Asianet Suvarna News Asianet Suvarna News

Faith And Reason: ರಂಗೋಲಿ ಹಾಕಿದರೆ ಯಮ ಮನೆಗೆ ಬರೋಲ್ಲವಂತೆ, ನಿಜವೇ?

ಭಾರತದ ಬಹುತೇಕ ಎಲ್ಲ ಆಚರಣೆ, ಸಂಪ್ರದಾಯಗಳ ಹಿಂದೆ ವೈಜ್ಞಾನಿಕವಾದ, ಸಾಮಾಜಿಕವಾಗಿ ಹಿತ ತರಬಲ್ಲ, ಆರೋಗ್ಯಕ್ಕೆ ಒಳಿತಾಗುವಂತ ಒಳಾರ್ಥಗಳಿವೆ. ರಂಗೋಲಿಯೂ ಇದಕ್ಕೆ ಭಿನ್ನವಲ್ಲ. 

Why do we make Rangoli skr
Author
Bangalore, First Published Feb 8, 2022, 4:35 PM IST | Last Updated Feb 8, 2022, 4:36 PM IST

ಒಮ್ಮೆ ಒಬ್ಬಾಕೆಯ ಆಯಸ್ಸು ಮುಗಿದಿದೆ ಎಂದು ಯಮ ಧರ್ಮರಾಯ ಅವಳ ಪ್ರಾಣ ತೆಗೆದುಕೊಂಡು ಹೋಗಲು ಬೆಳ್ಳಂಬೆಳಗ್ಗೆ ಅವಳ ಮನೆಗೆ ಬಂದ. ಆದರೆ, ಅದಾಗಲೇ ಆಕೆ ಎದ್ದು ಸ್ನಾನ ಮಾಡಿ ಮನೆ ಎದುರು ಸಾರಿಸಿ, ಸಗಣಿ ಬಳಿದು, ಸುಂದರವಾದ ರಂಗೋಲಿ ಹಾಕಿದ್ದಳಂತೆ. ಆ ಸುಂದರವಾದ ಚಿತ್ತಾರ ನೋಡುತ್ತಿದ್ದಂತೆ ಯಮನ ಮನಸ್ಸಿನಲ್ಲಿ ಪಾಸಿಟಿವ್ ವೈಬ್ರೇಶನ್ಸ್ ಹರಿದು, ಪ್ರಾಣ ಕೊಂಡೊಯ್ಯಲು ಮನಸ್ಸಾಗದೆ ಹಾಗೇ ಮರಳಿದನಂತೆ.

ರಂಗೋಲಿ ಏಕೆ ಹಾಕಬೇಕೆಂದು ಕೇಳಿದರೆ ಸೂರ್ಯೋದಯಕ್ಕೆ ಮೊದಲೇ ಎದ್ದು ಮನೆಯ ಮುಂದೆ ರಂಗೋಲಿ ಹಾಕುವ ಮನೆಯನ್ನು ಯಮ ಪ್ರವೇಶಿಸುವುದಿಲ್ಲ ಎಂಬ ಈ ಕತೆಯನ್ನು ಅಡಗೂಲಜ್ಜಿ ಹೇಳುತ್ತಾಳೆ. ಆದರೆ ಈಗಿನ ತಲೆಮಾರಿನವರಿಗೆ ಇಂಥ ಅಂತೆ ಕಂತೆ ಕತೆಗಳಲ್ಲಿ ನಂಬಿಕೆ ಇಲ್ಲ. ಎಲ್ಲದಕ್ಕೂ ವೈಜ್ಞಾನಿಕ, ಆಧ್ಯಾತ್ಮಿಕ ಉತ್ತರಗಳನ್ನೇ ನಿರೀಕ್ಷಿಸುತ್ತಾರೆ. ಹಾಗೆಯೇ ರಂಗೋಲಿ ಏಕೆ ಹಾಕಬೇಕೆಂದು ಅಜ್ಜಿ ಹೇಳಿದ ಕತೆ ನಿಮಗೆ ಸಮಾಧಾನ ತಂದಿಲ್ಲವೆಂದರೆ, ನಿಮಗೆ ಸಮಾಧಾನ ಕೊಡುವ ಉತ್ತರ ಕೊಡುತ್ತೇವೆ. ಆದರೆ, ಓದಿದ ಮೇಲೆ ಪ್ರತಿದಿನ ಬೆಳ್ಳಂಬೆಳಗ್ಗೆ ಮನೆ ಎದುರು ರಂಗೋಲಿ ಹಾಕಲು ಶುರು ಮಾಡುತ್ತೇನೆ ಎಂಬ ಭರವಸೆ ನೀವು ಕೊಡಬೇಕು. ಹೇಗೋ ಒಟ್ನಲ್ಲಿ ನಮ್ಮ ಶಾಸ್ತ್ರ, ಸಂಪ್ರದಾಯಗಳು ಉಳಿಯಬೇಕು. 

