17 ಜನವರಿ 2022, ಸೋಮವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಹಣದ ಪ್ರದರ್ಶನದಿಂದ ಅನಾಹುತ ಮೈ ಮೇಲೆಳೆದುಕೊಳ್ಳುವ ಕನ್ಯಾ

ಮೇಷ(Aries): ಶೇರು ವ್ಯವಹಾರಗಳಲ್ಲಿ ಧನ ಲಾಭವಿರಲಿದೆ. ಕಚೇರಿಯಲ್ಲಿ ಹಿರಿಯರ ನೆರವು ದೊರೆತು ಕೆಲಸಗಳು ಸುಗಮವಾಗುವುವು. ದಾಂಪತ್ಯದಲ್ಲಿ ಮಧುರ ಸಂಬಂಧ ಇರಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ನೆರವು ಕೇಳಿ ಬಂದವರನ್ನು ಹಾಗೆಯೇ ಕಳುಹಿಸದೆ ಸಾಧ್ಯವಾದ ನೆರವು ನೀಡಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

Add Asianetnews Kannada as a Preferred SourcegooglePreferred

ವೃಷಭ(Taurus): ನಿಮ್ಮ ಅಜಾಗರೂಕತೆಯ ಹಾಗೂ ಅಸಡ್ಡೆಯ ಕಾರಣಗಳಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ನಿಮ್ಮಿಂದ ಕುಟುಂಬದ ಇತರ ಸದಸ್ಯರಿಗೂ ಆರೋಗ್ಯ ಸಮಸ್ಯೆ ಶುರುವಾಗಬಹುದು. ಉದ್ಯೋಗದಲ್ಲಿ ಏರುಪೇರಿಲ್ಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಮಿಥುನ(Gemini): ಮಾತಿನಲ್ಲೇ ಸಮಯ ವ್ಯರ್ಥ ಮಾಡುವ ಸಾಧ್ಯತೆ ಹೆಚ್ಚಿದೆ. ನಂತರದಲ್ಲಿ ಕೆಲಸಗಳಾಗದೆ ಹಲುಬುವಿರಿ. ಹಣಕಾಸಿನ ಅಡಚಣೆಗಳು ಕಂಗೆಡಿಸಬಹುದು. ಸಹೋದರರ ಸಹಕಾರ ದೊರಕಿ ಸಮಾಧಾನವಾಗುವುದು. ವ್ಯಾಪಾರದಲ್ಲಿ ಲಾಭ. ಗಣಪತಿಗೆ ದರ್ಬೆ ಅರ್ಪಿಸಿ. 

ಕಟಕ(Cancer): ಜೀವನದ ಕಷ್ಟದ ಸಂದರ್ಭದಲ್ಲಿ ಆದವರನ್ನು ಸ್ಮರಿಸಿ ಅವರೊಂದಿಗೆ ಮಾತನಾಡಿ. ಇದರಿಂದ ಒಳಿತಾಗುವುದು. ಹಿಂದೆ ಯಾವುದೋ ಕಾರಣಕ್ಕೆ ಅರ್ಧಕ್ಕೆ ನಿಂತ ಕೆಲಸ ಈಗ ಪೂರ್ಣವಾಗಬಹುದು. ಶಿವಸ್ಮರಣೆಯಿಂದ ಒಳಿತಾಗುವುದು. 

Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!

ಸಿಂಹ(Leo): ಕೆಲಸದ ಭಾರ ಹೆಚ್ಚಲಿದೆ. ಜವಾಬ್ದಾರಿಗಳ ಹೊರೆಗೆ ಕಂಗಾಲಾಗುವಿರಿ. ಸಹೋದ್ಯೋಗಿಗಳ ಎಡವಟ್ಟಿನಿಂದ ಕೋಪ ಬರಬಹುದು. ಮೌನ ತಾಳುವುದು ಒಳಿತು. ಶೇರು ವ್ಯವಹಾರಗಳಲ್ಲಿ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ. ಮಕ್ಕಳ ಪ್ರಗತಿಯಿಂದ ನೆಮ್ಮದಿ. ಅನ್ನದಾನ ಮಾಡಿ. 

ಕನ್ಯಾ(Virgo): ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದಂತೆ ಮಾಡಬೇಡಿ. ಒಗ್ಗೂಡಿರುವ ಹಣದ ಪ್ರದರ್ಶನ ಸಲ್ಲದು. ಕೋರ್ಟ್ ವ್ಯಾಜ್ಯಗಳಲ್ಲಿ ಜಯ ಸಿಗಲಿದೆ. ಮಾತು ಹಿಡಿತ ತಪ್ಪುವ ಸಾಧ್ಯತೆ ಇದೆ. ಪ್ರೀತಿ ಪ್ರೇಮ ವ್ಯವಹಾರಗಳಲ್ಲಿ ಮನಸ್ತಾಪ. ಗೋವಿಗೆ ಗ್ರಾಸ ನೀಡಿ.

