Daily Horoscope: ಸಿಂಹಕ್ಕೆ ಧನನಷ್ಟ, ತುಲಾ ರಾಶಿಗೆ ಹೊಸ ವ್ಯವಹಾರಕ್ಕೆ ಸಕಾಲ
7 ಏಪ್ರಿಲ್ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಯವರಿಗೆ ಖರ್ಚು ದುಪ್ಪಟ್ಟು
ಮೇಷ(Aries): ವೈಯಕ್ತಿಕ ಬದುಕಿನಲ್ಲಿ ಹಾಗೂ ವೃತ್ತಿ ರಂಗದಲ್ಲಿ ಅನಿರೀಕ್ಷಿತ ತಿರುವುಗಳು ಮಾನಸಿಕ ಗೊಂದಲಕ್ಕೆ ಕಾರಣವಾದಾವು. ದುಡುಕಿನ ಕೆಲಸದಿಂದಾಗಿ ಪಶ್ಚಾತ್ತಾಪ ಪಡಬೇಕಾಗುವುದು. ಆದಷ್ಟು ಅಳೆದು ತೂಗಿ ಮುನ್ನಡಿ ಇಡಿ. ಯಾವುದಕ್ಕೂ ಗಡಿಬಿಡಿ ಬೇಡ. ವಿಷ್ಣು ಸಹಸ್ರನಾಮ ಪಠಣ ಮಾಡಿ.
ವೃಷಭ(Taurus): ಹೆತ್ತವರ ಸಹಕಾರ ಸಿಕ್ಕಿ ಪ್ರಮುಖ ಕಾರ್ಯವೊಂದು ಪೂರ್ಣಗೊಳ್ಳಲಿದೆ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಅವಕಾಶ ನಿಚ್ಚಳವಾಗಿದೆ. ಪ್ರವಾಸ, ವ್ಯಾಪಾರ, ವ್ಯವಹಾರಗಳಿಂದ ಅಪಾರ ಲಾಭ ಸಾಧ್ಯವಾಗಲಿದೆ. ಸಂಗಾತಿಯೊಂದಿಗೆ ಸಂಯಮ ಸಾಧಿಸಿದರೆ ಸಂತೋಷವಾಗಿರಬಹುದು. ರಾಘವೇಂದ್ರ ಅಷ್ಟೋತ್ತರ ಹೇಳಿಕೊಳ್ಳಿ.
ಮಿಥುನ(Gemini): ಹಿರಿಯರ ಸಲಹೆ ಹಾಗೂ ನೆರವಿನಿಂದಾಗಿ ಮಾನಸಿಕ ಶಾಂತಿ ಲಭಿಸಲಿದೆ. ನ್ಯಾಯಾಲಯದ ಕಾರ್ಯಗಳಲ್ಲಿ ಅಭಿವೃದ್ಧಿ ಇದೆ. ಮಂಗಲಕಾರ್ಯಗಳ ಅನಿರೀಕ್ಷಿತ ಅವಕಾಶ ಇರಲಿದೆ. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಗುರು ರಾಯರ ಸ್ಮರಣೆ ಮಾಡಿ.
ಕಟಕ(Cancer): ಹಣದ ವಿಚಾರಕ್ಕೆ ಬಂದರೆ ಹೊಸ ಹೂಡಿಕೆ ಫಲ ನೀಡದು. ದುರ್ವ್ಯಸನ ಅಂಟಿಸಿಕೊಳ್ಳಬೇಡಿ. ದೂರ ಸಂಚಾರಕ್ಕೆ ಸಕಾಲವಲ್ಲ. ಶೈಕ್ಷಣಿಕವಾಗಿ ಅಡ್ಡಿ ಆತಂಕಗಳು ಹೆಚ್ಚಬಹುದು. ವ್ಯಾಪಾರದಲ್ಲಿ ಸಮಾಧಾನಕರ ಲಾಭವಿದ್ದರೂ ಖರ್ಚು ದುಪ್ಪಟ್ಟಾಗಲಿದೆ. ನಿಮ್ಮ ಗುರುಗಳ ಸ್ಮರಣೆ ಮಾಡಿ.
ಸಿಂಹ(Leo): ಲೇವಾದೇವಿ ವ್ಯವಹಾರಗಳಲ್ಲಿ ಒತ್ತಡದ ಜೊತೆಗೆ ನಷ್ಟ. ದಿನದ ಆರಂಭದಲ್ಲಿ ಧನ ನಷ್ಟವಾಗಿ ಮನಸ್ಸು ಹಾಳಾಗುವುದು. ಚಿಂತಿಸಿ ಫಲವಿಲ್ಲ. ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ. ಮಾತಿನಲ್ಲಿ ಎಡವಟ್ಟಾಗಿ ಗುಟ್ಟುಗಳು ಹೊರಬರುವ ಸಾಧ್ಯತೆ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ.
