ತಿರುವನಂತಪುರ/ ತ್ರಿಶೂರ್ (ಫೆ. 09)   ಒಮ್ಮೊಮ್ಮೆ ಕೆಲವು ಗಲಾಟೆ ಎಂಥ ವಿಕೋಪಕ್ಕೆ ತಿರುಗುತ್ತದೆ ಎಂಬುದನ್ನು ಹೇಳಲು ಅಸಾಧ್ಯ.  ಬಾರ್ ನಲ್ಲಿ ಕ್ಷುಲ್ಲಕ ಕಾಣಕ್ಕೆ ನಡೆದ ಘಟನೆ ವಿಕೋಪಕ್ಕೆ ಹೋಗಿದೆ. ಸಿಟ್ಟಿನಲ್ಲಿ ಒಬ್ಬ ಯುವಕ ಇನ್ನೊಬ್ಬ ವ್ಯಕ್ತಿಯ ಮರ್ಮಾಂಗವನ್ನೇ ಕಚ್ಚಿ  ತುಂಡರಿಸಿದ್ದಾನೆ!

ಕೇರಳದ ಕುನ್ನಾಥುರ್ ನಲ್ಲಿ ಈ ಘಟನೆ ನಡೆದಿದೆ.  28 ವರ್ಷದ ಶರೀಫ್, 55 ವರ್ಷದ ಸುಲೇಮಾನ್ ಎಂಬಾತನ ಮರ್ಮಾಂಗ ಕತ್ತರಿಸಿ ತುಂಡು ಮಾಡಿದ್ದಾನೆ.   ಗಾಯಾಳು ಸುಲೇಮಾನ್ ನನ್ನು ತ್ರಿಶೂರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.  ಶಸ್ತ್ರಚಿಕಿತ್ಸೆ ನಡೆಸಿ ತುಂಡಾದ ಮರ್ಮಾಂಗವನ್ನು ಮರು ಜೋಡಣೆ ಮಾಡಲಾಗಿದೆ.

ಮದುವೆಗೆ ಮೂರು ದಿನ ಇದ್ದಾಗ ಸ್ನೇಹಿತರಿಂದ ಹುಡುಗನ ಪುರುಷತ್ವಕ್ಕೆ ಕತ್ತರಿ

ಶರೀಫ್ ಪೆರುಂಬಾದಪ್ಪು ನಿವಾಸಿಯಾಗಿದ್ದು, ಸುಲೇಮಾನ್ ರಿಹಾಇಶ್ ಪುನ್ನುಕಾವುನಲ್ಲಿ ವಾಸವಾಗಿದ್ದರು. ಬಾರ್ ಆಗಮಿಸುವ ವೇಳೆ ಶರೀಫ್ ಆಟೋ ರಸ್ತೆಯಲ್ಲಿ ಕಾರ್ ಗೆ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲೇ ಒಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದಾದ ಮೇಲೆ ಬಾರ್ ಗೆ  ಬಂದಾಗ ಮತ್ತೆ ಮುಖಾ ಮುಖಿಯಾಗಿದ್ದರು.

ಬಾರ್ ನಲ್ಲಿ ಘಟನೆ ನಡೆದಿದ್ದು ತಕ್ಷಣವೇ ಅಲ್ಲಿದ್ದ ಗ್ರಾಹಕರು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ದಾರೆ. ಆರೋಪಿ ಶರೀಫ್ ಮೇಲೆ ಹಿಂದೆಯೂ  ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಒಂದು ಸಾರಿ ಜೈಲು ಸೇರಿ  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.