ರಂಗೋಲಿಯು ಭಾರತದಲ್ಲಿ ವೇದಗಳ ಕಾಲದಿಂದಲೂ ಇದೆ. ಗುಹೆಗಳಲ್ಲಿ ಮಾನವ ವಾಸಿಸುತ್ತಿದ್ದಾಗಲೇ ಅಂದರೆ ಶಿಲಾಯುಗದಲ್ಲೇ ರಂಗೋಲಿ ಹಾಕುತ್ತಿದ್ದರು ಎನ್ನಲಾಗುತ್ತದೆ. ಹರಪ್ಪಾ ಮೊಹಂಜೋದಾರೋ ನಾಗರಿಕತೆಗಳಲ್ಲಿ ರಂಗೋಲಿ ವಿನ್ಯಾಸಗಳನ್ನು ಇತಿಹಾಸಕಾರರು ಕಂಡಿದ್ದಾರೆ. ನಾಟ್ಯಶಾಸ್ತ್ರ, ರಾಮಾಯಣ, ಭಾಗವತ, ಮಹಾಭಾರತಗಳಲ್ಲಿಯೂ ರಂಗೋಲಿಯ ಉಲ್ಲೇಖವಿದೆ. ಪ್ರತಿ ನಿತ್ಯ ರಂಗೋಲಿ ಹಾಕುವ ಅಭ್ಯಾಸ ಹಿಂದಿನಿಂದಲೂ ಇದೆ. ಅದರಲ್ಲೂ ವಿಶೇಷ ಸಂದರ್ಭಗಳಲ್ಲಿ ವಿಶೇಷವಾಗಿ ದೊಡ್ಡ ರಂಗೋಲಿಗಳನ್ನು ಹಾಕುವಾಗಲೇ ಹಬ್ಬದ ಕಳೆ ಬರುವುದು. ಇಷ್ಟೊಂದು ಸಹಸ್ರಾರು ವರ್ಷಗಳಿಂದ ಕಾರಣವಿಲ್ಲದೆ ಒಂದು ಆಚರಣೆ ಉಳಿಯುವುದಕ್ಕೆ ಸಾಧ್ಯವೇ ಇಲ್ಲ. 

Energy Centers: ನಾವೇಕೆ ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡಬೇಕು?

ವೈಜ್ಞಾನಿಕ ಕಾರಣಗಳು(Science behind Rangoli)

