10 ಫೆಬ್ರವರಿ 2022, ಗುರುವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ವೃಶ್ಚಿಕದ ಕೆಲಸಗಳು ವಿಳಂಬ, ಮೇಷಕ್ಕೆ ಯಶಸ್ಸು

ಮೇಷ(Aries): ಪ್ರಯತ್ನಬಲದಿಂದ ಯೋಜಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ತೋರಿಬರುವುದು. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಅಗತ್ಯವೋ ಅಲ್ಲವೋ ನೋಡಿಯೇ ಖರ್ಚು ಮಾಡಿ. ಹಣ ಕೈಲಿ ನಿಲ್ಲದೆ ಆತಂಕ ಕಾಡುವುದು. ಗಾಯತ್ರಿ ಜಪ ಮಾಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ(Taurus): ಸ್ನೇಹಿತರ ಸಹಕಾರದಿಂದ ದೊಡ್ಡ ಕನಸುಗಳು ಈಡೇರುವುವು. ಸಿಹಿ ಸುದ್ದಿ ಕಿವಿಗೆ ಬೀಳಲಿದೆ. ಮನಸ್ಸಿನ ಕೊರಗು ಕೊಂಚ ಕಡಿಮೆಯಾಗಲಿದೆ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಆರೋಗ್ಯ ಸಹಕಾರ ಇರುವುದು. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

ಮಿಥುನ(Gemini): ಹೊರಗೆ ಸುತ್ತಾಟದಿಂದ ಮನಸ್ಸಿಗೆ ಪ್ರಫುಲ್ಲತೆ. ನಿಮ್ಮ ಬುದ್ಧಿಯನ್ನೇ ಬಲವಾಗಿ ಪ್ರಯೋಗಿಸಿ. ಮನೆಯಲ್ಲಿ ಪತ್ನಿ ಮಕ್ಕಳ ಸಹಕಾರದಿಂದ ಬಹಳಷ್ಟು ನೆಮ್ಮದಿ ಸಿಗುವುದು. ಗೆಳೆಯರ ಬಳಗದಿಂದ ಒಳ್ಳೆ ಸುದ್ದಿ ಕೇಳುವಿರಿ. ಕೃಷ್ಣನಿಗೆ ಅವಲಕ್ಕಿ ನೈವೇದ್ಯ ಮಾಡಿ. 

ಕಟಕ(Cancer): ಅತಿಥಿಗಳ ಆಗಮನ ಸಂತಸ ತರುವುದು. ಆಸ್ತಿ ವಿಚಾರ ಕೋರ್ಟ್‌ನಲ್ಲಿದ್ದರೆ ತೀರ್ಪು ನಿಮ್ಮ ಪರವಾಗಿ ಆಗುವುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ದೊರೆಯುವುದು. ಚರ್ಮ ಸಂಬಂಧಿ ಕಿರಿಕಿರಿಗಳು ಹೆಚ್ಚಲಿವೆ. ಹಸುವಿಗೆ ಗೋಧಿ ಹಿಟ್ಟು ತಿನ್ನಿಸಿ.

ಸಿಂಹ(Leo): ಮನೆಯಲ್ಲಿ ಸಂಗಾತಿಯೊಂದಿಗೆ ಮುಸುಕಿನ ಮುನಿಸು. ವ್ಯಾಪಾರಿಗಳಿಗೆ ಲಾಭ. ಯಾರೊಂದಿಗಾದರೂ ಏನನ್ನಾದರೂ ಹೇಳುವ ಮೊದಲು ಅದರ ಸಾಧಕ ಬಾಧಕಗಳನ್ನು ಯೋಚಿಸಿ. ಮಕ್ಕಳ ಪ್ರತಿಭೆ ಬೆಳೆಸಲು ಗಮನ ಹರಿಸಿ. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

