ಮುನಿಸು ಮನಸ್ಸನ್ನು ಕಂಗೆಡಿಸಬಹುದು. ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವಕಾಶಗಳು ಸಿಗಲಿವೆ. ಸ್ನೇಹಿತರ ಸಹಕಾರ ಇರಲಿದೆ. ಶಿವ ಶತ ನಾಮಾವಳಿ ಹೇಳಿಕೊಳ್ಳಿ.
Empathetic Zodiacs: ಈ ನಾಲ್ಕು ರಾಶಿಯ ಸ್ನೇಹಿತರಿದ್ದರೆ ನೀವೇ ಅದೃಷ್ಟವಂತರು!
ವೃಶ್ಚಿಕ(Scorpio): ಸಂಬಂಧಿಕರ ಕಡೆಯಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನ ವಹಿಸುವ ಅಗತ್ಯ ಇದೆ. ಕನಸುಗಳನ್ನು ನನಸು ಮಾಡಲು ಪ್ರಯತ್ನ ಹೆಚ್ಚಿಸಿ. ಮನೆ ದೇವರನ್ನು ಸ್ಮರಣೆ ಮಾಡಿ.
ಧನುಸ್ಸು(Sagittarius): ಬಾಕಿ ಇರುವ ಹಲವು ಕೆಲಸಗಳು ಮುಗಿದು ಮನಸ್ಸು ನಿರಾಳವಾಗುವುದು. ಹರಕೆಗಳನ್ನು ಹೇಳಿಕೊಂಡಿದ್ದರೆ ಈಡೇರಿಸಿ. ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ದೊರೆತು ಸಂತಸವಾಗುವುದು. ನವಗ್ರಹ ಪ್ರಾರ್ಥನೆ ಮಾಡಿ.
ಮಕರ(Capricorn): ಶುಭ ಕಾರ್ಯಗಳಲ್ಲಿ ಭಾಗವಹಿಸಿ ಮನಸ್ಸಿಗೆ ಹಿತವಾಗುವುದು. ಆತ್ಮೀಯರ ಭೇಟಿ, ಆಹಾರ ಸಮೃದ್ಧಿ ಇರಲಿದೆ. ಮಕ್ಕಳ ಪ್ರಗತಿಗಾಗಿ ಹೆಚ್ಚನ ಧನ ವ್ಯಯ ಆಗುವುದು. ಸಾಕು ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರಾಗಬಹುದು. ಶಿವನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ.
Toe Ring : ಪತಿಯ ಅನಾರೋಗ್ಯಕ್ಕೆ ನಿಮ್ಮ ಕಾಲುಂಗುರ ಕಾರಣವಾಗಿರಬಹುದು!
ಕುಂಭ(Aquarius): ಅಂದುಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗಬಹುದು. ದೇಹಾಲಸ್ಯ ಇರಲಿದೆ. ಬಹಳ ಕಾಲದಿಂದ ಕಾಡುವ ಚಿಂತೆಗಳು ಮನಸ್ಸನ್ನು ಮತ್ತಷ್ಟು ಕದಡಬಹುದು. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಶಿವಶಕ್ತಿಯರ ಸ್ಮರಣೆ ಮಾಡಿ.
ಮೀನ(Pisces): ಲವಲವಿಕೆ, ಚೈತನ್ಯದಿಂದ ದಿನ ತುಂಬಿರಲಿದೆ. ನೆಂಟರಿಷ್ಟರ ಭೇಟಿಯಿಂದ ಉಲ್ಲಾಸ. ಹೊಸ ಕಲಿಕೆಯಲ್ಲಿ ತೊಡಗುವುದರಿಂದ ತೃಪ್ತಿ ಇರಲಿದೆ. ಕಳೆದು ಹೋದದ್ದರ ಬಗ್ಗೆ ಯೋಚಿಸಬೇಡಿ. ಭವಿಷ್ಯದ ಕುರಿತ ಯೋಜನೆಗಳಲ್ಲಿ ತೊಡಗಿಸಿಕೊಳ್ಳಿ. ಬಡವರಿಗೆ ಕಪ್ಪು ವಸ್ತ್ರ, ಧಾನ್ಯ ದಾನ ಮಾಡಿ.