ಬೆಂಗಳೂರು(ಜ.27): ರಾಜಕೀಯ ನಾಯಕರ ಫೋಟೋ ಬಳಸಿಕೊಂಡು ಪ್ರಮುಖ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಯುವರಾಜ್‌ ಅಲಿಯಾಸ್‌ ಸ್ವಾಮಿ ಸಚಿವರೊಬ್ಬರ ಹೆಸರಿನ ಲೆಟರ್‌ ಹೆಡ್‌ ಬಳಸಿ ನಕಲಿ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಯುವರಾಜ್‌ ಮನೆಯಲ್ಲಿ ಸಚಿವರರೊಬ್ಬರ ಹೆಸರಿನ ಲೆಟರ್‌ ಹೆಡ್‌ಗಳು ಪತ್ತೆಯಾಗಿದ್ದು, ಇದು ಅಸಲಿ ಲೆಟರ್‌ಹೆಡ್‌ಗಳೆ ಅಥವಾ ನಕಲಿಯೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 

ವಂಚಕ ಯುವರಾಜ್‌ನ 90 ಕೋಟಿ ಆಸ್ತಿ ಜಪ್ತಿ : ಬಿಗ್ ಶಾಕ್

ಲೆಟರ್‌ ಹೆಡ್‌ ವಿಚಾರವಾಗಿ ಯುವರಾಜ್‌ನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಈತ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಹೀಗಾಗಿ ಈತನಿಂದ ಮಾಹಿತಿ ಕಲೆ ಹಾಕುವುದೇ ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ ಸಂಬಂಧಿಸಿದ ಸಚಿವರ ಕಚೇರಿಗೆ ಜಪ್ತಿ ಮಾಡಲಾದ ಲೆಟರ್‌ ಹೆಡ್‌ನ ಪ್ರತಿಯನ್ನು ರವಾನಿಸಿ ಈ ಬಗ್ಗೆ ಪರಿಶೀಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.