Daily Horoscope: ಈ ರಾಶಿಗಿಂದು ಅಪಘಾತ ಸಾಧ್ಯತೆ, ಎಚ್ಚರ ಅಗತ್ಯ
6 ಏಪ್ರಿಲ್ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕೆಟ್ಟು ಹೋದ ಸಂಬಂಧಗಳು ಸುಧಾರಿಸಿ ಕುಂಭ ನಿಶ್ಚಿಂತ
ಮೇಷ(Aries): ನವದಂಪತಿಗೆ ಸಂತಾನ ಭಾಗ್ಯ. ಆರ್ಥಿಕ ಅಡಚಣೆಗಳಿದ್ದರೂ ಕಾರ್ಯದಲ್ಲಿ ಪ್ರಗತಿ ಇರಲಿದೆ. ಅನಿರೀಕ್ಷಿತವಾಗಿ ದೂರ ಸಂಚಾರ ಮಾಡಬೇಕಾಗಿ ಬರುವುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮಕ್ಕಳ ಪ್ರಗತಿ ಸಂತೋಷ ತರಲಿದೆ. ಗಣಪತಿಗೆ ಕಡಲೆ ನೈವೇದ್ಯ ಮಾಡಿ.
ವೃಷಭ(Taurus): ಬಹುದಿನಗಳ ಬಯಕೆ ಈಡೇರಲಿದೆ. ಗೃಹ ಕಾರ್ಯದಲ್ಲಿ ಯಶಸ್ಸು ಕಾಣಲಿದ್ದೀರಿ. ನಿಮ್ಮ ಅನುಭವ, ಉತ್ಸಾಹವೇ ಪ್ರೇರಕ ಶಕ್ತಿಯಾಗಿ ಯಶಸ್ಸಿನತ್ತ ಕೊಂಡೊಯ್ಯುತ್ತವೆ. ವ್ಯಾಪಾರ, ಉದ್ದಿಮೆಗಳಲ್ಲಿ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಆಯ್ಕೆಗಳು ಹೆಚ್ಚಲಿವೆ. ನವಗ್ರಹ ಆರಾಧನೆ ಮಾಡಿ.
ಮಿಥುನ(Gemini): ಅನಿರೀಕ್ಷಿತವಾಗಿ ಅಡ್ಡಿ ಆತಂಕಗಳು ಎದುರಾದಾವು. ಧೈರ್ಯಗೆಡದಿರಿ. ಕರ್ತವ್ಯ ನಿಷ್ಠೆ ಇರಲಿ. ಇಷ್ಟ ಮಿತ್ರರ ಸಹಕಾರದಿಂದ ಮಾನಸಿಕ ಸಮಾಧಾನ ತೋರಿ ಬರುವುದು. ಪ್ರಾಮಾಣಿಕ ಕಾರ್ಯ ವಿಧಾನಗಳಿಂದ ಹಣದ ಆದಾಯ ಹೆಚ್ಚಲಿದೆ. ಬಿಳಿ ವಸ್ತುಗಳನ್ನು ದಾನ ಮಾಡಿ.
ಕಟಕ(Cancer): ವ್ಯಾಪಾರ ವಹಿವಾಟುಗಳಲ್ಲಿ ತುಸು ಪ್ರಗತಿದಾಯಕ ಅಭಿವೃದ್ಧಿ ಇರಲಿದೆ. ಕೃಷಿ ಸೇರಿದಂತೆ ಅಧಿಕ ದೈಹಿಕ ಶ್ರಮದ ಪ್ರವೃತ್ತಿಗಳಲ್ಲಿ ನಿರಾಶೆ ಉಂಟಾಗಬಹುದು. ಆದರೆ, ಧೈರ್ಯಗೆಡದೆ ಭರವಸೆ ಇಟ್ಟುಕೊಳ್ಳಿ. ಅಜೀರ್ಣ, ಉದರಶೂಲೆ, ಮನೋಕ್ಲೇಶಗಳು ಕಾಡಲಿವೆ. ಗಣಪತಿ ಸ್ಮರಣೆ ಮಾಡಿ.
ಸಿಂಹ(Leo): ಶತ್ರುಪೀಡೆ, ದೈಹಿಕ ಆಘಾತ, ಅಪಘಾತ ಭಯ ಎದುರಾಗುವುದು. ಈ ವಿಷಯಗಳಲ್ಲಿ ಜಾಗ್ರತೆ ಅಗತ್ಯ. ಖರ್ಚು ವೆಚ್ಚಗಳು ಅಧಿಕವಾಗಿರಲಿವೆ. ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ತೋರಿ ಬರಲಿದೆ. ತಲೆನೋವು ಭಾದಿಸಲಿದೆ. ಮನೆ ದೇವರನ್ನು ಸ್ಮರಿಸಿಕೊಳ್ಳಿ.
ಕನ್ಯಾ(Virgo): ಸಾಕಷ್ಟು ಉತ್ತಮವಾಗಿ ಕೆಲಸ ಕಾರ್ಯಗಳು ಕೈಗೂಡಿ ಸಂತೃಪ್ತಿ ದೊರೆಯಲಿದೆ. ಭೂ ಸಂಬಂಧಿ ಸ್ಥಿರಾಸ್ತಿ ವ್ಯಾಪಾರ ಕಾರ್ಯ ನಡೆಯಲಿದೆ. ಛಲವಂತರಾದ ನಿಮಗೆ ದೈವಿಕ ಚಿಂತನೆಯೇ ಶ್ರೀರಕ್ಷೆಯಾಗಿರುವುದು ಎಂಬುದನ್ನು ಮರೆಯಬೇಡಿ. ಗಣಪತಿಗೆ ದೂರ್ವೆ ಅರ್ಪಿಸಿ.
