Daily Horoscope: ವೃಷಭಕ್ಕೆ ನೆಮ್ಮದಿ, ಕನ್ಯಾ ರಾಶಿಗೆ ಹೆಚ್ಚುವ ಚಂಚಲತೆ
5 ಫೆಬ್ರವರಿ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾ ರಾಶಿಗೆ ಕೆಲಸ ಕಾರ್ಯ ಮುಂದೂಡುವ ಪ್ರಮೇಯ
ಮೇಷ(Aries): ಯಾವುದೇ ಜವಾಬ್ದಾರಿ ಕೊಟ್ಟರೂ ಗೊಣಗದೆ ಹೆಚ್ಚಿನ ಶ್ರಮ ಹಾಕಿ ಕಾರ್ಯ ನಿರ್ವಹಿಸಿ. ಅದಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳವೆತ್ತಬೇಡಿ. ನಿಮ್ಮದೇ ಮಾತು ನಡೆಯಬೇಕೆಂಬ ಹಟ ಬಿಟ್ಟರೆ ಖಂಡಿತಾ ಶಾಂತಿ ನೆಲೆಸುವುದು. ಶನಿ ಸ್ಮರಣೆ ಮಾಡಿ.
ವೃಷಭ(Taurus): ನಿಮ್ಮ ಅಂತಃಶಕ್ತಿಗೆ ಎಂಥ ಸಮಸ್ಯೆಗಳನ್ನೂ ನಿವಾರಿಸಲು ಸಾಧ್ಯವಿದೆ. ಸವಾಲುಗಳನ್ನು ಎದುರಿಸುವ ಧೈರ್ಯ ತೆಗೆದುಕೊಂಡರೆ ಮತ್ಯಾವುದೂ ಕಷ್ಟವಾಗಿ ಉಳಿಯುವುದೇ ಇಲ್ಲ. ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡರೂ ನೆಮ್ಮದಿ ಭಂಗವಾಗುವುದಿಲ್ಲ. ಶಿವ ಸ್ಮರಣೆ ಮಾಡಿ.
ಮಿಥುನ(Gemini): ರೈತರಿಗೆ ಕೃಷಿಯಲ್ಲಿ ಹೆಚ್ಚಿನ ಲಾಭ ಇರಲಿದೆ. ಯಂತ್ರೋಪಕರಣಗಳು, ವಸ್ತ್ರ, ಒಡವೆ ವ್ಯಾಪಾರಿಗಳಿಗೆ ದುಪ್ಪಟ್ಟು ವಹಿವಾಟಿನ ಸಂತಸ. ಕೆಲಸ ಕಾರ್ಯಗಳಿಗಾಗಿ ಕೈಗೊಂಡ ದೂರ ಪ್ರಯಾಣ ಫಲ ಕೊಡಲಿದೆ. ಸಂತಾನ ಆಪೇಕ್ಷಿಸುತ್ತಿರುವ ದಂಪತಿಗೆ ಫಲ ಸಿದ್ಧಿ, ಅಶ್ವತ್ಥ ಮರದ ಬುಡದಲ್ಲಿ ದೀಪ ಹಚ್ಚಿ ನಮಸ್ಕರಿಸಿ.
ಕಟಕ(Cancer): ಹಿತಶತ್ರುಗಳು ಹೆಚ್ಚಿದ್ದಾರೆ. ಎಲ್ಲರನ್ನೂ ಸಾರಾಸಗಟಾಗಿ ನಂಬಿ ಬಿಡಬೇಡಿ. ಎದುರಿಂದ ನಯವಾದ ಮಾತುಗಳಾಡುವವರೆಲ್ಲ ಸಾಚಾ ಅಲ್ಲ ಎಂಬುದು ಮನಸ್ಸಿಗೆ ಗೊತ್ತಿರಲಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿಲ್ಲದಿದ್ದರೆ ಕ್ಲೇಶಗಳು ಹೆಚ್ಚಲಿವೆ. ನವಗ್ರಹ ಸ್ಮರಣೆ ಮಾಡಿ.
ಸಿಂಹ(Leo): ಉದ್ಯೋಗ ರಂಗದಲ್ಲಿ ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ. ಸಾಮಾಜಿಕವಾಗಿ, ಧಾರ್ಮಿಕವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಹಣಕಾಸಿನ ಸಮಸ್ಯೆಗಳು ಬಗೆಹರಿದು ನಿಟ್ಟುಸಿರಿಡುವಿರಿ. ಆರೋಗ್ಯಕ್ಕಾಗಿ ಹೆಚ್ಚಿನ ಪ್ರಯತ್ನ ಹಾಕಬೇಕು. ಕಪ್ಪು ವಸ್ತುಗಳನ್ನು ದಾನ ಮಾಡಿ.