  • ಸಾಮಾನ್ಯವಾಗಿ ರಂಗೋಲಿಯನ್ನು ಅಕ್ಕಿ ಹಿಟ್ಟಿ(rice flour)ನಲ್ಲಿ ಹಾಕಲಾಗುತ್ತಿತ್ತು. ಇದು ಹಕ್ಕಿಗಳು ಹಾಗೂ ಕೀಟಗಳಿಗೆ ಆಹಾರವಾಗುತ್ತಿತ್ತು. ನಮ್ಮ ಜೊತೆಯಲ್ಲಿ ಬದುಕುವ ಪ್ರಾಣಿ, ಪಕ್ಷಿ ಕೀಟಗಳೊಂದಿಗೆ ಸಹಬಾಳ್ವೆ ನಡೆಸುವ ಸಂದೇಶ ಇದಾಗಿತ್ತು. 
  • ರಂಗೋಲಿ ಹಾಕುವ ಸಲುವಾಗಿ ಮಹಿಳೆಯರು ಬೇಗ ಏಳುತ್ತಿದ್ದರು. ರಂಗೋಲಿ ಹಾಕುವ ವೇಳೆ ತಣ್ಣನೆಯ ಶುದ್ಧ ಗಾಳಿ ತೆಗೆದುಕೊಳ್ಳುತ್ತಾ ಬಾಗಿ ಎದ್ದು ಮಾಡುವುದರಿಂದ  ವ್ಯಾಯಾಮವಾಗುತ್ತಿತ್ತು. ಮನಸ್ಸಿಗೆ ಚೈತನ್ಯ ಬರುತ್ತಿತ್ತು. ಹುರುಪಿನಿಂದ ಮುಂದಿನ ಕೆಲಸಗಳನ್ನು ಮಾಡುತ್ತಿದ್ದರು. ರಂಗೋಲಿ ಹಾಕುವ ಅಭ್ಯಾಸವು ಬೇಗ ಏಳುವಂತೆ ಮಾಡುತ್ತಿತ್ತಲ್ಲದೆ, ಅವರನ್ನು ಆರೋಗ್ಯವಂತರಾಗಿ ಇಡುತ್ತಿತ್ತು. 
  • ರಂಗೋಲಿ ಹಾಕುವಾಗ ಮಹಿಳೆಯರು ಎಲ್ಲೂ ಎಳೆ ತಪ್ಪಿ ಹೋಗದಂತೆ ಜಾಗ್ರತೆ ವಹಿಸುತ್ತಿದ್ದರು. ನೆನಪಿನ ಸುರಳಿ ಬಿಚ್ಚಿ ಹೊಸ ಹೊಸ ರಂಗೋಲಿ ಹಾಕುತ್ತಿದ್ದರು. ಜಾಗ್ರತೆಯಿಂದ ಬಣ್ಣ ತುಂಬುತ್ತಿದ್ದರು. ಇದರಿಂದ ಮಹಿಳೆಯರಿಗೆ ಬೆಳ್ಳಂಬೆಳಗ್ಗೆಯೇ ಏಕಾಗ್ರತೆ, ನೆನಪಿನ ಶಕ್ತಿ ಆಟವಾಗುತಿತ್ತು. ಇದು ಅವರನ್ನು ಮಾನಸಿಕವಾಗಿಯೂ ಸಲಬರನ್ನಾಗಿಸುತ್ತದೆ. 
  • ಮಹಿಳೆಯರು ರಂಗೋಲಿ ಹಾಕುವಾಗ ಬೆರಳನ್ನೇ ಬಳಸುವುದರಿಂದ ಮುದ್ರಾ ತಂತ್ರ ಬಳಕೆಯಾಗುವುದು. ಇದರಿಂದ ಮಹಿಳೆಯ ಆಧ್ಯಾತ್ಮಿಕ ಶಕ್ತಿ ಹೆಚ್ಚುವುದು. 
  • ಸಿಮೆಟ್ರಿಕ್ ರಚನೆಗಳು ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಯಾರಾದರೂ ಮನೆಯ ಒಳ ಬರುವಾಗ ಅಂಥ ಸಿಮೆಟ್ರಿಕ್ ರಚನೆಯನ್ನು ನೋಡುತ್ತಾ ದಾಟಿದರೆ, ಅರ ಮನಸ್ಸಿನಲ್ಲಿದ್ದಿರಬಹುದಾದ ಚಿಂತೆ, ಕೋಪ, ಆತಂಕ ಎಲ್ಲ ಕಳೆದು ಧನಾತ್ಮಕ ಶಕ್ತಿ(positive vibrations) ಅವರಲ್ಲಿ ಪ್ರವಹಿಸುತ್ತದೆ. ಇದರಿಂದ ಮನೆಯೊಳಗೆ ಉತ್ತಮ ಮನಸ್ಥಿತಿಯಿಂದ ಕಾಲಿಡುತ್ತಾರೆ. ಅಷ್ಟೇ ಅಲ್ಲ, ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಹಾಕುವುದರಿಂದ ಮನೆಯ ಗಂಡಸರು ಹೊರಗೆ ಕೆಲಸಕ್ಕೆ ಹೋಗುವಾಗ ಅವರ ಮನಸ್ಸು ರಂಗೋಲಿ ನೋಡಿ ಧನಾತ್ಮಕ ಶಕ್ತಿಯಿಂದ ಕೂಡಿರುತ್ತಿತ್ತು. 
  • ಹಬ್ಬಹರಿದಿನಗಳ ಸಂದರ್ಭದಲ್ಲಿ ಮೂರು ನಾಲ್ಕು ಮಹಿಳೆಯರು ಒಟ್ಟಾಗಿ ದೊಡ್ಡ ರಂಗೋಲಿ ಹಾಕಿ ಬಣ್ಣ ತುಂಬುತ್ತಾರೆ. ಇದು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಅವರ ನಡುವಿನ ಬಂಧ ಬಿಗಿಯಾಗಿಸಿ, ಸಹಬಾಳ್ವೆ ಹೆಚ್ಚಿಸಿ, ಸಂತೋಷ ತರುತ್ತದೆ. 
  • ತಮ್ಮನ್ನು ನೆಗೆಟಿವ್ ಎನರ್ಜಿಯಿಂದ ರಕ್ಷಿಸಿಕೊಂಡು ಕಾಸ್ಮಿಕ್ ಶಕ್ತಿಯ ಧನಾತ್ಮಕ ಪರಿಣಾಮ ಪಡೆಯಲು ನಮ್ಮ ಪೂರ್ವಜರು ಕಂಡುಕೊಂಡ ಸರಳ ಪರಿಹಾರ ರಂಗೋಲಿ. 

