Asianet Suvarna News Asianet Suvarna News

ಒಂದು ರಾಶಿಯವರ ಆದಾಯದಲ್ಲಿ ಭಾರೀ ಏರಿಕೆ: ಉಳಿದ ರಾಶಿ?

18 ನವೆಂಬರ್ 2019ರ ಭವಿಷ್ಯ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ದಿನ ? 

Daily Horoscope Of 18tyh November 2019
Author
Bangalore, First Published Nov 18, 2019, 7:35 AM IST

ಮೇಷ
ನಾಳೆಯನ್ನು ನೆನೆಯುತ್ತಾ ಈ ದಿನವನ್ನು
ಹಾಳು ಮಾಡಿಕೊಳ್ಳಬೇಡಿ. ಬಹುದಿನಗಳ
ಗೊಂದಲಕ್ಕೆ ಇಂದು ತೆರೆ ಬೀಳಲಿದೆ

ವೃಷಭ
ಆಲೋಚನೆ ಮಾಡುತ್ತಾ ಕುಳಿತರೆ ಸಾಲದು,
ಅದನ್ನು ಕಾರ್ಯರೂಪಕ್ಕೆ ಇಳಿಸುವ ಕೆಲಸ
ಮಾಡಬೇಕು. ಆತ್ಮವಿಶ್ವಾಸ ಹೆಚ್ಚಾಗಲಿದೆ.

ಮಿಥುನ
ಸಮಸ್ಯೆಗಳು ಯಾವಾಗಲೂ ಇರುತ್ತವೆ.
ಅವುಗಳಿಗೆ ಮಾನ್ಯತೆ ನೀಡದೇ ಇರುವ
ಸಂತೋಷವನ್ನು ನೆನೆದು ಮುಂದೆ ಸಾಗಿ.

ಕಟಕ
ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಲಿ
ದ್ದೀರಿ. ಆದಾಯದಲ್ಲಿ ಏರಿಕೆಯಾಗಲಿದೆ.
ಬಂಧುಗಳೊಂದಿಗೆ ವ್ಯವಹಾರ ಬೇಡ.

ಸಿಂಹ
ಹಿಂದಿನ ಮಧುರ ಕ್ಷಣಗಳು ನಿಮ್ಮ
ಸಂತೋಷವನ್ನು ಹೆಚ್ಚಿಸಲಿವೆ. ಸಾಮಾಜಿಕ
ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದೀರಿ

ಕನ್ಯಾ
ಖರ್ಚಿನ ಮೇಲೆ ಹಿಡಿತವಿರಲಿ. ಮೋಜು,
ಮಜಾ ಮಸ್ತಿಗೆ ಬ್ರೇಕ್ ಹಾಕಿ. ಹೊಸ ವ್ಯಕ್ತಿಗಳ
ಪರಿಚಯವಾಗಲಿದೆ. ಕೆಲಸದಲ್ಲಿ ಪ್ರಗತಿ.

ತುಲಾ 
ನಿಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು
ಕೂರುವುದು ಬೇಡ. ಕೆಲವು ವೇಳೆ ಅನಿವಾರ್ಯ
ವಾಗಿ ಸೋಲಬೇಕಾಗಿ ಬರಬಹುದು

ಯಾವ ರಾಶಿಗೆ ಈ ವಾರವು ಅನುಕೂಲಕರ : ನಿಮ್ಮ ವಾರ ಭವಿಷ್ಯ ಹೇಗಿದೆ?

ವೃಶ್ಚಿಕ
ಆರೋಗ್ಯದಲ್ಲಿ ತುಸು ಏರುಪೇರು
ಉಂಟಾಗಲಿದೆ. ಆತ್ಮೀಯರಿಂದ ನಿಮಗೆ
ಆರ್ಥಿಕ ಸಹಕಾರ ದೊರೆಯಲಿ

ಧನುಸ್ಸು
ನಾನು ನಾನು ಎಂದು ಅಹಂ ಪಡದೇ
ಎಲ್ಲರೊಂದಿಗೂ ಒಂದಾಗಿ ಬಾಳುವೆ ಮಾಡಿ.
ಸಣ್ಣ ಸಮಸ್ಯೆಗೆ ಹೆದರಿ ಕೂರುವುದು ಬೇಡ.

ದುಡ್ಡು ಯಾರಿಗೆ ಬೇಡ ಹೇಳಿ? ಲಕ್ಷ್ಮಿ ಒಲಿಸಿಕೊಳ್ಳಲು ಶ್ರೀ ಸೂಕ್ತವೆಂಬ ಶಕ್ತಿ!...

ಮಕರ
ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.
ಹಳೆಯ ಸಂಬಂಧಗಳು ಮತ್ತಷ್ಟು ಗಟ್ಟಿ
ಯಾಗಲಿವೆ. ಕೆಲಸದಲ್ಲಿ ಪ್ರಗತಿಯಾಗಲಿದೆ.

ಕುಂಭ
ಸಣ್ಣ ತಪ್ಪಿಗೂ ದೊಡ್ಡ ಅನಾಹುತ ಮಾಡುವ
ಶಕ್ತಿ ಇರುತ್ತದೆ. ಎಚ್ಚರಿಕೆಯಿಂದ ಮುಂದೆ
ನಡೆಯಿರಿ. ಅತಿ ಲಾಭದ ಆಸೆ ಬೇಡ.

ಮೀನ 
ಪರರ ಹಿತವನ್ನು ಬಯಸಿದಷ್ಟೂ ನಿಮ್ಮ ಹಿತ
ಸಾಧ್ಯವಾಗಲಿದೆ. ವಿವಿಧ ಕಾರ್ಯಕ್ರಮಗಳಲ್ಲಿ
ತೊಡಗಿಸಿಕೊಳ್ಳಲಿದ್ದೀರಿ. ಶುಭ ಫಲ

Follow Us:
Download App:
  • android
  • ios