Asianet Suvarna News Asianet Suvarna News

Daily Horoscope: ಈ ರಾಶಿಗಿಂದು ಬಂಪರ್, ಬದಲಾಗಲಿದೆ ಅದೃಷ್ಟ

1 ಜನವರಿ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭಕ್ಕೆ ಆಸ್ತಿ ಲಾಭ, ಕುಂಭಕ್ಕೆ ವಂಚನೆಗೊಳಗಾಗುವ ಸಾಧ್ಯತೆ

Daily horoscope of January 1st 2022 in Kannada SKR
Author
Bangalore, First Published Jan 1, 2022, 5:00 AM IST
  • Facebook
  • Twitter
  • Whatsapp

ಮೇಷ(Aries): ಕೋಪದ ಮೇಲೆ ನಿಯಂತ್ರಣ ಅಗತ್ಯ. ಯಾರೊಂದಿಗೂ ವಿನಾ ಕಾರಣ ವಾದ ಮಾಡಬೇಡಿ. ವಾಹನಗಳ ಚಾಲನೆಯಲ್ಲಿ ಎಚ್ಚರ ಅಗತ್ಯ. ಪ್ರವಾಸ, ಮೋಜು ಮಸ್ತಿನಿಂದ ಉತ್ಸಾಹ. ಭೂ ಖರೀದಿ ವಿಚಾರ ಮುಂದಕ್ಕೆ ಹಾಕಬೇಕಾದೀತು. ನವಗ್ರಹ ಪ್ರಾರ್ಥನೆ ಮಾಡಿ. 

ವೃಷಭ(Taurus): ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿದ್ದಲ್ಲಿ ಆ ಸಂಬಂಧ ಶುಭ ಸಮಾಚಾರ ಕೇಳಲಿದ್ದೀರಿ. ಬೇರೆ ಬೇರೆ ಮೂಲಗಳಿಂದ ಧನಲಾಭ. ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲ. ಪತ್ನಿಯ ಸಹಕಾರದಿಂದ ಕಾರ್ಯಗಳು ಈಡೇರುವುವು. ಅಶ್ವತ್ಥ ಮರಕ್ಕೆ ದೀಪ ಹಚ್ಚಿ ಸುತ್ತು ಬನ್ನಿ. 

ಮಿಥುನ(Gemini): ನಿಮ್ಮ ಶ್ರಮ, ಪ್ರಾಮಾಣಿಕತೆಗೆ ತಕ್ಕ ಫಲ ಪ್ರಾಪ್ತಿಯಾಗುವುದು. ವೈಯಕ್ತಿಕ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಯತ್ನಿಸಿ. ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ಯಶಸ್ಸು. ಆಂಜನೇಯನಿಗೆ ಕೆಂಪು ಹೂಗಳನ್ನು ಏರಿಸಿ. 

ಕಟಕ(Cancer): ನಿಮ್ಮ ಅಭಿವೃದ್ಧಿ ಸಹಿಸಲಾಗದವರು ನಿಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳುವರು. ತಲೆ ಕೆಡಿಸಿಕೊಳ್ಳದೆ ನಿಮ್ಮ ಪಾಡಿಗೆ ಶ್ರದ್ಧೆಯಿಂದ ಕೆಲಸ ಮುಂದುವರಿಸಿಕೊಂಡು ಹೋಗಿ. ರಾಜಕೀಯದಲ್ಲಿರುವವರಿಗೆ ಉತ್ತಮ ಸ್ಥಾನಮಾನ ದೊರೆಯುವುದು. ಶಿವ ಶತನಾಮಾವಳಿ ಪಠಣ ಮಾಡಿ. 

Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ

ಸಿಂಹ(Leo): ಹೊಸ ವರ್ಷವೆಂದಲ್ಲ, ಈ ದಿನವೇ ಹಾಗಿದೆ. ನಿಮ್ಮ ರಾಶಿಗೆ ಅದೃಷ್ಟದ ದಿನವಾಗಿದೆ. ಯಾವುದೇ ಹೊಸ ಕೆಲಸಗಳನ್ನು, ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದಿದ್ದರೆ ಇಂದೇ ಆರಂಭಿಸಿ. ವ್ಯಾಪಾರಿಗಳಿಗೆ, ರೈತರಿಗೆ ಭಾರೀ ಲಾಭ. ಮನೆ ದೇವರ ಸ್ಮರಣೆ ಮಾಡಿ. 

ಕನ್ಯಾ(Virgo): ಅಧಿಕ ಲಾಭದ ಆಸೆಗೆ ಬಿದ್ದು ಧನ ನಷ್ಟವಾಗುವ ಸಾಧ್ಯತೆ. ಹಣ ಮಾಡುವುದೊಂದೇ ಅಲ್ಲ, ಬದುಕನ್ನು ಅನುಭವಿಸುವುದನ್ನೂ ಕಲಿಯಬೇಕಿದೆ. ಅದಕ್ಕಾಗಿ ಕೊಂಚ ಸಮಯ ಮೀಸಲಿಡಿ. ಕುಟುಂಬದವರಿಗೂ ಸಮಯ ಕೊಡಿ. ಸಂಬಂಧಗಳು, ಅನುಭವಗಳೇ ಬದುಕಿನ ನಿಜವಾದ ಗಳಿಕೆ. ಶನಿ ಪ್ರಾರ್ಥನೆ ಮಾಡಿ. 

