ಬಾಗಪತ್ (ಸೆ. 29)  ಕ್ಷುಲ್ಲಕ ಕಾರಣಕ್ಕೆ ಇಲ್ಲೊಬ್ಬ ದುರುಳ ಪಕ್ಕದ ಮನೆಯವನ ಹನ್ನೊಂದು ಪಾರಿವಾಳಗಳನ್ನು ಹತ್ಯೆ ಮಾಡಿದ್ದಾನೆ.  ಮನೆಯ ಮುಂದೆ ಉಗುಳಿದ ಕಾರಣಕ್ಕೆ ಮೂಕ ಪ್ರಾಣಿಗಳು ಜೀವ ಕಳೆದುಕೊಂಡಿವೆ.

ಹಗ್ಗವೊಂದನ್ನು ಬಳಸಿ ಪಕ್ಕದ ಮನೆಗೆ ತೆರಳಿದ ಯುವಕ  ರಾಹುಲ್ ಸಿಂಗ್ ಪಕ್ಕದ ಮನೆಯ ಧರ್ಮ್ ಪಾಲ್ ಸಿಂಗ್ ಗೆ ಸೇರಿದ್ದ ಪಾರಿವಾಳ ಹತ್ಯೆ ಮಾಡಿದ್ದಾನೆ.  ಪಂಜರದಲ್ಲಿದ್ದ ಪಾರಿವಾಳಗಳ ಮೇಲೆ ಕಲ್ಲು ಎತ್ತಿಹಾಕಿದ್ದಾನೆ.

ಸಾಕು ಪ್ರಾಣಿಗಳ ಸಾವಿನಿಂದ ನೊಂದ ಧರಂಪಾಲ್ ಸಿಂಗ್ ಸತ್ತ ಪಾರಿವಾಳಗಳ ವಿಡಿಯೋ ಮಾಡಿ ದೂರು ದಾಖಲಿಸಿದ್ದಾರೆ. ರಾಹುಲ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಘಟನೆಯ ನಂತರ ಪರಾರಿಯಾಗಿದ್ದಾನೆ.

ರಾಹುಲ್ ನಮ್ಮ ಮನೆಯ ಮುಂದೆ ಉಗುಳುತ್ತಲೇ ಇದ್ದ. ಕೊರೋನಾ  ಇದೆ, ಹಾಗೆಲ್ಲ ಮಾಡಬೇಡ ಎಂದಿದ್ದಕ್ಕೆ  ಇಂಥ ಕೆಲಸ ಮಾಡಿದ್ದಾನೆ. ನಾವು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಅಂಗಡಿ ಮುಂದೆ ಉಗಿದ ಎಂಬ ಕಾರಣಕ್ಕೆ  ಕೋಲಾರದಲ್ಲಿ ಯುವಕನೊಬ್ಬನ ಕೊಲೆಯೇ ಆಗಿಹೋಗಿತ್ತು.