    Faith And Reason: ಮನೆ, ಅಂಗಡಿ, ವಾಹನಗಳಲ್ಲಿ ಮೆಣಸಿನಕಾಯಿ, ನಿಂಬೆಹಣ್ಣನ್ನು ನೇತು ಹಾಕುವುದೇಕೆ?

ಆಧ್ಯಾತ್ಮಿಕವಾಗಿ ನೋಡಿದರೆ, 

  • ಗೆರೆ ಎಳೆ ಹೊಂದಿರುವ ರಂಗೋಲಿಗಳು ವ್ಯಕ್ತಿಯ ಭಾವಗಳನ್ನು ಬಲಗೊಳಿಸುವುದು. 
  • ಕಮಲದ ಆಕಾರದ ವಿನ್ಯಾಸಗಳು ಚೈತನ್ಯ ನೀಡುತ್ತವೆ.
  • ಒಂದೇ ರೀತಿಯ ವಿನ್ಯಾಸ ಹೊಂದಿದ ಸಿಮೆಟ್ರಿಕ್ ರಂಗೋಲಯು ವ್ಯಕ್ತಿಯಲ್ಲಿ ಆನಂದ ಹೊಮ್ಮಿಸುವುದು. 
  • ಇದೇ ಕಾರಣಕ್ಕೆ ಕಾಸ್ಮಿಕ್ ಪವರ್ ಹೊಂದಿದ ಶ್ರೀ ಚಕ್ರ(Sri Chakra) ಯಂತ್ರ ಕೂಡಾ ರಂಗೋಲಿಯ ವಿನ್ಯಾಸದಲ್ಲೇ ಇರುತ್ತದೆ. 
Latest Videos
Follow Us:
Download App:
  • android
  • ios