ತುಲಾ(Libra): ಹೊಸ ವ್ಯಕ್ತಿಗಳ ಪರಿಚಯವಾಗಬಹುದು. ಹೊಸ ಸಾಹಸಗಳಿಗೆ ಕೈ ಹಾಕುವಿರಿ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ಸಂತಾನ ಫಲವಿದೆ. ನಿರುದ್ಯೋಗಿಗಳಿಗೆ ಉದ್ಯಮ ಆರಂಭಿಸಲು ಸಕಾಲ. ಬಡವರಿಗೆ ವಸ್ತ್ರ ದಾನ ಮಾಡಿ. 

2022 Horoscope: ಹೊಸ ವರ್ಷ ಸಿಂಹ ರಾಶಿಗೆ ಅದೃಷ್ಟ, ಉಳಿದ ರಾಶಿಗಳಿಗೆ ಹೇಗಿರಲಿದೆ?

ವೃಶ್ಚಿಕ(Scorpio): ಕೆಲಸದಲ್ಲಿ ಕ್ರಿಯಾಶೀಲತೆ ಹೆಚ್ಚಿಸುವತ್ತ ಗಮನ ಹರಿಸಿದರೆ ಲಾಭವಿದೆ. ಕೆೈ ಕೆಳಗೆ ಕೆಲಸಕ್ಕಿರುವವರಿಂದ ತೊಂದರೆ ಎದುರಾಗಬಹುದು. ಹಣದ ವಿಷಯದಲ್ಲಿ ಕಿರಿಕ್ ಮಾಡಿಕೊಳ್ಳಬೇಡಿ. ಸಾಲದ ಮೊರೆ ಹೋಗಬೇಡಿ. ತಾಯಿಯ ಸಹಕಾರ. ಬಡವರಿಗೆ ಅನ್ನದಾನ ಮಾಡಿ. 

ಧನುಸ್ಸು(Sagittarius): ಪೋಷಕರ ಭಾವನೆಗಳನ್ನು ಗೌರವಿಸಿ ಮತ್ತು ಮನೆಯ ಕಿರಿಯ ಸದಸ್ಯರೊಂದಿಗೆ ಸ್ನೇಹದಿಂದ ನಡೆದುಕೊಳ್ಳಿ. ಸರ್ಕಾರಿ ವಲಯದ ಕೆಲಸಗಳಲ್ಲಿ ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ದಣಿವು ತರುವ ಕೆಲಸ. ಶಿವ ಸ್ಮರಣೆ ಮಾಡಿ. 

ಮಕರ(Capricorn): ನಾನಾ ಕಡೆಗಳಿಂದ, ನಾನಾ ರೀತಿಯಲ್ಲಿ ಖರ್ಚು ವೆಚ್ಚ ಕಂಡುಬರುವುದು. ಉದರ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಒಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಬಂಧುಮಿತ್ರರ ಸಹಕಾರದಿಂದ ಕಾರ್ಯಗಳು ಮುಂದೆ ಸಾಗುವುವು. ಕುಲದೇವತಾ ಪ್ರಾರ್ಥನೆ ಮಾಡಿ. 

ಕುಂಭ(Aquarius): ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಮಾತಿನಲ್ಲಿ ಎಚ್ಚರ ಅಗತ್ಯ. ಪರರಿಂದ ವಂಚನೆ. ದೊಡ್ಡ ಲಾಭಕ್ಕಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಕೆಲವು ಜನರು ತಪ್ಪು ಮಾಹಿತಿ ನೀಡುವ ಮೂಲಕ ನಿಮ್ಮ ದಾರಿ ತಪ್ಪಿಸಲು ಪ್ರಯತ್ನಿಸಬಹುದು. ಕಪ್ಪು ಬಟ್ಟೆ ಧರಿಸಿ ಶನಿಯ ಸ್ಮರಣೆ ಮಾಡಿ. 

ಮೀನ(Pisces): ಹಿರಿಯರ ಮಾತನ್ನು ಕೇಳಿ. ಬಂಧು ಮಿತ್ರರ ಸಹಕಾರ. ಆರೋಗ್ಯವು ಈಗಾಗಲೇ ಉತ್ತಮವಾಗಿಲ್ಲದಿದ್ದರೆ ನೀವು ನಿಮ್ಮ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ಮಾಡದಿರಿ. ದೂರ ಪ್ರಯಾಣ ಮಾಡಬೇಕಾಗಬಹುದು. ಆಂಜನೇಯನಿಗೆ ದೀಪ ಹಚ್ಚಿ. 

Follow Us:
Download App:
  • android
  • ios