Cat's Eye: ಕೇತು ಸಮಸ್ಯೆ ತಂದೊಡ್ಡುತ್ತಿದ್ದರೆ ಈ ಹರಳನ್ನು ಧರಿಸಿ ಸಾಕು!
ತುಲಾ(Libra): ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳ, ವಿರೋಧಿಗಳ ತಂಟೆ ತಕರಾರುಗಳಿಂದ ಪಾರಾಗಿ ಮನಸ್ಸಿಗೆ ನೆಮ್ಮದಿ ದೊರೆಯುವುದು. ಋಣಾತ್ಮಕ ಚಿಂತನೆಗಳು ಹತ್ತಿರ ಬಾರದಂತೆ ಎಚ್ಚರಿಕೆ ವಹಿಸಿ. ಬ್ಯಾಂಕ್ ಕೆಲಸಗಳು ಆಗಿ ಸಮಾಧಾನ ತರಲಿದೆ. ಹಳೆಯ ಹರಕೆಗಳನ್ನು ಈಡೇರಿಸಿ.
ವೃಶ್ಚಿಕ(Scorpio): ಮಾನಸಿಕ ಚಂಚಲತೆ, ದ್ವಂದ್ವಗಳು ಕಾಡುವುವು. ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರಿ ಬರುವುದು. ಜಡತ್ವದಿಂದಾಗಿ ಕಾರ್ಯಹಾನಿಯಾಗುವುದು. ಸ್ವಜನರಿಂದ ಕಲಹ, ಭಿನ್ನಾಭಿಪ್ರಾಯಕ್ಕೆ ಕಾರಣರಾಗದಂತೆ ವರ್ತನೆ ತೋರಿಸಿ. ಬುಧ ಗ್ರಹ ಸ್ಮರಣೆ ಮಾಡಿ.
ಧನುಸ್ಸು(Sagittarius): ಕಾರ್ಯಕ್ಷೇತ್ರದಲ್ಲಿ ಯೋಚಿಸಿ ಮುಂದಡಿ ಇಡಿ. ಬಹಳ ಕಾಲದಿಂದ ಎದುರು ನೋಡುತ್ತಿದ್ದ ವಾರ್ತೆಯೊಂದು ಅವಿವಾಹಿತರಿಗೆ ಸಿಕ್ಕು ಅಚ್ಚರಿ, ಸಂತೋಷಕ್ಕೆ ಕಾರಣವಾಗಬಹುದು. ತಂದೆಯ ಕಡೆಯಿಂದ ಆಸ್ತಿಯಲ್ಲಿ ಪಾಲು ಸಿಗಬಹುದು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.
ಮಕರ(Capricorn): ಅನಿರೀಕ್ಷಿತ ಘಟನೆಗಳು ನಡೆಯಲಿವೆ. ಯಾವುದೇ ಕಾರಣಕ್ಕೂ ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ. ಸಮಯ ಅವಕಾಶ, ಸಂದರ್ಭಗಳನ್ನು ಸದುಪಯೋಗ ಮಾಡಿಕೊಳ್ಳಿ. ಮಾತಿನಲ್ಲಿ ಹಿಡಿತ ಇರಲಿ. ಆರೋಗ್ಯವು ಚೆನ್ನಾಗಿರಲಿದೆ. ಗಣಪತಿಗೆ ಅರ್ಚನೆ ಮಾಡಿಸಿ.
Vastu tips: ಮರೆತೂ ಈ ಹೂವುಗಳನ್ನು ದೇವರ ಪೂಜೆಗೆ ಬಳಸಬೇಡಿ!
ಕುಂಭ(Aquarius): ಸ್ಪಷ್ಟವಿರದ ಹಲವು ವಿಚಾರಗಳಿಗೆ ಇಂದು ಬೆಳಕು ಚೆಲ್ಲಲಿದೆ. ಅವಿವಾಹಿತರಿಗೆ ಕಂಕಣಬಲ ಯೋಗವಿದೆ. ಕೆಟ್ಟು ಹೋದ ಸಂಬಂಧಗಳು ಮತ್ತೆ ಸರಿಯಾಗಲಿವೆ, ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚು ಮಾಡಿ. ತಂದೆಯ ಆರೋಗ್ಯ ಸುಧಾರಿಸಲಿದೆ. ಗೋ ಗ್ರಾಸ ನೀಡಿ.
ಮೀನ(Pisces): ಸಣ್ಣ ಸಣ್ಣ ವಿಚಾರಗಳಿಗೆ, ಟೀಕೆಗಳಿಗೆ ಮಾನಸಿಕ ನೆಮ್ಮದಿ ಕಳೆದುಕೊಳ್ಳದೆ ಉದಾಸೀನತೆ ತೋರಿ. ದೂರ ಪ್ರವಾಸದಿಂದ ಮಾನಸಿಕ ಸಂತೃಪ್ತಿ ದೊರೆಯಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಹಕ್ಕಿಗಳಿಗೆ ಕಾಳುಗಳನ್ನು ಹಾಕಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.