ಕನ್ಯಾ(Virgo): ಚಂಚಲತೆ ಹೆಚ್ಚಲಿದೆ. ಕೆಲಸ ಕಾರ್ಯಗಳು ಅರ್ಧಕ್ಕೇ ನಿಲ್ಲಬಹುದು. ಸ್ನೇಹಿತರ ಜತೆ ಸಮಯ ಕಳೆಯುವಿರಿ. ಮಾತಿಗೆ ಮಾತು ಬೆಳೆದು ಮನಸ್ಸು ಕೆಡಬಹುದು. ಹೂ, ಹಣ್ಣು, ಸಣ್ಣ ಕೈಗಾರಿಕಾ ವ್ಯವಹಾರದಲ್ಲಿರುವವರಿಗೆ ಲಾಭ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ.
Saraswati Birthday: ಬಂದೇ ಬಿಡ್ತು ವಸಂತ ಪಂಚಮಿ; ಎಲ್ಲ ಶುಭಕಾರ್ಯಕ್ಕೂ ಶುಭ ಗಳಿಗೆ
ತುಲಾ(Libra): ಉದ್ದೇಶಪೂರ್ವಕವಾಗಿ ಮತ್ತೊಬ್ಬರ ಮನಸ್ಸಿಗೆ ನೋವಾಗುವಂತೆ ಮಾತನಾಡಬೇಡಿ. ತಿರುಗುಬಾಣವಾದೀತು. ದೂರ ಪ್ರಯಾಣ ಸಾಧ್ಯತೆಗಳಿವೆ. ಪ್ರಮುಖ ಕಾರ್ಯಗಳನ್ನು ಮುಂದೂಡಬೇಕಾದ ಸಂದರ್ಭ ಎದುರಾಗಬಹುದು. ಮನೆ ದೇವರನ್ನು ಸ್ಮರಿಸಿಕೊಳ್ಳಿ.
ವೃಶ್ಚಿಕ(Scorpio): ಮನೆಯ ಸದಸ್ಯರೆಲ್ಲರೊಂದಿಗೆ ಕುಳಿತು ಮಾತನಾಡುವುದರಿಂದ ಮನಸ್ಸಿನ ಸಂತೋಷ ಹೆಚ್ಚುತ್ತದೆ. ತಂದೆ-ಮಕ್ಕಳಲ್ಲಿ ಸಾಮರಸ್ಯ ಹೆಚ್ಚಿರುತ್ತದೆ. ಕುಟುಂಬದ ವಿಚಾರದಲ್ಲಿ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯನ್ನು ದೂರವಿಡಿ. ಗಣಪತಿ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ಹೊಸ ಹೂಡಿಕೆಯಿಂದ ಫಲವಿದೆ. ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ಸಂಗಾತಿಯ ಕಡೆಯಿಂದ ಅನಿರೀಕ್ಷಿತ ಸಂತೋಷಗಳು ಸಿಗಲಿವೆ. ಮಕ್ಕಳ ಭವಿಷ್ಯಕ್ಕಾಗಿ ಹೊಸ ಕಲಿಕೆಯಲ್ಲಿ ತೊಡಗಿಸಿ. ಶನಿ ಮಂತ್ರ ಹೇಳಿಕೊಳ್ಳಿ.
Birth Month And Traits: ನೀವು ಹುಟ್ಟಿದ ತಿಂಗಳು ನಿಮ್ಮ ಸ್ವಭಾವ ಹೇಳುತ್ತವೆ!
ಮಕರ(Capricorn): ಸ್ವಂತದ ಕೆಲಸಗಳಿಗೆ ಎದುರಾಗುವ ಅಡೆತಡೆಗಳು. ಸಂಯಮ ಕಾಯ್ದುಕೊಳ್ಳಿ. ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಏಕಾಗ್ರತೆ ಭಂಗವಾಗುತ್ತದೆ. ಇದರಿಂದ ಕೆಲಸಗಳು ಅಪೂರ್ಣವಾಗುತ್ತವೆ. ಹಿರಿಯರ, ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿ. ವೈದ್ಯರ ಬಳಿ ಪರಿಶೀಲಿಸುವುದೂ ಒಳ್ಳೆಯದು. ಧನ್ವಂತರಿ ಸ್ಮರಣೆ ಮಾಡಿ.
ಕುಂಭ(Aquarius): ವ್ಯವಹಾರದಲ್ಲಿ ಏರುಪೇರು, ಪ್ರಯಾಣದಲ್ಲಿ ಆತಂಕ, ಮಾತಿನ ಚಕಮಕಿಯಿಂದ ದಾಂಪತ್ಯದಲ್ಲಿ ಅಸಮಾಧಾನ, ಮನಸ್ಸಿಗೆ ಬೇಸರ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಳ್ಳಿ. ಹೇಳಿಕೊಂಡ ಹರಕೆಗಳನ್ನು ತೀರಿಸಿ.
ಮೀನ(Pisces): ಗೃಹಸೌಖ್ಯ, ವಾಹನ ಸೌಖ್ಯ ಇರಲಿದೆ. ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ವ್ಯಾಪಾರಿಗಳಿಗೆ ಒಳ್ಳೆಯ ಲಾಭ ಇರಲಿದೆ. ವಿವಾಹಾಕಾಂಕ್ಷಿಗಳಿಗೆ ಸಂಬಂಧಿಕರ ಕಡೆಯಿಂದ ಅನಿರೀಕ್ಷಿತ ಸಂಬಂಧ ಅರಸಿ ಬರುವುದು. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.