ಮೇಷ - ಮಾನಸಿಕ ಅತಂತ್ರತೆ ಉಂಟಾಗಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರ ಸಹಕಾರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ ದೇಹಬಲವಿರಲಿದೆ, ಮನಸ್ಸು ಚಂಚಲವಾಗಲಿದೆ, ಭಯದ ವಾತಾವರಣ, ಅದೃಷ್ಟ ಹೀನತೆ, ಗುರು ಪ್ರಾರ್ಥನೆ ಮಾಡಿ

ಮಿಥುನ - ಸ್ವಲ್ಪ ಸಮಾಧಾನದಿಂದಿರಬೇಕು, ದಿನಚರಿ ಏರುಪೇರಾಗಲಿದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ಬೇಸರ, ದುರ್ಗಾ ಪ್ರಾರ್ಥನೆ ಮಾಡಿ

ಸಿಂಹ: ತಂದೆ ತಾಯಿಯ ಮಾತಿನಂತೆ ನಡೆದುಕೊಳ್ಳಿ. ಅತಿಯಾದ ಸಿಟ್ಟು ನಿಮ್ಮನ್ನೇ ಮೊದಲು ಸುಡುವುದು. ಪ್ರವಾಸ ಹೊರಡಲಿದ್ದೀರಿ

ಕನ್ಯಾ: ಆತ್ಮೀಯರು ಇಂದು ಇಡೀ ದಿನ ನಿಮ್ಮೊಂದಿಗೆ ಇರಲಿದ್ದಾರೆ. ಸಣ್ಣ ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಂಡು ಕೂರುವುದು ಬೇಡ.

ತುಲಾ: ನಿಂದನೆಗಳು ಬರುವುದು ಸಹಜ. ಹಾಗೆಂದು ಅವುಗಳಿಗೆ ಹೆದರಿಕೊಂಡು ಕೂರುವುದು ಬೇಡ. ಬದುಕು ಬಂದ ಹಾಗೆ ಸ್ವೀಕಾರ ಮಾಡಿ

ವೃಶ್ಚಿಕ: ನಿಮ್ಮ ಉತ್ಸಾಹವೇ ಇಂದು ನಿಮ್ಮನ್ನು ಹೊಸ ಅವಕಾಶದ ಬಳಿ ಕರೆದೊಯ್ಯಲಿದೆ. ಮತ್ತೊಬ್ಬರಿಗೆ ಕಿರಿಕಿರಿ ಮಾಡದಿರಿ.

ಧನುಸ್ಸು: ಅನಿರೀಕ್ಷಿತವಾಗಿ ಗೆಳೆಯರೊಂದಿಗೆ ಪ್ರವಾಸ ಹೊರಡಿಲಿದ್ದೀರಿ. ಕ್ಷುಲ್ಲಕ ಕಾರಣಗಳಿಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ಶುಭ ಫಲ.

ಮಕರ: ಕರ್ತವ್ಯದಲ್ಲಿ ಲೋಪ ಬರದಂತೆ ಎಚ್ಚರ ವಹಿಸಿ. ಪ್ರಶಂಸೆ ಬೇಕು ಎಂದರೆ ಕಠಿಣವಾದ ಪರಿಶ್ರಮ ಹಾಕಲೇಬೇಕು. ಧೈರ್ಯ ಇರಲಿ

ಕುಂಭ: ಖರ್ಚಿನ ಮೇಲೆ ಹಿಡಿತ ಇರಲಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವಿರಿ. ನಿಮ್ಮದಲ್ಲದ ವಿಚಾರಗಳಿಗೆ ನೀವು ಚಿಂತೆ ಮಾಡದಿರಿ.

ಮೀನ: ಆರ್ಥಿಕ ಪ್ರಗತಿ. ಸಂಸಾರದಲ್ಲಿ ಸಂತೋಷ ಇರಲಿದೆ. ಇಡೀ ದಿನ ಸಂಭ್ರಮದಿಂದ ಕೂಡಿರಲಿದೆ. ಅಂದುಕೊಂಡಿದ್ದು ಆಗಲಿದೆ.