Daily Horoscope: ಮೇಷಕ್ಕಿಂದು ಹೆಚ್ಚುವ ಹಣಕಾಸಿನ ಹೊಣೆ, ಉಳಿದ ರಾಶಿಗಳ ದಿನ ಹೇಗಿರಲಿದೆ?
10 ಡಿಸೆಂಬರ್ 2021, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭ ರಾಶಿಯವರು ಅನುಮಾನ ಬಿಟ್ಟು ಅನುರಾಗದ ಮೊರೆ ಹೋದರೆ ಹೆಚ್ಚುವ ಸಂತಸ.
ಮೇಷ(Aries): ಕೆಲ ದೊಡ್ಡ ಹಣಕಾಸಿನ ಹೊಣೆ ಹೆಗಲೇರುವುದು. ಅದೊಂದು ಜವಾಬ್ದಾರಿ ಎಂದು ತಿಳಿದು ತಾಳ್ಮೆ ಹಾಗೂ ವಿವೇಚನೆಯಿಂದ ಕಾರ್ಯ ಕೈಗೊಳ್ಳಿ. ಒತ್ತಡಕ್ಕೊಳಗಾಗುವ ಅಗತ್ಯವಿಲ್ಲ. ಬಂಧುಗಳಿಂದ ಕೆಲ ವಿಷಯಗಳಿಗೆ ವಿರೋಧ ಬರಬಹುದು. ಯಾವುದಕ್ಕೂ ಪ್ರತಿಕ್ರಿಯಿಸದೆ ನಿಮಗೆ ಸರಿ ಎನಿಸಿದಂತೆ ಪ್ರಾಮಾಣಿಕವಾಗಿ ಮುನ್ನಡೆಯಿರಿ. ಶಿವಶಕ್ತಿಯ ಆರಾಧನೆಯಿಂದ ಹಿತ ಭಾವ ಪ್ರಾಪ್ತಿ.
ವೃಷಭ(Taurus): ಸಂಗಾತಿಯ ಮೇಲೆ ಅನಗತ್ಯ ಅನುಮಾನದಿಂದ ಯಾವ ಲಾಭವೂ ಇಲ್ಲ. ನಂಬಿಕೆಯಿಂದ ಮುನ್ನಡೆಯಿರಿ. ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ. ವೃತ್ತಿಯಲ್ಲಿ ಬಲ, ನಿರುದ್ಯೋಗಿಗಳಿಗೆ ಹೊಸ ಅವಕಾಶಗಳ ಸಾಧ್ಯತೆ, ವಿವಾಹಾಕಾಂಕ್ಷಿಗಳಿಗೆ ದೈವಾನುಕೂಲ ಇರಲಿದೆ. ಬಡವರಿಗೆ ಅನ್ನದಾನ, ವಸ್ತ್ರದಾನ ಮಾಡಿ.
ಮಿಥುನ(Gemini): ಪ್ರೀತಿಪ್ರೇಮ ಸಂಬಂಧಗಳಲ್ಲಿ, ದಾಂಪತ್ಯದಲ್ಲಿ ಅಸಮಾಧಾನ. ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳಿತು. ವೃತ್ತಿಯಲ್ಲಿ ಬದಲಾವಣೆಯಿಂದ ಲಾಭ. ಹೊಸ ವ್ಯಕ್ತಿಗಳ ಪರಿಚಯದಿಂದ ಉಲ್ಲಾಸ. ಯಾವುದೇ ಹೊಸ ಕಾರ್ಯಾರಂಭ ಮಾಡುವವರು ಮನೆ ಹಿರಿಯರ ಆಶೀರ್ವಾದ ಪಡೆದುಕೊಳ್ಳಿ. ಲಕ್ಷ್ಮೀ-ನಾರಾಯಣರ ಪ್ರಾರ್ಥನೆ ಮಾಡಿ.
Career and Zodiacs: ನಿಮ್ಮ ರಾಶಿಗೆ ಯಾವ ವೃತ್ತಿ ಬೆಸ್ಟ್ ತಿಳ್ಕೊಳಿ..