ತುಲಾ(Libra): ಅದೃಷ್ಟದಂತೆ ಒಲಿದು ಬಂದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಉಡಾಯಿಸಬೇಡಿ. ಬದಲಿಗೆ ಅದನ್ನು ವಿವಿಧ ಹೂಡಿಕೆಯಲ್ಲಿ ತೊಡಗಿಸಿ, ಉಳಿತಾಯದ ಬಗ್ಗೆ ಯೋಚಿಸಿ. ಭವಿಷ್ಯದ ಯೋಚನೆಯಿಲ್ಲದೆ ವರ್ತಮಾನವಷ್ಟೇ ತಲೆಯಲ್ಲಿಟ್ಟರೆ ಮುಂದೆ ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ಮತ್ತೊಬ್ಬರ ಮನಸ್ಸು ನೋಯಿಸಿ ಸಾಧಿಸುವುದು ಏನೂ ಇಲ್ಲ. ಬೇಕೆಂದೇ ಇರಿಯುವಂತೆ ಮಾತನಾಡಬೇಡಿ. ನಿಮ್ಮ ಸಂಪರ್ಕಗಳ ಮೂಲಕ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಮಕ್ಕಳಿಗೆ ಸಂತಸ. ವಿದ್ಯಾರ್ಥಿಗಳಿಗೆ ಪ್ರಗತಿ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

Weekly Horoscope: ವೈವಾಹಿಕ ಕಲಹಕ್ಕೆ ಕಟಕ ತತ್ತರ, ಸಾಡೇಸಾತಿ ಅಂತಿಮ ಘಟ್ಟದಲ್ಲಿ ಧನುವಿಗೆ ಲಾಭ

ಧನುಸ್ಸು(Sagittarius): ಯಾರು ಏನು ಯೋಚಿಸುತ್ತಾರೋ ಎಂದು ಚಿಂತಿಸುತ್ತಾ ಮಾಡಬೇಕಾದ ಕೆಲಸ ಮಾಡದೆ ಉಳಿಯಬೇಡಿ. ನಿಮ್ಮ ಪ್ರಾಮಾಣಿಕತೆ ಹಾಗೂ ಶ್ರಮಕ್ಕೆ ಬೆಲೆ ಇದ್ದೇ ಇದೆ. ವಾಹನ ಸೌಖ್ಯವಿದೆ, ವ್ಯವಹಾರಗಳು ಸುಲಲಿತವಾಗುತ್ತವೆ. ನವಗ್ರಹ ಪ್ರಾರ್ಥನೆ ಮಾಡಿ. 

ಮಕರ(Capricorn): ಉದ್ಯೋಗ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಲಿವೆ. ಬಹಳ ದಿನದಿಂದ ತಲೆಯಲ್ಲಿ ಕೊರೆಯುತ್ತಿರುವ ವಿಚಾರಕ್ಕೆ ಆತಂಕ ಬೇಡ, ಎಲ್ಲವೂ ಒಳಿತೇ ಆಗಿ ಸಮಾಧಾನ ಇರಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಕುಂಭ(Aquarius): ಮಾತಿನ ಚಕಮಕಿಯಿಂದ ದಾಂಪತ್ಯದಲ್ಲಿ ಅಸಮಾಧಾನ, ಮನಸ್ಸಿಗೆ ಬೇಸರ. ಕುಟುಂಬದ ವಿಚಾರದಲ್ಲಿ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯನ್ನು ದೂರವಿಡಿ. ಸಾಲ ಮರುಪಾವತಿ ಮಾಡದೆ ಸಂಕಷ್ಟ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಗಣಪತಿ ಪ್ರಾರ್ಥನೆ ಮಾಡಿ.

ಮೀನ(Pisces): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಳ್ಳಿ. ಆಹಾರ ಸಮೃದ್ಧಿ ಇರಲಿದೆ. ಅವಿವಾಹಿತರಿಗೆ ಶುಭಸುದ್ದಿ. ಕಾರ್ಯನಿಮಿತ್ತ ಕೈಗೊಂಡ ದೂರ ಪ್ರವಾಸ ಯಶಸ್ವಿಯಾಗುವುದು. ಶಿವನಿಗೆ ಜಲಾಭಿಷೇಕ ಮಾಡಿ.