ಕನ್ಯಾ(Virgo): ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುವು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಅನಿರೀಕ್ಷಿತವಾಗಿ ತಿರುಗಾಟ ಸಾಧ್ಯತೆ ಏಳಬಹುದು. ವಿಮಾನ ಯಾನ ಸಾಧ್ಯತೆ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗುವುದು. ಗುರು ರಾಯರ ಮಠಕ್ಕೆ ಭೇಟಿ ನೀಡಿ.
ತುಲಾ(Libra): ಗೃಹ ನಿರ್ಮಾಣ, ಆಸ್ತಿ ಖರೀದಿ, ಹೊಸ ವ್ಯವಹಾರ ಪ್ರಾರಂಭಕ್ಕೆ ಸಕಾಲ. ಪ್ರತಿಭಾನ್ವಿತರಿಗೆ ಅವಕಾಶಗಳು ಹೆಚ್ಚಲಿವೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿರುವಿರಿ. ನಿಮ್ಮ ಬಗ್ಗೆಯೇ ಹೇಳಿಕೊಳ್ಳುವುದು ಬಿಟ್ಟು ಇತರರ ಬದುಕಿನ ಬಗ್ಗೆಯೂ ವಿಚಾರಿಸಿ. ರಾಮ ಧ್ಯಾನ ಮಾಡಿ.
ವೃಶ್ಚಿಕ(Scorpio): ಅಸೂಯಾಪರರಿಂದ ಉದ್ಯೋಗದಲ್ಲಿ ಕಿರಿಕಿರಿ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ನಿಮ್ಮ ಆರೋಗ್ಯವು ಈಗಾಗಲೇ ಉತ್ತಮವಾಗಿಲ್ಲದಿದ್ದರೆ ನೀವು ನಿಮ್ಮ ಔಷಧಿಗಳನ್ನು ಸಮಯಕ್ಕೆ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ಬೇಡ. ಕೃಷ್ಣನಿಗೆ ತುಳಸಿ ಅರ್ಪಿಸಿ.
ಧನುಸ್ಸು(Sagittarius): ನಿರುದ್ಯೋಗಿಗಳಿಗೂ ಅವಕಾಶ ಅರಸಿ ಬರಲಿದೆ. ಹೆಚ್ಚು ಯೋಚಿಸದೆ ಬಳಸಿಕೊಳ್ಳಿ. ಪ್ರೀತಿ ಪ್ರೇಮ ವ್ಯವಹಾರಗಳಿಗೆ ಮನೆಯವರ ಬೆಂಬಲ ದೊರೆತು ಸಂತಸ ಹೆಚ್ಚುವುದು. ಹೊರಾಂಗಣ ಆಟಗಳಲ್ಲಿ ತೊಡಗಿರಿ. ನವಗ್ರಹ ಪ್ರಾರ್ಥನೆ ಮಾಡಿ.
ಊಟ ಮಾಡುವಾಗ ಈ ತಪ್ಪು ಮಾಡಿದ್ರೆ ಅನ್ನಪೂರ್ಣೇಶ್ವರಿಯ ಕೆಂಗಣ್ಣಿಗೆ ಗುರಿಯಾಗುತ್ತೀರಿ!
ಮಕರ(Capricorn): ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಹೆಚ್ಚಲಿರುವ ಆತ್ಮವಿಶ್ವಾಸದಿಂದ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಪ್ರಶಂಸೆ. ಮಕ್ಕಳಲ್ಲಿ ಅನಾರೋಗ್ಯ ಆತಂಕ ತರಬಹುದು. ಹಕ್ಕಿಗಳಿಗೆ ಕಾಳು ನೀಡಿ.
ಕುಂಭ(Aquarius): ವಾಹನವನ್ನು ಪರಿಶೀಲಿಸಿ ನಂತರ ಚಾಲನೆ ಮಾಡಿ ಇಲ್ಲದಿದ್ದರೆ ಟೈರ್ ಪಂಕ್ಚರ್ ಅಥವಾ ಇನ್ನಾವುದೇ ಸಮಸ್ಯೆ ಬರಬಹುದು. ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಲಿದೆ. ರಾಘವೇಂದ್ರ ಸ್ವಾಮಿಯ ಸ್ಮರಣೆ ಮಾಡಿ.
ಗಂಟೆಗಳಿಂದ Negative Energy ತೆಗೀಬಹುದು.. ಆದರೆ ಈ ವಿಷಯಗಳ ಬಗ್ಗೆ ಇರಲಿ ಗಮನ!
ಮೀನ(Pisces): ಗೌರವ ವೃದ್ಧಿಯಾಗಲಿದೆ. ಬಹುಕಾಲದ ಕನಸು ಈಡೇರಲಿದೆ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಲಾಭದಾಯಕ ಆದಾಯವಿದ್ದರೂ ದುಡುಕದೇ ಮುಂದುವರಿಯಿರಿ. ವಿಷ್ಣು ಸಹಸ್ರನಾಮ ಪಠಣ ಮಾಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.