ಕಟಕ(Cancer): ಮಕ್ಕಳಿಗಾಗಿ ಹೆಚ್ಚು ಸಮಯ ವ್ಯಯಿಸುವುದರಿಂದ ಸಂತೋಷ, ಸ್ನೇಹಿತರ ಸಹಕಾರದಿಂದ ವ್ಯಾಪಾರದಲ್ಲಿ ಪ್ರಗತಿ, ಶತ್ರುಗಳ ಭಯ ಬಿಟ್ಟು ನಿಮ್ಮ ಕೆಲಸವನ್ನು ಶ್ರಮ ವಹಿಸಿ ಮಾಡಿ. ನಕಾರಾತ್ಮಕ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಪೆಟ್ಟು ಬೀಳುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸಾಲ ಮಾಡಬೇಡಿ, ಸೂರ್ಯ ಪ್ರಾರ್ಥನೆ ಮಾಡಿ.
ಸಿಂಹ(Leo): ಬಹು ಕಾಲದಿಂದ ಬಿಡಬೇಕೆಂದು ಎಣಿಸುತ್ತಿರುವ ಚಟಗಳನ್ನು ತ್ಯಜಿಸಲು ಸುದಿನ. ಕೆಟ್ಟ ಸಹವಾಸಕ್ಕೂ ಇಂದೇ ಮುಕ್ತಿ ಹಾಡುವುದರಿಂದ ಒಳಿತಾಗುವುದು. ಸಂಗಾತಿಯ ಸಹಕಾರದಿಂದ ಕಾರ್ಯಗಳು ಯಶಸ್ವಿಯಾಗುವುವು. ಆರೋಗ್ಯ ಚೆನ್ನಾಗಿದ್ದರೂ ಬುದ್ಧಿ ಮಂದವಾಗಬಹುದು. ಹೆತ್ತವರ ಆಶೀರ್ವಾದ ಪಡೆದುಕೊಳ್ಳಿ.
ಕನ್ಯಾ(Virgo): ಬಹಳ ಸಮಯದ ಹಿಂದೆ ತೆಗೆದುಕೊಂಡಿದ್ದ ಸಾಲ ಮರುಪಾವತಿ ಮಾಡಿ ನಿರಾಳರಾಗುವಿರಿ. ಪ್ರಯಾಣದಿಂದ ಕಾರ್ಯ ಸಿದ್ಧಿಯಾಗುವುದು. ಕುಟುಂಬದವರ ಸಹಕಾರದಿಂದ ಸಂತಸ. ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಶ್ವಾಸಕೋಶ ಸಂಬಂಧಿ ತೊಂದರೆ ಎದುರಾಗಬಹುದು. ಧನ್ವಂತರಿ ಪ್ರಾರ್ಥನೆ ಮಾಡಿ.
ತುಲಾ(Libra): ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಅಗತ್ಯವೋ ಅಲ್ಲವೋ ನೋಡಿಯೇ ಖರ್ಚು ಮಾಡಿ. ಶುಕ್ರವಾರ ಲಕ್ಷ್ಮೀಯನ್ನು ಅವಮಾನಿಸಬೇಡಿ. ಅಂಜಿಕೆ ಹಾಗೂ ಭಯದ ವಾತಾವರಣ ಇರಲಿದೆ. ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಕನಸು ನನಸು. ವಿವಾಹಿತರಲ್ಲಿ ಗೊಂದಲ. ಲಕ್ಷ್ಮೀದೇವಿಗೆ ಗುಲಾಬಿ ಬಣ್ಣದ ಹೂವೇರಿಸಿ.
