Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಆತಂಕ ಬೇಡ, ಉತ್ತಮ ದಿನವಾಗಿರಲಿದೆ!

05 ಜುಲೈ 2021 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 05 July 2021 in kannada pod
Author
Bangalore, First Published Jul 5, 2021, 7:17 AM IST
  • Facebook
  • Twitter
  • Whatsapp

ಮೇಷ -  ಹಣಕಾಸಿಗೆ ಕೊಂಚ ಪರದಾಟ, ಮಾತಿನಿಂದ ತೊಂದರೆ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲ, ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಮನಸ್ಸು  ಕೊಂಚ ಚಂಚಲವಾಗಲಿದೆ, ದಾಂಪತ್ಯದಲ್ಲಿ ಕಿರಿಕಿರಿ, ಮಾನಸಿಕ ದುರ್ಬಲತೆ, ದುರ್ಗಾ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ

ಮಿಥುನ - ಹಣನಷ್ಟ ಸಾಧ್ಯತೆ, ಸಾಲ ಮಾಡಬೇಡಿ, ಸ್ತ್ರೀಯರು ಎಚ್ಚರವಾಗಿರಬೇಕು, ವಾಗ್ವಾದ ಬೇಡ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕಟಕ - ಸ್ತ್ರೀಯರು ಜಾಗ್ರತೆವಹಿಸಬೇಕು, ಮನಸ್ಸು ಘಾಸಿಯಾಗುವ ಸಾಧ್ಯತೆ ಇದೆ, ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಅಭಿಷೇಕ ಮಾಡಿಸಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಸಿಂಹ - ಹಣಕಾಸು ಕೊಂಚ ಖರ್ಚಾಗಲಿದೆ, ಸಮೃದ್ಧಿಗಾಗಿ 108 ಬಾರಿ ಮಹಾಲಕ್ಷ್ಮೀ ಮಂತ್ರ ಪಠಿಸಿ

ಕನ್ಯಾ - ನಷ್ಟ ಸಂಭವ, ಆರೋಗ್ಯದ ಕಡೆ ಗಮನವಿರಲಿ, ಉಳಿದಂತೆ ಎಲ್ಲವೂ ಅನುಕೂಲಕರವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಉತ್ಕೃಷ್ಟ ಲಾಭದ ದಿನ, ಸಮ ಮನಸ್ಥಿತಿ ಇರಲಿ, ಸಹೋದರರ ಮಾರ್ಗದರ್ಶನ ಸಿಗಲಿದೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಉದ್ಯೋಗಿಗಳು ಎಚ್ಚರವಾಗಿರಬೇಕು, ಸ್ತ್ರೀಯರಿಗೆ ಜಾಗ್ರತೆ ಬೇಕು, ಕೊಂಚ ಅಸಮಧಾನ ಇರಲಿದೆ, ದುರ್ಗಾ ದೇವಸ್ಥಾನಕ್ಕೆ ಕೆಂಪು ಹೂವನ್ನು ಕೊಟ್ಟು ಬನ್ನಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

 

ಧನುಸ್ಸು - ಆತಂಕ ಬೇಡ, ಉತ್ತಮದಿನವಾಗಿರಲಿದೆ, ಗಣಪತಿಗೆ ಮೋದಕ ಸಮರ್ಪಣೆ ಮಾಡಿ

ಮಕರ - ವಿದೇಶಗಳಿಂದ ಶುಭವಾರ್ತೆ, ವಿದ್ಯಾರ್ಥಿಗಳ ಮನಸ್ಸು ಏರುಪೇರಾಗಲಿದೆ, ಚಂಚಲತೆ, ದುರ್ಗೆ ಹಾಗೂ ಗಣಪತಿ ಪ್ರಾರ್ಥನೆ ಮಾಡಿ

ಕುಂಭ - ಪ್ರಯಾಣದಲ್ಲಿ ಎಚ್ಚರವಾಗಿರಿ, ಉತ್ತಮ ದಿನವಾಗಿರಲಿದೆ, ದುರ್ಗೆಗೆ ಗರಿಕೆ ಸಮರ್ಪಣೆ ಮಾಡಿ

ಮೀನ - ಉತ್ಸಾಹ ಶಕ್ತಿ ಇರಲಿದೆ, ಧೈರ್ಯದ ದಿನ, ದುಶ್ಚಟಗಳ ಬಗ್ಗೆ ಜಾಗೃತಿ ಇರಲಿ, ಮಹಾಗಣಪತಿ ಪ್ರಾರ್ಥನೆ ಮಾಡಿ

Follow Us:
Download App:
  • android
  • ios