ಕನ್ಯಾ(Virgo): ಕೆಲಸದಲ್ಲಿ ಹಿರಿಯರಿಂದ ಒತ್ತಡ ಹೆಚ್ಚುವುದು. ಕಷ್ಟ ಪಟ್ಟು ದುಡಿಯುತ್ತಿದ್ದರೂ ಮನೆಯಲ್ಲಿ ಮಾತು ಕೇಳಬೇಕಾಗಿ ಬಂದು ಮನಸ್ಸು ಹಾಳಾಗುವುದು. ಸಂಗಾತಿಯ ವಿಷಯದಲ್ಲಿ ಹಟದ ಧೋರಣೆಯಿಂದ ಇಬ್ಬರಿಗೂ ಒಳಿತಾಗುವುದಿಲ್ಲ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ತುಲಾ(Libra): ದೂರ ಪ್ರವಾಸದಿಂದ ಮನಸ್ಸು ಚೇತೋಹಾರಿಯಾಗುವುದು. ತಾಯಿಯ ಆರೋಗ್ಯಕ್ಕಾಗಿ ವೈದ್ಯರಲ್ಲಿ ಅಲೆದಾಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅತ್ಯುತ್ತಮ ಲಾಭ. ಬೇಡದ ವಿಷಯಕ್ಕೆ ಮೂಗು ತೂರಿಸಿ ಸಂಕಷ್ಟ ತಂದುಕೊಳ್ಳಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Expressing Rejection: ನೀವಿಷ್ಟ ಇಲ್ಲ ಎಂಬುದನ್ನು ಯಾವ ರಾಶಿಯವರು ಹೇಗೆ ತಿಳಿಸುತ್ತಾರೆ ನೋಡಿ..

ವೃಶ್ಚಿಕ(Scorpio): ಬೇರೊಬ್ಬರು ಹೇಳಿದ್ದೆಲ್ಲ ಕೇಳುವ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿ ದಿನಾಂತ್ಯದಲ್ಲಿ ಕೊರಗುವರು. ಅನಿರೀಕ್ಷಿತ ಕಾರಣಕ್ಕೆ ಕೆಲಸಕ್ಕೆ ವಿಳಂಬಗಳೆದುರಾಗಬಹುದು. ಬಂಧುವಲಯದಲ್ಲಿ ಅನಾರೋಗ್ಯ ಪೀಡಿತರ ಆರೋಗ್ಯ ವಿಚಾರಿಸಿ. ಕುಲದೇವರ ಸ್ಮರಣೆ ಮಾಡಿ. 

ಧನುಸ್ಸು(Sagittarius): ಸಂಗಾತಿಯೊಂದಿಗೆ ಕೂಲಂಕುಶವಾಗಿ ಸಮಸ್ಯೆಗಳನ್ನು ಚರ್ಚಿಸಿ. ವಿದ್ಯಾರ್ಥಿಗಳು ಹಿರಿಯರ ಸಹಾಯದಿಂದ ಓದಿನಲ್ಲಿ ಮುನ್ನಡೆ ಸಾಧಿಸುವರು. ಪರಿಚಿತರಿಂದ ಉದ್ಯಮಕ್ಕೆ ಸಹಾಯ ದೊರೆಯುವುದು. ಹಕ್ಕಿಗಳಿಗೆ ನೀರು, ಕಾಳುಗಳನ್ನು ನೀಡಿ. 

ಮಕರ(Capricorn): ಕುಟುಂಬದೊಂದಿಗೆ ಪ್ರವಾಸ ಯೋಜನೆಗಳನ್ನು ಮಾಡಲಿರುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಸುಲಭದಲ್ಲಿ ಕೆಲಸಗಳ ಸಾಧನೆ, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ. ಸ್ತ್ರೀಯರು ಬೆಂಕಿಯ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕುಂಭ(Aquarius): ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿಸುದ್ದಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುವು. ಬಹುಕಾಲದಿಂದ ಮುಂದೂಡಿದ್ದ ಕೆಲಸ ಕೈಗೆತ್ತಿಕೊಳ್ಳುವಿರಿ. ದೇವತಾಕಾರ್ಯಗಳಲ್ಲಿ ಭಾಗಿ. ಗಣಪತಿಗೆ ದರ್ಬೆ ಅರ್ಪಿಸಿ. 

Faith And Reason: ರಂಗೋಲಿ ಹಾಕಿದರೆ ಯಮ ಮನೆಗೆ ಬರೋಲ್ಲವಂತೆ, ನಿಜವೇ?

ಮೀನ(Pisces): ಉದ್ಯೋಗ ರಂಗದಲ್ಲಿ ದೊಡ್ಡ ಯೋಜನೆಗಳನ್ನು ಮುಗಿಸಿ ಸೈ ಎನಿಸಿಕೊಳ್ಳುವಿರಿ. ತಂದೆ-ಮಕ್ಕಳಲ್ಲಿ ಸಾಮರಸ್ಯ ಹೆಚ್ಚಲಿದೆ. ಉಳಿತಾಯದ ಮಹತ್ವ ಸಧ್ಯದಲ್ಲೇ ಗೊತ್ತಾಗಲಿದೆ. ದೂರ ಪ್ರವಾಸ ಯೋಜನೆ ಸಿದ್ಧಪಡಿಸುವಿರಿ. ವೆಂಕಟೇಶ್ವರ ಸ್ವಾಮಿಯ ಶ್ಲೋಕ ಹೇಳಿಕೊಳ್ಳಿ.