Zodiac Signs : ಈ ಎರಡು ರಾಶಿಗಳು ಎಂದಿಗೂ ಒಂದಾಗಲು ಸಾಧ್ಯವಿಲ್ಲ
ವೃಶ್ಚಿಕ(Scorpio): ಇಂದು ನಿಮಗೆ ಬಹಳ ಅದೃಷ್ಟದ ದಿನ. ಗೃಹಸೌಖ್ಯ, ಸುಖ ಪ್ರಯಾಣ, ತಾಯಿಯ ಆರೋಗ್ಯದಲ್ಲಿ ಚೇತರಿಕೆಯಿಂದ ಸಂತೋಷ ಹೆಚ್ಚುವುದು. ಬಂಧುಮಿತ್ರರ ಭೇಟಿಯಿಂದ ಉಲ್ಲಾಸ. ಆಸ್ತಿಖರೀದಿ ವಿಚಾರದಲ್ಲಿ ಮುನ್ನಡೆ, ಕೋರ್ಟ್ ವ್ಯಾಜ್ಯಗಳಲ್ಲಿ ಗೆಲುವು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚುವುದು. ಉದ್ಯೋಗ ಅರಸುವವರಿಗೆ ಅವಕಾಶಗಳು ಎದುರಾಗಿ ಮನಸ್ಸಿನಲ್ಲಿ ಚೈತನ್ಯ ತುಂಬುವುದು. ಬಂಧುಮಿತ್ರರ ನೆರವಿನಿಂದ ಕನಸು ಈಡೇರುವುದು. ಅದಾಗ್ಯೂ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಆತಂಕ ಕಾಡಬಹುದು. ಧನ್ವಂತರಿ ಪ್ರಾರ್ಥನೆ ಮಾಡಿ, ಆದಿತ್ಯ ಹೃದಯ ಪಠಿಸಿ
ಮಕರ(Capricorn): ವಾಗ್ಬಲ ಇರಲಿದೆ, ಮಾತಿನಿಂದ ಸಾಧನೆ. ವಕೀಲ ವೃತ್ತಿ ಸೇರಿದಂತೆ ಮಾತೇ ಆಯುಧವಾಗಿರುವ ವೃತ್ತಿಯಲ್ಲಿರುವವರಿಗೆ ಗೆಲುವು. ಸಿಹಿ ಸುದ್ದಿ ಕಿವಿಗೆ ಬೀಳಲಿದೆ. ಸಂತಾನಾಪೇಕ್ಷಿಗಳಿಗೆ ಶುಭ ಸಮಾಚಾರ. ವ್ಯಾಪಾರದಲ್ಲಿ ಲಾಭ ಹೆಚ್ಚಳ. ಅಮ್ಮನವರ ಆಶೀರ್ವಾದ ಪಡೆಯಿರಿ.
ಕುಂಭ(Aquarius): ಹೊಸ ವಿಷಯಗಳನ್ನು ಕಲಿಯುವುದರಿಂದ ಉತ್ಸಾಹ ಹೆಚ್ಚುವುದು. ಕ್ರೀಡಾಳುಗಳಿಗೆ ಒಳ್ಳೆಯ ದಿನ. ದೇಹ ಬಲ ಇರಲಿದೆ. ವ್ಯಾಪಾರಿಗಳಿಗೆ, ವಿವಿಧ ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ಲಾಭ ಸಮೃದ್ಧಿ ಇದೆ. ವೃತ್ತಿಯಲ್ಲಿ ಬಲವಿರುವುದರಿಂದ ನಿಮ್ಮ ಕೆಲಸಕ್ಕಾಗಿ ಪ್ರಶಂಸೆ ಸಿಗಲಿದೆ. ಮನೆ ದೇವರನ್ನು ಸ್ಮರಿಸಿಯೇ ದಿನ ಆರಂಭಿಸಿ.
ಮೀನ(Pisces): ತಂದೆ-ಮಕ್ಕಳಲ್ಲಿ ಸಾಮರಸ್ಯ ಹೆಚ್ಚಲಿದೆ. ಹತ್ತಿರದವರು ಮನೆಗೆ ಭೇಟಿ ನೀಡುವುದರಿಂದ ಸಂತಸ. ಲಾಭ ಸಮೃದ್ಧಿ. ವೃತ್ತಿಯಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಇರಬಹುದು. ನಿಮ್ಮ ಕೆಲಸಗಳಲ್ಲಿ ಯಾವುದೇ ತಪ್ಪು ಉಳಿಸಿಕೊಳ್ಳಬೇಡಿ. ಅವಿವಾಹಿತರಿಗೆ ಕಂಕಣಬಲ. ಆದಿತ್ಯ ಹೃದಯ ಪ್ರಾರ್ಥನೆ ಮಾಡಿ.